ಕೋಟಿ ವೆಚ್ಚದ ಡಾ| ಅಂಬೇಡ್ಕರ್‌ ಭವನ ಉದ್ಘಾಟನೆ

Team Udayavani, Aug 17, 2018, 4:24 PM IST

17-agust-20.jpg

ಬ್ಯಾಡಗಿ: ಪಟ್ಟಣದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಭವನಕ್ಕೆ ವಿದ್ಯುತ್‌ ಸೌಲಭ್ಯ ಹಾಗೂ ಕಂಪೌಂಡ್‌ ನಿರ್ಮಾಣಕ್ಕೆ ಅಗತ್ಯವಿರುವ ಹೆಚ್ಚಿನ ಅನುದಾನ ಒದಗಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ನಿರ್ಮಿಸಿದ 1 ಕೋಟಿ ರೂ. ಗಳ ವೆಚ್ಚದ ನೂತನ ಡಾ| ಬಿ.ಆರ್‌.ಅಂಬೇಡ್ಕರ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ವಾರವಷ್ಟೇ ಸಮಾಜ ಕಲ್ಯಾಣ ಇಲಾಖೆಯ ನೂತನ ಸಮಿತಿ ರಚನೆಯಾಗಿದೆ. ಅದರಲ್ಲಿ ನನ್ನನ್ನು ನಿರ್ದೇಶಕರನ್ನಾಗಿ ನೇಮಿಸಲಾಗಿದ್ದು ಇದರಿಂದಾಗಿ ಹಿಂದುಳಿದ ವರ್ಗದ ಜನತೆಯ ಹಲವಾರು ಬೇಡಿಕೆಗಳನ್ನು ಈಡೇರಸಲು ಬೇಕಾಗಿರುವ ಅನುದಾನವನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ಭವನ ನಿರ್ಮಾಣವಾಗಿದೆ. ಆದರೆ, ಸುತ್ತ ಮುತ್ತಲೂ ಕಂಪೌಂಡ್‌ ಸೇರಿದಂತೆ ವಿದ್ಯುದ್ಧೀಕರಣಕ್ಕೆ ಸುಮಾರು ಇನ್ನೂ 50 ಲಕ್ಷ ರೂ. ಅನುದಾನದ ಅವಶ್ಯಕತೆಯಿದ್ದು ಅದನ್ನು ಶೀಘ್ರದಲ್ಲೆ ಒದಗಿಸುವುದಾಗಿ ತಿಳಿಸಿದರು. ಸುರೇಶ ಅಸಾದಿ ಮಾತನಾಡಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇಗಾಗಲೇ ಅಂಬೇಡ್ಕರ್‌ ಭವನಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವೊಂದು ಗ್ರಾಮಗಳಲ್ಲಿ ಕಟ್ಟಡದ ಕಾಮಗಾರಿಗಳು ನಡೆಯುತ್ತಲಿವೆ. ಗ್ರಾಮೀಣ ಪ್ರದೇಶಗಳಲ್ಲಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಈಗಾಗಲೇ ಶಾಸಕರು ಹಲವಾರು ಬಾರಿ ಚರ್ಚಿಸಿದ್ದು, ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದರು.

ಸಮಾಜ ಕಲ್ಯಾಣಾ ಧಿಕಾರಿ ಹನುಮಂತಪ್ಪ ಲಮಾಣಿ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಉಪಾಧ್ಯಕ್ಷೆ ದ್ರಾಕ್ಷಾಯಣೆಮ್ಮ ಪಾಟೀಲ, ಸದಸ್ಯರಾದ ಶಾಂತಮ್ಮ ಬೇವಿನಮಟ್ಟಿ, ದುರ್ಗೇಶ ಗೋಣೆಮ್ಮನವರ, ಬಸವರಾಜ ಹಂಜಿ, ಪ್ರಶಾಂತ ಯಾದವಾಡ, ಮಂಜುನಾಥ ಭೋವಿ, ಮಲ್ಲನಗೌಡ್ರ ಭದ್ರಗೌಡ್ರ, ರೋಹಿಣಿ ಹುಣಿಸಿಮರದ, ಎಪಿಎಂಸಿ ನಿರ್ದೇಶಕ ವಿಜಯ ಮಾಳಗಿ, ತಿಮ್ಮಣ್ಣ ವಡ್ಡರ, ನಾಗರಾಜ ಹಾವನೂರ, ಮಾರುತಿ ಹಂಜಿ, ಹೊನ್ನಪ್ಪ ತಗಡಿನಮನಿ, ರವಿ ಹುಣಿಸಿಮರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಚ್‌.ಡಿ.ಶಾಂತಕುಮಾರ, ರಾಮಣ್ಣ ಉಕ್ಕುಂದ, ಮಲ್ಲೇಶಪ್ಪ ಚಿಕ್ಕಣ್ಣನವರ, ಸುರೇಶ ಯತ್ನಳ್ಳಿ ಸೇರಿದಂತೆ ಇನ್ನಿತರರಿದ್ದರು. ಬಿ.ಎಫ್‌. ದೊಡ್ಡಮನಿ ಸ್ವಾಗತಿಸಿದರು. ಎಂ.ಎಫ್‌. ಕರಿಯಮ್ಮನವರ ನಿರೂಪಿಸಿದರು. 

