ರೊಟ್ಟಿ ತಟ್ಟಿ ಗೆದ್ದ ಉತ್ತರದ ಗಟ್ಟಿಗಿತ್ತಿ ಮಹಿಳೆಯರು; ದೇಶ, ವಿದೇಶದಿಂದಲೂ ಭಾರೀ ಬೇಡಿಕೆ

ಉದ್ಯಮ ಸ್ವರೂಪ ಪಡೆದ ರೊಟ್ಟಿ ತಯಾರಿ ಕಾಯಕ ವರ್ಷಕ್ಕೆ 63 ಕೋಟಿ ರೂ. ವಹಿವಾಟು

Team Udayavani, Mar 8, 2023, 6:40 AM IST

ರೊಟ್ಟಿ ತಟ್ಟಿ ಗೆದ್ದ ಉತ್ತರದ ಗಟ್ಟಿಗಿತ್ತಿ ಮಹಿಳೆಯರು; ದೇಶ, ವಿದೇಶದಿಂದಲೂ ಭಾರೀ ಬೇಡಿಕೆ

ಧಾರವಾಡ: ರೊಟ್ಟಿ ಬರೀ ಹೊಟ್ಟೆ ತುಂಬಿಸಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಅದೇ ರೊಟ್ಟಿ ಮಕ್ಕಳ ಶಾಲೆಯ ಶುಲ್ಕ ಭರಿಸಿತು, ಕುಡುಕ ಗಂಡ ಮಾಡಿದ ಸಾಲ ತೀರಿಸಿತು, ಮಗಳ ಮದುವೆ ಮಾಡಿತು, ಮಗನಿಗೆ ಕೆಲಸ ಕೊಡಿಸಿತು, ಊರಿನ ಜಾತ್ರೆಗೆ ದಾಸೋಹಂ ಎನ್ನಿಸಿತು. ಅಷ್ಟೆ ಅಲ್ಲ, ವಿದೇಶಿಯರೇ ರೊಟ್ಟಿ ಕೇಂದ್ರ ಹುಡುಕಿಕೊಂಡು ಬರುವಂತೆ ಮಾಡಿತು. ಒಟ್ಟಿನಲ್ಲಿ ರೊಟ್ಟಿ ತಟ್ಟಿದ ಕೈಗಳು ಗಟ್ಟಿಯಾಗಿ ನಿಂತು ದಿಟ್ಟತನ ತೋರಿದ್ದಕ್ಕೆ ಬದುಕು ಹಸನಾಯಿತು.

ಹೌದು, ಬಿಸಿ ರೊಟ್ಟಿ ಹಸಿ ಖಾರಾ ಉತ್ತರ ಕರ್ನಾಟಕದ ಪ್ರಮುಖ ಆಹಾರ. ಜಾಗತೀಕರಣದ ಈ ಜಮಾನಾದಲ್ಲಿ ರೊಟ್ಟಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಉತ್ತರ ಕರ್ನಾಟಕ ಅದರಲ್ಲೂ ಹುಬ್ಬಳ್ಳಿ-ಧಾರವಾಡ ಕೇಂದ್ರವಾಗಿಟ್ಟುಕೊಂಡು ಅತ್ಯಂತ ಕಡಿಮೆ ಖರ್ಚಿನಲ್ಲಿ ಶುದ್ಧವಾದ ರೊಟ್ಟಿ ತಟ್ಟಿ ಇಂದು ಯಶಸ್ವಿ ಮಹಿಳಾ ಉದ್ಯಮಿಗಳು ಗೆದ್ದು ನಿಂತಿದ್ದಾರೆ.

ಜೋಳದ ರೊಟ್ಟಿಗೆ ದಿನೇ ದಿನೆ ಬೇಡಿಕೆ ಹೆಚ್ಚಾಗುತ್ತಿದ್ದು, ಉದ್ಯೋಗದಲ್ಲಿರುವವರಿಗೆ ಪ್ರತೀದಿನವೂ ರೊಟ್ಟಿ ಮಾರಾಟ ಕೇಂದ್ರಗಳಿಂದಲೇ ಊಟದ ಹೊತ್ತಿಗೆ ಸರಬರಾಜಾ ಗುತ್ತಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಬೇಡಿಕೆ ಬರುತ್ತಿದೆ. ಹೀಗಾಗಿ ನಿರುದ್ಯೋಗಿ ಮಹಿಳೆಯರು ಈ ಬೇಡಿಕೆಗೆ ಪೂರಕವಾಗಿ ತಮ್ಮ ಕಿರು ಉದ್ಯಮಗಳನ್ನು ಸೃಷ್ಟಿಸಿಕೊಂಡು ಜೋಳದ ರೊಟ್ಟಿ ಪೂರೈಕೆ ಮಾಡುತ್ತಿದ್ದಾರೆ.

