ಅಧಿಕಾರ ಬಳಕೆಗೆ ಮಾಹಿತಿ ಕೊರತೆ ಅಡ್ಡಿ


Team Udayavani, Apr 17, 2017, 1:07 PM IST

dvg1.jpg

ದಾವಣಗೆರೆ: ಅನೇಕ ಸಮಸ್ಯೆಗಳಿಗೆ ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳು ತಮ್ಮಲ್ಲಿರುವ ಭದ್ರತಾ ಕಲಂನ ಅಧಿಕಾರ ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದಾಗಿದ್ದರೂ ಮಾಹಿತಿ ಕೊರತೆಯಿಂದ ಅಧಿಕಾರ ಬಳಕೆಯಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಹೇಳಿದ್ದಾರೆ. 

ಜಿಎಂ ಹಾಲಮ್ಮ ಪಿಯು ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಪೊಲೀಸ್‌, ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಭದ¤ರಾ ಕಲಂ, ಗಡಿಪಾರು ಪ್ರಕ್ರಿಯೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಆಡಳಿತ ಯಂತ್ರದ ಪ್ರಮುಖ ಇಲಾಖೆಗಳಾದ ಕಂದಾಯ, ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಕೆಲ ಉತ್ತಮ ಅವಕಾಶ ಇವೆ.

ಸಮಸ್ಯೆಗೆ ತಮ್ಮ ಹಂತದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಭದ್ರತಾ ಕಲಂನಲ್ಲಿ ಅಧಿಕಾರ ನೀಡಲಾಗಿದೆ. ಆದರೆ, ತಮಗೆ ಇರುವ ಅಧಿಕಾರ ಕುರಿತು ಅಧಿಕಾರಿಗಳಿಗೆ ಮಾಹಿತಿ ಕೊರತೆ ಇರುವುದರಿಂದ ಈ ಅಧಿಕಾರ ಬಳಕೆಯಾಗುತ್ತಿಲ್ಲ ಎಂದರು. ಯಾವುದೇ ಅಧಿಕಾರಿ ಆಗಿರಲಿ, ತನಗೆ ಇರುವ ಅಧಿಕಾರ, ಕರ್ತವ್ಯ ಕುರಿತು ಸಂಪೂರ್ಣ ಮಾಹಿತಿ ಇರಬೇಕು.

ಕಾನೂನು, ಕಟ್ಟಳೆಗಳನ್ನು ರೂಪಿಸಿದರೆ ಸಾಲದು. ಅವನ್ನು ಬಳಕೆಮಾಡಿಕೊಳ್ಳಬೇಕು. ಅದರಲ್ಲೂ ಸಾರ್ವಜನಿಕರೊಂದಿಗೆ ನಿರಂತರ ಒಡನಾಟ ಹೊಂದಿರುವವರು, ಅವರ ಏಳಿಗೆಗಾಗಿ ದುಡಿಯುವ ಕರ್ತವ್ಯದ ಹೊಣೆ ಹೊತ್ತವರು ಇಂತಹ ಕಾನೂನು ಕುರಿತು ಆಳ ಜ್ಞಾನ ಹೊಂದಿರಬೇಕು. ಕಾನೂನು ಅರಿವಿಲ್ಲದೇ ಇದ್ದರೆ ಅಂತಹ ಅಧಿಕಾರಿ ಜನಪರವಾಗಿ ಕೆಲಸಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. 

ಅಧಿಕಾರಿಗಳು ಕಾನೂನಿನ ಬಗ್ಗೆ ಸೂಕ್ತ ಮಾಹಿತಿ, ಅರಿವು ಹೊಂದಬೇಕು. ಅರಿವಿಲ್ಲದಿದ್ದರೆ ಸಾಕಷ್ಟು ಪ್ರಕರಣಗಳಲ್ಲಿ ಅಧಿಧಿಕಾರವಿದ್ದರೂ ಬಳಸಲು ಸಾಧ್ಯವಾಗದು. ಅಧಿಕಾರದ ಬಳಕೆಯಾಗದೇ ಹೋದಾಗ ನ್ಯಾಯಯುತ ತೀರ್ಮಾನ ಕೈಗೊಳ್ಳುವುದು ತತ್‌ಕ್ಷಣಕ್ಕೆ ಸಾಧ್ಯವಾಗವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಮಾಜದ ಶಾಂತಿ ಭಂಗ ತರಲು ಬಯಸುವವರು ಕ್ರಿಯಾಶೀಲರಾಗಬಹುದಾದ ಅಪಾಯ ಇರುತ್ತದೆ ಎಂದು ತಿಳಿಸಿದರು. 

