2047ರೊಳಗೆ ಭಾರತ ನೈಜ ಸ್ವರಾಜ್ಯವಾಗಲಿ; ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Team Udayavani, Mar 2, 2023, 6:09 PM IST

2047ರೊಳಗೆ ಭಾರತ ನೈಜ ಸ್ವರಾಜ್ಯವಾಗಲಿ; ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ

ಗದಗ: ಸ್ವರಾಜ್‌ ಎಂಬುದು ವೇದಗಳಿಂದ ಬಂದ ಪದವಾಗಿದೆ. ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಪರಿಮಿತಿ ಹೊಂದಿಲ್ಲ. ಅದರ ವ್ಯಾಪ್ತಿ ಅಪರಿಮಿತ. ಸ್ವನಿಯಂತ್ರಣ, ಸ್ವ ಆಡಳಿತ, ಸ್ವಾವಲಂಬಿ ಬದುಕು, ಭಾರತದ ಸಂಸ್ಕೃತಿ, ಐಕ್ಯತೆ, ವಿವಿಧತೆ ಹೊಂದಿದೆ ಎಂದು ಹಿರಿಯ ಐಎಎಸ್‌ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ನಗರ ಹೊರವಲಯದ ನಾಗಾವಿ ಬಳಿಯ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿವಿಯಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನದ ಭಾಗವಾಗಿ ಆಯೋಜಿಸಿರುವ ಸ್ವರಾಜ್‌ ಪರಿಕಲ್ಪನೆಯ ವಿವಿಧ ಆಯಾಮಗಳನ್ನು ಬಿಂಬಿಸುವ ಪ್ರದರ್ಶನೀಯಗಳಿಗೆ ಚಾಲನೆ ನೀಡಿ, ಬಳಿಕ ಕೌಶಲ್ಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವರಾಜ್‌ದ ಪರಿಕಲ್ಪನೆ ಬಗ್ಗೆ ಅರ್ಥ ಮಾಡಿಕೊಳ್ಳಲು ಇಲ್ಲಿ ನಾವು ಸೇರಿದ್ದೇವೆ. 1928ರಲ್ಲಿ ಈ ದೇಶ ಸ್ವರಾಜ್ಯ ಆಗಬೇಕು ಎಂಬುದನ್ನು ಅಂದಿನ ಸ್ವಾತಂತ್ರ್ಯ ಹೋರಾಟಗಾರರು ನಿರ್ಣಯಿಸಿದ್ದರು. ಸ್ವಾತಂತ್ರ್ಯ ನಂತರದಿಂದ ಸ್ವರಾಜ್‌ ಸಾಧಿ ಸಲು ಪ್ರಯತ್ನಿಸುತ್ತಿದೆ. 2047ರ ಒಳಗಾಗಿ ಭಾರತ ನಿಜವಾಗಲೂ ಸ್ವರಾಜ್‌ ಆಗಲಿ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕೆಂದು ಹೇಳಿದರು.

ಮಹಾತ್ಮ ಗಾಂಧೀಜಿಯ ಸ್ವರಾಜ್ಯ ಪರಿಕಲ್ಪನೆ ಕುರಿತು ತಿಳಿಸಿದ ಅವರು, ನಮ್ಮನ್ನು ನಾವು ಆಡಳಿತಕ್ಕೆ ಒಳಪಡಿಸಿಕೊಳ್ಳುವುದಷ್ಟೇ ಸ್ವರಾಜ್‌ ಅಲ್ಲ. ಜನರನ್ನು ಜಾಗೃತಗೊಳಿಸುವುದು, ಸಹಕಾರ, ಉತ್ತಮ ನಡತೆಗಳಿಂದ ಸ್ವರಾಜ್ಯ ರಾಷ್ಟ್ರ ಸೃಷ್ಟಿಸಬಹುದು.

