ಸೆ.19ರಂದು ಮೆಗಾ ಇ-ಲೋಕ್‌ ಅದಾಲಾತ್‌


Team Udayavani, Aug 31, 2020, 4:12 PM IST

ಸೆ.19ರಂದು ಮೆಗಾ ಇ-ಲೋಕ್‌ ಅದಾಲಾತ್‌

ಗದಗ: ಕೋವಿಡ್‌-19 ಭೀತಿ ಹಿನ್ನೆಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್‌ ಪ್ರಕರಣಗಳನ್ನು ಸೆ. 19ರಂದು ನಡೆಯುವ ಮೆಗಾ ಇ-ಲೋಕ ಅದಾಲತ್‌ ಮೂಲಕ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು.

ಜಿಲ್ಲಾ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ 6 ತಿಂಗಳಿಂದ ನ್ಯಾಯಾಲಯದಲ್ಲಿ ಲೋಕ ಅದಾಲತ್‌ ಮೂಲಕ ಯಾವುದೇ ರೀತಿಯ ಪ್ರಕರಣ ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸೆ. 19ರಂದು ದೇಶದಲ್ಲೇ ಪ್ರಥಮ ಬಾರಿಗೆ ಇ-ಲೋಕ ಅದಾಲತ್‌ ಪ್ರಾರಂಭ ಮಾಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸುವ ಕೊಡುವ ಉದ್ದೇಶ, ಧ್ಯೇಯ ವಾಖ್ಯವಾಗಿದೆ. ಇ-ಅದಾಲತ್‌ ಪ್ರಾರಂಭಿಸುವ ಉದ್ದೇಶದಿಂದ ವಿಮಾ ಕಂಪನಿಗಳ ಮೇಲಾಧಿಕಾರಿಗಳ ಜೊತೆ ಸಂಪರ್ಕ ಮಾಡಿ, ಪರಿಹಾರ ನೀಡಲು ತೊಂದರೆಗಳ ಬಗ್ಗೆ ಚರ್ಚಿಸಿ ಪರಿಹಾರ ಬರದೇ ತೊಂದರೆಗೊಳದಾದವರಿಗೆ ತುರ್ತಾಗಿ ಪರಿಹಾರ ಸಿಗುವಂತೆ ಮಾಡಲಾಗುತ್ತಿದೆ. 4 ತಿಂಗಳಿಂದ ವಕೀಲರುಗಳಿಗೆ ಆದ ತೊಂದರೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ನ್ಯಾಯಮೂರ್ತಿ ಅರವಿಂದಕುಮಾರ ತಿಳಿಸಿದರು.

ಕರ್ನಾಟಕ ಹೈಕೋರ್ಟ್‌ ಲೀಗಲ್‌ ಸರ್ವಿಸಸ್‌ ಕಮಿಟಿ ಅಧ್ಯಕ್ಷ ಅಲೋಕ ಆರಾಧ್ಯ ಮಾತನಾಡಿ, ಸಣ್ಣಪುಟ್ಟ ಪ್ರಕರಣಗಳಿದ್ದರೆ ಇನ್ಮುಂದೆ ಕೋರ್ಟ್‌ಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್‌ ಆ್ಯಪ್‌ ಮೂಲಕ ದಾಖಲಾತಿಗಳನ್ನು ಅಪ್‌ ಲೋಡ್‌ ಮಾಡಿದರೆ ಅವರಿಗೆ ನ್ಯಾಯವನ್ನು ದೊರೆಕಿಸುವ ಕೆಲಸ ಮಾಡಲಾಗುತ್ತದೆ. ಜಿಲ್ಲಾ, ತಾಲೂಕವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಕಾರ್ಯಕ್ರಮ ಕುರಿತು ಧಾರವಾಡ ಮತ್ತು ಕಲಬುರಗಿಯಲ್ಲಿ ಸಭೆ ಮಾಡಿ ಸಾಧಕ, ಬಾಧಕಗಳ ಬಗ್ಗೆ ವಿಮರ್ಶೆ ಮಾಡಲಾಗಿದೆ. ವಕೀಲರು ಹಾಗೂ ಬಾರ್‌ ಕೌನ್ಸಲಿಂಗ್‌ನ ಅಧ್ಯಕ್ಷರ ಜೊತೆ ಸಮಾಲೋಚನೆ ಮಾಡಲಾಗಿದೆ.

ವಿಡಿಯೋ ಕಾನ್ಪರೆನ್ಸ್‌ ನಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ರಾಜಶೇಖರ ಪಾಟೀಲ ಮಾತನಾಡಿ, ಇ-ಲೋಕ್‌ ಅದಾಲತ್‌ಗೆ ಸೆ. 18ರ ವರೆಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಸೆ. 19ರಂದು ಏಕಕಾಲಕ್ಕೆ ಇ-ಲೋಕ ಅದಾಲತ್‌ ನಡೆಸಲಾಗುತ್ತಿದ್ದು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನಿರ್ದೇಶನದ ಮೇರೆಗೆ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್‌.ಜಿ. ಸಲಗರೆ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಈಗಾಗಲೇ ಇತ್ಯರ್ಥವಾಗದ ಒಟ್ಟು 11656 ಪ್ರಕರಣಗಳೆವೆ. ಚೆಕ್‌ ಬೌನ್ಸ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ, ಬಾಡಿಗೆ ಸಂಬಂಧಿ ತ 718 ಪ್ರಕರಣಗಳನ್ನು ರಾಜೀಗಾಗಿ ನಿಗದಿಪಡಿಸಲಾಗಿದ್ದು, 508 ಪ್ರಕರಣಗಳಿಗೆ ಇ-ಅದಾಲತ್‌ಗೆ ಹಾಜರಾಗಲು ತಿಳಿಸಲಾಗಿದೆ. -ನ್ಯಾ| ರಾಜಶೇಖರ ಪಾಟೀಲ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು

