ಮಠ ಕಟ್ಟೋದು-ಕೆಡವೋದು ಭಕ್ತರ ಕೈಯಲ್ಲಿದೆ


Team Udayavani, Sep 12, 2021, 2:04 PM IST

12-8

ಮಲೇಬೆನ್ನೂರು: ಮಠವನ್ನು ಕಟ್ಟುವವರೂ ಹಾಗೂ ಕೆಡವುವರೂಭಕ್ತರೇಆಗಿದ್ದರೆಎಂದುನಂದಿಗುಡಿಯ ವೃಷಭಪುರಿ ಸಂಸ್ಥಾನದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಂದಿಗುಡಿಯ ಮಠದಲ್ಲಿ ತಮ್ಮ 42ನೇ ಜನ್ಮದಿನ ಆಚರಣೆ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು. ಸಮಾಜ ನಿಂತ ನೀರಲ್ಲ, ಪೀಠ ಮತ್ತು ಗುರುಗಳನ್ನು ಬೆಳೆಸೋದು, ಬೀಳಿಸೋದು ನಿಮ್ಮ ಕೈಯಲ್ಲಿದೆ ಎಂದರು. ಯಾರೂ ಕೆಟ್ಟವರಲ್ಲ ಮತ್ತು ಶತ್ರುಗಳೂ ಅಲ್ಲ. ಸಮಯ-ಸಂದರ್ಭ ಹಾಗೆ ಮಾಡಿಸಿದೆ ಎಂದು ನಾವು ಭಾವಿಸಿದ್ದೇವೆ. ವ್ಯಕ್ತಿಗತವಾಗಿ ಯಾರನ್ನೂ ದೂಷಿಸುವುದಿಲ್ಲ. ಹಿಂದಿನ ಎಲ್ಲಾಕಹಿ ಘಟನೆಗಳನ್ನು ಮರೆತು ಸಮಾಜವನ್ನು ಕಟ್ಟೋಣ ಎಂದು ಕರೆ ನೀಡಿದರು.

ಹದಿಮೂರು ವರ್ಷಗಳ ಕಾಲ ನಿರಂತರವಾಗಿ ನೋವಿನ ದಿನಗಳನ್ನು ಕಳೆದಿದ್ದೇವೆ. ಇನ್ನಾದರೂ ಬದಲಾವಣೆ ಆಗಲಿ. ಮಠದ ಮತ್ತು ಸಮಾಜದ ಅಭಿವೃದ್ಧಿಯ ಬಗ್ಗೆ ಚಿಂತಿಸೋಣ. ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ, ಕಠೊರ ಸಮಯದಲ್ಲೂ ಧೃತಿಗೆಡದೆ ಈ ಮಠದ ಎಲ್ಲಾ ವಿಚಾರಗಳಿಗೆ ಎಲ್ಲರೂ ನಿಂತಿದ್ದೀರಿ. ಅದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು. ಯೋಧ ದೇಶ ಕಾಯುತ್ತಿದ್ದರೆ ಸ್ವಾಮೀಜಿ ಸಮಾಜವನ್ನು ಕಾಯುತ್ತಾನೆ. ಕಷ್ಟ ಬಂದಾಗ ಎದೆಯೊಡ್ಡಿ ಯಶಸ್ಸು ಮತ್ತು ಅಭಿವೃದ್ಧಿಗೆ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸದಿಂದ ಬಾಳಬೇಕಿದೆ ಎಂದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ವಿಷವನ್ನು ನುಂಗಿದ ವಿಷಕಂಠನಂತೆ ನುಂಗಿ ತಮ್ಮ 42ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ಪೂಜ್ಯರು ಸೌಮ್ಯÓಭಾವದವರಾಗಿದ್ದಾರೆ. ಸಮಾಜವನ್ನು ಅಭಿವೃದ್ಧಿಗೊಳಿಸುವ ಆಕಾಂಕ್ಷೆ ಅವರಲ್ಲಿದೆ. ಆದರೆ ಸಂಕರಿವ ‌ ಕೈಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದಿಂದ ಪೀಠಕ್ಕಾಗಿ ಯಾವುದೇ ಅನುದಾನ ಬಯಸದ ಶ್ರೀಗಳೆಂದರೆ ಅದು ನಂದಿಗುಡಿಯ ಶ್ರೀಗಳು ಎಂದು ಬಣ್ಣಿಸಿದರು.

