“ಮುಚ್ಚಿಟ್ಟ ದಲಿತ ಚರಿತ್ರೆ’ ಎಳೆ ಎಳೆಯಾಗಿ ತೆರೆದಿಟ್ಟ ಸಂವಾದ

ಡಾ| ಅಂಬೇಡ್ಕರ್‌ ಕೇವಲ ದಲಿತ ನಾಯಕರಲ್ಲ, ಅವರೊಬ್ಬ ರಾಷ್ಟ್ರೀಯ ನಾಯಕ: ರಘುನಂದನ

Team Udayavani, Oct 17, 2020, 12:36 PM IST

Huballi-tdy-1

ಹುಬ್ಬಳ್ಳಿ: ಅಸ್ಪೃಶ್ಯತೆ ಎಂಬ ಪೆಡಂಭೂತ ತಂದೊಡ್ಡುತ್ತಿರುವ ಅಪಾಯ, ಡಾ| ಅಂಬೇಡ್ಕರ್‌ ಅವರ ರಾಷ್ಟ್ರೀಯವಾದ ಚಿಂತನೆ, ದಲಿತರ ಹೆಸರಲ್ಲಿ ರಾಜಕೀಯ ಷಡ್ಯಂತ್ರ.. ಹೀಗೆ ದಲಿತ ಸಮುದಾಯದ ಮುಚ್ಚಿಟ್ಟ ಚರಿತ್ರೆಯನ್ನು ತೆರೆದಿಡುವ ಯತ್ನ ಸಂವಾದದ ಮೂಲಕ ನಡೆಯಿತು.

ರಾಕೇಶ ಶೆಟ್ಟಿ ಅವರು ಬರೆದಿರುವ “ಮುಚ್ಚಿಟ್ಟ ದಲಿತ ಚರಿತ್ರೆ’ ಕೃತಿ ಕುರಿತಾಗಿ ಇಲ್ಲಿನ ನಿರಾಮಯ ಫೌಂಡೇಶನ್‌ ಕೆಸಿಸಿಐ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಆರೆಸ್ಸೆಸ್‌ನ ಪ್ರಜ್ಞಾಪ್ರವಾಹ ಪ್ರಮುಖ ರಘುನಂದನ, ವಿಧಾನ ಪರಿಷತ್ತು ನೂತನ ಸದಸ್ಯ ಪ್ರೊ| ಸಾಬಣ್ಣ ತಳವಾರ, ಲೇಖಕ ರಾಕೇಶ ಶೆಟ್ಟಿ, ನಿರಾಮಯ ಫೌಂಡೇಶನ್‌ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅವರು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದರು.

ಅಸ್ಪೃಶ್ಯತೆ ಹಿಂದೂ ಚಿಂತನೆಗೆ ವಿರುದ್ಧ: ಪ್ರಜ್ಞಾ ಪ್ರವಾಹದ ಪ್ರಮುಖ ರಘುನಂದನ ಆನ್‌ಲೈನ್‌ ಮೂಲಕ ಮಾತನಾಡಿ, ಅಸ್ಪೃಶ್ಯತೆ ಹಿಂದೂ ಚಿಂತನೆಗೆ ವಿರುದ್ಧವಾಗಿದೆ. ಡಾ| ಅಂಬೇಡ್ಕರ್‌ ಕೇವಲ ದಲಿತ ನಾಯಕರಲ್ಲ, ಅವರೊಬ್ಬ ರಾಷ್ಟ್ರೀಯ ನಾಯಕ. ಬಸವಣ್ಣ ನವರ ಜಯಂತಿಯಂತೆ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡಬೇಕಾಗಿದೆ. ಅಂಬೇಡ್ಕರ್‌ ಮುಸ್ಲಿಂ ಲೀಗ್‌ ಬಗ್ಗೆ ಸ್ಪಷ್ಟ ಚಿಂತನೆ ಹೊಂದಿದ್ದರಿಂದಲೇ ಅವರೊಂದಿಗೆ ಕೈ ಸೇರಿಸಲಿಲ್ಲ ಎಂದರು. ಮಹಾಪ್ರಾಣ ಜೋಗೇಂದ್ರನಾಥ ಮಂಡಲ ದಲಿತರ ನಾಯಕರಾಗಿದ್ದರೂ ಏನನ್ನೋ ನಂಬಿ ಮುಸ್ಲಿಂ ಲೀಗ್‌ ಜತೆ ಕೈ ಸೇರಿಸಿದರು. ಪಾಕ್‌ -ಬಾಂಗ್ಲಾದಲ್ಲಿ ನೆಲೆಸಿ, ಭ್ರಮನಿರಸನಗೊಂಡು ಕೊನೆಗೆ ಭಾರತಕ್ಕೆ ಮರಳಿದರು. ದಲಿತ ಯುವಕರಿಗೆ ಅಂಬೇಡ್ಕರ್‌ ಚಿಂತನೆಗಳು ಮಾರ್ಗದರ್ಶನ ಆಗಬೇಕೆ ಹೊರತು, ಮಂಡಲ ಅವರ ನಡೆ ಅಲ್ಲ ಎಂದು ಹೇಳಿದರು.

