Udayavni Special

ಕ್ರಿಕೆಟ್‌ ಪಟು ಛಾಯಾಗೆ ಸೈಕ್ಲಿಂಗ್‌ನಲ್ಲಿ ಕಂಚಿನ ಪದಕ

| ಕೋವಿಡ್‌; ಹೆಚ್ಚು ಅಭ್ಯಾಸ ಮಾಡದಿದ್ದರೂ ಮೊದಲ ಯತ್ನದಲ್ಲೇ ಸಾಧನೆ ಮೆರೆದ ಬಾಲೆ

Team Udayavani, Feb 23, 2021, 5:02 PM IST

ಕ್ರಿಕೆಟ್‌ ಪಟು ಛಾಯಾಗೆ ಸೈಕ್ಲಿಂಗ್‌ನಲ್ಲಿ ಕಂಚಿನ ಪದಕ

ಗದಗ: ಇತ್ತೀಚಿನ ವರ್ಷಗಳಲ್ಲಿ ಬಹುತೇಕರು ಕ್ರಿಕೆಟಿಗರಾಗುವಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ವರ್ಷಗಳ ಕಾಲ ತಪಸ್ಸಿನಂತೆ ಸಾಧನೆ ಮಾಡುತ್ತಾರೆ. ಆದರೆ, ಕ್ರಿಕೆಟ್‌ಗಿಂತ ತನಗೆ ಸೈಕ್ಲಿಂಗ್‌ ಲೇಸು ಎಂಬುದನ್ನರಿತ ಬಾಲಕಿಯೊಬ್ಬಳು ಸೈಕ್ಲಿಂಗ್‌ ಅಭ್ಯಾಸದಲ್ಲಿ ತೊಡಗಿದ ಒಂದೇ ವರ್ಷದಲ್ಲಿ ರಾಜ್ಯ-ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ವಿಜಯಪುರದ ಛಾಯಾ ನಾಗನಾಥ ನಾಗಶೆಟ್ಟಿ ಎಂಬ ಬಾಲಕಿ 17ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ಚಾಂಪಿಯನ್‌ ಶಿಪ್‌ನಲ್ಲಿ 14 ವರ್ಷದೊಳಗಿನ ಟೈಮ್‌ಟ್ರಾಯಲ್ಸ್‌ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಸಾಧನೆಮೆರೆದಿದ್ದಾರೆ. ವಿಜಯಪುರದ ಬಿ.ವಿ.ದರ್ಬಾರ್‌ ಹೈಸ್ಕೂಲ್‌8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಛಾಯಾ, ಕಳೆದ ಐದು ವರ್ಷಗಳಿಂದ ಕ್ರಿಕೆಟ್‌ ಹಾಗೂ ಫಿಟ್‌ನೆಸ್‌ಗಾಗಿ ಅಥ್ಲೆಟಿಕ್ಸ್‌ನಲ್ಲಿ ತೊಡಗಿದ್ದಾರೆ.

ಛಾಯಾ 5ನೇ ತರಗತಿಯಲ್ಲಿದ್ದಾಗಲೇ ಸೈಕ್ಲಿಂಗ್‌ ವಿಭಾಗದಲ್ಲಿ ವಸತಿ ಶಾಲೆಗೆ ಪ್ರವೇಶ ಸಿಕ್ಕಿದ್ದರೂ ಕ್ರಿಕೆಟ್‌ ಮೇಲಿನ ಒಲವಿನಿಂದಕ್ರೀಡಾ ಶಾಲೆಗೆ ಸೇರಿರಲಿಲ್ಲ. ವರ್ಷಗಳಿಂದ ಕ್ರಿಕೆಟ್‌ ಅಭ್ಯಾಸ ಮಾಡಿದರೂ ನಿರೀಕ್ಷಿತ ಫಲ ಸಿಗದಿದ್ದರಿಂದ ತಂದೆ ನಾಗನಾಥ ಅವರು ಸೈಕ್ಲಿಂಗ್‌ಗೆ ಸೇರುವಂತೆ ಸಲಹೆ ನೀಡಿದ್ದರು. ಅದರಂತೆ ಕಳೆದ ವರ್ಷದಿಂದ ಸೈಕ್ಲಿಂಗ್‌ ಅಭ್ಯಾಸದಲ್ಲಿ ತೊಡಗಿದ್ದ ಛಾಯಾ, 7ನೇ ತರಗತಿಗೆ ಕ್ರೀಡಾಶಾಲೆಗೆ ಪ್ರವೇಶ ಪಡೆದಿದ್ದರು.

ಆದರೆ ಪ್ರಸಕ್ತ ಸಾಲಿನಲ್ಲಿ ಕೋವಿಡ್‌ನಿಂದ ಹೆಚ್ಚು ಅಭ್ಯಾಸ ಮಾಡಲಾಗದಿದ್ದರೂ, ಛಾಯಾ ಅವರ ಸೈಕ್ಲಿಂಗ್‌ ಪ್ರತಿಭೆಯಿಂದ ಕೆಲವೇ ತಿಂಗಳು ಕಾಲ ಅಭ್ಯಾಸ ನಡೆಸಿ ಮೊದಲ ಪ್ರಯತ್ನದಲ್ಲೇ ರಾಜ್ಯ-ರಾಷ್ಟ್ರ ಮಟ್ಟದ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾಳೆ. ಈ ಬಾರಿ 17ನೇ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಅಲ್ಲದೇ, ಛಾಯಾ ಅವರ ಅಂಕಗಳನ್ನಾಧರಿಸಿ ಅಂತಾರಾಷ್ಟ್ರೀಯ ಸ್ಪರ್ಧೆಗೂ ಆಯ್ಕೆಯಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ತರಬೇತುಗಾರ್ತಿ ಅಲ್ಕಾ ಪಡತರೆ

