Udayavni Special

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ : ಬಿಜೆಪಿಗೆ ಸಾಧ್ಯವಾದೀತೆ ಮಿಷನ್‌-60?

ತಪ್ಪಿದ ಅಧಿಕಾರ ಮತ್ತೆ ಪಡೆಯಲು ಕಾಂಗ್ರೆಸ್‌ ರಣ ತಂತ್ರ­ಅಸ್ತಿತ್ವಕ್ಕಾಗಿ ಜೆಡಿಎಸ್‌, ಎಎ ಪಿ, ಎಐಎಂಐಎಂ ಸಜ್ಜು

Team Udayavani, Aug 19, 2021, 2:00 PM IST

fydryt

ವರದಿ: ಅಮರೇಗೌಡ ಗೋನವಾರ

ಹುಬ್ಬಳ್ಳಿ: ಕಳೆದೊಂದು ದಶಕದಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ, ಈ ಬಾರಿಯೂ ತನ್ನ ವಿಜಯ ಯಾತ್ರೆ ಮುಂದುವರಿಸುವ ನಿಟ್ಟಿನಲ್ಲಿ ಮಿಷನ್‌-60 ಘೋಷಣೆಯೊಂದಿಗೆ ಅತ್ಯುತ್ಸಾಹದಲ್ಲಿದೆ. ಇನ್ನೊಂದು ಕಡೆ ತಪ್ಪಿದ ಅಧಿಕಾರ ಮತ್ತೆ ಪಡೆಯುವ ಸಾಹಸಕ್ಕೆ ಕಾಂಗ್ರೆಸ್‌ಮುಂದಾಗಿದೆ. ಇದರ ನಡುವೆ ಜೆಡಿಎಸ್‌, ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಆಮ್‌ಆದ್ಮಿ ಪಕ್ಷ, ಎಐಎಂಐಎಂ, ಆರ್‌ಪಿಐ ಇನ್ನಿತರೆ ಪಕ್ಷಗಳು ತಮ್ಮ ಅಸ್ತಿತ್ವಕ್ಕಾಗಿ ಸೆಣೆಸಲು ಸಜ್ಜಾಗಿವೆ.

ಕಳೆದ ಬಾರಿಯ ಗೆಲುವು, ಬದಲಾದ ರಾಜಕೀಯ ಸ್ಥಿತಿ, ಅಭಿವೃದ್ಧಿ ಯೋಜನೆಗಳ ಲೆಕ್ಕಾಚಾರದಲ್ಲಿ ಬಿಜೆಪಿ ಈ ಬಾರಿ ಗೆಲುವು ಸುಲಭವಾಗಲಿದೆ ಎಂಬ ಚಿಂತನೆಯಲ್ಲಿದ್ದರೆ, ಬಿಜೆಪಿ ಸರಕಾರದ ವೈಫಲ್ಯ,ಅವಳಿನಗರ ಸಮಸ್ಯೆಗಳಿಗೆ ಸ್ಪಂದನೆ ಕೊರತೆ ವಿಚಾರಗಳನ್ನು ಮುಂದಿಟ್ಟುಕೊಂಡು ಮತದಾರರ ಒಲವು ಗಳಿಸುವ ಯತ್ನಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಜೆಡಿಎಸ್‌ ಸೇರಿದಂತೆ ಹೊಸ ಪಕ್ಷಗಳ ಸ್ಪರ್ಧೆಯ ನಡುವೆ ಬಿಜೆಪಿಯ ಮಿಷನ್‌-60 ಸಾಧ್ಯವಾದೀತೆ? ಬಿಜೆಪಿ ಗುರಿಯ ಆಸುಪಾಸು ತಲುಪುವ ಉತ್ಸಾಹದಲ್ಲಿದೆ. ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಅಧಿಕಾರ ನಮ್ಮದೇ ಎನ್ನುತ್ತಿವೆ ಕಾಂಗ್ರೆಸ್‌.

