Udayavni Special

ಸ್ವಾತಂತ್ರ್ಯ ಹೋರಾಟಗಾರರ ಕನಸು ಸಾಕಾರಗೊಳಿಸಿ: ಹಿರೇಮಠ


Team Udayavani, Aug 16, 2017, 12:57 PM IST

hub2.jpg

ಹುಬ್ಬಳ್ಳಿ: ಜಗತ್ತಿನ ಭೂಪಟದಲ್ಲಿ ಭಾರತ ಮುಂದುವರಿಯುತ್ತಿರುವ ರಾಷ್ಟ್ರವಾಗಿದ್ದರೂ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಲಂಚಗುಳಿತನವು ರಾಷ್ಟ್ರವನ್ನು ಸಂಕಷ್ಟಕ್ಕೀಡು ಮಾಡುವಂತಾಗಿದೆ ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಕಳವಳ ವ್ಯಕ್ತಪಡಿಸಿದರು. 

ಇಲ್ಲಿನ ಕಿತ್ತೂರು ಚೆನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಪಾಲಿಕೆ ವತಿಯಿಂದ ಸ್ವಾತಂತ್ರೊತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದ ದೇಶವನ್ನು ಮಹಾತ್ಮ ಗಾಂಧಿ ಹಾಗೂ ಅನೇಕ ಮಹನೀಯರು ತಮ್ಮ  ನಿಸ್ವಾರ್ಥ ಸೇವೆ, ತ್ಯಾಗ, ಬಲಿದಾನ ಮೂಲಕ ಮುಕ್ತಗೊಳಿಸಿದರು. 

ಈಗ ಭಾರತವು ವಿಶ್ವಮಾನ್ಯ ಅಗ್ರಪಂಕ್ತಿಯತ್ತ ಸಾಗುತ್ತಿದೆ. ಜಗತ್ತಿನಲ್ಲೇ 3ನೇ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ. ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಆದರೂ ಅನಕ್ಷರತೆ, ದಾರಿದ್ರ್ಯ, ಮೂಢ ನಂಬಿಕೆಯಂತಹ ಕಂದಾಚಾರಗಳು ತೊಡಗಿಲ್ಲ.

ಆದ್ದರಿಂದ ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸು ಸಾಕಾರಗೊಳಿಸಲು ಇನ್ನಷ್ಟು ಶ್ರಮಿಸಬೇಕಾಗಿದೆ ಎಂದರು. ಮಹತ್ವಾಕಾಂಕ್ಷಿ ಸ್ಮಾಟ್‌ ìಸಿಟಿ ಯೋಜನೆಯಲ್ಲಿ ಅವಳಿ ನಗರವೂ ಸೇರ್ಪಡೆಗೊಂಡಿದ್ದು, ಜಗತ್ತಿನ ಹೆಸರಾಂತ ಕನ್ಸಲ್ಟಿಂಗ್‌  ಸಂಸ್ಥೆಯ ಪಾಲುದಾರಿಕೆಯೊಂದಿಗೆ 1662 ಕೋಟಿ ರೂ. ವೆಚ್ಚದಲ್ಲಿ 5 ವರ್ಷಗಳಲ್ಲಿ ಅಭಿವೃದ್ಧಿ ಪಡಿಸಲಾಗುವುದು.

ರಾಜ್ಯ ಸರಕಾರ ಮತ್ತು ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಪಾಲಿಕೆ ಎಲ್ಲ 67 ವಾರ್ಡ್‌ಗಲ್ಲಿ 1200 ಕೋಟಿ ರೂ. ವೆಚ್ಚದಲ್ಲಿ ನಿರಂತರ ನೀರು ಸರಬರಾಜು ಯೋಜನೆ ಕೈಗೊಳ್ಳಲಾಗುತ್ತಿದೆ.  ಅಮೃತ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳ ಕಾಮಗಾರಿ ನಡೆಯುತ್ತಿದೆ ಎಂದು ವಿವರಿಸಿದರು. 

ರಾಜ್ಯ ಸರಕಾರದ ವಿಶೇಷ  ಅನುದಾನದ 100 ಕೋಟಿ ರೂ. ಗಳಲ್ಲಿ 70 ಕೋಟಿ ರೂ. ಕಾಮಗಾರಿ ಮುಗಿದಿದೆ. ಇನ್ನು 22 ಕೋಟಿ ರೂ. ಕಾಮಗಾರಿಗೆ ಹಾಗೂ ಸೋಲಾರ್‌ ಟಾಪ್‌ ರೂμಂಗ್‌ಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು. 35 ಕೋಟಿ ರೂ. ವೆಚ್ಚದಲ್ಲಿ ಗಣಕೀಕೃತ ಸ್ಮಾರ್ಟ್‌ ಲೈಟಿಂಗ್‌ ವ್ಯವಸ್ಥೆಯನ್ನು ಮುಂಬರುವ ತಿಂಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು.

ಅವಳಿ ನಗರದ ಜನತೆಗೆ ಕಾಗದ ರಹಿತ, ನಗದು ರಹಿತ ಇ-ಆಡಳಿತ ಸೇವೆ  ನೀಡಲಾಗುವುದು. ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅವಳಿ ನಗರದಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗಿದೆ. ಬ್ಯಾನರ್‌, ಬಂಟಿಂಗ್ಸ್‌, ಫ್ಲೆಕ್ಸ್‌ ಮುಕ್ತ ನಗರವನ್ನಾಗಿಸಲಾಗುವುದು ಎಂದರು. 

