ರೈತರಿಗೆ ಸಿಗಲಿ ತಂತ್ರಜ್ಞಾನ- ಅರಿವಿನ ಉತ್ತೇಜನ – ಮಾಜಿ ಸಚಿವ ಕೃಷ್ಣ ಭೈರೇಗೌಡ
Team Udayavani, Mar 1, 2021, 3:28 PM IST
ಹುಬ್ಬಳ್ಳಿ: ಭಾರತ ಕೃಷಿ ಪ್ರಧಾನ ದೇಶವಾಗಿದ್ದರೂ ಇಲ್ಲಿನ ರೈತರಿಗೆ ತಂತ್ರಜ್ಞಾನ ಮತ್ತು ಅರಿವಿನ ಉತ್ತೇಜನ ಸಿಗುತ್ತಿಲ್ಲ. ನಮ್ಮಲ್ಲಿ ಅಕ್ಕಿ ಹೆಚ್ಚುಉಪಯೋಗಿಸುತ್ತಿದ್ದರೂ ಭತ್ತ ಬೆಳೆಯುವ ಪ್ರಮಾಣದಲ್ಲಿ ಬಹಳ ಹಿಂದಿದ್ದೇವೆ. ವೈಜ್ಞಾನಿಕವಾಗಿ ಬೆಳೆ ತೆಗೆಯುವಲ್ಲಿ ಹಿಂದುಳಿದಿದ್ದೇವೆ. ರೈತರಿಗೆ ತಂತ್ರಜ್ಞಾನ, ಹೊಸ ಹೊಸ ಸಂಶೋಧನೆ ಮತ್ತು ತಿಳಿವಳಿಕೆಯ ಅಗತ್ಯವಿದೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಟೈ ಹುಬ್ಬಳ್ಳಿಯ ಟೈಕಾನ್-2021 ವರ್ಚುವಲ್ ಸಮಾವೇಶದಲ್ಲಿ ಮಾತನಾಡಿ ಅವರು, ದೇಶದಲ್ಲಿ ಕೃಷಿ, ತೋಟಗಾರಿಕೆಗೆ ಅವಶ್ಯವಾದ ಸವಲತ್ತು, ಅವಕಾಶಗಳಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಆಗುತ್ತಿಲ್ಲ. ಹೊರ ದೇಶಗಳಿಗೆ ರಫ್ತು ಮಾಡುವಂತಹ ಬೆಳೆಗಳನ್ನು ಬೆಳೆಯಬೇಕು. ಕಬ್ಬು, ಮಾವು, ದಾಳಿಂಬೆ ಸೇರಿದಂತೆ ಇನ್ನಿತರೆಬೆಳೆಗಳನ್ನು ಬೆಳೆಯುತ್ತಿದ್ದೇವೆ. ಆದರೆ ಅದಕ್ಕೆ ಅವಶ್ಯವಾದ ತಂತ್ರಜ್ಞಾನ ಮತ್ತು ತಿಳಿವಳಿಕೆ ರೈತರಿಗೆ ದೊರೆಯುತ್ತಿಲ್ಲ ಎಂದರು.ದೇಶದ ಜಿಡಿಪಿಯಲ್ಲಿ ಕೃಷಿ ಪಾಲು ಶೇ.15 ಮಾತ್ರವಾಗಿದೆ. ಕೃಷಿಚಟುವಟಿಕೆಗಳಲ್ಲಿ ಕಡಿಮೆ ಆದಾಯ ಸಿಗುತ್ತಿರುವುದರಿಂದ ರೈತರು ಉತ್ಪಾದನಾ ವಲಯ, ಸೇವಾ ವಲಯ ಹಾಗೂ ದ್ವಿತೀಯ, ತೃತೀಯ ವಲಯಗಳತ್ತ ಮುಖ ಮಾಡುತ್ತಿದ್ದಾರೆ.