 

ಟಾಪ್ ನ್ಯೂಸ್

22congress

ಬಿಜೆಪಿ ಶಾಸಕರೆಲ್ಲ ಶೇ.40 ರಷ್ಟು ಮಾಮೂಲಿ ಫಿಕ್ಸ್ ಮಾಡಿದ್ದಾರೆ: ಮಾಜಿ ಸಚಿವ ಅನ್ಸಾರಿ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

“ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ..” ಕಿವೀಸ್ ಗ್ರೇಟ್ ಎಸ್ಕೇಪ್ ಗೆ ನೆಟ್ಟಿಗರ ಪ್ರತಿಕ್ರಿಯೆ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಭಾರತದ ಜಯಕ್ಕೆ ಅಡ್ಡಿಯಾದ ರವೀಂದ್ರ ಮತ್ತು ಮಂದಬೆಳಕು: ಕಾನ್ಪುರ ಟೆಸ್ಟ್ ಡ್ರಾನಲ್ಲಿ ಅಂತ್ಯ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 153 ಅಂಕ ಏರಿಕೆ; 17 ಸಾವಿರ ಗಡಿ ದಾಟಿದ ನಿಫ್ಟಿ

1-nirani

ಮುಖ್ಯಮಂತ್ರಿಯಾಗುತ್ತಾರೆ: ಈಶ್ವರಪ್ಪ ಹೇಳಿಕೆಗೆ ನಾನು ಋಣಿ ಎಂದ ನಿರಾಣಿ

yaddi

‘ತಮಾಷೆಗಾಗಿ ಹೇಳಿದ್ದು’ ಎಂದು ಈಶ್ವರಪ್ಪ ಹೇಳಿದ್ದಾರಲ್ಲ : ಯಡಿಯೂರಪ್ಪ ಸ್ಪಷ್ಟನೆ

1-sdsd

ಸಂಕಷ್ಟದ ಸಂದರ್ಭ ಬೊಮ್ಮಾಯಿ ಬದಲಾವಣೆ ಅಸಾಧ್ಯ: ಕಾರಜೋಳಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

ರೋಣ: ವಿದ್ಯುತ್ ಅವಘಡದಿಂದ ಕಬ್ಬು ಬೆಳೆಗೆ ಬೆಂಕಿ

19school

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ನೀಡಿ

18old

ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ

17daliths

ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗೆ ಹೋರಾಟ

ಹಾಲಕೆರೆ ಶ್ರೀ ಅಗಲಿಕೆಯಿಂದ ಭಕರ ಮನಸ್ಸು ಭಾರ

ಹಾಲಕೆರೆ ಶ್ರೀ ಅಗಲಿಕೆಯಿಂದ ಭಕರ ಮನಸ್ಸು ಭಾರ

MUST WATCH

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

udayavani youtube

Suratkal : ಮತ್ತೆ ATM ಕೇಂದ್ರ ಪುಡಿ ಪುಡಿ! 2ತಿಂಗಳ ಅಂತರದಲ್ಲಿ ನಡೆದ 2ನೇ ಘಟನೆ

udayavani youtube

ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

udayavani youtube

ಭೀಕರ ರಸ್ತೆ ಅಪಘಾತ : ಅಂತ್ಯಕ್ರಿಯೆಗೆ ತೆರಳುತ್ತಿದ್ದ 18 ಮಂದಿ ದುರ್ಮರಣ

ಹೊಸ ಸೇರ್ಪಡೆ

ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಬಸವಣ್ಣವರು

ಪ್ರಜಾಪ್ರಭುತ್ವ ಪರಿಕಲ್ಪನೆ ನೀಡಿದ ಬಸವಣ್ಣವರು

ಆಸ್ಪತ್ರೆ ಪ್ಲಾನ್

56 ಕೋಟಿ ರೂ.ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ

22congress

ಬಿಜೆಪಿ ಶಾಸಕರೆಲ್ಲ ಶೇ.40 ರಷ್ಟು ಮಾಮೂಲಿ ಫಿಕ್ಸ್ ಮಾಡಿದ್ದಾರೆ: ಮಾಜಿ ಸಚಿವ ಅನ್ಸಾರಿ

ಹಳೇಹುಬ್ಬಳ್ಳಿ ಸಂಪರ್ಕ ಮುಖ್ಯರಸ್ತೆ ತ್ರಿಶಂಕು ಸ್ಥಿತಿ

ಹಳೇಹುಬ್ಬಳ್ಳಿ ಸಂಪರ್ಕ ಮುಖ್ಯರಸ್ತೆ ತ್ರಿಶಂಕು ಸ್ಥಿತಿ

ಅಭಿವೃದ್ಧಿ ಕಾಮಗಾರಿಗಳೊಂದಿಗೆ ಜನರ ವಿಶ್ವಾಸ ಗಳಿಕೆಗೆ ಸಲಹೆ

ಅಭಿವೃದ್ಧಿ ಕಾಮಗಾರಿಗಳೊಂದಿಗೆ ಜನರ ವಿಶ್ವಾಸ ಗಳಿಕೆಗೆ ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.