
ಅತಿವೃಷ್ಟಿ-ಅನಾವೃಷ್ಟಿ ನೆರವಿಗೆ ಕೇಂದ್ರಕ್ಕೆ ಪ್ರಸ್ತಾವನೆ: ದೇಶಪಾಂಡೆ
Team Udayavani, Aug 25, 2018, 5:20 PM IST

ಕಲಬುರಗಿ: ರಾಜ್ಯದಲ್ಲಿನ ಅತಿವೃಷ್ಟಿ-ಅನಾವೃಷ್ಟಿ ಹಾನಿ ಕುರಿತು ಸಮೀಕ್ಷೆ ನಡೆದಿದ್ದು, ವರದಿ ಬಂದ ನಂತರ ಕೇಂದ್ರಕ್ಕೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಶುಕ್ರವಾರ ಜಿಲ್ಲೆಯ ಕಮಲಾಪುರ ಬಳಿ ಅನಾವೃಷ್ಟಿಯಿಂದ ಹಾನಿಗೀಡಾದ ಬೆಳೆ ವೀಕ್ಷಿಸಿದ ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿನ ಒಟ್ಟಾರೆ ಹಾನಿ ಕುರಿತು ಸರ್ವ ನಿಟ್ಟಿನಿಂದಲೂ ಸಮೀಕ್ಷೆ ನಡೆದಿದೆ. ಅದೇ ರೀತಿ ಮಳೆ ಕೊರತೆಯಿಂದ ರಾಜ್ಯದ ಇತರೆ ಭಾಗದಲ್ಲಿ ಆಗಿರುವ ಬೆಳೆ ಹಾನಿ ಕುರಿತು ವರದಿ ತರಿಸಲಾಗುತ್ತಿದೆ. ಎಲ್ಲವನ್ನು ಕ್ರೋಢೀಕರಿಸಿ ನೆರವು ಕೋರಿ ಕೇಂದ್ರದ ಮೊರೆ ಹೋಗಲಾಗುವುದು. ಕೇರಳದಂತೆ ನಮಗೂ ಹೆಚ್ಚಿನ ಪರಿಹಾರ ನೀಡಬೇಕು ಎನ್ನುವುದು ನಮ್ಮ ಬೇಡಿಕೆ. ಈಗಾಗಲೇ ಕೇಂದ್ರ ಸಚಿವ ಅನಂತಕುಮಾರ ಭರವಸೆ ನೀಡಿದ್ದಾರೆ. ಅಲ್ಲದೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗಿಗೆ ಆಗಮಿಸಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಲಿದೆ ಎನ್ನುವ ವಿಶ್ವಾಸವಿದೆ. ಕೊಡಗಿನಲ್ಲಿನ ಪ್ರವಾಹ ಕುರಿತಾಗಿ ಪ್ರಧಾನಮಂತ್ರಿಗಳು ಹಾಗೂ ರಾಷ್ಟ್ರಪತಿ ಮಾತನಾಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಕೇಂದ್ರದ ಪಡೆಗಳು ಪರಿಹಾರೋಪಾಯದಲ್ಲಿ ಕಾರ್ಯನಿರತವಾಗಿವೆ. ಈ ವಿಷಯದಲ್ಲಿ ರಾಜಕೀಯ ಮಾತನಾಡೋದು ಬೇಡ ಎಂದರು.
ಹಣಕಾಸು ಇಲಾಖೆಗೆ ಪ್ರಸ್ತಾವನೆ: ರಾಜ್ಯದಲ್ಲಿನ 50 ಹೊಸ ತಾಲೂಕುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಖ್ಯವಾಗಿ ನೂತನ ತಾಲೂಕಿನಲ್ಲಿ 14 ಕಚೇರಿಗಳನ್ನು ಕಾರ್ಯಾರಂಭ ಮಾಡಬೇಕಾಗಿವೆ. ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಖರೀದಿಸುವ ನಿರ್ಣಯ ಕೈಗೊಳ್ಳುವ ನಿಟ್ಟಿನಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರಕ್ಕೆ ಉದ್ದು, ಹೆಸರು ಖರೀದಿಗೆ ಸಂಬಂಧಪಟ್ಟಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ, ಸಹಾಯಕ ಆಯುಕ್ತ ರಾಚಪ್ಪ, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ಹಿರಿಯ ಮುಖಂಡ ಕೃಷ್ಣಾಜಿ ಕುಲಕರ್ಣಿ ಮುಂತಾದವರಿದ್ದರು.
