

Team Udayavani, Mar 18, 2020, 12:57 PM IST
ಗಜೇಂದ್ರಗಡ: ಪಟ್ಟಣದ ಪುರಸಭೆ ವತಿಯಿಂದ ಕೊರೊನಾ ವೈರಸ್ ಬಗ್ಗೆ ವಾರದ ಸಂತೆ ದಿನವಾದ ಮಂಗಳವಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಪುರಸಭೆ ಆರೋಗ್ಯ ಅಧಿಕಾರಿ ರಾಘವೇಂದ್ರ ಮಂತಾ ಮಾತನಾಡಿ, ಇಡೀ ಜಗತ್ತನ್ನೆ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ನಿಂದಾಗಿ ಸಾರ್ವಜನಿಕರು ಜಾಗೃತರಾಗಿರಬೇಕು. ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಈ ಸೋಂಕು ತಗುಲಿದ ವ್ಯಕ್ತಿಗಳಿಂದ ದೂರವಿರಬೇಕಿದೆ. ಕೊರೊನಾ ರೋಗದಲ್ಲಿ ಮುಖ್ಯವಾಗಿ ತೀವ್ರ ಜ್ವರ, ನೆಗಡಿ, ಕೆಮ್ಮು ಉಸಿರಾಟದ ತೊಂದರೆ ಹಾಗೂ ಭೇದಿ ಕಾಣಿಸಿಕೊಳ್ಳುತ್ತದೆ. ಯಾರಾದರೂ ಕೆಮ್ಮುವಾಗ, ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುವುದು ಮತ್ತು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ ಕಚ್ಚಾ ಮಾಂಸ ಸೇವನೆ ಮಾಡಬೇಡಿ. ಶಂಕಿತ ರೋಗಿಯು ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು ಮತ್ತು ಟ್ರಿಪಲ್ ಲೇಯರ್ ಮಾಸ್ಕ್ ಬಳಸಬೇಕಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಪುರಸಭೆಯ ನಜೀರಸಾಬ್ ಸಾಂಗ್ಲಿಕಾರ, ಶಿವಕುಮಾರ ಇಲ್ಲಾಳ ಸೇರಿ ಇತರರು ಇದ್ದರು.
Ad
Gadag: ಕಪ್ಪತ್ತಗುಡ್ಡದಲ್ಲಿ ಅಡವಿ ಬೆಕ್ಕು, ಹಾವು,ಗೂಬೆಗಳ ಸಾವು; ಹೆಚ್ಚಿದ ಆತಂಕ
Gadag: ಬೆಣ್ಣೆಹಳ್ಳ-ಮಲಪ್ರಭಾ ಉಕ್ಕಿ ಹರಿದರೆ ಕಂಟಕ
Gadag: ಜು.12ರಂದು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಯುವಧ್ವನಿ ಕಾರ್ಯಕ್ರಮ
Gadag: ಪೆಟ್ರೋಲ್ ಬಂಕ್ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ
Gadag: ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಜೋಡಿ… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ
Raichur: ‘ಶ್ವಾನ ಪಡೆ’ ದಾಳಿಗೆ ರಾಯಚೂರು ಜಿಲ್ಲಾಡಳಿತ ತತ್ತರ!
Bhadra Reservoir: ಭರ್ತಿಯತ್ತ ಭದ್ರಾ ಜಲಾಶಯ: 2 ಸಾವಿರ ಕ್ಯೂಸೆಕ್ ನದಿಗೆ
ಆಪರೇಷನ್ ಸಿಂದೂರ್‌ನಲ್ಲಿ ಭಾರತದಕ್ಕಾದ ಹಾನಿಯ ಒಂದಾದರು ಫೋಟೋ ತೋರಿಸಿ; ಅಜಿತ್ ದೋವಲ್ ಸವಾಲು
Ranebennur: ಹತ್ತಿ ಬಿಟ್ಟು ಮೆಕ್ಕೆಜೋಳದತ್ತ ರೈತರ ಒಲವು
Kalaburagi: ಹಾಡಹಗಲೇ ಜ್ಯವೆಲರಿ ಶಾಪ್ ಗೆ ನುಗ್ಗಿ ಗನ್ ತೋರಿಸಿ ದರೋಡೆ
You seem to have an Ad Blocker on.
To continue reading, please turn it off or whitelist Udayavani.