Udayavni Special

ಶತ್ರುಗಳ ಧ್ವನಿ ಕದ್ದಾಲಿಸಿ ಸಂಭಾವ್ಯ ದಾಳಿ ತಪ್ಪಿಸಿದ್ದೆ!

Team Udayavani, Jul 26, 2019, 9:34 AM IST

gadaga-tdy-2

ಗದಗ: 1999ರಲ್ಲಿ ಕಾರ್ಗಿಲ್ ಹಿಮ ಶಿಖರದಲ್ಲಿ ಇಂಡೋ-ಪಾಕ್‌ ನಡುವೆ ನಡೆದ ಕಾಳಗದಲ್ಲಿ ಭಾರತ ಜಯಭೇರಿ ಬಾರಿಸಿತು. ಕಾರ್ಗಿಲ್ ವಿಜಯದಲ್ಲಿ ಗದಗಿನ ಹೆಜ್ಜೆ ಗುರುತುಗಳು ಅಚ್ಚೊತ್ತಿವೆ. ತಾಲೂಕಿನ ಲಕ್ಕುಂಡಿಯ ನಿವೃತ್ತ ನಾಯಕ್‌ ದತ್ತಾತ್ರೇಯ ಜೋಶಿ ಕಾರ್ಗಿಲ್ ಯುದ್ಧದಲ್ಲಿನ ತಮ್ಮ ಅನುಭವಗಳ ನೆನಪಿನ ಬುತ್ತಿಯನ್ನು ‘ಉದಯವಾಣಿ’ ಎದುರು ಬಿಚ್ಚಿಟ್ಟಿದ್ದಾರೆ.

ಕಾರ್ಗಿಲ್ ಯುದ್ಧ ಆರಂಭಗೊಂಡಾಗ ನಾನು ಕಮ್ಯೂನಿಕೇಷನ್‌ ರೆಜಿಮೆಂಟ್‌ನ 51 ಡಿವಿಜನ್‌ ಸಿಕಿಂದ್ರಾಬಾದ್‌ನಲ್ಲಿದ್ದೆ. ಮಧ್ಯಪ್ರದೇಶದಲ್ಲಿ ಕಾರ್ಯಾಚರಣೆಗೆ ನಮ್ಮ ತಂಡ ಸಾಗಿತ್ತು. ಪ್ರಯಾಣದ ಮಧ್ಯೆ ನನಗೆ ಅನಿರೀಕ್ಷಿತವಾಗಿ ಮತ್ತೂಂದು ಆದೇಶ ಬಂತು. ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿರುವ 18ನೇ ವೈರ್‌ಲೆಸ್‌ ರೆಜಿಮೆಂಟ್‌ಗೆ ಬೆಂಬಲಿಸಲು ತೆರಳುವಂತೆ ಆದೇಶಿಸಲಾಯಿತು.

ನಾನು ಕಾರ್ಗಿಲ್ ವಲಯಕ್ಕೆ ತಲುಪುವ ಹೊತ್ತಿಗೆ ಯುದ್ಧ ಕೊನೆ ಹಂತದತ್ತ ಸಾಗಿತ್ತು. ಆದರೂ ನಮ್ಮ ಹಾಗೂ ಶತ್ರು ರಾಷ್ಟ್ರಗಳ ವೈರ್‌ಲೆಸ್‌ ಸಂವಹನದ ಮೇಲೆ ನಿಗಾ ಇರಿಸುವುದು ಮಹತ್ವದ ಕೆಲಸವಾಗಿತ್ತು. ನಾನು ಅಲ್ಲಿದ್ದ 8 ದಿನಗಳೂ ಒಮ್ಮೊಮ್ಮೆ ಮನದಲ್ಲಿ ಭಯ, ದೇಶ ಭಕ್ತಿ, ಶೌರ್ಯ ಮೆರೆಯುವ ಎದೆಗಾರಿಕೆಯೂ ಒಟ್ಟೊಟ್ಟಿಗೆ ಕಾಡುತಿದ್ದವು.

