
ಜಗಳೂರು: ಅವ್ಯವಹಾರದ ಬಗ್ಗೆ ದೂರು ನೀಡಿದ್ದ ಕನ್ನಡ ಸಂಘಟನೆಯ ಅಧ್ಯಕ್ಷನ ಭೀಕರ ಹತ್ಯೆ
Team Udayavani, Jan 8, 2023, 12:27 PM IST

ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅವ್ಯವಹಾರ ನಡೆದಿದೆ ಎಂದು ದೂರು ಸಲ್ಲಿಸಿದ್ದ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಗಳೂರು ತಾಲೂಕಿನ ಹೊಸಕೆರೆ ಡಾಬಾ ಬಳಿ ನಡೆದಿದೆ.
ಕನ್ನಡ ಪರ ಸಂಘಟನೆ ತಾಲೂಕು ಅಧ್ಯಕ್ಷ ರಾಮಕೃಷ್ಣ (30) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ್, ಪ್ರಶಾಂತ ಎಂಬುವರನ್ನು ಬಂಧಿಸಲಾಗಿದೆ.
ಶನಿವಾರ ರಾತ್ರಿ ಹೊಸಕೆರೆ ಡಾಬಾದಲ್ಲಿ ರಾಮಕೃಷ್ಣ ಮತ್ತು ಇತರರು ಪಾರ್ಟಿ ಮಾಡುತ್ತಿದ್ದ ಸಂದರ್ಭದಲ್ಲಿ ಬೇರೆ ವಿಚಾರ ಪ್ರಸ್ತಾಪಿಸಿ, ಮಾತಿಗೆ ಮಾತು ಬೆಳೆಸಿದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಸೂರ್ಯ ಬ್ಯಾಟಿಂಗ್ ಅಬ್ಬರ: ತುಳುನಾಡ ಅಳಿಯನಿಗೆ ಕೆಎಲ್ ರಾಹುಲ್ ಪ್ರಶಂಸೆ
ಜಗಳೂರು ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ತಾಲೂಧ್ಯಕ್ಷನಾಗಿದ್ದ ಗೌರಿಪುರ ಮೂಲದ ರಾಮಕೃಷ್ಣ ಇತ್ತೀಚಿಗೆ ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರು ನೀಡಿದ್ದರು. ಅದೇ ದ್ವೇಷದಿಂದ ರಾಮಕೃಷ್ಣ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಣದ ಕೈಗಳು ನನಗೆ ಟಿಕೆಟ್ ತಪ್ಪಿಸಿದ್ದವು: ಮಾಜಿ ಶಾಸಕ ಎಸ್.ರಾಮಪ್ಪ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

Davanagere; ಸೇತುವೆ ಮೇಲಿಂದ ಬಿದ್ದು ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು

ಚನ್ನಗಿರಿ: ಸಿಡಿಲಿನ ಹೊಡೆತಕ್ಕೆ ಸುಟ್ಟು ಕರಕಲಾದ ತೆಂಗಿನ ಮರ

ಅನ್ನದಾತರಿಂದ ಕೃಷಿ ಚಟುವಟಿಕೆ ಶುರು : ಈ ಬಾರಿ ಮುಂಗಾರುಪೂರ್ವ ಮಳೆ ಅಭಾವ