ನಾನು ಕ್ರಿಕೆಟ್‌ನಲ್ಲಿ ಎಷ್ಟೇ ಶ್ರಮ ವಹಿಸಿದರೂ ನಿರೀಕ್ಷಿತ ಫಲ ಸಿಗಲಿಲ್ಲ. ಆದರೆ, ನನ್ನೊಳಗಿನ ಸೈಕ್ಲಿಸ್ಟ್‌ ಇಲ್ಲಿಯ ವರೆಗೆ ಕರೆ ತಂದಿದೆ. ಮೊದಲಪ್ರಯತ್ನದಲ್ಲೇ ಕಂಚು ಬಂದಿದ್ದುಸಂತಸವಾಗುತ್ತಿದೆ. ಮುಂದೆ ಸೈಕ್ಲಿಂಗ್‌ ನಲ್ಲೇ ಹೆಚ್ಚಿನ ಶ್ರಮ ವಹಿಸಿ ಅಭ್ಯಾಸ ಮಾಡುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುಲು ಪ್ರಯತ್ನಿಸುತ್ತೇನೆ. – ಛಾಯಾ ನಾಗಶೆಟ್ಟಿ,ಕಂಚಿನ ಪದಕ ಪಡೆದ ಸೈಕ್ಲಿಸ್ಟ್‌

ಟಾಪ್ ನ್ಯೂಸ್

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

ಸುಸ್ಥಿರ ಮತ್ತು ಗುಣಮಟ್ಟದ ಜೀವನ ನಡೆಸಲು ಬೆಂಗಳೂರೇ ಬೆಸ್ಟ್‌ !

pentagon

ಪೆಂಟಗನ್‌ ಚಿತ್ರದ ಕ್ಯಾರೆಕ್ಟರ್‌ ಪೋಸ್ಟರ್‌ ಬಿಡುಗಡೆ

ಮೊಟೆರಾದಲ್ಲಿ ಮುಂದುವರಿದ ವಿಕೆಟ್ ಬೇಟೆ: ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೂ ಆರಂಭಿಕ ಆಘಾತ

ಮೊಟೆರಾದಲ್ಲಿ ಮುಂದುವರಿದ ವಿಕೆಟ್ ಬೇಟೆ: ಇಂಗ್ಲೆಂಡ್ ಆಲ್ ಔಟ್, ಭಾರತಕ್ಕೂ ಆರಂಭಿಕ ಆಘಾತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8.14 ಲಕ್ಷ ಉಳಿತಾಯ ಬಜೆಟ್‌ ಮಂಡನೆ

8.14 ಲಕ್ಷ ಉಳಿತಾಯ ಬಜೆಟ್‌ ಮಂಡನೆ

puttaraja

ಪಂ|ಪುಟ್ಟರಾಜರ 107ನೇ ಜಯಂತೋತ್ಸವ: ಭವ್ಯ ಮೆರವಣಿಗೆ

ಕೆಲಸ ಮಾಡಲು ಇಚ್ಛೆ ಇಲ್ಲದಿದ್ರೆ ವರ್ಗವಾಗಿ ಹೋಗಿ

ಕೆಲಸ ಮಾಡಲು ಇಚ್ಛೆ ಇಲ್ಲದಿದ್ರೆ ವರ್ಗವಾಗಿ ಹೋಗಿ

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

ನರಗುಂದ ಬೆಟ್ಟಕ್ಕೆ ಪ್ರವಾಸಿ ತಾಣ ಮೆರುಗು

ಸರ್ವಜ್ಞನ ವಚನಗಳಿಂದ ಸಮಾಜ ಬದಲಾವಣೆ

ಸರ್ವಜ್ಞನ ವಚನಗಳಿಂದ ಸಮಾಜ ಬದಲಾವಣೆ

MUST WATCH

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

ಹೊಸ ಸೇರ್ಪಡೆ

ಅನ್ನದಾತರಿಗೆ ನೇರ ಮಾರುಕಟ್ಟೆ ಖಾತ್ರಿ

ಅನ್ನದಾತರಿಗೆ ನೇರ ಮಾರುಕಟ್ಟೆ ಖಾತ್ರಿ

ಹೇಗಿದ್ದೆ ಹೇಗಾದೆ : ಈ ತಾತ ಶ್ರೀಮಂತ ಭಿಕ್ಷುಕ..!

ಶಾಸಕ ಸಂಗಮೇಶ್ ಸದನ ಪ್ರವೇಶಕ್ಕೆ ಮಾರ್ಷಲ್ ಗಳ ತಡೆ: ಸಿದ್ದರಾಮಯ್ಯ ತರಾಟೆ!

ನೀರು-ಒಳಚರಂಡಿ ಕಾಮಗಾರಿ ಏಕಕಾಲಕ್ಕೆ ಮಾಡಿ

ನೀರು-ಒಳಚರಂಡಿ ಕಾಮಗಾರಿ ಏಕಕಾಲಕ್ಕೆ ಮಾಡಿ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಜಿಟೋನೇಟರ್ ಪೊಲೀಸ್ ವಶಕ್ಕೆ

ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು, ಡಿಟೋನೇಟರ್ ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.