ಎರಡನೇ ಅಲೆ ವಿರುದ್ಧ ಸಮರಕ್ಕೆ ಸಿದ್ಧತೆ

Team Udayavani, Apr 12, 2021, 3:25 PM IST

ಎರಡನೇ ಅಲೆ ವಿರುದ್ಧ ಸಮರಕ್ಕೆ ಸಿದ್ಧತೆ

ಗದಗ: ಕೋವಿಡ್ ಎರಡನೇ ಅಲೆ ಆತಂಕ ಶುರುವಾಗುತ್ತಿದ್ದಂತೆ ಜಿಲ್ಲೆಯಲ್ಲೂ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಸೋಂಕಿತರ ಚಿಕಿತ್ಸೆಗೆ ಜಿಲ್ಲಾಡಳಿತ ಅಗತ್ಯ ಉಪಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯಲ್ಲಿ 370 ಬೆಡ್‌ಗಳ ವ್ಯವಸ್ಥೆ ಹಾಗೂ ಅಗತ್ಯ ಪ್ರಮಾಣದಲ್ಲಿ ಔಷಧದಾಸ್ತಾನು ಮಾಡಿಕೊಳ್ಳುವ ಮೂಲಕ ಸೋಂಕಿನ ವಿರುದ್ಧ ಮತ್ತೂಮ್ಮೆ ಸಮರಕ್ಕೆ ಸಿದ್ಧವಾಗಿದೆ.

ಕಣ್ಣಿಗೆ ಕಾಣದ ವೈರಸ್‌ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ವೈದ್ಯರುಹಾಗೂ ಜಿಲ್ಲಾಡಳಿತ ಈಗಾಗಲೇಮೇಲುಗೈ ಸಾಧಿ ಸಿದೆ. ಮೊದಲ ಬಾರಿಗೆ ಸೋಂಕು ಹರಿಡಿದ್ದಾಗ ವಿವಿಧ ಸೌಲಭ್ಯಗಳ ಕೊರತೆ ಮಧ್ಯೆಯೂ ಸಮರ್ಥವಾಗಿ ನಿಭಾಯಿಸಿತ್ತು. ಜತೆಗೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಿದ್ದರು.ಕ್ರಮೇಣ ಸೋಂಕಿತರ ಪ್ರಮಾಣ ಕಡಿಮೆಯಾಗಿ,ಇನ್ನೇನು ಕೋವಿಡ್ ಮುಗಿಯಿತು ಎನ್ನುಷ್ಟರಲ್ಲಿಮತ್ತೆ ಎರಡನೇ ಅಲೆ ಒಕ್ಕರಿಸುತ್ತಿರುವುದುಸಹಜವಾಗಿಯೇ ಆತಂಕ ಸೃಷ್ಟಿಸಿದೆ.

ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಕಳೆದ ಏಪ್ರಿಲ್‌ 7 ರಂದು ಇಲ್ಲಿನ ರಂಗನವಾಡದಲ್ಲಿ ಮೊದಲಕೋವಿಡ್‌ ಪ್ರಕರಣ ಪತ್ತೆಯಾಗಿತ್ತು.ಆನಂತರ ಕಳೆದ ಅಕ್ಟೋಬರ್‌ ವರೆಗೆ141 ಜನರು ಕೋವಿಡ್‌ ಸೋಂಕಿಗೆಬಲಿಯಾಗಿದ್ದರು. ಅ.20ರಂದುಅಸುಂಡಿಯ ಸೋಂಕಿತ ವ್ಯಕ್ತಿಮೃತಪಟ್ಟಿರುವುದೇ ಕೊನೆ ಪ್ರಕರಣ. ಆ ನಂತರ ಸೋಂಕಿನ ಪ್ರಕರಣಗಳುಗಣನೀಯವಾಗಿ ಇಳಿಕೆಯಾಗಿ ಶೂನ್ಯಕ್ಕೆತಲುಪಿತ್ತು. ಆದರೆ, ಇದೀಗಎರಡನೇ ಅಲೆಯಿಂದಾಗಿದಿನದಿಂದ ದಿನಕ್ಕೆಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ(ಏ.11) 309183 ಜನರಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, 11352 ಜನರಲ್ಲಿ ಸೋಂಕು ದೃಢಪಟ್ಟಿದೆ. 11102 ಗುಣಮುಖರಾಗಿದ್ದಾರೆ. 141 ಜನರು ಮೃತಪಟ್ಟಿದ್ದು, 109 ಪ್ರಕರಣಗಳು ಸಕ್ರಿಯವಾಗಿವೆ.  20 ಜನ ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 7 ಜನರು ಐಸಿಯುನಲ್ಲಿ ಹಾಗೂ 89 ಜನ ಸೋಂಕಿತರು ಹೋಂಐಸೋಲೇಷನ್‌ನಲ್ಲಿದ್ದಾರೆ. ಮನೆಯಲ್ಲಿರುವ ಯಾರೊಬ್ಬರಿಗೂ ಸೋಂಕಿನ ಗಂಭೀರ ಲಕ್ಷಣಗಳಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಹಿರಿಯ ವೈದ್ಯರು.