ಅಧಿಕಾರ ಹಿಡಿಯಲು ಸರ್ಕಸ್‌ ಶುರು: 2013ರಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆದಿತ್ತು. ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ ಅವರು ಮುಖ್ಯಮಂತ್ರಿಯೂ ಆಗಿದ್ದರು. ಪಾಲಿಕೆ ಚುನಾವಣೆಯಲ್ಲಿ ಒಟ್ಟು 67 ಸ್ಥಾನಗಳಲ್ಲಿ ಸುಮಾರು 40-45 ಸ್ಥಾನಗಳ ಗೆಲುವಿನ ನಿರೀಕ್ಷೆಯೊಂದಿಗೆ ಸ್ಪರ್ಧೆಗಿಳಿದಿದ್ದ ಬಿಜೆಪಿ 33 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಧಿಕಾರದ ಉತ್ಸಾಹದಲ್ಲಿದ್ದ ಕಾಂಗ್ರೆಸ್‌ 22 ಸ್ಥಾನ ಗಳಿಸಿದ್ದರೆ, ಜೆಡಿಎಸ್‌ ಕೇವಲ 9 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಕೆಜೆಪಿ, ಬಿಜೆಪಿ ಬಂಡಾಯ ಹಾಗೂ ಪಕ್ಷೇತರರು ತಲಾ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಗೆಲುವಿನ ಓಟಕ್ಕೆ ಸುಮಾರು 8-9 ವಾರ್ಡ್‌ಗಳಲ್ಲಿ ಕೆಜೆಪಿ ಬ್ರೇಕ್‌ ಹಾಕಿತ್ತು. ನಿರೀಕ್ಷಿತ ಸ್ಥಾನಗಳ ಗೆಲವು ಸಾಧ್ಯವಾಗದಿದ್ದರೂ ಬಿಜೆಪಿ ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅವಳಿನಗರದಲ್ಲಿ 82 ವಾರ್ಡ್‌ಗಳಾಗಿವೆ. ಅಧಿಕಾರ ಹಿಡಿಯಲು ಬಿಜೆಪಿ-ಕಾಂಗ್ರೆಸ್‌ ತಮ್ಮದೇ ಕಾರ್ಯತಂತ್ರ-ಸರ್ಕಸ್‌ಗೆ ಮುಂದಾಗಿವೆ. ಒಂದು ವೇಳೆ ಅತಂತ್ರ ಸ್ಥಿತಿ ಎದುರಾದರೆ ತನಗೆ ಬೇಡಿಕೆ ಖಚಿತ ಎಂಬ ನಿರೀಕ್ಷೆಯಲ್ಲಿ ಜೆಡಿಎಸ್‌ ಇದೆಯಾದರೂ ಈ ಬಾರಿ ಅದು ಇದ್ದ ಸ್ಥಾನಗಳನ್ನಾದರೂ ಉಳಿಸಿಕೊಳ್ಳುವುದೇ ಅಥವಾ ಸ್ಥಾನ ಹೆಚ್ಚಳ ಸಾಧನೆ ತೋರುವುದೇ ಎಂದು ನೋಡಬೇಕಿದೆ.

