ಮದುವೆ ಮಾಡು.. ಕೋವಿಡ್‌ ನೋಡು..

ಕಿಕ್ಕಿರಿದಿವೆ ಭಾಂಡೆ, ಬಟ್ಟೆ, ಬಂಗಾರದಂಗಡಿ | ವ್ಯಾಪಾರಿಗಳು ಫುಲ್‌ಖುಷ್‌

Team Udayavani, Apr 21, 2021, 6:20 PM IST

ಮದುವೆ ಮಾಡು.. ಕೋವಿಡ್‌ ನೋಡು..

ಧಾರವಾಡ: ತುಂಬಿ ತುಳುಕುತ್ತಿರುವ ಬಟ್ಟೆ ಅಂಗಡಿ, ಕೊಂಡ ಸಾಮಗ್ರಿಗಳನ್ನು ಕಟ್ಟಿಡಲುಆಗದ ಭಾಂಡೆ ಅಂಗಡಿ, ಒಂಟಿ ಕಾಲಿನಲ್ಲಿ ನಿಂತುಬಂಗಾರ ಕೊಳ್ಳುತ್ತಿರುವವರಿಗೆ ಕುಳಿತುಕೊಳ್ಳಿಎಂದು ಹೇಳಲಾರದ ಸ್ಥಿತಿಯಲ್ಲಿರುವಅಕ್ಕಸಾಲಿಗರು, ಇನ್ನು ಹೋಟೆಲ್‌ಗ‌ಳಲ್ಲಿ ಸರತಿ ಸಾಲು.

ಕೋವಿಡ್ ಮಹಾಮಾರಿಗೆ ಹೆದರಿ ಎಲ್ಲರೂ ಬಿಲ ಸೇರುತ್ತಾರೆ ಎಂದುಕೊಂಡರೆ ಜಿಲ್ಲೆಯಲ್ಲಿ ಮಾತ್ರ ಕೋವಿಡ್ ಜನರು ಕ್ಯಾರೇ ಎನ್ನದೆ ಎಲ್ಲರೂ ಮದುವೆ ಸಂಭ್ರಮದಲ್ಲಿ ಮುಳುಗಿಹೋಗಿದ್ದು, ಜವಳಿ ಸಾಲಿನಲ್ಲಿ ಝಳ ಝಳಝಳಪಿಸುವ ಬಟ್ಟೆ ಹಾಕಿಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ.

ಹೌದು…, ಕಳೆದ ವರ್ಷವೂ ಮಕ್ಕಳು, ಮೊಮ್ಮಕ್ಕಳ ಮದುವೆ, ಮುಂಜ್ವಿ ಸಮಾರಂಭಗಳನ್ನು ಅಚ್ಚುಕಟ್ಟಾಗಿಮಾಡಲಾಗದೇ ಕಂಗಾಲಾಗಿರುವ ಪೋಷಕರು, ಇದೀಗ ಏಪ್ರಿಲ್‌ಮತ್ತು ಮೇ ತಿಂಗಳಿನಲ್ಲಿರುವಶುಭ ಮುಹೂರ್ತಗಳಿಗೆ ಮದುವೆನಿಗದಿ ಮಾಡಿ ಲಗ್ನಪತ್ರಿಕೆ ಮುದ್ರಿಸಿ

ಹಂಚಿದ್ದಾರೆ. ಆದರೆ ಕೋವಿಡ್ ಒಮ್ಮಿಂದೊಮ್ಮೆಲೆ ರಣಕೇಕೆಹಾಕುತ್ತಿದ್ದಂತೆಯೇ ಮತ್ತೆ ಲಾಕ್‌ಡೌನ್‌ಹೇರುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು,ಮದುವೆ ನಿಶ್ಚಯಿಸಿದವರೆಲ್ಲರೂ ಇದೀಗ ಸಂತಿಪೇಟೆಯಲ್ಲಿ ಭರ್ಜರಿಯಾಗಿ ಓಡಾಡುತ್ತಿದ್ದಾರೆ.ಮದುವೆ ಬಗ್ಗೆ ಸಂಭ್ರಮವಿದ್ದರೂ, ಕೊರೊನಾಬಗ್ಗೆ ಆತಂಕವಿದ್ದು, ದೇವರ ಮೇಲೆ ಭಾರ ಹಾಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ.

