ಪೊಲೀಸ್ ಸಿಬ್ಬಂದಿ-ಬಡವರಿಗೆ ಆಹಾರ, ಹಣ್ಣಿನ ಕಿಟ್ ವಿತರಣೆ
Team Udayavani, May 19, 2021, 4:04 PM IST
ಶಿರಹಟ್ಟಿ: ಕೋವಿಡ್ ಮಹಾಮಾರಿ ಸಾಕಷ್ಟು ಜನ ಬಡವರು ಮತ್ತು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದೆ. ಆರ್ಥಿಕವಾಗಿ ಕೆಲ ವರ್ಗಗಳು ನರಳುತ್ತಿವೆ. ಬಡವರ ಬದುಕು ಹಾಳಾಗಿದೆ. ಇಂತಹ ಸಂದರ್ಭದಲ್ಲಿ ಸಹಾಯ ಹಸ್ತ ಅನಿವಾರ್ಯವಾಗಿರುವುದನ್ನು ಮನಗಂಡು ಆಹಾರ ಕಿಟ್ ವಿತರಿಸಲಾಗುತ್ತಿದೆ ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಜಿಲ್ಲಾಧ್ಯಕ್ಷ ಸಂತೋಷ ಕುರಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೊರೊನಾ ವಾರಿಯರ್ಗಳಾದ ಪೊಲೀಸ್ ಸಿಬ್ಬಂದಿಗೆ ಹಣ್ಣು ಮತ್ತು ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸಿ ಮಾತನಾಡಿದರು.
ಪಟ್ಟಣದ ಬಡವರ ಬದುಕು ಬರಡಾಗಿರುವುದರಿಂದ ಸಾಕಷ್ಟು ಕುಟುಂಬಗಳು ಆಹಾರಕ್ಕಾಗಿ ಪರದಾ ಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ದುಡಿಮೆ ಇಲ್ಲದೇ ಆರ್ಥಿಕವಾಗಿ ಜರ್ಜರಿತವಾಗಿರುವ ಬಡ ಕುಟುಂಬ ಗಳಿಗೆ ನೆರವಾಗಲು ಆಹಾರ ಕಿಟ್‌ಗಳನ್ನು ನೀಡಲಾ ಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣರೆಡ್ಡಿ ತೊಟ್ಲಾ, ಚಂದ್ರು ಜೋಗೇರ, ಪ್ರವೀಣ ಹಾಲಪ್ಪನವರ, ಬರಮಪ್ಪ ಬಳೂಟಗಿ, ಮಲ್ಲಪ್ಪ ಗೊರವರ, ಜಗದೀಶ ಇಟ್ಟೇಕಾರ, ಶಂಕ್ರಪ್ಪ ಮುಶಪ್ಪನವರ, ರಾಘು ಹುಗ್ಗೆಣ್ಣವರ, ಚಂದ್ರು ಹಮ್ಮಗಿ, ಗುರುನಾಥ ಬದಿ, ಫಕ್ಕೀರೇಶ ವರವಿ, ಮುತ್ತುರಾಜ ಬಳೂಟಗಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು
ಮಳೆಯ ಅಬ್ಬರ : ಉಡುಪಿ, ದ.ಕನ್ನಡದಲ್ಲಿ ನಾಳೆಯೂ ಶಾಲಾ – ಕಾಲೇಜುಗಳಿಗೆ ರಜೆ
ಅಂಜನಾದ್ರಿಯನ್ನು ಹೈಜಾಕ್ ಮಾಡಲು ಬಿಜೆಪಿ-ಸಂಘಪರಿವಾರದವರಿಗೆ ಬಿಡಲ್ಲ: ಎಚ್.ಆರ್.ಶ್ರೀನಾಥ
MUST WATCH
ಹೊಸ ಸೇರ್ಪಡೆ