Ad

ಟಾಪ್ ನ್ಯೂಸ್

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Rahul-CM-DCM

ನಾಳೆ ರಾಹುಲ್‌ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ

Trump-Musk

ಅಧ್ಯಕ್ಷ ಟ್ರಂಪ್‌ vs ಉದ್ಯಮಿ ಎಲಾನ್‌ ಮಸ್ಕ್: ಅಮೆರಿಕದಲ್ಲಿ ಸ್ನೇಹಿತರ ಸವಾಲ್‌!

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…

Roman Starovoit: ಕಾರಿನಲ್ಲೇ ಗುಂಡಿಕ್ಕಿ ಆತ್ಮಹ*ತ್ಯೆಗೆ ಶರಣಾದ ರಷ್ಯಾದ ಮಾಜಿ ಸಚಿವ…

ಬ್ರಿಕ್ಸ್‌ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ

ಬ್ರಿಕ್ಸ್‌ ರಾಷ್ಟ್ರಗಳಿಗೆ 10% ಹೆಚ್ಚುವರಿ ಸುಂಕ: ಅಮೆರಿಕ ಅಧ್ಯಕ್ಷ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-acid

Dharwad: ನೀರೆಂದು ಆ್ಯಸಿಡ್ ಕುಡಿದ ವಿದ್ಯಾರ್ಥಿ: ಪ್ರಾಣಾಪಾಯದಿಂದ ಪಾರು

Hubli: ಫಿಟ್ನೆಸ್‌ ತರಬೇತಿ ಯಶಸ್ವಿ; 28 ದಿನದಲ್ಲಿ ತೂಕ ಇಳಿಸಿಕೊಂಡ ಪೊಲೀಸರು

Hubli: ಫಿಟ್ನೆಸ್‌ ತರಬೇತಿ ಯಶಸ್ವಿ; 28 ದಿನದಲ್ಲಿ ತೂಕ ಇಳಿಸಿಕೊಂಡ ಪೊಲೀಸರು

Dharawad: ಕವಿವಿಗೆ ಡಾ.ಎ.ಎಂ.ಖಾನ್ ಕುಲಪತಿ… ರಾಜ್ಯಪಾಲರಿಂದ ಅಧಿಕೃತ ಆದೇಶ

Dharawad: ಕವಿವಿಗೆ ಡಾ.ಎ.ಎಂ.ಖಾನ್ ಕುಲಪತಿ… ರಾಜ್ಯಪಾಲರಿಂದ ಅಧಿಕೃತ ಆದೇಶ

Dharwad ASP Bharamani gives up voluntary retirement and reports for duty

Dharwad: ಸ್ವಯಂ ನಿವೃತ್ತಿ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾದ ಧಾರವಾಡ ಎಎಸ್ಪಿ ಭರಮಣಿ

Hubballi: ತರಗತಿಯಲ್ಲೇ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿ ಮೃ*ತ್ಯು

Hubballi: ತರಗತಿಯಲ್ಲೇ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿ ಮೃ*ತ್ಯು

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

1

ಒಂದಾ ಸಿನಿಮಾ ಮಾಡಿ, ಇಲ್ಲಾ ಟಿವಿಯಲ್ಲೇ ಹೋಗಿ ಕೂತ್ಕೊಳಿ: ನಿರ್ಮಾಪಕ ಶ್ರೀನಿವಾಸ್‌

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

ಈ ತರ ರಾಗಿ ಬನ್ ದೋಸೆ ಯಾವತ್ತಾದ್ರೂ ಮಾಡಿದ್ದೀರಾ! ರುಚಿಗೂ ಬೆಸ್ಟ್… ಆರೋಗ್ಯಕ್ಕೂ ಬೆಸ್ಟ್

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Patna: ಉದ್ಯಮಿ ಗೋಪಾಲ್ ಖೇಮ್ಕಾ ಹ*ತ್ಯೆ ಆರೋಪಿ ಎನ್ಕೌಂಟರ್ ಗೆ ಬಲಿ

Parameshawar

ಅಕ್ರಮ ಬಾಂಗ್ಲಾ ವಲಸಿಗರ ಗಡೀಪಾರು ಪ್ರಕ್ರಿಯೆ ನಿರಂತರ: ಡಾ.ಪರಮೇಶ್ವರ್‌

Rahul-CM-DCM

ನಾಳೆ ರಾಹುಲ್‌ ಜತೆ ಸಿಎಂ, ಡಿಸಿಎಂ ಸಭೆ: ಮೇಲ್ಮನೆ ಆಯ್ಕೆಗೆ ಒಪ್ಪಿಗೆ ಪಡೆವ ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.