ತಾಲೂಕು ಆಸ್ಪತ್ರೆಗಳು ಅಪ್‌ಗ್ರೆಡ್‌: ಕೋವಿಡ್ ಮೊದಲ ಹಂತದಲ್ಲಿ ಚಿಕಿತ್ಸೆ ನೀಡುವಲ್ಲಿ ಉಂಟಾದ ತೊಡಕುಗಳನ್ನು ಅವಲೋಕಿಸಿದ ಜಿಲ್ಲಾಡಳಿತ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿದೆ. ಜಿಮ್ಸ್‌ ಆವರಣದಲ್ಲಿರುವ 100 ಹಾಸಿಗೆಗಳ ಆಯುಷ್‌ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. ಸೋಂಕಿತರ ಚಿಕಿತ್ಸೆಗಾಗಿ ಸದ್ಯಕ್ಕೆ ಒಟ್ಟು 370 ಬೆಡ್‌ಗಳನ್ನು ಮೀಸಲಿಟ್ಟಿದೆ. ಈ ಪೈಕಿ 117 ಸಾಮಾನ್ಯ ಬೆಡ್‌, 200 ಆಕ್ಸಿಜನ್‌ ಬೆಡ್‌, ಐಸಿಯು ವೆಂಟಿಲೇಟರ್‌ ಸಹಿತ 53 ಬೆಡ್‌ಗಳನ್ನು ವ್ಯವಸ್ಥೆ ಮಾಡಿದೆ.

ಅದರಲ್ಲಿ ಮುಂಡರಗಿ, ರೋಣ, ನರಗುಂದ ತಾಲೂಕು ಆಸ್ಪತ್ರೆಗಳಿಗೆ ತಲಾ 50 ಆಕ್ಸಿಜನ್‌ ಬೆಡ್‌ಗಳನ್ನು ಒದಗಿಸಿದೆ. ಶಿರಹಟ್ಟಿ 30, ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡದಲ್ಲಿ ತಲಾ 10 ಆಕ್ಸಿಜನ್‌ಬೆಡ್‌ ಸೇರಿದಂತೆ ತಕ್ಷಣಕ್ಕೆ 370 ಬೆಡ್‌ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮೊದಲಗಿಂತ ಈಗಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣ ಮತ್ತಿತರೆ ಸೌಲಭ್ಯಗಳನ್ನು ದ್ವಿಗುಣಗೊಳಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಸತೀಶ ಬಸರೀಗಿಡದ.

ಖಾಸಗಿ ಆಸ್ಪತ್ರೆಗಳ ಸಾಥ್‌: ಆರೋಗ್ಯ ಸುರಕ್ಷಾ ಯೋಜನೆಯಡಿ ನೋಂದಾಯಿಸಿಕೊಂಡಿರುವಆಸ್ಪತ್ರೆಗಳೂ ಕೋವಿಡ್‌ ಚಿಕಿತ್ಸೆಗೆ ಮುಂದಾಗಿದೆ.ಆ ಪೈಕಿ ನಗರದ ಎನ್‌.ಬಿ.ಪಾಟೀಲ, ಬೆಟಗೇರಿಯ ಸಿಎಸ್‌ಐ, ಚಿರಾಯು, ಮಹಾತ್ಮಗಾಂಧಿ  ಆಸ್ಪತ್ರೆ,ಸ್ಪರ್ಶ ಆಸ್ಪತ್ರೆ ಹಾಗೂ ಕೆ.ಎಚ್‌.ಪಾಟೀಲ ಆಸ್ಪತ್ರೆಗಳೂ ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆಬಂದಿದ್ದು, ಯಾವುದೇ ಪರಿಸ್ಥಿತಿ ಎದುರಾದರೂಕೈಜೋಡಿಸುವುದಾಗಿ ಜಿಲ್ಲಾಡಳಿತಕ್ಕೆ ಅಭಯ ನೀಡಿವೆ.

ಜಿಲ್ಲೆಯಲ್ಲಿ 93 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.ಸೋಂಕು ಅಸಿಮrಮಿಟಿಕ್‌ ಇದ್ದು, ಬಹುತೇಕರುಹೋಂ ಐಸೋಲೇಷನ್‌ನಲ್ಲಿದ್ದಾರೆ. ಆದರೂ, ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನುಮಾಡಿಕೊಳ್ಳಲಾಗಿದ್ದು, ತಕ್ಷಣಕ್ಕೆ 370 ಬೆಡ್‌ಗಳು ಲಭ್ಯವಿದೆ. ಔಷಧ, ಸಿಬ್ಬಂದಿಗೆ ಯಾವುದೇಕೊರತೆಯಿಲ್ಲ. ಆದರೂ, ಸಾರ್ವಜನಿಕರು ಕೋವಿಡ್‌-19ರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ, ಕೋವಿಡ್ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ. ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ

ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.