ಬೆಳೆವಿಮೆಗೆ ಬ್ಯಾಂಕ್‌ಗಳ ಅಸಹಕಾರ
ಅನಾವೃಷ್ಟಿಯಿಂದ ಬೆಳೆ ಹಾನಿ ವೀಕ್ಷಿಸುವ ಸಂದರ್ಭದಲ್ಲಿ ಕಮಲಾಪುರ ರೈತ ಮಹಿಳೆ ಶಾಂತಿಬಾಯಿ ಮಾತನಾಡಿ, ಸಾಹೇಬ್ರೆ ನಾವು ಬ್ಯಾಂಕ್‌ನಲ್ಲಿ ಬೆಳೆ ಸಾಲ ಪಡೆದಿಲ್ಲ. ಹೀಗಾಗಿ ಉದ್ದು ಬೆಳೆವಿಮೆಗೆಂದು ರಾಷ್ಟ್ರೀಕೃತ ಬ್ಯಾಂಕ್‌ಗೆ ಪ್ರಿಮಿಯಂ ತುಂಬಲು ಹೋದಾಗ ನಿರಾಕರಿಸಿದ್ದಾರೆ. ದಿನಾಂಕ ಮುಗಿದಿದೆ ಎಂದು ಸಬೂಬು ಹೇಳಿ ಕಳಿಸಿದ್ದಾರೆ. ತಮ್ಮ ಹೊಲದಲ್ಲೀಗ ಬೆಳೆ ನಷ್ಟವಾಗಿದೆ. ಆದ್ರೆ ಬೆಳೆವಿಮೆ ಬರಂಗಿಲ್ಲ. ಹಿಂಗಾದರೆ ಹೇಗೆ? ಈ ನಿಟ್ಟಿನ ಸಮಸ್ಯೆ ಬಗೆಹರಿಸಿ ಎಂದು ಸಚಿವ ಆರ್. ದೇಶಪಾಂಡೆ ಎದುರು ಅಳಲು ತೋಡಿಕೊಂಡರು. ಇದಕ್ಕೆ ಉತ್ತರ ನೀಡಿದ ಸಚಿವರು, ಬೆಳೆವಿಮೆ ಕುರಿತು ಸಾಕಷ್ಟು ಪ್ರಚಾರ ನಡೆಸಲಾಗಿದೆ. ಮುಖ್ಯವಾಗಿ ಬೆಳೆವಿಮೆಯಲ್ಲಿನ ತೊಂದರೆ ನಿವಾರಿಸಬೇಕಾಗಿದೆ. ಒಟ್ಟಾರೆ ಬೆಳೆಹಾನಿಗೆ ಸೂಕ್ತ ಪರಿಹಾರ ದೊರಕಿಸಲು ಯತ್ನಿಸಲಾಗುವುದು ಎಂದು ಹೇಳಿದರು. ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗುರ ಅವರು ಜಿಲ್ಲೆಯಲ್ಲಿನ ಬೆಳೆಗಳ ಹಾನಿ ಕುರಿತು ವಿವರಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery issue; ಮುಂದೆ ಜಾಗರೂಕತೆಯಿಂದ ಹೆಜ್ಜೆ ಇರಿಸಬೇಕಾಗಿದೆ: ಎಚ್.ಕೆ ಪಾಟೀಲ

Congress ಸರಕಾರ ವರ್ಚಸ್ಸು ಕಳೆದುಕೊಂದು ಆಪರೇಷನ್ ಗೆ ಮುಂದಾಗಿದೆ: ಬೊಮ್ಮಾಯಿ ಕಿಡಿ

Loksabha; ಧಾರವಾಡ ಕ್ಷೇತ್ರದಿಂದ ಸ್ಪರ್ಧೆ ಸಿದ್ದತೆಗೆ ಡಿಕೆಶಿಯಿಂದ ಸೂಚನೆ: ಮೋಹನ ಲಿಂಬೆಕಾಯಿ

Dharwad ರಾಷ್ಟ್ರಧ್ವಜ ತಯಾರಿಕಾ ಕೇಂದ್ರಕ್ಕೆ ಮಹಾತ್ಮಾಗಾಂಧಿ ಪ್ರಶಸ್ತಿ

Hubballi: ಆತ್ಮಗುರಿಯೇ ನಿಜವಾದ ಆಧ್ಯಾತ್ಮ- ನಿರ್ಭಯಾನಂದ ಶ್ರೀ
MUST WATCH
ಹೊಸ ಸೇರ್ಪಡೆ

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