ಬಿಜೆಪಿಗಿರುವ ಬೆಂಬಲಕ್ಕೆ ಪಾಲಿಕೆ ಫಲಿತಾಂಶವೇ ಸಾಕ್ಷಿ: ನಳಿನ್ ಕಟೀಲ್

Team Udayavani, Oct 31, 2022, 5:38 PM IST

Nalin-kumar

ಹುಬ್ಬಳ್ಳಿ: ವಿಜಯಪುರ ಮಹಾನಗರ ಪಾಲಿಕೆ, ಕೊಳ್ಳೆಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದಿದ್ದು, ಬಿಜೆಪಿಗಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಳ್ಳೆಗಾಲದಲ್ಲಿ ಆರು ಸ್ಥಾನ, ವಿಜಯಪುರದಲ್ಲಿ ನಮ್ಮ ಪಕ್ಷವೇ ಅಧಿಕಾರ ಬಂದಿದೆ. ಇದಕ್ಕಾಗಿ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿವೆ.

ಕಾಂಗ್ರೆಸ್ ಶೇ.40 ಕಮಿಷನ್ ಆರೋಪವನ್ನು ಜನರು ನಂಬಿಲ್ಲ. ಕೈ ಅನ್ನು ತಿರಸ್ಕಾರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೋ ಪಾದಯಾತ್ರೆ ಮಾಡಿರುವ ಕ್ಷೇತ್ರದಲ್ಲಿಯೇ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಭಾರತ ಜೋಡೋದಿಂದ ಯಾವುದೇ ಪರಿಣಾಮ ಬೀರಿಲ್ಲ. ಡಿಕೆಶಿ, ಸಿದ್ದರಾಮಯ್ಯ ಜೋಡಿ ಒಂದಾಗಲಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು, ಮುಖಂಡರು ಶಾಸಕರು ಒಟ್ಟಾಗಿ ಕೆಲಸ ಪರಿಣಾಮದಿಂದ ಈ ಫಲಿತಾಂಶ ಬಂದಿದೆ. ಶೇ. 40 ಕಮಿಷನ್ ಆರೋಪ ಇದು ಕಾಂಗ್ರೆಸ್ ಎಜೆಂಟರ್ ಕಥೆಯಾಗಿದೆ ಎಂದಿದ್ದರು.

ಇದನ್ನೂ ಓದಿ:ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಆಸ್ಪತ್ರೆಗೆ ದಾಖಲು

ಲೋಕಾಯುಕ್ತಕ್ಕೆ ಕಾಂಗ್ರೆಸ್ ನವರು ಜೀವ ತೆಗೆದಿದ್ದರು, ಆದರೆ ಬಿಜೆಪಿ ಅದಕ್ಕೆ ಮರು ಜೀವ ನೀಡಿದೆ. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ದೂರು ನೀಡಲಿ ಇದು ಸಿದ್ದರಾಮಯ್ಯ ಅವರ ಒಳತಂತ್ರಗಾರಿಕೆ. ಸಿದ್ದರಾಮಯ್ಯ ಅವರು ಬೇಕಾದರೆ ಲೋಕಾಯುಕ್ತಕ್ಕೆ ದೂರು ಕೊಡಲಿ. ಅತಿ ಹೆಚ್ಚು ಗುತ್ತಿಗೆದಾರರು ಕಾಂಗ್ರೆಸ್ ನ ಎಜೆಂಟ್ ರಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದ ಸೀಟ್ ಕೇಳಲು ಹೋಗುತ್ತಿದ್ದಾರೆ. ಅದಕ್ಕೆ ಅವರು ಭ್ರಷ್ಟಾಚಾರ ಆರೋಪ ಮಾಡಿ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಅವರು ಈ ಆರೋಪ ಮಾಡುತ್ತಿದ್ದಾರೆ‌ ಎಂದರು.

ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಚರ್ಚೆ ವಿಚಾರ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿಕೆಗೆ ಕಟೀಲು ಪ್ರತಿಕ್ರಯಿಸಿದ ಅವರು, ಜಗದೀಶ ಶೆಟ್ಟರ ನಮ್ಮ ಹಿರಿಯರ ನಾಯಕರು, ಅವರು ಹೇಳಿದ್ದಕ್ಕೆ ಚರ್ಚೆ ಮಾಡಲ್ಲ, ನಾವು ಅವರನ್ನ ಸೈಡ್ ಲೈನ್ ಮಾಡಿಲ್ಲ. ಅವರಿಗೆ ಟಿಕೆಟ್ ಸಿಗುವುದು ಯಾಕೆ ಅನುಮಾನ ಎಂದ ಕಟೀಲ, ಅವರನ್ನ ಗವರ್ನರ್ ಮಾಡುವ ಚರ್ಚೆ ನಡೆದಿಲ್ಲ. ನಮ್ಮಲ್ಲಿ ಟಿಕೆಟ್ ಚರ್ಚೆ ನಡೆದಿಲ್ಲ. ಅಭ್ಯರ್ಥಿ ಆಯ್ಕೆ ಜನವರಿ ನಂತರ ಎಂದರು.

ಪೂರ್ಣಾವಧಿ ಮುಗಿದ ಬಳಿಕವೇ ಚುನಾವಣೆ ನಡೆಯಲಿದ್ದು ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಟಾಪ್ ನ್ಯೂಸ್

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

1-sadsdsad

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

1-fwwewewqe

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ

b-l-santhosh

ಬಿ. ಎಲ್‌ ಸಂತೋಷ್‌ ಭಾಷಣಕ್ಕೆ ಅಧಿಕಾರಿಗಳ ಆಕ್ಷೇಪ… ಬಿಜೆಪಿ ಸಭೆಯಲ್ಲಿ ಆಗಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ರಾಜಕೀಯ ಪ್ರವೇಶ

ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ರಾಜಕೀಯ ಪ್ರವೇಶ

ವಾಯವ್ಯ ಸಾರಿಗೆ ಚಾಲಕನಿಗೆ ಗೌರವ; ‌ಐವತ್ತು ಮಂದಿ ಪ್ರಾಣ ರಕ್ಷಿಸಿದಾತನಿಗೆ ಅಭಿನಂದನೆ

ವಾಯವ್ಯ ಸಾರಿಗೆ ಚಾಲಕನಿಗೆ ಗೌರವ; ‌ಐವತ್ತು ಮಂದಿ ಪ್ರಾಣ ರಕ್ಷಿಸಿದಾತನಿಗೆ ಅಭಿನಂದನೆ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

ಕಾಣೆಯಾಗಿದ್ದ 8 ವರ್ಷದ ಬಾಲಕ ಶವವಾಗಿ ಪತ್ತೆ: ಕೊಲೆ ಶಂಕೆ

ಕಾಣೆಯಾಗಿದ್ದ 8 ವರ್ಷದ ಬಾಲಕ ಶವವಾಗಿ ಪತ್ತೆ: ಕೊಲೆ ಶಂಕೆ

ಧಾರವಾಡ: ಏಣಗಿ ಬಾಳಪ್ಪ ಕನ್ನಡ ರಂಗಭೂಮಿ ಸಾಕ್ಷಿ ಪ್ರಜ್ಞೆ

ಧಾರವಾಡ: ಏಣಗಿ ಬಾಳಪ್ಪ ಕನ್ನಡ ರಂಗಭೂಮಿ ಸಾಕ್ಷಿ ಪ್ರಜ್ಞೆ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

1-saddsadsad

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ 22 ಪ್ರಯಾಣಿಕರಿದ್ದ ಬಸ್

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

Salim Durani

ಇಹಲೋಕ ತ್ಯಜಿಸಿದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