ಬಂದೇ ಬಿಟ್ಟಿತು ರೊಟ್ಟಿ ಯಂತ್ರ
ಲಕ್ಷ ಲಕ್ಷ ಸಂಖ್ಯೆಯಲ್ಲಿ ರೊಟ್ಟಿ ಸುಡುವುದು ಈಗ ಕಷ್ಟ. ತಟ್ಟುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಈಗ ರೊಟ್ಟಿ ಸಿದ್ಧಗೊಳಿಸುವ ಯಂತ್ರಗಳು ಬಂದಿವೆ. ಇದನ್ನೇ ಬಳಸಿಕೊಂಡು ಮಹಿಳಾ ಉದ್ಯಮಿ ಗಳು ಚಿಕ್ಕ ಚಿಕ್ಕ ಗ್ರಾಮಗಳಿಂದ ಹಿಡಿದು ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೆಂಗಳೂರು ಸಿಟಿವರೆಗೂ ಬೇಡಿಕೆಗೆ ತಕ್ಕಂತೆ ರೊಟ್ಟಿ ಪೂರೈಕೆ ಮಾಡುತ್ತಿದ್ದಾರೆ. 10 ವರ್ಷಗಳ ಹಿಂದೆ ತಟ್ಟಿದ ರೊಟ್ಟಿಗೆ ಮಾತ್ರ ಸೀಮಿತವಾಗಿದ್ದ ಈ ಉದ್ಯಮ ಇಂದು ಯಂತ್ರಗಳಾಧಾರಿತವಾಗಿ ಬೆಳೆಯುತ್ತಿದೆ.

18 ಜಿಲ್ಲೆಗಳಲ್ಲಿ ಭಾರೀ ಬೇಡಿಕೆ
ರೊಟ್ಟಿ ಉದ್ಯಮಕ್ಕೆ ಆರಂಭದಲ್ಲಿ ಅಷ್ಟಾಗಿ ಯಶಸ್ಸು ಸಿಕ್ಕಿರಲಿಲ್ಲ. ತಟ್ಟಿದ ರೊಟ್ಟಿ ಕೊಳ್ಳದೆ ಹೋದಾಗ ಹಾನಿಯಾಗುತ್ತಿತ್ತು. ಅನೇಕರು ನಷ್ಟ ಅನುಭವಿಸಿದರು. ಆದರೆ ಇಂದು ಧಾರವಾಡ, ಹಾವೇರಿ, ಗದಗ, ರಾಯಚೂರು, ವಿಜಯಪುರ, ಕಲಬುರಗಿ ಮತ್ತು ಬೆಳಗಾವಿ ಸೇರಿ 18 ಜಿಲ್ಲೆಗಳಲ್ಲಿ ರೊಟ್ಟಿ ಭರ್ಜರಿ ಮಾರಾಟವಾಗುತ್ತಿದೆ. ಪ್ರತೀ ಜಿಲ್ಲಾ ಕೇಂದ್ರಗಳಲ್ಲೂ ಕನಿಷ್ಠ 25 ರೊಟ್ಟಿ ಮಾರಾಟ ಕೇಂದ್ರಗಳು ಹುಟ್ಟಿಕೊಂಡಿವೆ. ಈ ಎಲ್ಲ ಕೇಂದ್ರಗಳ ರೂವಾರಿಗಳು ಮಹಿಳೆಯರೇ ಆಗಿದ್ದು ವಿಶೇಷ. ವಿಧವೆಯರು, ಆರ್ಥಿಕವಾಗಿ ಹಿಂದುಳಿದವರು, ನಷ್ಟಕ್ಕೆ ಸಿಲುಕಿದವರೆಲ್ಲರೂ ರೊಟ್ಟಿ ಉದ್ಯಮವನ್ನು ಗಟ್ಟಿಯಾಗಿ ಹಿಡಿದು ಯಶಸ್ವಿಯಾಗುತ್ತಿದ್ದಾರೆ.