ಮಾಜಿ ಶಾಸಕ ಬಿ.ಪಿ. ಹರೀಶ್‌, ಎಂ. ನಾಗೇಂದ್ರಪ್ಪ, ನಿವೃತ್ತ ಇಂಜಿನಿಯರ್‌ ಈಶ್ವರಪ್ಪ ಮಾತನಾಡಿ, ಪೂಜ್ಯರು ನೂರ್ಕಾಲ ಬಾಳಲಿ. ಸಹಜ‌ , ಮಠದ ಪರಂಪರೆಯನ್ನು ಮುನ್ನಡೆಸುವ ಶಕ್ತಿ, ಆಯಸ್ಸು ಆರೋಗ್ಯ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ. ಸಮಾಜವನ್ನು ಸಂಘಟಿಸುವ ಶಕ್ತಿಗೆ ಭಕ್ತರು ಸಹಕರಿಸಲಿ ಎಂದು ಮನವಿ ಮಾಡಿದರು. ವೀರನಗೌಡ, ಎಸ್‌. ಸುರೇಶ್‌, ಎಚ್‌.ಟಿ. ಪರಮೇಶ್ವರಪ್ಪ, ಡಾ| ಟಿ. ಬಸವರಾಜ್‌, ಎಂ.ಸಿ. ಪರಮೇಶ್ವರಪ್ಪ, ಬಸವರಾ‌ಜಪ್ಪ, ಬಸವಲಿಂಗಪ್ಪ ಉಪಸ್ಥಿತರಿದ್ದರು.

ನಾಯಕನಹಳ್ಳಿ, ನಂದಿಗುಡಿ, ನಂದಿತಾವರೆ, ಮೂಗಿನಗೊಂದಿ, ಬೇವಿನಹಳ್ಳಿ, ಹಿಂಡಸಘಟ್ಟ, ಹಳ್ಳಿಹಾಳ್‌ ಮುಂತಾದ ಗ್ರಾಮಗಳಿಂದ ಆಗಮಿಸಿದ ಸಮಾಜದ ಭಕ್ತರು ಸ್ವಾಮೀಜಿಯರಿಗೆ ಜನುಮದಿನದ ಶುಭಾಶಯ ‌ ಕೋರಿದರು.

ಟಾಪ್ ನ್ಯೂಸ್

ಶಶಿಕಲಾ ಜೊಲ್ಲೆ

ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಮನವಿ

17hubballi

ದಾರ್ಶನಿಕರನ್ನು ಜಾತಿಗೆ ಸೀಮಿತ ಮಾಡಬೇಡಿ

23dvg1

ಅನ್ಯಭಾಷೆ ನಾಮಫಲಕ ತೆರವುಗೊಳಿಸದಿದ್ರೆ ಹೋರಾಟ: ರಾಮೇಗೌಡ

covid news

ಕೋವಿಡ್‌ ನಷ್ಟ ಸರ್ಕಾರವೇ ಭರಿಸಲಿ: ರಂಗನಾಥ್‌

100 crore vaccine

100 ಕೋಟಿ ಲಸಿಕೆ ವಿಶ್ವದಲ್ಲೇ ಮೈಲಿಗಲ್ಲು

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಶಶಿಕಲಾ ಜೊಲ್ಲೆ

ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ

2school

ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಆರಂಭ

aditi prabhudeva

ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’

1josna

ಕೊರೊನಾ ಇಳಿಕೆ; ಚಟುವಟಿಕೆಗಳಿಗೆ ಮತ್ತ ಷ್ಟು ಸಡಿಲಿಕೆ

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್: ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.