ವ್ಯವಸ್ಥೆಯಲ್ಲಿ ವ್ಯಕ್ತಿ ಸ್ವಾತಂತ್ರ್ಯ ಬಹುಮುಖ್ಯ. ಆಡಳಿತ ವ್ಯವಸ್ಥೆಯಲ್ಲಿ ವ್ಯಕ್ತಿಗತ ಶಿಕ್ಷಣ, ಸ್ವಾವಲಂಬಿ, ಸ್ವತಂತ್ರ ಬದುಕು, ಸಾಮಾಜಿಕ ವ್ಯವಸ್ಥೆ, ವಿಭಿನ್ನ ಸಂಸ್ಕೃತಿಗಳ ನಡುವೆ ಸಹಕಾರ ಅಗತ್ಯವಿದೆ. ಇದನ್ನೇ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ತಿಳಿಸಿದ್ದರು. ಇವುಗಳಿಂದ ಗ್ರಾಮ ಸ್ವರಾಜ್‌ ಸಾಧ್ಯ ಎಂದರು. ಪದಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಮಾನವರನ್ನಾಗಿಸುತ್ತದೆ. ಆದರೆ, ಮಾನವೀಯ ಮೌಲ್ಯಗಳನ್ನು ಬೆಳೆಸುವುದರಲ್ಲಿ ವಿಫಲವಾಗಿದೆ. ಪ್ರತಿಯೊಬ್ಬರೂ ನಮ್ಮ ಬದುಕಿನಲ್ಲಿ ಎಷ್ಟೇ ಎತ್ತರಕ್ಕೇರಿದರೂ ನಮ್ಮತನವನ್ನು ಮೊದಲು ರಕ್ಷಣೆ ಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ಪರಿಸರ, ನಮ್ಮ ಮನೆ ಗೌರವ, ಸಂಸ್ಕಾರಗಳು ಹಿಡಿತದಲ್ಲಿ ಇರಬೇಕು. ಅದು ಸ್ವರಾಜ್‌ದ ಮೂಲ ಮಂತ್ರ ಎಂದರು.

ಕೇಂದ್ರದ ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಚಿ.ಸು. ಕೃಷ್ಣಶೆಟ್ಟಿ ಮಾತನಾಡಿ, ಜನತೆಗೆ ಯಾವುದೇ ವಿಷಯದ ಅರ್ಥ ಗೊತ್ತಿದ್ದರೂ ಅದನ್ನು ಪಾಲಿಸುತ್ತಿಲ್ಲ. ಇದು ಸ್ವರಾಜ್‌ ವಿಷಯದಲ್ಲೂ ಆಗಿದೆ. ಕಲೆ ಮತ್ತು ಸಂಸ್ಕೃತಿ ನಮ್ಮ ಬದುಕಿನ ಭಾಗ ಎಂದು ಬಣ್ಣಿಸಿದರು.

ಗ್ರಾಮೀಣ ವಿಶ್ವವಿದ್ಯಾಲಯದ ಕುಲಪತಿ ಡಾ|ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಈ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿದಂತೆ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿ ಧಿಗಳು ಭಾಗವಹಿಸಿದ್ದಾರೆ. ಈ ಸಮ್ಮೇಳನ ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತಪಡಿಸುವುದಷ್ಟೇ ಅಲ್ಲ, ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ ಎಂದರು.

ಪ್ರಜ್ಞಾ ಪ್ರವಾಹದ ಅಖೀಲ ಭಾರತೀಯ ಸಹ ಸಂಯೋಜಕ ರಘುನಂದನ್‌, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಬಸವರಾಜ ಲಕ್ಕಣ್ಣವರ ವೇದಿಕೆಯಲ್ಲಿದ್ದರು. ಗಿರೀಶ ದೀಕ್ಷಿತ ಸ್ವಾಗತಿಸಿದರು. ಚಂದನಾ ವಿಶ್ವನಾಥ ನಿರೂಪಿಸಿದರು. ಶಶಿಕಾಂತ ಡಿ.ಎಚ್‌. ವಂದಿಸಿದರು.

