ಹುಬ್ಬಳ್ಳಿ: ತಲೆಮರೆಸಿಕೊಂಡಿದ್ದ ರೌಡಿಶೀಟರ್ ಬಂಧನ
Team Udayavani, May 29, 2022, 12:50 PM IST
ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಗೌಸಮೋಯಿದ್ದೀನ ತಹಶೀಲ್ದಾರನನ್ನು ಹಳೇಹುಬ್ಬಳ್ಳಿ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ವಿಮಲ್ ಗುಟ್ಕಾ ವಿಷಯವಾಗಿ ಸೋಮವಾರ ರಾತ್ರಿ ಆನಂದನಗರದ ಬಾರ್ ಬಳಿ ಮೆಹಬೂಬ ಕಳಸ (24) ಜೊತೆ ಜಗಳ ಮಾಡಿ, ಸ್ಕ್ರೂ ಡ್ರೈವ್ ನಿಂದ ಎದೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಈತನೊಂದಿಗೆ ಇದ್ದ ಆನಂದನಗರ ಘೋಡಕೆ ಪ್ಲಾಟ್ ನಿವಾಸಿ ರಿಯಾಜ ಮತ್ತು ದೀಪಕನನ್ನು ಮಂಗಳವಾರ ಬಂಧಿಸಿದ್ದರು.
ಇದನ್ನೂ ಓದಿ:ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ
ಗೌಸಮೋಯಿದ್ದೀನ ಅಂದಿನಿಂದ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ಅಶೋಕ ಚವ್ಹಾಣ ಮತ್ತು ಸಿಬ್ಬಂದಿಯು ಆತನನ್ನು ಕಾರವಾರದಲ್ಲಿ ಶನಿವಾರ ರಾತ್ರಿ ಬಂಧಿಸಿದ್ದಾರೆ.