ಕಾಲಮಿತಿಯಲ್ಲಿ ಸಾಲ ಸೌಲಭ್ಯ ಒದಗಿಸಿ


Team Udayavani, Oct 15, 2021, 5:16 PM IST

Loan Facility

ದಾವಣಗೆರೆ: ಕೇಂದ್ರ ಸರ್ಕಾರಿ ಯೋಜನೆಯ ಸಾಲ ಸೌಲಭ್ಯದ ಅರ್ಜಿಗಳನ್ನು ಕಾಲಮಿತಿಯಲ್ಲಿಮಂಜೂರು ಮಾಡಬೇಕು ಎಂದು ಸಂಸದ ಡಾ|ಜಿ.ಎಂ. ಸಿದ್ದೇಶ್ವರ ಬ್ಯಾಂಕ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಬುಧವಾರನಡೆದ ಜಿಲ್ಲಾ ಮಟ್ಟದ ಪುನರಾವಲೋಕನ ಸಮಿತಿಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಅರ್ಹ ಫಲಾನುಭವಿಗಳಿಗೆ ಅನುಕೂಲವಾಗಲಿಯೋಜನೆ ರೂಪಿಸಿದೆ. ಬ್ಯಾಂಕ್‌ಗಳಿಗೆ ಅರ್ಜಿಸಲ್ಲಿಕೆಯಾದ ಕೆಲ ದಿನಗಳಲ್ಲಿ ಸಾಲ ಸೌಲಭ್ಯಒದಗಿಸಬೇಕು.

ತಿಂಗಳುಗಟ್ಟಲೆ ಅರ್ಜಿಯನ್ನೇವಿಲೇವಾರಿ ಮಾಡದಿದ್ದರೆ ಹೇಗೆ. ಅರ್ಜಿಗಳನ್ನುಒಂದು ತಿಂಗಳಲ್ಲಿ ಇತ್ಯರ್ಥಪಡಿಸಬೇಕು ಎಂದುಸೂಚಿಸಿದರು.

ಲೀಡ್‌ಬ್ಯಾಂಕ್‌ ವ್ಯವಸ್ಥಾಪಕ ಸುಶ್ರುತ್‌ ಡಿ. ಶಾಸ್ತ್ರಿಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಆಧರಿಸಿಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳಪ್ರಾರಂಭಿಸುವ ಮೂಲಕ ರೈತಾಪಿ ವರ್ಗದವರುಉದ್ಯಮಿ ಗಳಾಗಬೇಕು ಎಂಬ ಸದುದ್ದೇಶದಿಂದ ನೂತನವಾಗಿ ಪ್ರಾರಂಭಿಸಿರುವ ಪಿಎಂಎಫ್‌ಎಂಇಯೋಜನೆಯಡಿ ಒಟ್ಟು 36 ಅರ್ಜಿಗಳು ಸಲ್ಲಿಕೆಯಾಗಿವೆ.

6 ಜನ ರೈತರಿಗೆ 35 ಲಕ್ಷ ರೂ. ಸಾಲ ನೀಡಲಾಗಿದೆ. 17ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ. 16 ಅರ್ಜಿಗಳುತಿರಸ್ಕೃತಗೊಂಡಿವೆ ಎಂದು ಮಾಹಿತಿ ನೀಡಿದರು.ಪಿಎಂಎಫ್‌ಎಂಇ ಯೋಜನೆಯಡಿ ಸಾಲಕ್ಕೆ ಅರ್ಜಿಸಲ್ಲಿಸಿರುವ 16 ರೈತರ ಸಿಬಿಲ್‌ ಸ್ಕೋರ್‌ ಉತ್ತಮವಾಗಿಲ್ಲ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಗಿದೆ.

ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ ಎಂಬ ಕಾರಣಕ್ಕೆ ರೈತರುಸಾಲ ಪಡೆಯುವುದಕ್ಕೆ ಮುಂದೆ ಬರುವುದೇ ಇಲ್ಲ.ಹಾಗಾಗಿ ಪಿಎಂಎಫ್‌ಎಂಇ ಯೋಜನೆಯಡಿ ಸಿಬಿಲ್‌ಸ್ಕೋರ್‌ ಮಾನದಂಡಕ್ಕೆ ವಿನಾಯತಿ ನೀಡಬೇಕುಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ|ಶ್ರೀನಿವಾಸ್‌ ಚಿಂತಾಲ್‌ ಸಭೆಯ ಗಮನ ಸೆಳೆದರು.ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳ ಆಧರಿಸಿಸಣ್ಣ ಪ್ರಮಾಣದ ಆಹಾರ ಸಂಸ್ಕರಣಾ ಘಟಕಗಳಪ್ರಾರಂಭಿಸುವ ಮೂಲಕ ರೈತಾಪಿ ವರ್ಗದವರುಸಹ ಉದ್ಯಮಿಗಳಾಗಬೇಕು ಎಂಬ ಸದುದ್ದೇಶದಿಂದನೂತನವಾಗಿ ಪಿಎಂಎಫ್‌ಎಂಇ ಯೋಜನೆಪ್ರಾರಂಭಿಸಿ 10 ಸಾವಿರ ಕೋಟಿ ಅನುದಾನಮೀಸಲಿಟ್ಟಿದೆ.

ದಾವಣಗೆರೆ ಜಿಲ್ಲೆಯಲ್ಲಿ 25 ರಿಂದ26 ಕೋಟಿಯಲ್ಲಿ ಕೇವಲ 6 ಜನ ರೈತರಿಗೆ 35 ಲಕ್ಷರೂಪಾಯಿಯಷ್ಟು ಸಾಲ ನೀಡಿರುವ ಸಾಧನೆ ಶೂನ್ಯಕ್ಕೆಸಮವಾಗುತ್ತದೆ. ಸಿಬಿಲ್‌ ಅಂಕಗಳ ಮಾನದಂಡದಲ್ಲಿಸಾಲದ ಅರ್ಜಿಗಳನ್ನು ತಿರಸ್ಕರಿಸುವುದು ಸರಿಯಲ್ಲ.

ಕೃಷಿಕರು ಸಹ ಉದ್ಯಮಗಳ ಪ್ರಾರಂಭಿಸಲು ಉತ್ತೇಜನನೀಡುವ ಯೋಜನೆಗೆ ಬ್ಯಾಂಕ್‌ ವಲಯ ಸಹಪೂರಕವಾಗಿ ಸ್ಪಂದಿಸಬೇಕು. ಹೆಚ್ಚಿನ ಪ್ರಮಾಣದಲ್ಲಿಸಾಲ ಸೌಲಭ್ಯ ಒದಗಿಸುವ ಮೂಲಕ ಯೋಜನೆಯಮೂಲ ಉದ್ದೇಶ ಈಡೇರಿಸಬೇಕು ಎಂದು ಸಂಸದಡಾ| ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಕೆಲವರು ಕೇವಲ ಸಹಾಯಧನ ಪಡೆಯುವಉದ್ದೇಶದಿಂದಲೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಉಂಟು. ಸಾಲ ಮಂಜೂರಾತಿ ಮಾಡುವಾಗಎಲ್ಲವನ್ನೂ ಗಮನಿಸಬೇಕು. ಪಡೆದಂತಹ ಸಾಲಸದುಪಯೋಗ ಆಗುತ್ತಿದೆಯೇ ಎಂದು ಸಂಬಂಧಿತಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು.ಕೇಂದ್ರ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಆದಷ್ಟು ಬೇಗ ಸಾಲ ಮಂಜೂರಾತಿ ಮಾಡಬೇಕುಎಂದು ಸಂಸದರು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯಕಾರ್ಯನಿರ್ವಹಕಾಧಿಕಾರಿ ಡಾ| ವಿಜಯ ಮಹಾಂತೇಶ್‌ದಾನಮ್ಮನವರ್‌ ಅಧ್ಯಕ್ಷತೆ ವಹಿಸಿದ್ದರು. ಆರ್‌ಬಿಐನಎನ್‌.ಎಂ. ಪಾಠಕ್‌, ನಬಾರ್ಡ್‌ ಡಿಡಿಎಂ ರವೀಂದ್ರ,ಕೆನರಾ ಬ್ಯಾಂಕ್‌ ಕ್ಷೇತ್ರೀಯ ವ್ಯವಸ್ಥಾಪಕ ಜಿ.ಜಿ.ದೊಡ್ಡಮನಿ ಭಾಗವಹಿಸಿದ್ದರು

ಟಾಪ್ ನ್ಯೂಸ್

ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

Actor Rahul Bose:ರಾಹುಲ್‌ ಬೋಸ್‌ ಮತ್ತೆ ಕನ್ನಡದತ್ತ..

