ಅಧರ್ಮದಿಂದ ಸಮಾಜ ಕಲುಷಿತ 

Team Udayavani, Aug 19, 2018, 4:42 PM IST

19-agust-13.jpg

ಹಾವೇರಿ: ಭಾವ ಶುದ್ಧವಾಗಿದ್ದರೆ ನಮ್ಮ ಬದುಕು ಸುಂದರವಾಗುತ್ತದೆ. ಬದುಕು ಸುಂದರವಾಗಿದ್ದರೆ ಭಗವಂತನ ಒಲುಮೆಯಾಗುತ್ತದೆ ಎಂದು ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು. ನಗರದ ಹುಕ್ಕೇರಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಯಡೆಯೂರ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ನಮ್ಮ ಭಾವ ನಮಗರಿಯದಂತೆ ಶುದ್ಧವಾಗಬೇಕಾದರೆ ಸಂತ ಮಹಾತ್ಮರ ಸಾನ್ನಿಧ್ಯ ಮತ್ತು ಅವರ ಜೀವನ ಸಂದೇಶದ ಶ್ರವಣದಿಂದ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಇಂದು ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ. ಆಧುನಿಕ ಯುಗದಲ್ಲಿ ಸರ್ವ ರೋಗಕ್ಕೂ ಮದ್ದು ಇದೆ. ಆದರೆ, ನೆಮ್ಮದಿಯ ಬದುಕಿಗೆ ಮಾತ್ರ ಯಾವುದೇ ಮದ್ದು ಇಲ್ಲ. ನೈತಿಕ ಜೀವನ ಮತ್ತು ಧರ್ಮದ ಆಚರಣೆಯಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಶ್ರಾವಣ ಮಾಸದ ಅನುಭಾವ ಉತ್ತಮ ದಾರಿದೀಪ ಎಂದರು.

12ನೇ ಶತಮಾನದಲ್ಲಿ ಶಿವ ಶರಣರು ನಡೆಸಿದ ಸಾಮಾಜಿಕ ಮತ್ತು ಧಾರ್ಮಿಕ ಚಳವಳಿಯನ್ನು 15ನೇ ಶತಮಾನದಲ್ಲಿ ಮುಂದುವರೆಸಿದವರು ಯಡೆಯೂರಿನ ತೋಂಟದ ಸಿದ್ಧಲಿಂಗ ಯತಿಗಳು. ಅವರ ಜೀವನ ಚರಿತ್ರೆಯ ಮೇರು ಸದೃಷ್ಯದ ಸಾಹಿತ್ಯವನ್ನು ಪುಟ್ಟರಾಜ ಗವಾಯಿಗಳು ಅನುಭವದ ಮಾರ್ಗದ ಮೂಲಕ ಭಕ್ತಿರಸದ ಪ್ರಭಾವದಿಂದ ಅಂತರಂಗದ ಅನುಭಾವದ ಮೂಲಕ ತಮ್ಮ ಸಾಹಿತ್ಯದಲ್ಲಿ ರಚಿಸಿದರು ಎಂದರು.

ಸಮಾರಂಭದ ಸಾನ್ನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸಿದ್ದರು. ಹಿರೇಮುಗದೂರಿನ ವೀರಭದ್ರ ಶಾಸ್ತ್ರೀಗಳು ತೋಂಟದ ಸಿದ್ಧಲಿಂಗೇಶ್ವರರ ಪ್ರಚವನ ಪ್ರಸ್ತುತ ಪಡಿಸಿದರು. ಆಕಾಶವಾಣಿ ಕಲಾವಿದ ಶಿವಕುಮಾರ ಹಡಗಲಿ ವಚನ ಸಂಗೀತ ಪ್ರಸ್ತುತ ಪಡಿಸಿದರು.