ರುಡ್‌ಸೆಟ್‌ ಕಸರತ್ತು
ಧಾರವಾಡದಲ್ಲಿರುವ ಧರ್ಮಸ್ಥಳ ಸಂಸ್ಥೆ ಮತ್ತು ಕೆನರಾ ಬ್ಯಾಂಕ್‌ ಪ್ರಾಯೋಜಿತ ರುಡ್‌ಸೆಟ್‌ ಸಂಸ್ಥೆ (ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಕೇಂದ್ರ) ಈವರೆಗೂ ಅಂದಾಜು 18 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ರೊಟ್ಟಿ ತಟ್ಟುವುದು, ಚಟ್ನಿ, ಬೇಕರಿ ಉತ್ಪನ್ನ ಸೇರಿ ಎಲ್ಲ ಬಗೆಯ ಆಹಾರ ಉತ್ಪನ್ನಗಳನ್ನು ಸಿದ್ಧಗೊಳಿಸಿ ಮಾರುವುದು, ಬ್ಯೂಟಿ ಪಾರ್ಲರ್‌, ಕಂಪ್ಯೂಟರ್‌ ಸೇರಿ ಅನೇಕ ಬಗೆಯ ತರಬೇತಿ ನೀಡಿದೆ. ಈ ಸಂಸ್ಥೆಯಲ್ಲಿ ಒಟ್ಟು 250ಕ್ಕೂ ಅಧಿಕ ಮಹಿಳೆಯರು ರೊಟ್ಟಿ ಉದ್ಯಮದ ತರಬೇತಿ ಪಡೆದುಕೊಂಡು ಇಂದು ಯಶಸ್ವಿಯಾಗಿ ರೊಟ್ಟಿ ಮಾರಾಟ ಮಾಡುತ್ತಿದ್ದಾರೆ.

ಪ್ರತಿದಿನ 3.5 ಲಕ್ಷ ರೊಟ್ಟಿ ಮಾರಾಟ
ಸದ್ಯ ಉತ್ತರ ಕರ್ನಾಟಕದಲ್ಲಿನ ಅಂದಾಜು 250 ಮಹಿಳೆಯರು ವಿವಿಧ ಜಿಲ್ಲೆಗಳಲ್ಲಿ ಸತತ ಉರಿಯುತ್ತಿರುವ ರೊಟ್ಟಿ ಸುಡುವ ಒಲೆಗಳಿಗೆ ಜ್ಯೋತಿಯಾಗಿದ್ದಾರೆ. ಇಲ್ಲಿ ಪ್ರತೀದಿನ 3.5 ಲಕ್ಷ ರೊಟ್ಟಿಗಳು ಮಾರಾಟವಾಗುತ್ತಿವೆ. ಒಂದು ರೊಟ್ಟಿಗೆ 5 ರೂ.ಬೆಲೆ., ಅಂದರೆ ಪ್ರತಿದಿನ 17.5 ಲಕ್ಷ ರೂ., ತಿಂಗಳಿಗೆ 5.25 ಕೋಟಿ, ವರ್ಷಕ್ಕೆ 63 ಕೋಟಿ ರೂ. ವಹಿವಾಟು ದಾಖಲಾಗುತ್ತಿದೆ. ಜಿಲ್ಲೆಯಿಂದ ಜಿಲ್ಲೆಗೆ ಮಾರಾಟವಾಗುತ್ತಿರುವ ಖಡಕ್‌ ರೊಟ್ಟಿಗಳು ರಾಜ್ಯವಷ್ಟೇ ಅಲ್ಲ, ದೇಶ-ವಿದೇಶಿಯರಿಗೂ ಪ್ರಿಯವಾಗುತ್ತಿದೆ. ಯಾವ ಮಹಿಳೆಯರು ರೊಟ್ಟಿ ತಟ್ಟುತ್ತಿದ್ದಾರೋ ಅವರ ರಟ್ಟಿ ಬಲಿಯುತ್ತಿವೆ (ಆರ್ಥಿಕವಾಗಿ ಸಬಲರಾಗಿದ್ದಾರೆ.) ಹೊಟ್ಟಿ ತುಂಬುತ್ತಿವೆ. ಇವರೆಲ್ಲ ರೊಟ್ಟಿ ತಟ್ಟಿ ಯಶಸ್ವಿಯಾದ ಗಟ್ಟಿ ಮಹಿಳೆಯರ ಸಾಲಿನಲ್ಲಿ ನಿಂತಿದ್ದಾರೆ.

– ಬಸವರಾಜ್‌ ಹೊಂಗಲ್‌

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.