ಗದಗ: ಫೆ. 11ರಿಂದ ಐತಿಹಾಸಿಕ ಲಕ್ಕುಂಡಿ ಉತ್ಸವ ಆರಂಭ

ಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Team Udayavani, Jan 10, 2023, 3:39 PM IST

Udayavani Kannada Newspaper

ಗದಗ: ಮುಂಬರುವ ಫೆ. 11 ಹಾಗೂ 12ರಂದು ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು. ತಾಲೂಕಿನ ಲಕ್ಕುಂಡಿಯ ಶ್ರೀ ಅನ್ನದಾನೇಶ್ವರ ಸಮುದಾಯ ಭವನದಲ್ಲಿ ಸೋಮವಾರ ಜರುಗಿದ ಲಕ್ಕುಂಡಿ ಉತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಕೊರೊನಾ ಕಾರಣಗಳಿಂದಾಗಿ ಲಕ್ಕುಂಡಿ ಉತ್ಸವ ಜರುಗಿಸಲು ಸಾಧ್ಯವಾಗಿಲ್ಲ. ಈ ಭಾರಿ ಅರ್ಥಪೂರ್ಣವಾಗಿ ಎರಡು ದಿನಗಳ ಲಕ್ಕುಂಡಿ ಉತ್ಸವ ಜರುಗಿಸಲು ತೀರ್ಮಾನಿಸಲಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದುಕೊಳ್ಳಲು ಈ ಸಭೆ ಆಯೋಜಿಸಲಾಗಿದೆ ಎಂದರು.

ಫೆ. 11 ಹಾಗೂ 12ರಂದು ಜರುಗಿಸಲಾಗುವ ಲಕ್ಕುಂಡಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ವ ಕ್ರಮ ಕೈಗೊಳ್ಳಲಾಗುವುದು. ಉತ್ಸವದ ದಿನಗಳಂದು ಆಯೋಜಿಸಲಾಗುವ ಕಾರ್ಯಕ್ರಮಗಳ ಕುರಿತು ಗ್ರಾಮದ ಸಾರ್ವಜನಿಕರ ಅಭಿಪ್ರಾಯ ಪಡೆದ ಸಚಿವರು ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ದಾನ ಚಿಂತಾಮಣಿ ಅತ್ತಿಮಬ್ಬೆ ಮಹಾದ್ವಾರ ನಿರ್ಮಾಣಕ್ಕೆ ಅಗತ್ಯದ ಕ್ರಮ ವಹಿಸಲಾಗುವುದು. ಲಕ್ಕುಂಡಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಹದಿನೈದು ದಿನಗಳೊಳಗಾಗಿ ಸರಿಪಡಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ನಿರ್ದೇಶಿಸಿದರು.ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲು
ಸೂಚಿಸಿದರು.

ಲಕ್ಕುಂಡಿ ಉತ್ಸವದ ಯಶಸ್ವಿಗೆ ಗ್ರಾಮಸ್ಥರ ಸಹಕಾರವು ಅಗತ್ಯವಿದ್ದು, ಲಕ್ಕುಂಡಿ ಉತ್ಸವವನ್ನು ಊರ ಹಬ್ಬವನ್ನಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಬೇಕು. ಉತ್ಸವದ ಯಶಸ್ವಿಗಾಗಿ ಅಗತ್ಯದ ಸಮಿತಿಗಳನ್ನು ರಚಿಸಿ ಫೆ. 11 ಹಾಗೂ 12ರಂದು ಜರುಗುವ ದಾನಚಿಂತಾಮಣಿ ಅತ್ತಿಮಬ್ಬೆಯ ಕೀರ್ತಿಯನ್ನು ರಾಷ್ಟ್ರಾದ್ಯಂತ ಪಸರಿಸಲು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌. ಮಾತನಾಡಿ, ಲಕ್ಕುಂಡಿ ಉತ್ಸವದ ಪೂರ್ವಭಾವಿ ಸಭೆ ಜರುಗಿಸಲಾಗುತ್ತಿದ್ದು, ಉತ್ಸವದ ರೂಪುರೇಷೆಗಳ ಕುರಿತು ಗ್ರಾಮಸ್ಥರ ಅಭಿಪ್ರಾಯ ಪಡೆದು ಸಚಿವರ ಆಶಯಂದತೆ ಲಕ್ಕುಂಡಿ ಉತ್ಸವವನ್ನು ಐತಿಹಾಸಿಕವನ್ನಾಗಿಸೊಣ ಎಂದು ಗ್ರಾಮಸ್ಥರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ತಿಳಿಸಿದರು.