ಏ. 22,25 ಮತ್ತು ಮೇ 2, 3, 5, 8, 13, 18,22 ಹೀಗೆ 30 ದಿನಗಳ ಅವಧಿಯಲ್ಲಿ ಬರೀ 10 ದಿನಗಳು ಮಾತ್ರ ಮದುವೆ ಮುಹೂರ್ತಗಳಿದ್ದು, ಮಕ್ಕಳ ತಲೆ ಮೇಲೆ ಹಾಗೂ ಹೀಗೂ ಅಕ್ಷತೆಹಾಕಿ ಮುಗಿಸಿದರಾಯಿತು ಎನ್ನುತ್ತಿದ್ದಾರೆ ಜನ. ಹಳ್ಳಿಗಳಿಂದ ನಗರದತ್ತ ಮದುವೆ ಸಂತೆಗಾಗಿತಂಡೋಪತಂಡಗಳಾಗಿ ಜನ ಧಾವಿಸಿ ಬರುತ್ತಿದ್ದಾರೆ. ಸಾರಿಗೆ ಬಸ್‌ಗಳ ಸಂಚಾರವಿಲ್ಲವಾದರೂಖಾಸಗಿ ವಾಹನಗಳ ಮೂಲಕವೇ ಅವಳಿನಗರಕ್ಕೆ ಸಾಮಾನ್ಯ ದಿನಗಳಂತೆಯೇ ಜನರು ಮುಗಿಬೀಳುತ್ತಿದ್ದಾರೆ. ಧಾರವಾಡದ ಸುಭಾಸ ರಸ್ತೆ, ಲೈನ್‌ಬಜಾರ್‌, ವಿಜಯಾ ರಸ್ತೆ, ಸೂಪರ್‌

ಮಾರ್ಕೆಟ್‌ಗಳು ಮದುವೆ ಸಂತೆಯ ಜನರಿಂದಕಿಕ್ಕಿರಿದು ಹೋಗಿವೆ. ಹುಬ್ಬಳ್ಳಿಯ ಸ್ಟೇಶನ್‌ ರಸ್ತೆ,ಮೂರುಸಾವಿರ ಮಠದ ರಸ್ತೆ, ದುರ್ಗದಬೈಲ್‌,ದಾಜಿಬಾನ್‌ಪೇಟೆ, ಬಂಡಿವಾಡ ಅಗಸಿ, ಜವಳಿಸಾಲು, ಕಂಚಗಾರಗಲ್ಲಿ, ಕಾಳಮ್ಮನ ಅಗಸಿ,ಬ್ರಾಡವೇ, ಕೊಪ್ಪಿಕರ ರಸ್ತೆ, ಹಳೆ ಹುಬ್ಬಳ್ಳಿಯ ಸಂತೆ ಪೇಟೆಗಳು ಕಿಕ್ಕಿರಿದು ತುಂಬಿ ಹೋಗಿವೆ.

ವಹಿವಾಟು ಒಮ್ಮಿಂದೊಮ್ಮೆಲೇ ಏರುಮುಖ :