ಸಮಾರಂಭದಲ್ಲಿ ಎಸ್‌.ಎಸ್‌. ಮುಷ್ಠಿ, ವೀರಣ್ಣ ವಳಸಂಗದ, ವೀರಣ್ಣ ಅಂಗಡಿ, ಜಗದೀಶ ತುಪ್ಪದ, ನಿರಂಜನ ತಾಂಡೂರ, ಶಿವಯೋಗಿ ವಾಲಿಶೆಟ್ಟರ್‌, ಎಸ್‌. ಎಂ. ಹಾಲಯ್ಯನವರಮಠ, ಶಿವಬಸಪ್ಪ ಹುರುಳಿಕುಪ್ಪಿ, ನಾಗಪ್ಪ ಮುರನಾಳ, ಶಿವಕುಮಾರ ಮುದಗಲ್ಲ, ರಾಚಣ್ಣ ಮಾಗನೂರ, ಕೆ.ಆರ್‌. ನಾಶಿಪುರ, ಎಸ್‌.ಎನ್‌. ದೊಡ್ಡಗೌಡರ ಮತ್ತಿತರರು ಇದ್ದರು. ನಿವೃತ್ತ ಪ್ರಾಚಾರ್ಯ ಬಿ. ಬಸವರಾಜ ಸ್ವಾಗತಿಸಿದರು. ಕೆ.ಬಿ. ಭಿಕ್ಷಾವರ್ತಿಮಠ ನಿರೂಪಿಸಿದರು. ಶಿವಯೋಗಿ ವಾಲಿಶೆಟ್ಟರ ವಂದಿಸಿದರು.

ಟಾಪ್ ನ್ಯೂಸ್

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

Uppinangady ಚರಂಡಿಗೆ ಇಳಿದ ಕಂಟೈನರ್‌ ಲಾರಿ: ವಾಹನ ಸಂಚಾರ ಅಸ್ತವ್ಯಸ್ತ

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

DCM DK Shivakumar ನಂಬಿದ ಜನರ ಎಂದೂ ಕೈ ಬಿಡಲಾಗದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

Hubli; ಆಕಾಶ ಮಠಪತಿ ಪ್ರಕರಣದಲ್ಲಿ 8 ಮಂದಿ ಬಂಧನ

5-Kundgola

Kundgola: ಬೆನಕನಹಳ್ಳಿ ಜಲ ಜೀವನಾಡಿಗೆ ಅಸ್ವಚ್ಛತೆ ಬೇಡಿ

crime (2)

Hubballi; ಆಟೋರಿಕ್ಷಾ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ನ ಪುತ್ರನ ಹತ್ಯೆ

Hubli; Protest demanding implementation of Dr. Sarojini Mahishi’s revised report

Hubli; ಡಾ.ಸರೋಜಿನಿ‌ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Janardhana Reddy: ಅಯೋಗ್ಯ ಜನಾರ್ದನ ರೆಡ್ಡಿ ಕ್ಷಮೆಯಾಚಿಸಲಿ; ಸಲೀಂ ಅಹ್ಮದ್‌

Janardhana Reddy: ಅಯೋಗ್ಯ ಜನಾರ್ದನ ರೆಡ್ಡಿ ಕ್ಷಮೆಯಾಚಿಸಲಿ; ಸಲೀಂ ಅಹ್ಮದ್‌

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

pPrajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

Prajwal Revanna Case; ಬಿಜೆಪಿ ನಾಯಕ ಪ್ರೀತಂ ಗೌಡಗೆ ಪೆನ್‌ಡ್ರೈವ್‌ ಕುಣಿಕೆ!

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

PUC ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪ್ರಕರಣ ದಾಖಲು

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Subramanya; ಮಂಗಳೂರಿಗರ ಮೇಲೆ ಹಲ್ಲೆ ಪ್ರಕರಣ: ನಾಲ್ವರ ಸೆರೆ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Pratap Simha; ಕಾಂಗ್ರೆಸ್‌ನಿಂದಲೇ ಹೆಚ್ಚು ಸಂವಿಧಾನ ತಿದ್ದುಪಡಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Uppinangady ಅಂಗಡಿಗೆ ನುಗ್ಗಿದ ಲಾರಿ; ಭಾರೀ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.