

Team Udayavani, Aug 4, 2024, 9:23 PM IST
ಹುಬ್ಬಳ್ಳಿ: ಖಾಸಗಿ ವ್ಯಕ್ತಿ ನೀಡಿರುವ ದೂರಿನ ಮೇಲೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ಮೇಲೆ ಖಾಸಗಿ ವ್ಯಕ್ತಿ ದೂರು ಕೊಟ್ಟಿದ್ದರೋ ಅಥವಾ ಸರ್ಕಾರ ಸಂಸ್ಥೆಗಳು ಕೊಟ್ಟಿದ್ದವೋ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಮುಖ್ಯಮಂತ್ರಿಗಳು ಮುಡಾ ಹಗರಣದಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆ ಭೂಮಿಯನ್ನು ಮುಡಾದವರು ಅಭಿವೃದ್ಧಿಪಡಿಸಿ ನೋಂದಣಿ ಮಾಡಿಕೊಟ್ಟಿದ್ದರು. ಆ ಭೂಮಿಯನ್ನು ಮುಖ್ಯಮಂತ್ರಿಗಳ ಪತ್ನಿಯ ಸಹೋದರ ಖರೀದಿ ಮಾಡುತ್ತಾರೆ.
ಆ ಖರೀದಿ ಮಾಡಿದ ಭೂಮಿಯನ್ನು ಮುಖ್ಯಮಂತ್ರಿ ಪತ್ನಿಗೆ ಕೊಡುತ್ತಾರೆ. ಅವರ ಹೆಸರಲ್ಲಿರುವ ಭೂಮಿ ಡಿನೋಟಿಫಿಕೇಶನ್ ಆಗುತ್ತದೆ. ಅಂದರೆ ವಾಸ್ತವದಲ್ಲಿ ಕೃಷಿ ಭೂಮಿ ಎಂಬುದು ಇರಲೇ ಇಲ್ಲ. ಇಂತಹ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ಆ ನಂತರ 14 ನಿವೇಶನ ನೀಡುವಂತೆ ಬೇಡಿಕೆಯಿಡುವ ಲಜ್ಜೆಗೆಟ್ಟ ಮುಖ್ಯಮಂತ್ರಿ ರಾಜ್ಯದಲ್ಲಿದ್ದಾರೆ ಎಂದು ಹರಿಹಾಯ್ದರು.
ಪ್ರತಿ ಪೊಲೀಸ್ ಠಾಣೆಗಳಿಗೆಬೇಸ್ ದರ ನಿಗದಿ: ಜೋಶಿ
ಹುಬ್ಬಳ್ಳಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹರಾಜು ಪ್ರಕ್ರಿಯೆಯಲ್ಲಿ ಇರುವಂತೆ ಪ್ರತಿಯೊಂದು ಠಾಣೆಗೂ ಒಂದೊಂದು ಬೇಸ್ ದರ ನಿಗದಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿ, ಯಾದಗಿರಿಯಲ್ಲಿ ಪೊಲೀಸ್ ಅಧಿಕಾರಿಗೆ ವರ್ಗಾವಣೆ ಒತ್ತಡವಿತ್ತು. ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಶುರುವಾಗುತ್ತಿದ್ದಂತೆ ಅಲ್ಲಿನ ಶಾಸಕರು ನಾಪತ್ತೆಯಾಗುತ್ತಾರೆ. ಇಲ್ಲಿ ಅಧಿಕಾರಿಗಳ ಪ್ರಾಮಾಣಿಕತೆ, ದಕ್ಷತೆ ಹಾಗೂ ಹಿಂದಿನ ಅನುಭವ ಯಾವುದೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹಣ ನೀಡಿದವರನ್ನು ಬೇಡಿಕೆಯಿಟ್ಟ ಠಾಣೆಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಿರುವಾಗ ಹಣ ನೀಡಿ ಬಂದ ಪೊಲೀಸ್ ಅಧಿಕಾರಿಗಳು ಎಲ್ಲಾ ಅಪರಾಧ ಮಾಡುವ ವ್ಯಕ್ತಿಗಳಿಂದಲೂ, ಗ್ಯಾಂಗ್‌ಗಳಿಂದ ಹಣ ಕೀಳುವ ಮಟ್ಟಕ್ಕೆ ಇಳಿಯುತ್ತಾರೆ ಎಂದರು.
Ad
Hubli: ಅರಳಿಕಟ್ಟಿ ಓಣಿ ಹೊಡೆದಾಟ ಪ್ರಕರಣದಲ್ಲಿ 20 ಆರೋಪಿಗಳ ಬಂಧನ
Dharwad: ಆಂಗ್ಲ ಮಾದ್ಯಮ ಶಾಲೆ ಆರಂಭಿಸುವುದು ಕೈಬಿಡಿ… ಸರ್ಕಾರಕ್ಕೆ ಕವಿಸಂ ಆಗ್ರಹ
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಕಾಂಗ್ರೆಸ್ ಸೇರಲು BSY ಮುಂದಾಗಿದ್ರ… ಲಿಂಬಾವಳಿ ಹೇಳಿಕೆಗೆ ದೊಡ್ಡನಗೌಡ ಪಾಟೀಲ ಹೇಳಿದ್ದೇನು?
Heart attack: ಹೃದಯಾಘಾತಕ್ಕೆ ದಾವಣಗೆರೆ – ಧಾರವಾಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಬಲಿ
You seem to have an Ad Blocker on.
To continue reading, please turn it off or whitelist Udayavani.