ಗದ್ಗದಿತರಾದ ಮಂಜಮ್ಮ ಜೋಗತಿ
ಕೊಲೆಗಾರ ಮಗನನ್ನು, ದುರ್ನಡತೆ ಮಗಳನ್ನು ಸ್ವೀಕರಿಸುವ ಪೋಷಕರು ತೃತೀಯ ಲಿಂಗಿಗಳನ್ನು ಮಕ್ಕಳೆಂದು ಸ್ವೀಕರಿಸುವುದಿಲ್ಲ. ಗರ್ಭದಲ್ಲಿ ನನ್ನಂತಹ ಮಕ್ಕಳು (ತೃತೀಯ ಲಿಂಗಿಗಳು) ಹುಟ್ಟಿದರೆ ಹೊರದೂಡದೇ ಅವರಿಗೂ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸ್ವಾವಲಂಬಿಗಳಾಗಿ ಬದುಕು ನಡೆಸಬಹುದು ಎಂದು ಜೋಗತಿ ಮಂಜಮ್ಮ ವೇದಿಕೆಯಲ್ಲಿ ಗದ್ಗದಿತರಾಗಿ ಮನವಿ ಮಾಡಿದರು.

ಆಹಾರದಲ್ಲೂ ದೇಶೀ ಪದ್ಧತಿ
ಸ್ವರಾಜ್‌ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ದೇಶದ ವಿವಿಧ ರಾಜ್ಯಗಳು, ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳ ಪ್ರತಿನಿಧಿಗಳಿಗೆ ರೊಟ್ಟಿ, ಚಪಾತಿ ಜತೆ ಕಿಚಡಿ, ಮಾದಲಿ ಸೇರಿದಂತೆ ದೇಶೀ ಊಟ ಸಿದ್ಧಪಡಿಸಿ ಉಣಬಡಿಸಲಾಗುತ್ತಿದೆ.

ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಶ್ರೀಲಂಕಾ, ಚೀನಾ, ಇಂಡೋನೇಶಿಯಾ ಸೇರಿ 14 ದೇಶಗಳು ಹಾಗೂ ಭಾರತದ ಹಲವು ರಾಜ್ಯಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಇದು ಕೇವಲ ಸಂಶೋಧನೆ, ಪ್ರಬಂಧ ಮಂಡನೆ, ಪತ್ರಿಕೆಗಳ ಪ್ರಸ್ತುತ ಪಡಿಸುವುದಷ್ಟೇ ಅಲ್ಲ. ಸಮ್ಮೇಳನ ಪ್ರಾಯೋಗಿಕ ಪರಿಕಲ್ಪನೆಯಲ್ಲಿ ಇರಲಿದೆ.
ಪ್ರೊ| ವಿಷ್ಣುಕಾಂತ ಚಟಪಲ್ಲಿ, ಕುಲಪತಿ, ಗ್ರಾವಿವಿ

ಶಿಕ್ಷಣ ಕಲಿಸಿದರೆ ಮಾತ್ರ ವಿವಿಗಳ ಉದ್ದೇಶ ಸಾಕಾರಗೊಳ್ಳುವುದಿಲ್ಲ. ನಯ, ವಿನಯತೆ, ಹಿರಿಯರಿಗೆ ಗೌರವ, ನಮ್ಮ ಸಂಸ್ಕೃತಿ, ನಮ್ಮ ಉಡುಪು, ಆಹಾರ ಪದ್ಧತಿ, ಕೃಷಿ ಬಗ್ಗೆ ವಿವಿಗಳಲ್ಲಿ ಧಾರೆ ಎರೆಯಬೇಕು.
ಪದ್ಮಶ್ರೀ ಮಂಜಮ್ಮ ಜೋಗತಿ

 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

Honeybee Attack: ಹೆಜ್ಜೇನು ದಾಳಿ: ಓರ್ವ ಮೃತ್ಯು, ಏಳು ಮಂದಿಗೆ ಗಾಯ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಮತ್ತೆ ಎಲ್ಲೆಡೆ ಕಾಂಗ್ರೆಸ್ ಬಾವುಟ ರಾರಾಜಿಸುವುದು ಸೂರ್ಯ ಚಂದ್ರರಷ್ಟೇ ಸತ್ಯ: ಎಚ್.ಕೆ. ಪಾಟೀಲ

ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಬಸವರಾಜ ಬೊಮ್ಮಾಯಿ ಹಿಂದೆ ದೊಡ್ಡದೊಂದು ಲಗೇಜ್ ಇದೆ: ಎಚ್.ಕೆ.ಪಾಟೀಲ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

Gadag; ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಂದ ಟೆಂಪಲ್ ರನ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.