ಅಂತಾರಾಜ್ಯ ಕಳ್ಳರಿಬ್ಬರ ಸೆರೆ; ತಲೆಮರೆಸಿಕೊಂಡ ಇನ್ನಿಬ್ಬರು


Team Udayavani, Jul 20, 2019, 3:04 PM IST

hubali-tdy-4

ಹುಬ್ಬಳ್ಳಿ: ಬೆಳ್ಳಿ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳರನ್ನು ಪೊಲೀಸರು ಕಳುವಿನ ವಸ್ತು, ಕಾರಿನೊಂದಿಗೆ ಬಂಧಿಸಿದರು.

ಹುಬ್ಬಳ್ಳಿ: ಬೆಳ್ಳಿ ಆಭರಣಗಳ ಅಂಗಡಿಯ ಶಟರ್ಸ್‌ ಕೀಲಿ ಮುರಿದು ಕಳ್ಳತನ ಮಾಡಿದ್ದ ರಾಜಸ್ಥಾನ ಮೂಲದ ಅಂತಾರಾಜ್ಯ ಕಳ್ಳರಿಬ್ಬರನ್ನು ಶಹರ ಠಾಣೆ ಪೊಲೀಸರು ಕಳುವಿನ ಸಾಮಗ್ರಿ, ನಗದು ಹಾಗೂ ಕಾರು ಸಮೇತ ಶುಕ್ರವಾರ ಬಂಧಿಸಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಮೂಲತಃ ರಾಜಸ್ಥಾನದ ಪಾಟವಾ ಗ್ರಾಮದ ಬೆಂಗಳೂರು ಪಟೇಗಾರ ಪಾಳ್ಯ ಮುಖ್ಯರಸ್ತೆಯ ಭುಂದಾರಾಮ ಊರ್ಫ್‌ ಬಾಬು ಕೆ. ಡಯ್ನಾ ಹಾಗೂ ರಾಜಸ್ಥಾನದ ದೊಂದಲಾ ಸೋಜಿತ ರಸ್ತೆಯ ಬೆಂಗಳೂರು ಶ್ರೀರಾಮಪುರಂದ ಮುಖೇಶ ಎಂ. ಸಾರನ ಬಂಧಿತರಾಗಿದ್ದಾರೆ. ರಾಜಸ್ಥಾನ ಮೂಲದ ಬೆಂಗಳೂರು ಗೊಲ್ಲರ ಹಟ್ಟಿಯ ದೇವಾರಾಮ ಪುಕಾರಾಮ ಹಾಗೂ ಬೆಂಗಳೂರು ಶ್ರೀರಾಮಪುರಂನ ಪೇಮಾರಾಮ ತಿಲೋಕರಾಮ ಪರಾರಿಯಾಗಿದ್ದಾರೆ.

ಬಂಧಿತರು ಏ. 28ರಂದು ಬೆಳಗಿನ ಜಾವ ದುರ್ಗದ ಬಯಲು ಕಿಲ್ಲಾದ ಮಹಾಜನ ಕಾಂಪ್ಲೆಕ್ಸ್‌ನಲ್ಲಿರುವ ಸನ್‌ರೈಸ್‌ ಸಿಲ್ವರ್‌ ಅಂಗಡಿಯ ಶಟರ್ಸ್‌ ಮುರಿದು 3.5 ಲಕ್ಷ ನಗದು ಹಾಗೂ ಒಂದೂವರೆ ಕೆಜಿ ತೂಕದ ಹಳೆಯ ಬೆಳ್ಳಿ ಸಾಮಗ್ರಿ, 39 ಕೆಜಿ ತೂಕದ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿದ್ದರು. ಈ ಕುರಿತು ಅಂಗಡಿಯ ಮಾಲೀಕ ನಾರಾಯಣ ವಿ. ಇರಕಲ್ಲ ಶಹರ ಠಾಣೆಯಲ್ಲಿ ದೂರು ಕೊಟ್ಟಿದ್ದರು.

ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಾರಿನಲ್ಲಿ ಬಂದಿದ್ದ ಮೂವರು ಅಂಗಡಿಯ ಶಟರ್ಸ್‌ ಮುರಿದು ಕಳ್ಳತನ ಮಾಡಿರುವುದು ಚಿತ್ರೀಕರಣಗೊಂಡಿತ್ತು. ಇದನ್ನು ಆಧರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹರ ಠಾಣೆ ಇನ್ಸ್‌ಪೆಕ್ಟರ್‌ ಡಾ| ಗಿರೀಶ ಬೋಜನ್ನವರ ಮತ್ತು ತಂಡದವರು ಕಳ್ಳರ ಪತ್ತೆ ನಡೆಸಿದ್ದರು.

