ಶರಾವತಿ ಎಡಬಲ ದಂಡೆಯಲ್ಲಿ  ಪ್ರವಾಹ 


Team Udayavani, Aug 18, 2018, 4:41 PM IST

18-agust-18.jpg

ಹೊನ್ನಾವರ: ದಿನಾಂಕ 15ಕ್ಕೆ ಮಳೆ ಕಡಿಮೆಯಾದ ಕಾರಣ ಬಂದ್‌ ಮಾಡಲಾದ ಲಿಂಗನಮಕ್ಕಿ ಅಣೆಕಟ್ಟಿನ ಮತ್ತು ಶರಾವತಿ ಟೇಲರೀಸ್‌ ಅಣೆಕಟ್ಟಿನ ಗೇಟ್‌ಗಳನ್ನು ಮುಚ್ಚಲಾಗಿತ್ತು. ಜಲಾನಯನ ಪ್ರದೇಶಗಳಾದ ಸಾಗರ, ಕುಂಬ್ರಿ, ರಿಪ್ಪನಪೇಟೆ ಮೊದಲಾದ ಪ್ರದೇಶದಲ್ಲಿ ಮಳೆ ಜೋರಾದ ಕಾರಣ ನಿನ್ನೆ ಲಿಂಗನಮಕ್ಕಿಯ ಗೇಟ್‌ಗಳನ್ನು ತೆರೆದು 15ಸಾವಿರ ಕ್ಯೂಸೆಕ್‌ ನೀರು ಬಿಡಲು ಆರಂಭಿಸಲಾಯಿತು. ಸಂಜೆ ಹೊತ್ತಿಗೆ ಮಳೆ ಜೋರಾಗಿ 35ಸಾವಿರ ಕ್ಯೂಸೆಕ್‌ಗೆ ಏರಿಸಿ ಇಂದು ಮುಂಜಾನೆ 61ಸಾವಿರ ಕ್ಯೂಸೆಕ್‌ ಟೇಲರೀಸ್‌ನಿಂದ ಬಿಟ್ಟ ಕಾರಣ ಶರಾವತಿ ಪಾತಳಿಗಿಂತ 3ಅಡಿ ನೀರು ಏರಿದ್ದು ಗೇರುಸೊಪ್ಪೆಯಿಂದ ಹೊನ್ನಾವರವರೆಗಿನ 35ಕಿಮೀ ಎಡಬಲದಂಡೆ ತೋಟಗಳು ನೀರಿನಿಂದ ಆವೃತವಾಗಿದೆ.

ಗೇರುಸೊಪ್ಪಾ ನಗರಬಸ್ತಿಕೇರಿ, ತೆಂಗಾರ, ಸಂಶಿ, ಉಪ್ಪೋಣಿ ಗ್ರಾಮದ ಶಾಲೆ, ಮಾಗೋಡ ದಾಸ ಪೈ ಅಂಗಡಿಗಳಿಗೆ ನೀರು ಹೊಕ್ಕಿವೆ. ಅಳ್ಳಂಕಿ ಗಾಬಿತಕೇರಿಯಲ್ಲಿ ಶರಾವತಿ ಪ್ರವಾಹದಿಂದ ಅಕ್ಷರಶಃ ದ್ವೀಪವಾಗಿ ಪರಿವರ್ತನೆಗೊಂಡಿರುವ ನಾರಾಯಣ ಗೊಯ್ದು ನಾಯ್ಕ ಮನೆಗೆ ನೀರು ನುಗ್ಗಿದ್ದು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ. ಹೈಗುಂದ ಸೇತುವೆಯ ಎತ್ತರಕ್ಕೆ ನೀರು ಹರಿಯುತ್ತಿದೆ. ಟೇಲರೀಸ್‌ ಸೇತುವೆಯ ತಳಭಾಗದವರೆಗೆ ನೀರು ಏರಿದೆ.

ಲಿಂಗನಮಕ್ಕಿಯಿಂದ ವಿದ್ಯುತ್‌ ಉತ್ಪಾದಿಸಿ, ಗೇಟು ತೆಗೆದು ಹೊರಬಿಡುವ ನೀರಿನ ಜೊತೆ, ಜೋಗ ಜಲಪಾತದಿಂದ ಟೇಲರೀಸ್‌ ಆಣೆಕಟ್ಟಿನವರೆಗಿನ 30ಕಿಮೀ ವ್ಯಾಪ್ತಿಯ ಕೊಳ್ಳದಲ್ಲಿ ಬೀಳುವ ಮಳೆನೀರು ಸೇರಿ ಟೇಲರೀಸ್‌ಗೆ ಭಾರೀ ನೀರು ಬರುತ್ತಿರುವುದರಿಂದ 60ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಆಗಬಹುದಾದ ತೊಂದರೆ ತಪ್ಪಿಸಲು ಕೆಪಿಸಿ ಹರಸಾಹಸ ಪಡುತ್ತಿದೆ. ಶಾಸಕ ಸುನಿಲ್‌ ನಾಯ್ಕ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.

ಜಿಲ್ಲೆಯ ಜಲಾಶಯ ಮಟ್ಟ
ಕದ್ರಾ: 34.50ಮೀ (ಗರಿಷ್ಠ), 33 ಮೀ (ಇಂದಿನ ಮಟ್ಟ). ಕೊಡಸಳ್ಳಿ: 75.50 ಮೀ (ಗರಿಷ್ಠ), 73.85 ಮೀ. (ಇಂದಿನ ಮಟ್ಟ), ಸೂಪಾ: 564ಮೀ (ಗ), 558.50 ಮೀ (ಇ.ಮಟ್ಟ), ತಟ್ಟಿಹಳ್ಳ: 468.38ಮೀ (ಗ), 459.88 ಮೀ (ಇ.ಮಟ್ಟ), ಬೊಮ್ಮನಹಳ್ಳಿ: 438.46ಮೀ (ಗ), 434.70 ಮೀ (ಇ.ಮಟ್ಟ), ಗೇರುಸೊಪ್ಪ: 55ಮೀ (ಗ), 50.31 ಮೀ (ಇ.ಮಟ್ಟ), ಲಿಂಗನಮಕ್ಕಿ: 1819 ಅಡಿ (ಗ), 1817.70 ಅಡಿ (ಇಂದಿನ ಮಟ್ಟ). 

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.