ನಾವೇ ಟಾರ್ಗೆಟ್ ಆಗಿದ್ದೆವು: ಎಂದಿನಂತೆ ಕಿವಿಗೆ ವೈರ್‌ಲೆಸ್‌ ಉಪಕರಣ ಅಂಟಿಸಿಕೊಂಡಿದ್ದ ನನಗೆ ಪಾಕಿಸ್ತಾನ ಭಾಗದ ಯಾವುದೋ ಫ್ರಿಕೆನ್ಸಿ ಕನೆಕ್ಟ್ ಆಗಿತ್ತು. ಅದರಲ್ಲಿ ಕಾರ್ಗಿಲ್ ದಾಳಿ ಕುರಿತು ಕೋಡೆಡ್‌ ಮಾತುಗಳು ಕೇಳಿ ಬಂದವು. ತಕ್ಷಣ ಅನುಮಾನದಿಂದ ರೆಕಾರ್ಡ್‌ ಹಾಕಿ ಮೇಲಧಿಕಾರಿಗಳಿಗೆ ರವಾನಿಸಿದೆ. ಅದನ್ನು ಡಿಕೋಡಿಂಗ್‌ ಮಾಡಿ, ವಿರೋಧಿಗಳು ನಾವಿರುವ ತಾಣದ ಮೇಲೆ ದಾಳಿಗೆ ಸಂಚು ರೂಪಿಸಿದ್ದನ್ನು ಪತ್ತೆ ಮಾಡಿ ಅದನ್ನು ವಿಫಲಗೊಳಿಸಲಾತು. ಅದಕ್ಕೆ ನಾನೇ ಟ್ಯಾಪ್‌ ಮಾಡಿದ್ದ ಕಾಲ್ ರೆಕಾರ್ಡ್‌ ಕಾರಣ ಎಂಬ ಮಾತಿನಿಂದ ಕ್ಷಣಕಾಲ ಮೂಕವಿಸ್ಮಿತನಾಗಿದ್ದೆ. ಆನಂತರ ದಿನದಿಂದ ದಿನಕ್ಕೆ ಭಾರತದ ಗೆಲುವಿನ ದಿನಗಳು ಹತ್ತಿರವಾಗಿ, ನಮ್ಮ ರೆಜಿಮೆಂಟ್‌ಗೆ ವಾಪಸ್‌ ಕಳುಹಿಸಲಾಯಿತು. ಇದು ನನ್ನ ಸೇನಾ ಬದುಕಿನ ಅತ್ಯಂತ ಮಹತ್ವದ ದಿನಗಳು ಎನ್ನುತ್ತಾರೆ ದತ್ತಾತ್ರೇಯ ಜೋಶಿ.

•ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ವೆಸ್ಟ್‌ ಇಂಡೀಸ್‌ ಪ್ರವಾಸ: 23 ಸದಸ್ಯರ ಆಸೀಸ್‌ ತಂಡ ಪ್ರಕಟ

ವೆಸ್ಟ್‌ ಇಂಡೀಸ್‌ ಪ್ರವಾಸ: 23 ಸದಸ್ಯರ ಆಸೀಸ್‌ ತಂಡ ಪ್ರಕಟ

ಇಟಾಲಿಯನ್‌ ಓಪನ್‌ ಫೈನಲ್‌ : ರೋಮ್‌ ಟೆನಿಸ್‌ ಸಾಮ್ರಾಜ್ಯಕ್ಕೆ ನಡಾಲ್‌ ದೊರೆ

ಇಟಾಲಿಯನ್‌ ಓಪನ್‌ ಫೈನಲ್‌ : ರೋಮ್‌ ಟೆನಿಸ್‌ ಸಾಮ್ರಾಜ್ಯಕ್ಕೆ ನಡಾಲ್‌ ದೊರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

201715mdr01

ತವರಿಗೆ ಬಂದವರಿಂದಲೇ ಹಬ್ಬಿದ ಸೋಂಕು

15gadag 4

ಔಷಧ-ಹಾಸಿಗೆ-ಆಕ್ಸಿಜನ್‌ ಕೊರತೆಯಾಗದಂತೆ ನೋಡಿಕೊಳ್ಳಿ : ಡಿಸಿ ಸುಂದರೇಶ್‌ ಬಾಬು

14mdr1

ಮನೆಯಲ್ಲೇ ರಂಜಾನ್‌ ಹಬ್ಬ ಆಚರಣೆ

cats

ಕೋವಿಡ್‌ನ‌ಲ್ಲಿ ಭಕ್ತರ ಕೈ ಹಿಡಿದ ಮಠಗಳು

covid effect

3ನೇ ದಿನವೂ ಶಿರಹಟ್ಟಿ ಸಂಪೂರ್ಣ ಸ್ತಬ್ಧ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಒಟ್ಟು 14 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ : ಜಿಲ್ಲಾಧಿಕಾರಿ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಸಂಕಷ್ಟದಲ್ಲಿ ಜನರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಕಡಲ ಮಕ್ಕಳಿಂದ  1 ಟನ್‌ ತೂಕದ ಸಾವಿರ ಗೋಣಿ ಚೀಲವಿಟ್ಟು ತಡೆಗೋಡೆ ನಿರ್ಮಾಣ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಮೆಕ್ಸಿಕೋದ ಆ್ಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

ದುಬಾೖ ಏಶ್ಯನ್‌ ಬಾಕ್ಸಿಂಗ್‌: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.