ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ


Team Udayavani, Mar 29, 2023, 10:19 PM IST

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಗದಗ: ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿ-65 ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಿದಾನಂದ ಕರ್ತವ್ಯಕ್ಕೆ ಹಾಜರಾಗದೇ, ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಅಧಿಕಾರಿ ವಿರುದ್ಧ ಪ್ರಜಾ ಪ್ರತಿನಿಧ್ಯ ಕಾಯ್ದೆ 1951ರ ಕಲಂ ಅಡಿ ಅವಶ್ಯ ಕ್ರಮ ಜರುಗಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದ್ದಾರೆ.

ಈ ಮೊದಲು ಶಿರಹಟ್ಟಿ-65 ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಅಧಿಕಾರಿಯಾಗಿ ಜಿಲ್ಲಾ ಪಂಚಾಯತ್ ಗ್ರಾಮೀಣಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ರಿಟರ್ನಿಂಗ್ ಅಧಿಕಾರಿಗಳಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯು ಸ್ಥಳೀಯ ವಾಸಿಯಾಗಿದ್ದರಿಂದ ಸರಕಾರವು ಉಲ್ಲೇಖಿತ ಅಧಿಸೂಚನೆಯನ್ವಯ ವರ್ಗಾವಣೆಗೊಳಿಸಿ, ಆ ಹುದ್ದೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಿದಾನಂದ ಅವರನ್ನು ನಿಯೋಜಿಸಲಾಗಿತ್ತು.

ಆದರೆ, ಉಪಕಾರ್ಯದರ್ಶಿ ಚಿದಾನಂದ ಅವರು ಕರ್ತವ್ಯಕ್ಕೆ ಹಾಜರಾಗದೇ, ನೋಟಿಸ್‌ಗೆ ಉತ್ತರಿಸದೇ, ಕರೆಗಳನ್ನೂ ಸ್ವೀಕರಿಸದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ನಿರ್ಲಕ್ಷ್ಯ ಆರೋಪದಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ನೀಡಿದ ದೂರಿನ ಅನ್ವಯ ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಟಾಪ್ ನ್ಯೂಸ್

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

congress flag

Karnataka: ಸಾಮಾಜಿಕ ಸಮಾನತೆ, ಪ್ರಾದೇಶಿಕ ಅಸಮಾನತೆ

SIDDARAMAYYA 1

ಆದಷ್ಟು ಶೀಘ್ರದಲ್ಲಿ ಗ್ಯಾರಂಟಿ ಜಾರಿ ನಿಶ್ಚಿತ : CM ಸಿದ್ದರಾಮಯ್ಯ

headlight

ನಿಯಮ ಬಾಹಿರ ಹೆಡ್‌ಲೈಟ್‌ಗಳ ಬಳಕೆ ವ್ಯಾಪಕ

congress flag

Karnataka: ಹಾಲಿ ಸಚಿವರ ಅವಧಿ ಕೇವಲ ಎರಡೂವರೆ ವರ್ಷವೇ?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