

Team Udayavani, May 5, 2024, 1:22 PM IST
ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನ ಸುಳ್ಳುಗಾರ, ಸುಳ್ಳಿನ ಸರದಾರ. ಬಿಜೆಪಿಯವರು ಹೇಳಿರುವ ಅಮೃತ ಕಾಲವಲ್ಲ ಅದು ಅನ್ಯಾಯ ಕಾಲವಾಗಿದೆ. ಇನ್ನಾದರು ಮೋದಿಯವರು ದೇಶದ ಜನತೆಗೆ ಸತ್ಯ ಹೇಳಲಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ ಆಗ್ರಹಿಸಿದರು.
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ನೀಡಿದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆಂದು ಕನಿಷ್ಠ ಮೂರು ಭರವಸೆಗಳು ಹೇಳಲಿ. ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗುತ್ತಿದ್ದ ಶೇ.56 ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ಗೆ ಹೋಗಿ ಶೇ.50ಕ್ಕೆ ಇಳಿಯುವಂತೆ ಮಾಡಿದ್ದು ಇದೇ ಬಿಜೆಪಿಯವರು. ಇದೀಗ ಮೋದಿಯವರು ದಲಿತರ ಮೀಸಲು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಮುಂದಾಗಿದೆ ಎಂಬ ಹಸಿಸುಳ್ಳು ಹೇಳುತ್ತಿದ್ದಾರೆ. ಸಂವಿಧಾನ ಓದಿದ್ದರೆ ಮೋದಿಯವರಿಂದ ಇಂತಹ ಹೇಳಿಕೆ ಬರುತ್ತಿರಲಿಲ್ಲ. ಅವರ ಜಾಹೀರಾತು ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.
ಗುಜರಾತ್ ನಲ್ಲಿ 104 ಹಿಂದುಳಿದ ಸಮುದಾಯಗಳಲ್ಲಿ 22 ಮುಸ್ಲಿಂ ಸಮುದಾಯಗಳು ಇವೆ. ಅಲ್ಲಿ ಧರ್ಮಾಧಾರಿತ ಎನ್ನಿಸಲಿಲ್ಲವೇ. ರಾಜ್ಯ ಅಥವಾ ದೇಶದಲ್ಲಿ ಹಿಂದೂ- ಮುಸ್ಲಿಮರಲ್ಲು ಯಾರು ಅಪಾಯದಲ್ಲಿ ಇಲ್ಲ ಬದಲಾಗಿ ಬಿಜೆಪಿ ಅಪಾಯದಲ್ಲಿದೆ. ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯಿಂದಾಗಿ ಕಾಂಗ್ರೆಸ್ ಗೆ ಸೋಲಾಗಿತ್ತು ಇದೀಗ ಜನರಿಗೆ ಇವರ ಬಂಡವಾಳ ಗೊತ್ತಾಗಿದೆ ಎಂದರು.
ನೇಹಾ ಹಿರೇಮಠ ಹತ್ಯೆ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿಗರು ಉಡುಪಿಯಲ್ಲಿ ಹತ್ಯೆಗೀಡಾದ ನಾಲ್ವರು ಮುಸ್ಲಿಂ ಕುಟುಂಬದ ಬಗ್ಗೆ, ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ಅನ್ಯಾಯಕ್ಕೊಳಗಾದ ಮಹಿಳೆಯರ ಬಗ್ಗೆ ಧ್ವನಿಯಾಗಿಲ್ಲ ಎಂದು ಪ್ರಶ್ನಿಸಿದರು.
Ad
Dharwad: ಸಿಎಂ ಬದಲಾವಣೆ ಸೀನ್ ಸದ್ಯಕ್ಕಿಲ್ಲ: ಸಚಿವೆ ಹೆಬ್ಬಾಳ್ಕರ್
ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್
Hubballi: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ
Dharwad: ನೀರೆಂದು ಆ್ಯಸಿಡ್ ಕುಡಿದ ವಿದ್ಯಾರ್ಥಿ: ಪ್ರಾಣಾಪಾಯದಿಂದ ಪಾರು
Hubli: ಫಿಟ್ನೆಸ್ ತರಬೇತಿ ಯಶಸ್ವಿ; 28 ದಿನದಲ್ಲಿ ತೂಕ ಇಳಿಸಿಕೊಂಡ ಪೊಲೀಸರು
You seem to have an Ad Blocker on.
To continue reading, please turn it off or whitelist Udayavani.