
ಪ್ರಧಾನಿ ಮೆಚ್ಚುಗೆ, ಕಾಣಿಕೆ ಪಡೆದ ವಿದ್ಯಾರ್ಥಿನಿ ಸಿರಿ
Team Udayavani, Mar 14, 2018, 7:30 AM IST

ಧಾರವಾಡ: ಇಲ್ಲಿಯ ಮಲ್ಲಸಜ್ಜನ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಸಿರಿ ಮಂಜುನಾಥ ದೊಡ್ಡಮನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ಪತ್ರದೊಂದಿಗೆ ಪುಸ್ತಕವೊಂದನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಆಧಾರವಾಗಿಟ್ಟುಕೊಂಡು ಪ್ರಧಾನಿ ಮೋದಿ ಅವರ ಹೆಸರನ್ನು 108 ವಿಧದಲ್ಲಿ ಬರೆದ 65 ಪುಟಗಳ ಪುಸ್ತಕವನ್ನು ಸಿರಿ ದೊಡ್ಡಮನಿ ಫೆ.16ರಂದು ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಿದ್ದಳು. ಈ ಪುಸ್ತಕ ಪ್ರಧಾನಿ ಕಾರ್ಯಾ
ಲಯ ತಲುಪುತ್ತಿದ್ದಂತೆಯೇ ಸ್ವತಃ ಮೋದಿ ಅವರೇ ಸಿರಿಗೆ ಮೆಚ್ಚುಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ ಆಕೆಯ ಓದಿಗೆ ಸಹಾಯವಾಗುವಂತೆ ಎಕ್ಸಾಮ್ ವಾರಿಯರ್ (EXAM WARRIOR) ಎಂಬ ಪುಸ್ತಕವನ್ನು ಬಾಲಕಿಗೆ ಕಳುಹಿಸಿಕೊಟ್ಟಿದ್ದಾರೆ.
ಮೋದಿ ಅವರ ಕಾರ್ಯಾಲಯದಿಂದ ಫೆ.28ರಂದು ಪತ್ರ ಮತ್ತು ಪುಸ್ತಕ ರವಾನೆ ಆಗಿದ್ದು, ಮಾ.5ರಂದು ಬಾಲಕಿಗೆ ಬಂದು
ತಲುಪಿದೆ.
ಖುಷಿ ತಂದಿದೆ: ದೇಶಕ್ಕೆ ವಿವಿಧ ಬಗೆಯ ಯೋಜನೆಗಳನ್ನು ನೀಡಿರುವ ಪ್ರಧಾನಿ ಮೋದಿ ಅವರಿಗೆ ಏನಾದರೂ ಕಿರು ಕಾಣಿಕೆ
ನೀಡಬೇಕೆಂಬ ಇಚ್ಛೆಯಿಂದ ಇಷ್ಟಪಟ್ಟು ಮಾಡಿ ಕಳುಹಿಸಿದ್ದೆ. ನಾನು ಕಳುಹಿಸಿದ ಬರೀ 20 ದಿನಗಳಲ್ಲಿ ಪ್ರತಿಕ್ರಿಯೆ ಬಂದಿದೆ.
ತುಂಬಾ ಖುಷಿ ತಂದಿದೆ ಎಂದು ಸಿರಿ ದೊಡ್ಡಮನಿ “ಉದಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡಿದ್ದಾಳೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಹಾಗೂ ಕಾಣಿಕೆ ಪಡೆದ ಸಿರಿ ದೊಡ್ಡಮನಿಯನ್ನು ಶಾಲಾ ಆಡಳಿತ ಮಂಡಳಿ ಹಾಗೂ ಬಿಜೆಪಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ ಈರೇಶ ಅಂಚಟಗೇರಿ ಸನ್ಮಾನಿಸಿ, ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