ಮದುವೆ ಸಮಾರಂಭಗಳಿಗೆ ಸ್ಥಿತಿವಂತರು ಹೆಚ್ಚಾಗಿ ಹುಬ್ಬಳ್ಳಿ ಪೇಟೆಯನ್ನು ಅವಲಂಬಿಸಿದ್ದರೆ, ಧಾರವಾಡಿಗರು ನಗರದಲ್ಲಿನ ಹಳೆ ಮದುವೆ ಜವಳಿ ಅಂಗಡಿಗಳಲ್ಲಿ ಬಟ್ಟೆ ಕೊಳ್ಳುವುದು ರೂಢಿ.ಆದರೆ ಬಡವರು ಮಾತ್ರ ನಾಲ್ಕು ಕಾಸು ಉಳಿಸಿಕೊಳ್ಳಲು ವಿಜಯಪುರ ಜಿಲ್ಲೆಯ ಚಡಚಣ ಮತ್ತುಬಾಗಲಕೋಟೆ ಜಿಲ್ಲೆಯ ರಬಕವಿಯಲ್ಲಿನ ಪ್ರಸಿದ್ಧ ಬಟ್ಟೆ ಅಂಗಡಿಗಳತ್ತ ಮುಖ ಮಾಡಿದ್ದಾರೆ.ಒಂದು ಮದುವೆಯವರು ಕನಿಷ್ಠ 50-70 ಸಾವಿರ ರೂ. ಬಟ್ಟೆ ಅಥವಾ ಭಾಂಡೆ ಖರೀದಿಸುತ್ತಿದ್ದಾರೆ.ಹೀಗಾಗಿ ಭಾಂಡೆ ಬಜಾರ್‌ ಮತ್ತು ಬಟ್ಟೆ ಬಜಾರ್‌ಗಳಲ್ಲಿ ತೀವ್ರ ಕುಗ್ಗಿ ಹೋಗಿದ್ದ ವ್ಯಾಪಾರವಹಿವಾಟು ಒಮ್ಮಿಂದೊಮ್ಮೆಲೇ ಏರುಮುಖವಾಗಿದೆ. ಇಲ್ಲಿ ಯಾವುದೇ ಕೋವಿಡ್‌ ತಡೆ ಜಾಗೃತಿ ಕ್ರಮಗಳಿಗೆ ಒತ್ತು ನೀಡುತ್ತಲೇ ಇಲ್ಲವಾದ್ದರಿಂದ ಕೊರೊನಾತಂಕ ಕಾಡುತ್ತಿದೆ.

ಗ್ರಾಮೀಣ ಪ್ರದೇಶದಲ್ಲಿ ನೆಗಡಿ, ಜ್ವರ ಹಾವಳಿ:

ತೋಳ ಬಂತಪ್ಪೋ ತೋಳ ಕತೆಯಂತೆ ಕಳೆದ ವರ್ಷ ಕೋವಿಡ್‌ಗೆ ವಿಪರೀತ ಹೆದರಿಕೊಂಡಿದ್ದ ಜನರು ಈ ವರ್ಷ ಅದರ ಗಂಭೀರತೆಯನ್ನು ಸ್ವಲ್ಪವೂ ಅರಿಯದೇ ನಿರ್ಲಕ್ಷéದಿಂದವರ್ತಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮುಂಗಾರುಪೂರ್ವ ಮಳೆಹಾಗೂ ವಾತಾವರಣದಲ್ಲಿ ಉಂಟಾಗಿರುವ ಏರುಪೇರಿನಿಂದಾಗಿ ಮನೆಗೊಬ್ಬರಿಗೆ ನೆಗಡಿ, ಜ್ವರ,ಕೆಮ್ಮು ಆವರಿಸಿಕೊಂಡಿದೆ. ಕೆಲವರಿಗೆ ತೀವ್ರ ಕಫ ಆವರಿಸಿಕೊಂಡಿದ್ದು, ಯಾರೂಕೂಡ ಸ್ವಯಂ ಪ್ರೇರಣೆಯಿಂದ ಕೋವಿಡ್‌ ಪರೀಕ್ಷೆಗೆ ಹಾಜರಾಗುತ್ತಿಲ್ಲ. ಕಳೆದಬಾರಿಯಂತೆ ಜಿಲ್ಲಾಡಳಿತ ಕೂಡ ಸಂಶಯ ಬಂದವ್ಯಕ್ತಿಗಳನ್ನು ಖುದ್ದಾಗಿ ಕರೆದುಕೊಂಡು ಹೋಗಿಪರೀಕ್ಷೆಗೆ ಒಳಪಡಿಸುತ್ತಿಲ್ಲ. ಹೀಗಾಗಿ ಕಳೆದಒಂದು ವಾರದಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಕೂಡ ತೀವ್ರಆತಂಕದಲ್ಲಿದ್ದಾರೆ. ಹಳ್ಳಿಗಳಲ್ಲಿ ಸಂಭವಿಸುವ ಸಹಜ ಸಾವುಗಳಿಗೂ ಭಯಭೀತರಾಗುತ್ತಿದ್ದಾರೆ.