ಕಳೆದ 2-3 ವರ್ಷಗಳಿಂದ ಉತ್ಪಾದನಾ ವಲಯ ಸೇರಿದಂತೆ ಇತರೆಡೆ ಉದ್ಯೋಗ ಕಲ್ಪಿಸುವ ಬದಲು ನಿಶ್ಚಲತೆಯ ಕಾರಣದಿಂದಉದ್ಯೋಗಾವಕಾಶಗಳು ಕುಂಠಿತಗೊಂಡಿವೆ. ಇದರಿಂದ ಆರ್ಥಿಕತೆ ಕುಸಿದಿದೆ. ಕಳೆದ ಒಂದು ವರ್ಷದಿಂದ ಅಸಂಘಟಿತ ಹಾಗೂ ಅರೆ ಸಂಘಟಿತ ವಲಯದಲ್ಲಿರುವ ಬಹಳಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅದರಲ್ಲಿಕೆಲವರು ತಮ್ಮ ಸ್ಥಳೀಯ ಪ್ರದೇಶಕ್ಕೆ ತೆರಳಿ ಕೃಷಿ ವಲಯಕ್ಕೆಹಿಂದಿರುಗಿದ್ದಾರೆ. ಇದರಿಂದ ಕೃಷಿ ವಲಯ ಹೆಚ್ಚಿದೆ. ಉತ್ಪಾದನಾವಲಯ ಮತ್ತು ಸೇವಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನುಕಲ್ಪಿಸಬೇಕು ಹಾಗೂ ಕೃಷಿ ಚಟುವಟಿಕೆಗಳಲ್ಲೂ ತೊಡಗಬೇಕು. ಪ್ರಸ್ತುತ ಕೇಂದ್ರ ಹಾಗೂ ದಕ್ಷಿಣದ ರಾಜ್ಯ ಸರಕಾರಗಳು ಕೃಷಿ ವಲಯದತ್ತ ಸಾಗುತ್ತಿದ್ದು, ಇದರ ಪರಿಣಾಮ ಜನರು ಕೃಷಿಗೆ ಒಲವು ತೋರಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ
ಇಡಬ್ಲೂಎಸ್ ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರದಿಂದ ನಿರ್ಲಕ್ಷ್ಯ: ಹನುಮಂತ ಡಂಬಳ
ವಿದರ್ಭದಿಂದ ಕರುನಾಡಿಗೆ ಗಾರ್ದಭ ಗುಳೆ; 6 ತಿಂಗಳಿಗೆ 5 ಲಕ್ಷ ರೂ. ದುಡಿಯುವ ತಂಡ
ಮೀಸಲಾತಿ ಬಗ್ಗೆ ಧೈರ್ಯದ ನಿರ್ಧಾರ: ಸಚಿವ ಪ್ರಹ್ಲಾದ ಜೋಷಿ
ಚುನಾವಣೆಗಾಗಿ ಮೀಸಲು ಹೆಚ್ಚಿಸಿಲ್ಲ: ಸಚಿವ ಮುರುಗೇಶ ನಿರಾಣಿ
MUST WATCH
ಹೊಸ ಸೇರ್ಪಡೆ
ಆಕಾಂಕ್ಷಾ ದುಬೆ ಪ್ರಕರಣ: ಮಗಳ ಸಾವಿಗೆ ಇವರಿಬ್ಬರೇ ಕಾರಣವೆಂದ ತಾಯಿ
ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಗುಬ್ಬಿ ಶ್ರೀನಿವಾಸ್
Mumbai to London;ಯೋಗೇಶ್ ಎಂಬ ಅಲೆಮಾರಿ! 100 ದಿನಗಳ ಬೈಕ್ ಪ್ರಯಾಣ…24 ದೇಶಗಳಿಗೆ ಭೇಟಿ…
ಮಂಗಳೂರಿನಲ್ಲಿ ಗಾಂಜಾ ಜಾಲ; ಪೆಡ್ಲರ್ ಸಹಿತ ನಾಲ್ವರ ಬಂಧನ
ಧಮಕಿ ಹಾಕುವುದು- ಹೊಡೆಯುವುದು ಡಿಕೆಶಿ- ಸಿದ್ದರಾಮಯ್ಯ ಸಂಸ್ಕೃತಿ: ಪ್ರಹ್ಲಾದ ಜೋಶಿ