ಮತಾಂತರಕ್ಕೆ ಬಲಿಯಾಗದಿರಿ: ವಿಧಾನ ಪರಿಷತ್ತು ಸದಸ್ಯ ಪ್ರೊ| ಸಾಬಣ್ಣ ತಳವಾರ ಮಾತನಾಡಿ, ಡಾ| ಅಂಬೇಡ್ಕರ್‌ ಹಾಗೂ ಮಂಡಲ ಇಬ್ಬರು ಶೋಷಣೆಗೊಳಗಾದ, ನೋವುಂಡ ಸಮಾಜಗಳಿಂದ ಬಂದ ನಾಯಕರು. ಆದರೆ ಇಬ್ಬರೂ ತುಳಿದ ದಾರಿ ವಿಭಿನ್ನವಾಗಿತ್ತು. ದೇಶ ವಿಭಜನೆಯನ್ನುಅಂಬೇಡ್ಕರ್‌ ನೇರವಾಗಿ ವಿರೋಧಿಸಿದ್ದರು. ಡಾ|ಅಂಬೇಡ್ಕರ್‌ ಹಾಗೂ ಮಹಾಪ್ರಾಣ ಜೋಗೇಂದ್ರ ನಾಥ ಮಂಡಲ ಅವರು ಇಂದು ಇದ್ದಿದ್ದರೆ ಸಿಎಎಕಾಯ್ದೆಯನ್ನು ಸ್ವಾಗತಿಸುತ್ತಿದ್ದರು. ಮತಾಂತರಕ್ಕೆಹೆಚ್ಚು ಸಿಲುಕಿದ್ದವರು ದಲಿತರಾಗಿದ್ದು, ಈ ಬಗ್ಗೆ ಜಾಗೃತಿಗೊಳ್ಳಬೇಕಾಗಿದೆ ಎಂದರು.

ನಿರಾಯಮ ಫೌಂಡೇಶನ್‌ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಫೌಂಡೇಶನ್‌ ಕನ್ನಡ ನಾಡಿನ ಅಜ್ಞಾತ ಹುತಾತ್ಮ ಸ್ವಾತಂತ್ರ್ಯಯೋಧರನ್ನು ಗುರುತಿಸುವುದು, ಸ್ಮರಿಸುವುದು ಸೇರಿದಂತೆ ಪರಿಸರ, ಆರೋಗ್ಯ ಇನ್ನಿತರ ಹಲವು ಕಾರ್ಯಕ್ರಮ ಕೈಗೊಂಡಿದೆ ಎಂದರು. ಗುರು ಭದ್ರಾಪುರ ಸ್ವಾಗತಿಸಿದರು. ರಾಮು ದೇಶಪಾಂಡೆ ನಿರೂಪಿಸಿದರು.

ಸಿಎಎ, ಜೆಎನ್‌ಯು ಹೋರಾಟ, ಹತ್ರಾಸ್‌ ಘಟನೆಗಳನ್ನು ಮುಂದಿಟ್ಟುಕೊಂಡು ಕೆಲ ದೇಶ ವಿರೋಧಿ ಶಕ್ತಿಗಳು ದಲಿತರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿವೆ. ಇದರ ಹಿಂದಿನ ಷಡ್ಯಂತ್ರ ಅರಿತುಕೊಳ್ಳಬೇಕಾಗಿದೆ. ಮತಾಂತರ ತಡೆಗೆ ನಾವೆಲ್ಲ ಸನ್ನದ್ಧರಾಗಬೇಕಾಗಿದೆ. –ರಘುನಂದನ, ಪ್ರಜ್ಞಾ ಪ್ರವಾಹದ ಪ್ರಮುಖ

ಮುಚ್ಚಿಟ್ಟ ದಲಿತ ಚರಿತ್ರೆ ಕೃತಿಯನ್ನು ಉಹಾಪೋಹದಡಿ ಬರೆದಿಲ್ಲ. ಅನೇಕದಾಖಲೆಗಳನ್ನು ಇರಿಸಿಕೊಂಡೇ ಬರೆದಿದ್ದೇನೆ. ಡಾ| ಅಂಬೇಡ್ಕರ್‌ ಅವರಂತೆ ಮಹಾ ಪ್ರಾಣ ಜೋಗೇಂದ್ರನಾಥ ಮಂಡಲ ದಲಿತ ಪರ ಕಾಳಜಿ ಹೊಂದಿದ್ದರೂ ತಪ್ಪು ನಡೆಗಳಿಂದ ರಾಜಕೀಯವಾಗಿ ದುರಂತ ನಾಯಕರಾಗಬೇಕಾಯಿತು.  -ರಾಕೇಶ ಶೆಟ್ಟಿ, ಲೇಖಕ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

MONEY (2)

Hubli ಅಪಾರ್ಟಮೆಂಟ್‌ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.