ನಂತರ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಭೆಯಲ್ಲಿ ಲಕ್ಕುಂಡಿ ಗ್ರಾಪಂ ಅಧ್ಯಕ್ಷೆ ಲಲಿತಾ ಗದಗಿನ, ಉಪಾಧ್ಯಕ್ಷ ಸಿದ್ದು ಮುಳಗುಂದ, ಗ್ರಾಮ ಪಂಚಾಯತ್‌ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಪಂ ಸಿಇಒ ಡಾ| ಸುಶೀಲಾ ಬಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌. ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ., ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಸೇರಿದಂತೆ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು, ಲಕ್ಕುಂಡಿ ಗ್ರಾಮದ ಗಣ್ಯರು, ಸಾರ್ವಜನಿಕರು ಹಾಜರಿದ್ದರು.

ಟಾಪ್ ನ್ಯೂಸ್

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

accident 2

ಉದ್ಯಾವರ : ಅಪರಿಚಿತ ವಾಹನ ಢಿಕ್ಕಿ : ವ್ಯಕ್ತಿ ಗಂಭೀರ

accuident

ಹಾಲ್ಕಲ್‌ ಬಳಿ ಬಸ್‌ ಮಗುಚಿ ಬಿದ್ದು, ಓರ್ವ ಪ್ರಯಾಣಿಕ ಸಾವು, ಐದು ಮಂದಿಗೆ ಗಂಭೀರ ಗಾಯ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಲಕ್ಷ್ಮೇಶ್ವರ: ಗಾಡಾ ಓಡಿಸೋ ಹಬ್ಬಕ್ಕಿದೆ ಕೃಷಿ ಸಂಸ್ಕೃತಿ ಸ್ಪರ್ಶ

ಲಕ್ಷ್ಮೇಶ್ವರ: ಗಾಡಾ ಓಡಿಸೋ ಹಬ್ಬಕ್ಕಿದೆ ಕೃಷಿ ಸಂಸ್ಕೃತಿ ಸ್ಪರ್ಶ

ಗದಗ: ದಾಖಲೆ ಇಲ್ಲದ 2.5 ಲಕ್ಷ ರೂ. ನಗದು ವಶ

ಗದಗ: ದಾಖಲೆ ಇಲ್ಲದ 2.5 ಲಕ್ಷ ರೂ. ನಗದು ವಶ

ಇಳಕಲ್ ಚೆಕ್ ಪೋಸ್ಟ್; 6.40 ಲಕ್ಷ ನಗದು ಹಾಗೂ 5 ಲಕ್ಷ ರೂ. ಮೌಲ್ಯದ ಬಟ್ಟೆಗಳು ಸೀಜ್

ಇಳಕಲ್ ಚೆಕ್ ಪೋಸ್ಟ್; 6.40 ಲಕ್ಷ ನಗದು ಹಾಗೂ 5 ಲಕ್ಷ ರೂ. ಮೌಲ್ಯದ ಬಟ್ಟೆಗಳು ಸೀಜ್

ಗದಗ: ಮಾದರಿಯಾಗಲಿ ಸೈನಿಕ ಸಮುದಾಯ ಭವನ

ಗದಗ: ಮಾದರಿಯಾಗಲಿ ಸೈನಿಕ ಸಮುದಾಯ ಭವನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

arrest

ತಂಬುತಡ್ಕದಲ್ಲಿ ಜೂಜಾಟ: ಆರು ಮಂದಿಯ ಬಂಧನ

arrest 3

ಚಿನ್ನಾಭರಣ ಕಳ್ಳತನ: ಆರೋಪಿ ಬಂಧನ

DOCTOR

ಅಸ್ವಸ್ಥ ಮಹಿಳೆಯ ರಕ್ಷಣೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ವಿವಿಧ ರಾಜಕೀಯ ಪಕ್ಷಗಳ ಜತೆ ಮುಖ್ಯ ಚುನಾವಣಾಧಿಕಾರಿ ಸಭೆ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಹಾವೇರಿ: ಕಾಂಗ್ರೆಸ್‌ಗೆ ಬಂಡಾಯದ ಬಿಸಿ