
Vote ಹಾಕಲು ಅಮೆರಿಕದಿಂದ ಲಕ್ಷಾಂತರ ರೂ ಖರ್ಚು ಮಾಡಿ ಬಂದರು, ಆದರೆ ಆಗಿದ್ದೇ ಬೇರೆ!
Team Udayavani, May 10, 2023, 11:55 AM IST

ದಾವಣಗೆರೆ: ಮತದಾನಕ್ಕಾಗಿಯೇ ದೂರದ ಅಮೇರಿಕಾದಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ದಾವಣಗೆರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣಕ್ಕೆ ಮತದಾನದಿಂದ ವಂಚಿತರಾಗಿದ್ದಾರೆ.
ಅಮೆರಿಕಾದಲ್ಲಿ ಸಾಫ್ಟ್‌ವೇರ್ ಉದ್ಯೋಗಿ ಆಗಿರುವ ರಾಘವೇಂದ್ರ ಕಮಾಲಕರ್ ಮತದಾನಕ್ಕಾಗಿಯೇ ದಾವಣಗೆರೆಗೆ ಬಂದಿದ್ದಾರೆ. ಆದರೆ, ಅವರ ಹೆಸರೇ ಮತದಾನದ ಪಟ್ಟಿಯಲ್ಲಿ ಇರಲಿಲ್ಲ. ಹೀಗಾಗಿ ಮತದಾನ ಮಾಡಲು ಸಾಧ್ಯವಾಗಲಿಲ್ಲ.
ಜನವರಿ ತಿಂಗಳಲ್ಲಿ ನನ್ನ ಹೆಸರು ಪಟ್ಟಿಯಲ್ಲಿತ್ತು. ನನಗೆ ಮಾಹಿತಿಯೂ ಬಂದಿತ್ತು. ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆಯಲ್ಲಿ ನಾನು ಮತ ಚಲಾಯಿಸಲು ಬಂದಾಗ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ. ಮತದಾನ ಮಾಡಲಿಕ್ಕೆ ಆಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಮತದಾನ ಮಾಡುವ ಸಲುವಾಗಿಯೇ ಅಮೇರಿಕಾದಿಂದ ಸುಮಾರು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದೇನೆ ಆದರೆ ನನಗೆ ಮತದಾನ ಮಾಡಲು ಸಾಧ್ಯವಾಗಲಿಲ್ಲ. ಮತದಾನ ಪ್ರತಿಯೊಬ್ಬರ ಜವಾಬ್ದಾರಿ. ಅದನ್ನರಿತು ಮತ ಚಲಾಯಿಸಲು ಬಂದಿದ್ದೆ ಆದರೆ ಮತಹಾಕಲು ಸಾಧ್ಯವಾಗಲಿಲ್ಲ ಎಂದರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

Davanagere; ಸಾಹಿತಿಗಳಿಗೆ ಬೆದರಿಕೆ ಪತ್ರ ಆರೋಪ: ಶಿವಾಜಿರಾವ್ ಮನೆಯಲ್ಲಿ ಸಿಸಿಬಿ ಶೋಧ

Davanagere: ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ತಂದೆ ಮತ್ತು ಮಗ

Davanagere ನಾನು ಬಿಜೆಪಿ ಕಟ್ಟಾಳು, ಕಾಂಗ್ರೆಸ್ ಸೇರಲ್ಲ: ರೇಣುಕಾಚಾರ್ಯ

Davanagere Bandh: ದಾವಣಗೆರೆ ಬಂದ್ ಗೆ ಅಭೂತಪೂರ್ವ ಬೆಂಬಲ… ಅಂಗಡಿ ಮುಂಗಟ್ಟು ಬಂದ್
MUST WATCH
ಹೊಸ ಸೇರ್ಪಡೆ

Daily Horoscope: ಅನಿವಾರ್ಯವಾದ ಅನಿರೀಕ್ಷಿತ ವೆಚ್ಚಗಳು, ರಾಜಕಾರಣಿಗಳಿಗೆ ನೆಮ್ಮದಿ ಭಂಗ

World cup cricket ವೈಭವ ವಿಶ್ವಕಪ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ ಆಸ್ಟ್ರೇಲಿಯ

ಮಂಗಳೂರಿನಲ್ಲಿ ಹಸುರು ಹೈಡ್ರೋಜನ್ ಘಟಕ?- ವಿವಿಧ ಕಂಪೆನಿಗಳ ಆಸಕ್ತಿ; NMPA ಸನಿಹ ಸರ್ವೇ

Khalistani: ಇಂಗ್ಲೆಂಡ್‌ನಲ್ಲೂ ಖಲಿಸ್ಥಾನಿ ಪುಂಡಾಟ

Rain: ಕರ್ನಾಟಕ, ಕೇರಳ: ಉತ್ತಮ ವರ್ಷಧಾರೆ