ಪ್ರಮುಖ ಮೂರು ಪಕ್ಷಗಳ ನಡುವೆ ಈ ಬಾರಿ ಆಮ್‌ಆದ್ಮಿ ಪಕ್ಷ, ಎಐಎಂಐಎಂ, ಆರ್‌ಪಿಐ ಇನ್ನಿತರೆ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಪೈಪೋಟಿ ಜೋರಾಗಿಯೇ ಇದೆ. ಎರಡು ಪಕ್ಷಗಳಲ್ಲಿ ಟಿಕೆಟ್‌ ಯಾರಿಗೆ ಎಂಬ ಚಿಂತನ-ಮಂಥನ ನಡೆದಿದ್ದು, ಗೆಲ್ಲುವ ಕುದುರೆಗೆ ಆದ್ಯತೆ ನೀಡಲು ಎರಡು ಪಕ್ಷಗಳು ಮುಂದಾಗಿವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆ.19 ಇಲ್ಲವೆ 20ರಂದು ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಕಾಂಗ್ರೆಸ್‌ ನಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಿಕೆಟ್‌ ಯಾರಿಗೆ ಎಂಬುದನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರ ನಿರ್ಣಯಕ್ಕೆ ಪಕ್ಷ ಮನ್ನಣೆ ನೀಡಲಿದೆ ಎಂದು ಹೇಳಲಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ-ಧಾರವಾಡ ಕೇಂದ್ರ, ಪಶ್ಚಿಮ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳು ಯಾರೆಂಬುದನ್ನು ಕೆಪಿಸಿಸಿ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತಿದೆ. ಹು.ಧಾ.ಪೂರ್ವ ವಿಧಾನಸಭೆ ಕ್ಷೇತ್ರ ಹೊರತುಪಡಿಸಿ ಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಮೂವರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲು ಕಾಂಗ್ರೆಸ್‌ ಪಕ್ಷ ಮೂರು ಕ್ಷೇತ್ರಗಳಿಗೆ ಪಕ್ಷದ ಸ್ಥಳೀಯ ಮುಖಂಡರ ಸಮಿತಿಗಳನ್ನು ಮಾಡಿದ್ದು, ಸಮಿತಿ ಸೂಚಿಸುವ ಮೂರು ಹೆಸರುಗಳಲ್ಲಿ ಕೆಪಿಸಿಸಿ ಒಂದು ಹೆಸರನ್ನು ಅಂತಿಮಗೊಳಿಸಲಿದೆ ಎನ್ನಲಾಗಿದೆ.

ಆಮ್‌ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದರೆ, ಆರ್‌ಪಿಐ ಮೊದಲ ಪಟ್ಟಿ ಪ್ರಕಟಿಸಿದೆ. ಎಐಎಂಐಎಂ ಸೇರಿದಂತೆ ವಿವಿಧ ಪಕ್ಷಗಳು ಈ ನಿಟ್ಟಿನಲ್ಲಿ ಇದುವರೆಗೂ ಏನನ್ನು ಹೇಳಿಲ್ಲ.

ಟಾಪ್ ನ್ಯೂಸ್

ಆರ್.ಅಶೋಕ್

ಉತ್ತರಾಖಂಡ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ: ಸಚಿವ ಆರ್.ಅಶೋಕ್

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

22

ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ಪ್ರವಾಸಿರ ಪರದಾಟ

siddaramaiah

ಸಂಘ ಪರಿವಾರದವರು ಸಮಾಜ ಒಡೆಯುವ ಕೆಲಸ ಮಾಡ್ತಾರೆಂಬ ಭಯವಿದೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

22

ಮುಳ್ಳಯ್ಯನಗಿರಿಯಲ್ಲಿ ಭಾರಿ ಮಳೆ: ಪ್ರವಾಸಿರ ಪರದಾಟ

chikkamagalore news

ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ ಹಬ್ಬ

ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಐದು ಮಂದಿ ಆರೋಪಿಗಳ ಬಂಧನ

ಹಲ್ಲೆ: ನಾಳೆ ತುಮಕೂರು ಬಂದ್‌

sagara news

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ

MUST WATCH

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

udayavani youtube

ಉದಯವಾಣಿ ಕಚೇರಿಯಲ್ಲಿ ‘ಸಲಗ’ !

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

ಹೊಸ ಸೇರ್ಪಡೆ

ಆರ್.ಅಶೋಕ್

ಉತ್ತರಾಖಂಡ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ: ಸಚಿವ ಆರ್.ಅಶೋಕ್

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೆ ಸಾವು , ನಾಲ್ವರಿಗೆ ಗಾಯ

ಟಿಪ್ಪರ್ – ಕಾರು ನಡುವೆ ಭೀಕರ ಅಪಘಾತ : ಓರ್ವ ಸ್ಥಳದಲ್ಲೇ ಸಾವು , ನಾಲ್ವರಿಗೆ ಗಾಯ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ಹೋಮ್ ವರ್ಕ್ ಮಾಡಿಲ್ಲ ಎಂದು 7ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ!

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

ದೀಪಾವಳಿ ಕೊಡುಗೆ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ, 47 ಲಕ್ಷ ನೌಕರರಿಗೆ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.