ಮೇ ಮಾಸಾಂತ್ಯದ ಮದುವೆ ಮುಂದೂಡಿಕೆ :

ಯುವ ಜೋಡಿಗಳಿಗೂ ಕೋವಿಡ್‌ ಆತಂಕ ಕಾಡುತ್ತಿದೆ. ಏಪ್ರಿಲ್‌ ಕೊನೆಯ ವಾರ ಮತ್ತು ಮೇ ತಿಂಗಳಿನ ಮೊದಲ ವಾರದಲ್ಲಿ ಮದುವೆ ನಿಶ್ಚಯಿಸಿದವರುಧೈರ್ಯ ಮಾಡಿ ಹೇಗಾದರೂ ಸರಿ ಮದುವೆ ಮಾಡಿಯೇ ಬಿಡೋಣಎನ್ನುತ್ತಿದ್ದಾರೆ. ಆದರೆ ಮೇ ತಿಂಗಳಿನ ಮಧ್ಯ ಹಾಗೂ ಕೊನೆವಾರದಲ್ಲಿ ಮದುವೆ ಮಾಡಲು ನಿಶ್ಚಿಯಿಸಿದವರುಮಾತ್ರ ಸದ್ಯಕ್ಕೆ ಕೋವಿಡ್ ಮತ್ತು ಲಾಕ್‌ಡೌನ್‌ ಆತಂಕದಲ್ಲಿದ್ದು, ಮದುವೆಯನ್ನು ಮುಂದೂಡುತ್ತಿದ್ದಾರೆ.

ಲಾಕ್‌ಡೌನ್‌ಭಯ; ಸ್ಟಾಕ್‌ಗೆ ಒತು :

ಮೇ ಮೊದಲ ವಾರದಲ್ಲಿ ಲಾಕ್‌ಡೌನ್‌ಆಗುವ ಸಾಧ್ಯತೆ ಇದೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದ್ದು, ಎಲ್ಲರೂ ಕಳೆದ ವರ್ಷದಂತೆ ಪಡಿಪಾಟಲು ಪಡುವುದುಬೇಡ ಎಂದು ಮನೆಗೆ ತಿಂಗಳು-ಎರಡುತಿಂಗಳಿಗೆ ಬೇಕಾಗುವಷ್ಟು ಕಿರಾಣಿಸೇರಿದಂತೆ, ದಿನಸಿ ಮತ್ತು ಅಗತ್ಯ ವಸ್ತುಗಳನ್ನುಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಅಷ್ಟೇಯಲ್ಲ,ಲಾಕ್‌ಡೌನ್‌ ಸಂದರ್ಭದಲ್ಲಿ ಹಳ್ಳಿ ಹಳ್ಳಿಗೆಮಾರಾಟಕ್ಕೆ ಬರುತ್ತಿದ್ದವರು ಮರಳಿ ಹಳ್ಳಿಗಳತ್ತ ಸಾಮಗ್ರಿಗಳ ಮಾರಾಟಕ್ಕೆ ಬರುತ್ತಿದ್ದಾರೆ.

ಕೋವಿಡ್ ದಿಂದ ನೆಲಕಚ್ಚಿದ್ದ ನಮ್ಮ ವ್ಯಾಪಾರ ಕಳೆದ ಒಂದು ತಿಂಗಳಿನಲ್ಲಿ ಮರಳಿ ಯಥಾಸ್ಥಿತಿಗೆ ಬಂದಿದೆ.ಅಷ್ಟೇಯಲ್ಲ, ಕಳೆದ ಒಂದು ವಾರದಿಂದ ವ್ಯಾಪಾರದಲ್ಲಿ ಏರಿಕೆಯಾಗಿದ್ದು, ಮದುವೆಗೆ ಬಂಗಾರ ಖರೀದಿಗೆ ಜನಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. – ಆರ್‌.ಎನ್‌. ರಾಯ್ಕರ್‌, ಚಿನ್ನದಂಗಡಿ ಮಾಲೀಕ

