ಜೀವ ಉಳಿಸಲು ರಕ್ತದಾನ ಮಾಡಿ


Team Udayavani, Oct 31, 2018, 5:10 PM IST

31-october-20.gif

ಗದಗ: ರಕ್ತದಾನ ಅತ್ಯಂತ ಪವಿತ್ರ ಕೆಲಸ. ರಕ್ತದಾನದಿಂದ ಒಂದು ಜೀವ ಉಳಿಯುತ್ತದೆ ಎಂದು ಜಿ.ಪಂ. ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ ಹೇಳಿದರು. ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆ ಹಾಗೂ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ ನಗರದ ಕನಕದಾಸ ಶಿಕ್ಷಣ ಸಮಿತಿಯ ಎಂಎಸ್‌ಡಬ್ಲ್ಯೂ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಸಂಶೋಧನೆಗಳ ಫಲವಾಗಿ ಮಾನವನ ಅಂಗಾಂಗ ಬದಲಾವಣೆ ಸಾಧ್ಯವಾಗಿದ್ದರೂ ಕೃತಕವಾಗಿ ರಕ್ತವನ್ನು ತಯಾರಿಸುವಷ್ಟು ವಿಜ್ಞಾನ ಬೆಳೆದಿಲ್ಲ. ಅಪಘಾತ, ಹೆರಿಗೆ, ಗಂಭೀರ ಕಾಯಿಲೆಗಳ ಶಸ್ತ್ರ ಚಿಕಿತ್ಸೆ ವೇಳೆ ರೋಗಿಗಳಿಗೆ ರಕ್ತ ಅಗತ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಅಗತ್ಯ ಪ್ರಮಾಣದಲ್ಲಿ ರಕ್ತಕ್ಕಾಗಿ ಪರದಾಡುವಂತಾಗುತ್ತದೆ. 18ರಿಂದ 60 ವರ್ಷ ವಯಸ್ಸಿನ ಆರೋಗ್ಯವಂತರು ರಕ್ತದಾನ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಮೇಲಿಂದ ಮೇಲೆ ರಕ್ತದಾನದ ಮೂಲಕ ಸಾವು-ಬದುಕಿನ ಹೋರಾಟ ನಡೆಸುವವರಿಗೆ ಜೀವದಾನ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಜಿ.ಪಂ. ಸಿಇಒ ಮಂಜುನಾಥ ಚವ್ಹಾಣ ಮಾತನಾಡಿ, ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತದಾನದ ಅವಶ್ಯಕತೆ ಉಂಟಾಗುತ್ತದೆ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್‌ ಕಡಿಮೆಯಾಗುತ್ತದೆ. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಬೇಕು ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ ಮಾತನಾಡಿ, ದಾನಗಳಲ್ಲೇ ರಕ್ತದಾನ ಶ್ರೇಷ್ಠವಾದದ್ದು. ರಕ್ತದಾನದ ಬಗ್ಗೆ ಗ್ರಾಮೀಣ ಜನರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಕನಕದಾಸ ಶಿಕ್ಷಣ ಸಮಿತಿ ಅಧ್ಯಕ್ಷ ಬಿ.ಎಫ್‌. ದಂಡಿನ ಮಾತನಾಡಿ, ಅನ್ನದಾನ, ವಿದ್ಯಾದಾನ ಹಾಗೆಯೇ ರಕ್ತದಾನವೂ ಮಹತ್ವದ್ದಾಗಿದೆ. ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ. ರಕ್ತವನ್ನು ಮತ್ತೊಬ್ಬರ ದಾನದಿಂದ ಮಾತ್ರ ಪಡೆಯಬಹುದು. ವಿದ್ಯಾರ್ಥಿಗಳು ನಿಯಮಿತವಾಗಿ ರಕ್ತದಾನ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಏಡ್ಸ್‌ ನಿಯಂತ್ರಣ ಅ ಧಿಕಾರಿ ಡಾ| ಚಂದ್ರಕಲಾ ಜೆ. ಮಾತನಾಡಿ, ಜಿಲ್ಲೆಯಲ್ಲಿ ಮಾಸಿಕ 10,000 ಯುನಿಟ್‌ ರಕ್ತದ ಅವಶ್ಯಕತೆಯಿದ್ದು, ಈಗ ಶೇ. 90ಕ್ಕಿಂತ ಹೆಚ್ಚಿಗೆ ರಕ್ತ ಸಂಗ್ರಹಣೆಯಾಗುತ್ತಿದೆ. ಎಲ್ಲ ಗರ್ಭಿಣಿ ಮಹಿಳೆಯರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಕೆಎಸ್‌ಎಸ್‌ ಸಮಾಜಕಾರ್ಯ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಅಂಬರೀಶ ಕಂಪ್ಲಿ, ಕೆ.ಎಸ್‌.ಎಸ್‌. ಸ್ನಾತಕೋತ್ತರ ಕೇಂದ್ರದ ಮುಖ್ಯ ಸಂಯೋಜಕ ಜೆ.ಸಿ. ಜಂಪಣ್ಣವರ, ಸಿ.ಎಸ್‌. ಬೊಮ್ಮನಹಳ್ಳಿ, ವಸಂತ ಅಗಸಿಮನಿ, ಶೇಖರ ಅಡಗಿ, ಪಿ.ಎಸ್‌. ಗಾಣಿಗೇರ, ಎಸ್‌.ಎಸ್‌. ಬೆನಕನಾಳ, ಜ್ಯೋತಿ ಅಂದಪ್ಪನವರ, ಗಿರೀಶ ಪಂತರ, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಆರೋಗ್ಯ ಇಲಾಖೆಯ ಗೀತಾ ಕಾಂಬಳೆ ಉಪಸ್ಥಿತರಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆ ಪ್ರಭಾರಿ ಅಧಿಕಾರಿ ವೈ.ಕೆ. ಭಜಂತ್ರಿ ಸ್ವಾಗತಿಸಿದರು. ಪ್ರಕಾಶ ಗಾಣಿಗೇರ ನಿರೂಪಿಸಿದರು. ಆರೋಗ್ಯ ಇಲಾಖೆಯ ಬಸವರಾಜ ಲಾಳಗಟ್ಟಿ ವಂದಿಸಿದರು.