ಕಂದಾಯ, ಪೊಲೀಸ್‌ ಎರಡೂ ಇಲಾಖೆಗಳಿಗೂ ಸಮನ್ವಯತೆ, ಸೌಹಾರ್ದತೆ ಅತ್ಯಗತ್ಯವಾಗಿದೆ. ಉಭಯ ಇಲಾಖೆ ಅಧಿಧಿಕಾರಿಗಳಿಗೆ ಇಂತಹ ಕಾನೂನು ಬಗ್ಗೆ ಅರಿವು, ಜಾಗೃತಿ ಮೂಡಿಸಲು ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಈ ಕಾರ್ಯಾಗಾರದಿಂದ ಕಾನೂನು, ಸೌಹಾರ್ದತೆ ಕಾಪಾಡುವ ಹಾದಿಯೂ ಸುಗಮವಾಗುತ್ತದೆ. 

ಕಾನೂನಿನಲ್ಲಿರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಲು ಸಹ ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌ ಮಾತನಾಡಿ, ಇಂದು ಸಮಾಜ ಸಾಕಷ್ಟು ಸುಧಾರಣೆ ಕಾಣುತ್ತಿದೆ. ಅದರೊಟ್ಟಿಗೆ ಸಮಸ್ಯೆಗಳೂ ಸಹ ಜಟಿಲಗೊಳ್ಳುತ್ತಿವೆ.

ಅಧಿಕಾರಿ, ಸಿಬ್ಬಂದಿ ಇದರಿಂದ ಸಹಜವಾಗಿಯೇ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳೂ ಸಹಿತ ದೊಡ್ಡ ಸಮಸ್ಯೆಯಾಗಿ ಗೋಚರಿಸುವಂತಹ ಸ್ಥಿತಿ ಬಂದಿದೆ. ಇದು ಸಿಬ್ಬಂದಿ ಮೇಲೆ ಇನ್ನಷ್ಟು ಒತ್ತಡ ಸೃಷ್ಟಿಸುತ್ತಿದೆ ಎಂದರು. ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರದ ಸಂಪೂರ್ಣ ಮಾಹಿತಿ, ಅರಿವು ಹೊಂದಿರಬೇಕು. ಸಿಬ್ಬಂದಿಗೆ ಸಮಸ್ಯೆಯಾಗದಂತೆ ಕಾನೂನು ಅನುಷ್ಠಾನಗೊಳಿಸುವ ಮಾರ್ಗದರ್ಶನ ನೀಡಬೇಕು. 

ಆದರೆ, ಬಹುತೇಕ ಅಧಿಕಾರಿಗಳು ಕೆಲ ಸಂದರ್ಭದಲ್ಲಿ ತಮಗೆ ಇರುವ ಅಧಿಧಿಕಾರದ ಪರಿಮಿತಿ ತಿಳಿಯದೆ ಪ್ರಕರಣ ಬಿದ್ದು ಹೋಗಿವೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ಪೊಲೀಸ್‌ ಅಧಿಧೀಕ್ಷಕಿ ಯಶೋಧ ವಂಟಿಗೋಡಿ, ಇಲಾಖೆ ಅಧಿಕಾರಿ, ಸಿಬ್ಬಂದಿ ಕಾರ್ಯಾಗಾರದಲ್ಲಿ ಭಾಗಿಯಾದರು.  

ಟಾಪ್ ನ್ಯೂಸ್

1-sdsddsa

Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ

1-asdsdsad

Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

1-sdsddsa

Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ

1-aasdsadsa-dad

Bihar; ಮುಸ್ಲಿಂ ಮತ್ತು ಯಾದವರ ಕೆಲಸ ಮಾಡುವುದಿಲ್ಲ: ಜೆಡಿಯು ಸಂಸದ

1-asdsdsad

Poll debut; ವಯನಾಡು ಕ್ಷೇತ್ರ ತಂಗಿಗೆ ಬಿಟ್ಟುಕೊಟ್ಟ ರಾಹುಲ್: ನಾಳೆ ರಾಜೀನಾಮೆ

Bantwal ಹಳೆಯ ದ್ವೇಷಕ್ಕೆ ಬೆಂಕಿಗಾಹುತಿಯಾಯಿತು ಸ್ನೇಹಿತನ ಬೈಕ್ ….

Bantwal ಸ್ನೇಹಿತರಿಬ್ಬರ ದ್ವೇಷ; ಅಮಾಯಕ ಯುವಕನ ಬೈಕ್‌ ಭಸ್ಮ

1-dharwad

Dharwad; ನೇಚರ್ ವ್ಯೂ ಫೋಟೋಗ್ರಫಿ, ರೀಲ್ಸ್ ಗೆ 16 ರ ಬಾಲಕರಿಬ್ಬರು ಬಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.