TDY-10

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

1-sdsad

Guarantee; ಮಂತ್ರಿ ಪರಿಷತ್ ಸಭೆ: ಸಿದ್ದರಾಮಯ್ಯ ಅವರಿಗೆ ಪರಮಾಧಿಕಾರ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ: ಚಿತ್ರಗಳ ಯಶಸ್ಸಿಗೆ ಪ್ರಾರ್ಥನೆ

1-sasad

Malaysia: ಪಾಕಿಸ್ತಾನ ಏರ್‌ಲೈನ್ಸ್ ಜೆಟ್ ಜಪ್ತಿ; ಪ್ರಯಾಣಿಕರು ಸಂಕಷ್ಟಕ್ಕೆ

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ ದಾಖಲು!

MS Dhoni: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಧೋನಿ ಆಸ್ಪತ್ರೆಗೆ !

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು

Owaisi; ತಾಕತ್ತಿದ್ರೆ ಚೀನಾದ ಮೇಲೆ ಸರ್ಜಿಕಲ್‌ ದಾಳಿ ನಡೆಸಿ; ಬಿಜೆಪಿಗೆ ಒವೈಸಿ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ

ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

Davanagere; ಸೇತುವೆ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

Davanagere; ಸೇತುವೆ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

ಚನ್ನಗಿರಿ: ಸಿಡಿಲಿನ ಹೊಡೆತಕ್ಕೆ ಸುಟ್ಟು ಕರಕಲಾದ ತೆಂಗಿನ ಮರ

ಚನ್ನಗಿರಿ: ಸಿಡಿಲಿನ ಹೊಡೆತಕ್ಕೆ ಸುಟ್ಟು ಕರಕಲಾದ ತೆಂಗಿನ ಮರ

ಅನ್ನದಾತರಿಂದ ಕೃಷಿ ಚಟುವಟಿಕೆ ಶುರು : ಈ ಬಾರಿ ಮುಂಗಾರುಪೂರ್ವ ಮಳೆ ಅಭಾವ

ಅನ್ನದಾತರಿಂದ ಕೃಷಿ ಚಟುವಟಿಕೆ ಶುರು : ಈ ಬಾರಿ ಮುಂಗಾರುಪೂರ್ವ ಮಳೆ ಅಭಾವ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಮಳೆಗಾಲ: ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಮಳೆಗಾಲ: ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಜೀವ ವಿಮೆ ನೋಂದಣಿ: ರಾಷ್ಟ್ರಕ್ಕೆ ಜಿಲ್ಲೆ ಪ್ರಥಮ  

ಜೀವ ವಿಮೆ ನೋಂದಣಿ: ರಾಷ್ಟ್ರಕ್ಕೆ ಜಿಲ್ಲೆ ಪ್ರಥಮ  

ಗುಡುಗು-ಮಿಂಚು: ಮುನ್ನೆಚ್ಚರಿಕೆ ಅಗತ್ಯ

ಗುಡುಗು-ಮಿಂಚು: ಮುನ್ನೆಚ್ಚರಿಕೆ ಅಗತ್ಯ

5 ವರ್ಷದಲ್ಲಿ 18 ಮಂದಿ ಕಾಡಾನೆ ದಾಳಿಗೆ ಬಲಿ

5 ವರ್ಷದಲ್ಲಿ 18 ಮಂದಿ ಕಾಡಾನೆ ದಾಳಿಗೆ ಬಲಿ

ಸಂತೆಕಟ್ಟೆ ಓವರ್‌ಪಾಸ್‌ ನಿರ್ಮಾಣಕ್ಕೆ ಬಂಡೆ ಅಡ್ಡಿ

ಸಂತೆಕಟ್ಟೆ ಓವರ್‌ಪಾಸ್‌ ನಿರ್ಮಾಣಕ್ಕೆ ಬಂಡೆ ಅಡ್ಡಿ