Ad

ಟಾಪ್ ನ್ಯೂಸ್

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

fadnavis

Maharashtra; ಧಾರ್ಮಿಕ ಸ್ಥಳಗಳಿಂದ 3,367 ಧ್ವನಿವರ್ಧಕಗಳ ತೆರವು : ಸಿಎಂ ಫಡ್ನವಿಸ್

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ಎಲ್‌ಐಸಿಯ ಮತ್ತಷ್ಟು ಷೇರುಗಳ ಮಾರಾಟಕ್ಕೆ ಮುಂದಾದ ಕೇಂದ್ರ?

ತಿರುಪತಿ ದೇಗುಲದ 1000 ಹಿಂದೂಯೇತರ ಸಿಬಂದಿ ಕೆಲಸ: ಕೇಂದ್ರ ಸಚಿವ

ತಿರುಪತಿ ದೇಗುಲದಲ್ಲಿ 1000 ಹಿಂದೂಯೇತರ ಸಿಬಂದಿಗಳಿಂದ ಕೆಲಸ: ಬಂಡಿ ಸಂಜಯ್ ಆರೋಪ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ

ಬಿಹಾರ ಚುನಾವಣೆಯ ಹೈಜಾಕ್‌ಗೆ ಬಿಜೆಪಿ ಪ್ರಯತ್ನ: ರಾಹುಲ್‌ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Gadag: ಕಪ್ಪತ್ತಗುಡ್ಡದಲ್ಲಿ ಅಡವಿ ಬೆಕ್ಕು, ಹಾವು,ಗೂಬೆಗಳ ಸಾವು; ಹೆಚ್ಚಿದ ಆತಂಕ

16

Gadag: ಬೆಣ್ಣೆಹಳ್ಳ-ಮಲಪ್ರಭಾ ಉಕ್ಕಿ ಹರಿದರೆ ಕಂಟಕ

Gadag: ಜು.12ರಂದು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಯುವಧ್ವನಿ ಕಾರ್ಯಕ್ರಮ

Gadag: Robbery in petrol station

Gadag: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ದರೋಡೆ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

Gadag: ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಜೋಡಿ… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

1-aa-des

Mangaluru: ಬ್ರಾಸ್ಲೈಟ್ ಮರಳಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

1-desss

ಹೊಸನಗರ; ಮಳೆ ರಜೆ ಕುರಿತು ನಕಲಿ‌ ಸರ್ಕಾರಿ ಆದೇಶ: ಪೊಲೀಸರಿಗೆ ದೂರು

POLICE-5

Brahmavar: ಮದ್ಯ ಅಕ್ರಮ ಮಾರಾಟ; ಪ್ರಕರಣ ದಾಖಲು

1

Hiriydaka: ಆನ್‌ಲೈನ್‌ ವಂಚನೆ; 3.60 ಲಕ್ಷ ರೂ. ಕಳೆದುಕೊಂಡ ಯುವತಿ

SOMANNA 2

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ*ತ್ತು ಹೋಗಿದೆ: ಸಚಿವ ಸೋಮಣ್ಣ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.