ಸಂಸದ ಪ್ರಹ್ಲಾದ ಜೋಶಿ, ಶಾಸಕ ಪ್ರಸಾದ ಅಬ್ಬಯ್ಯ, ಮಹಾಪೌರ ಡಿ.ಕೆ. ಚವ್ಹಾಣ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಹೊರಕೇರಿ, ಸುಧೀರ ಸರಾಫ, ರಾಜಣ್ಣ ಕೊರವಿ, ಅಲ್ತಾಫ್‌ ಕಿತ್ತೂರ, ಮೋಹನ ಹಿರೇಮನಿ, ಶಿವು ಮೆಣಸಿನಕಾಯಿ, ಕೃಷ್ಣಾ ಗಂಡಗಾಳೇಕರ, ಲೀನಾ ಮಿಸ್ಕಿನ, ಎಸ್‌.ಎಚ್‌. ನರೇಗಲ್ಲ ಇತರರಿದ್ದರು. 

ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ: ಇದೇ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ನಿಮಿತ್ತ ರಾಯಣ್ಣನ ಪ್ರತಿಮೆಗೆ ಪಾಲಿಕೆಯಿಂದ ಮಹಾಪೌರ ಡಿ.ಕೆ. ಚವ್ಹಾಣ ಮಾಲಾರ್ಪಣೆ ಮಾಡಿದರು.  

ಟಾಪ್ ನ್ಯೂಸ್

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ಸುನೀಲ್ ಕುಮಾರ್

virat kohli k l rahul ishan kishan

ಇಶಾನ್, ರಾಹುಲ್, ವಿರಾಟ್: ಟಿ20 ವಿಶ್ವಕಪ್ ನಲ್ಲಿ ಭಾರತದ ಆರಂಭಿಕ ಆಟಗಾರ ಯಾರು?

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸಟೇಬಲ್ ಅನ್ನೇ ಅಪಹರಿಸಿದ!

ಕಾರಿನ ದಾಖಲೆ ತೋರಿಸಲು ಕೇಳಿದ ಟ್ರಾಫಿಕ್ ಕಾನ್ಸ್ ಟೇಬಲ್ ಅನ್ನೇ ಅಪಹರಿಸಿದ!

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ಹಿಂದೂಗಳ ವಿರುದ್ಧ ದ್ವೇಷ: ದೇವಾಲಯ ಧ್ವಂಸ, ಬಾಂಗ್ಲಾ ಪೊಲೀಸರಿಂದ 450 ಮಂದಿ ಬಂಧನ

ghfghftyyht

ಬಾಲಿವುಡ್ ನಟಿ ಯುವಿಕಾ ಚೌಧರಿಗೆ ಮಧ್ಯಂತರ ಜಾಮೀನು ಮಂಜೂರು

ms dhoni and n srinivasan

ಎಂ.ಎಸ್.ಧೋನಿ ಇಲ್ಲದ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲ: ಶ್ರೀನಿವಾಸನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

ಆರ್ ಎಸ್ಎಸ್ ಏನು ಮಾಡುತ್ತಿದೆ ಎಂದು ತಿಳಿಯಲು ಎಚ್ ಡಿಕೆ ಶಾಖೆಗೆ ಬರಲಿ: ನಳಿನ್ ಕಟೀಲ್

cgcftgt

ಮತಾಂತರಕ್ಕೆ ಪ್ರಯತ್ನ ಆರೋಪ | ಭೈರಿದೇವರಕೊಪ್ಪ ಚರ್ಚ್‌ನ ಪಾಸ್ಟರ್‌ ಸೋಮು ಬಂಧನ 

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಏರಿಕೆಯ ಮೆಟ್ಟಿಲು ಹತ್ತಿದ ಕಾಟನ್‌

ಆರೆಸ್ಸೆಸ್‌ ಸಂಸ್ಕಾರದಿಂದ ಶಕ್ತಿ ನಿರ್ಮಾಣ

ಆರೆಸ್ಸೆಸ್‌ ಸಂಸ್ಕಾರದಿಂದ ಶಕ್ತಿ ನಿರ್ಮಾಣ

akms

ಪ್ರಧಾನಿ ಭಾವಚಿತ್ರ ಸುಡಲು ಯತ್ನ:ಪೊಲೀಸರೊಂದಿಗೆ ತಳ್ಳಾಟ- ನೂಕಾಟ

MUST WATCH

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

udayavani youtube

ದಾಂಡೇಲಿ ನಗರ ಸಭೆಯಲ್ಲಿ ಮಾಹಿತಿ ಹಕ್ಕು ಅಧಿನಿಯಮ ಉಲ್ಲಂಘನೆ ಅಕ್ರಂ ಖಾನ್ ಆರೋಪ

udayavani youtube

ಸರಕಾರಿ ಆಸ್ತಿ ಸಂರಕ್ಷಿಸದ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಶಾಸಕ ಎಚ್ಚರಿಕೆ

ಹೊಸ ಸೇರ್ಪಡೆ

ballari news

ಕರಿಬೇವು ಬೆಳೆದು ಕೈತುಂಬ ಆದಾಯ

davanagere news

ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ

26

ಪ್ರಶಸ್ತಿಯಿಂದ ಸಾಧಕನ ಜವಾಬ್ದಾರಿ ವೃದ್ದಿ

davanagere news

ದಣಿವರಿಯದ ಕೊರೊನಾ ಸೇನಾನಿ ಶಾಸಕ ರೇಣುಕಾಚಾರ್ಯ!

chitrdurga news

ಸಾಲ ಸಂಪರ್ಕ ಕಾರ್ಯಕ್ರಮದಲ್ಲಿ ಜನ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.