
ನರಗುಂದ: ಆಯುರ್ವೇದದಲ್ಲಿದೆ ಪರಿಣಾಮಕಾರಿ ಚಿಕಿತ್ಸೆ
ಪಂಚಕರ್ಮ ಚಿಕಿತ್ಸೆ ಶೀಘ್ರವಾಗಿ ಗುಣಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ
Team Udayavani, Jun 1, 2023, 4:41 PM IST

ನರಗುಂದ: ಆಯುರ್ವೇದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿದೆ.ಪುರಾತನ ಪರಂಪರೆ ಹೊಂದಿರುವ ಆಯುರ್ವೇದ ಋತುಗಳಿಗೆ ಅನುಗುಣವಾಗಿ ನೀಡುವ ಚಿಕಿತ್ಸೆಯಾದಾಗಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಹೇಳಿದರು.
ಬುಧವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಬ್ರಹ್ಮಾನಂದ ಮಹಾಸ್ವಾಮಿಗಳ 108ನೇ ಜಯಂತ್ಯುತ್ಸವ ಹಾಗೂ ನೂತನ ಗಡ್ಡಿ ತೇರಿನ ಲೋಕಾರ್ಪಣೆ ನಿಮಿತ್ತ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ
ಭೈರನಹಟ್ಟಿ ಗ್ರಾಮ ಪಂಚಾಯಿತಿ, ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಇದಕ್ಕೆ ಪೂರಕವೆಂಬಂತೆ ಆಯುಷ್
ಇಲಾಖೆ ಸಂಚಾರಿ ಚಿಕಿತ್ಸಾ ವಾಹನದ ಮೂಲಕ ಜನರ ಆರೋಗ್ಯ ಕಾಪಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಹೈಬ್ರಿಡ್ ಯುಗದಲ್ಲಿರುವ ಜನರಿಗೆ ಮೊಣಕಾಲು ನೋವು, ಸಂದು ನೋವು ಜಾಸ್ತಿಯಾಗುತ್ತಿದೆ. ಅದಕ್ಕೆ ಆಯುರ್ವೇದದ ಪಂಚಕರ್ಮ ಚಿಕಿತ್ಸೆ ಶೀಘ್ರವಾಗಿ ಗುಣಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾ ಆಯುಷ್ ಇಲಾಖೆ ಹಿರಿಯ ವೈದ್ಯಾ ಧಿಕಾರಿ ಡಾ|ಅಶೋಕ ಮತ್ತಿಗಟ್ಟಿ ಮಾತನಾಡಿ, ಆಯುಷ್ ಇಲಾಖೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಸರ್ವರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ಆಯುರ್ವೇದ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಜ್ಞಾನದೇವ ಮನೇನಕೊಪ್ಪ, ಪ್ರಕಾಶ ನರಸಾಪೂರ, ನಾಗಪ್ಪ ಕಟ್ಟಿಮನಿ, ಡಾ.ಪ್ರವೀಣ
ಸರ್ವೋದಯ, ಡಾ.ಸವಿತಾ ನಿಡಗುಂದಿ, ಡಾ.ಅನೀತಾ ಉತ್ತೂರ, ಡಾ.ಬಸವರಾಜ ಹಳ್ಳೆಮ್ಮನವರ, ಪ್ರಭು ಗುಂಜ್ಯಾಳ, ಪಾಂಡುರಂಗ ಗುಡದೂರ, ಭಾರತಿ ತಳವಾರ, ಜ್ಯೋತಿ ಯಾವಗಲ್, ಅಂಗನವಾಡಿ ಕಾರ್ಯಕರ್ತೆ ಶರಣವ್ವ ತೆಗ್ಗಿನಮನಿ, ಜಯಶ್ರೀ ದಂಡಿನ, ಆಶಾ ಕಾರ್ಯಕರ್ತೆ ಪಾರವ್ವ ಹೂಗಾರ, ಪ್ರಮುಖರು ಉಪಸ್ಥಿತರಿದ್ದರು.
ಉಚಿತ ಚಿಕಿತ್ಸಾ ಶಿಬಿರದಲ್ಲಿ 280ಕ್ಕೂ ಹೆಚ್ಚು ಜನ ಹಾಗೂ ಸುಮಾರು 40 ಜನ ಪಂಚಕರ್ಮ ಚಿಕಿತ್ಸೆಯ ಸದುಪಯೋಗ ಪಡೆದುಕೊಂಡರು. ಈರಪ್ಪ ಐನಾಪೂರ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು
ಆಯುರ್ವೇದ ವೈಜ್ಞಾನಿಕ ತಳಹದಿ ಮೇಲೆ ನಿಂತಿರುವ ಒಂದು ಭಾಗವಾಗಿದೆ. ಆಯುರ್ವೇದ ಕೇವಲ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಜೀವನದ ವಿಧಾನ ಹಾಗೂ ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡುವ ಏಕೈಕ ಶಾಸ್ತ್ರವಾಗಿದೆ.
ಪ್ರತಿಯೊಬ್ಬರು ಆಯುರ್ವೇದದ ಮಹತ್ವ ಅರಿತುಕೊಳ್ಳಬೇಕು.
ಶಾಂತಲಿಂಗ ಶ್ರೀಗಳು,
ದೊರೆಸ್ವಾಮಿಮಠ, ಭೈರನಹಟ್ಟಿ
ಟಾಪ್ ನ್ಯೂಸ್