ಬಟ್ಟೆ ವ್ಯಾಪಾರ ಕೊರೊನಾ ಲಾಕ್‌ ಡೌನ್‌ ನಂತರ ತೀವ್ರ ಕುಸಿತಕಂಡಿತ್ತು. ಕಳೆದ ಒಂದು ತಿಂಗಳಿನಿಂದಒಮ್ಮಿಂದೊಮ್ಮೆಲೇ ಏರುಮುಖವಾಗಿದೆ.ಮದುವೆ ಜವಳಿಗಂತೂ ಒಂದು ವಾರದಿಂದ ಜನ ಮುಗಿಬಿದ್ದಿದ್ದಾರೆ.ಅದರಲ್ಲೂ ರಾತ್ರಿ ಬೇಗನೆ ಅಂಗಡಿಮುಚ್ಚುತ್ತಿರುವ ಕಾರಣದಿಂದಾಗಿ ದಿನವಿಡೀ ವ್ಯಾಪಾರ ಜೋರಾಗಿದೆ. –ಅಮರಚಂದ ಜೈನ್‌, ಬಟ್ಟೆ ವ್ಯಾಪಾರಿ, ಸುಭಾಷ ರಸ್ತೆ

ಈ ವರ್ಷದ ಮೇ ಮಧ್ಯದಲ್ಲಿ ಮಗಳ ಮದುವೆಮಾಡಲೇಬೇಕೆಂದು ನಿಶ್ಚಿಯಿಸಿ ಬಂಗಾರ ಖರೀದಿ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದೆವು.ಆದರೆ ಕೊರೊನಾಹೆಚ್ಚಾಗಿದ್ದು, ಲಾಕ್‌ಡೌನ್‌ ಹೇರುತ್ತಾರೆಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ಮದುವೆ ಮುಂದೂಡಿದ್ದೇವೆ. –ಶಿವಾನಂದ ಮೊರಬ,ಮಟ್ಟಿಪ್ಲಾಟ್‌ ನಿವಾಸಿ, ಧಾರವಾಡ

 

­ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

1-wqe-wqe

Coast Guard ಕಾರ್ಯಾಚರಣೆ; 20 ಕೋಟಿ ರೂ. ಚಿನ್ನ ವಶಕ್ಕೆ; Video

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

1wwwqe

Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ

congress

Bihar; ಜೂನ್ 12ರ ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಭಾಗಿಯಾಗುತ್ತದೆ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ

ದಾಂಡೇಲಿ: ಸಮಯಕ್ಕೆ ಸರಿಯಾಗಿ ಬಾರದ ಬಸ್… ಪ್ರಯಾಣಿಕರಿಂದ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapur: ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

Vijayapur: ಮಲೀನವಾಗುತ್ತಿರುವ ಕೃಷ್ಣೆ ಕಾಪಾಡಿ; ತ್ಯಾಜ್ಯ ವಸ್ತು ಎಸೆಯಬೇಡಿ

ಜಗದೀಶ್ ಶೆಟ್ಟರ್ ಅವರ ಆಗಮನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ: ಡಿ.ಕೆ.ಶಿವಕುಮಾರ್

ಜಗದೀಶ್ ಶೆಟ್ಟರ್ ಅವರ ಆಗಮನ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ: ಡಿ.ಕೆ.ಶಿವಕುಮಾರ್

jagadish shettar

ನನಗೂ ಸವದಿಗೂ ಸಚಿವ ಸ್ಥಾನ ಸಿಗಬೇಕಿತ್ತು, ಆದರೆ ಸಿಕ್ಕಿಲ್ಲ..: Jagadish Shettar

Santosh Lad

Santosh Lad: ಮರಾಠ ದೊರೆ ‘ಕೈ’ಗೆ ಏಳು ಸುತ್ತಿನ ಕೋಟೆ

Dharwad: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ

Dharwad: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರ ಬರ್ಬರ ಹತ್ಯೆ

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

BBMP ಚುನಾವಣೆಗೆ ತಯಾರಿ; ಬಿಡದಿ ತೋಟದಲ್ಲಿ ಮುಖಂಡರ ಸಭೆ ನಡೆಸಿದ HDK

1-wqe-wqe

Coast Guard ಕಾರ್ಯಾಚರಣೆ; 20 ಕೋಟಿ ರೂ. ಚಿನ್ನ ವಶಕ್ಕೆ; Video

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

ಮಹಾಲಿಂಗಪುರದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಆಸ್ತಿ ಪಾಸ್ತಿ ನಷ್ಟ

1wwwqe

Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