ಸೆರೆ ಸಿಕ್ಕಿದ್ದು ಹೇಗೆ?: ಶುಕ್ರವಾರ ಬೆಳಗಿನ ಜಾವ ಗಬ್ಬೂರ ಬೈಪಾಸ್‌ ಕ್ರಾಸ್‌ ಟೋಲ್ ನಾಕಾ ಹತ್ತಿರ ಡಬ್ಬಿ ಚಹಾ ಅಂಗಡಿ ಎದುರು ಸಂಶಯಾಸ್ಪದವಾಗಿ ನಿಂತಿದ್ದ ಕಾರನ್ನು ಪೊಲೀಸರು ಪರಿಶೀಲಿಸಲು ಹೋದಾಗ ಅದರಲ್ಲಿದ್ದವರು ಪರಾರಿಯಾಗಲು ಯತ್ನಿಸಿದರು. ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಬೆಳ್ಳಿ ಸಾಮಗ್ರಿ ಅಂಗಡಿ ಕಳ್ಳತನ ಮಾಡಿದ್ದಾಗಿ ಹಾಗೂ ಒಂದೂವರೆ ಕೆಜಿ ಬೆಳ್ಳಿ ಮಾರಾಟಕ್ಕೆ ಹೋಗುತ್ತಿರುವುದಾಗಿ ಬಾಯಿಬಿಟ್ಟಿದ್ದಾರೆ. ಪೊಲೀಸರು ಬಂಧಿತರಿಂದ ಬೆಳ್ಳಿ ಸಾಮಗ್ರಿ, ಕಾರು, ಮೊಬೈಲ್ ವಶಪಡಿಸಿಕೊಂಡು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಟಾಪ್ ನ್ಯೂಸ್

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

congress

ವೀಕೆಂಡ್ ಕರ್ಫ್ಯೂ ವಾಪಸ್ : ಟ್ವೀಟ್ ಮೂಲಕ ಕಾಂಗ್ರೆಸ್ ಆಕ್ರೋಶ

nirani

ಹೌದು,ನಾನು ಸೂಟ್ ಹೊಲಿಸಿಕೊಂಡಿದ್ದೇನೆ:ಯತ್ನಾಳ್ ಗೆ ನಿರಾಣಿ ತಿರುಗೇಟು

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 427 ಅಂಕ ಇಳಿಕೆ; ನಿಫ್ಟಿ 17,600 ಅಂಕಗಳ ಮಟ್ಟಕ್ಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಿಮ್ಸ್‌ ಸೇರಿ 8 ಕೇಂದ್ರಗಳಲ್ಲಿ 24×7 ಒಪಿಡಿ

ಕಿಮ್ಸ್‌ ಸೇರಿ 8 ಕೇಂದ್ರಗಳಲ್ಲಿ 24×7 ಒಪಿಡಿ

ಸಾರ್ವಜನಿಕರ ಅಹವಾಲು ಆಲಿಸಿದ ಶೆಟ್ಟರ

ಸಾರ್ವಜನಿಕರ ಅಹವಾಲು ಆಲಿಸಿದ ಶೆಟ್ಟರ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

1-fffdf

ಡಾ| ಸೋಮಶೇಖರ ಇಮ್ರಾಪೂರ ಅವರಿಗೆ 2022ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ

ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

ಜೀವನೋಪಾಯಕ್ಕೆ ಉದ್ಯಮಶೀಲತೆ ಬೆಳೆಸಿಕೊಳ್ಳಿ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

Covid test

ಇಂದೂ ರಾಜ್ಯದಲ್ಲಿ 50  ಸಾವಿರದ ಸನಿಹದಲ್ಲಿ ಕೋವಿಡ್ ಕೇಸ್ : 22 ಸಾವು

1-fdsfsdf

35 ಯೂ ಟ್ಯೂಬ್ ಚಾನಲ್‌ಗಳನ್ನು ಬ್ಲಾಕ್ ಮಾಡಿದ ಭಾರತ ಸರಕಾರ

1-asfsd

ಬಂಡಾಯ ಅಭ್ಯರ್ಥಿಯಾದ ಪರ್ರಿಕರ್ ಪುತ್ರ : ನಾಚಿಕೆಗೇಡು ಎಂದ ಉತ್ಪಲ್

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ

ರೈತರಿಗೆ ನ್ಯಾಯ ಒದಗಿಸುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ: ಸಚಿವ ಭಗವಂತ್ ಖೂಬಾ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

ದ್ವೇಷ-ಅಸೂಯೆಯಿಂದ ಸಾಧನೆ ಅಸಾಧ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.