ಲಕ್ಷ್ಮೇಶ್ವರ : 13 ಗ್ರಾಪಂಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ
Team Udayavani, Feb 2, 2021, 9:14 PM IST
ಲಕ್ಷ್ಮೇಶ್ವರ : ತಾಲೂಕಿನ 13 ಗ್ರಾಪಂಗೆ ಸೋಮವಾರ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಜಾತಿ ಪ್ರಮಾಣಪತ್ರದ ಗೊಂದಲದಿಂದ ಬಾಲೆಹೊಸೂರ ಗ್ರಾಪಂ ಚುನಾವಣೆ ಮುಂದೂಡಿತು. ಉಳಿದ 12 ಗ್ರಾಪಂಗಳಲ್ಲಿ ಕೆಲವಕ್ಕೆ ಅವಿರೋಧ, ಕೆಲವಕ್ಕೆ ಹೊಂದಾಣಿಕೆ ಮತ್ತಷ್ಟಕ್ಕೆ ತುರುಸಿನ ಚುನಾವಣೆ ನಡೆದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷ -ಉಪಾಧ್ಯಕ್ಷರು:
ಗೊಜನೂರ: ಅಧ್ಯಕ್ಷರಾಗಿ ನೀಲವ್ವ ಪಾಟೀಲ, ಉಪಾಧ್ಯಕ್ಷರಾಗಿ ಸುಶೀಲವ್ವ ತಳವಾರ.
ಅಡರಕಟ್ಟಿ: ಅಧ್ಯಕ್ಷರಾಗಿ ನಿಂಗಪ್ಪ ಪ್ಯಾಟಿ, ಉಪಾಧ್ಯಕ್ಷರಾಗಿ ಪವಿತ್ರಾ ಗಡೆಪ್ಪನವರ.
ಸೂರಣಗಿ: ಅಧ್ಯಕ್ಷರಾಗಿ ಶೇಖವ್ವ ದೊಡ್ಡಗಣ್ಣವರ, ಉಪಾಧ್ಯಕ್ಷರಾಗಿ ಶಂಕ್ರಪ್ಪ ಶೀರನಹಳ್ಳಿ.
ಯಳವತ್ತಿ: ಅಧ್ಯಕ್ಷರಾಗಿ ಹುಲಗೆವ್ವ ಭಜಂತ್ರಿ, ಉಪಾಧ್ಯಕ್ಷರಾಗಿ ವಿಜಯಕುಮಾರ ಹೊಸಕೆರೆ.
ದೊಡ್ಡೂರು: ಅಧ್ಯಕ್ಷರಾಗಿ ನೀಲವ್ವ ಕಟಗಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ಈಳಿಗೇರ.
ಮಾಡಳ್ಳಿ: ಅಧ್ಯಕ್ಷರಾಗಿ ಬೀಬಿಜಾನ್ ನದಾಫ್, ಉಪಾಧ್ಯಕ್ಷರಾಗಿ ಕಸ್ತೂರೆವ್ವ ಮ್ಯಾಗೇರಿ.
ಪುಟಗಾಂವ್ ಬಡ್ನಿ: ಅಧ್ಯಕ್ಷರಾಗಿ ಅಶೋಕ ಮರಿಹೊಳಲಣ್ಣವರ, ಉಪಾಧ್ಯಕ್ಷರಾಗಿ ಶಾಂತವ್ವ ಬಟಗುರ್ಕಿ.
ಹುಲ್ಲೂರು: ಅಧ್ಯಕ್ಷರಾಗಿ ಶಿವಪ್ಪ ಬಸಾಪುರ, ಉಪಾಧ್ಯಕ್ಷರಾಗಿ ಮರಿಯವ್ವ ಹರಿಜನ.
ಆದರಹಳ್ಳಿ: ಅಧ್ಯಕ್ಷರಾಗಿ ಹೊನ್ನಪ್ಪ ವಡ್ಡರ, ಉಪಾಧ್ಯಕ್ಷರಾಗಿ ತಿಪ್ಪವ್ವ ಲಮಾಣಿ.
ರಾಮಗಿರಿ: ಅಧ್ಯಕ್ಷರಾಗಿ ಅಶೋಕ ಕಾಳಿ, ಉಪಾಧ್ಯಕ್ಷರಾಗಿ ಅಡಿವೆಕ್ಕ ಬೆಟಗೇರಿ.
ಗೋವನಾಳ: ಅಧ್ಯಕ್ಷರಾಗಿ ಸುಶೀಲವ್ವ ಮರಿಲಿಂಗನಗೌಡ್ರ, ಉಪಾಧ್ಯಕ್ಷರಾಗಿ ಸುಧಾ ಮಾದರ.
ಶಿಗ್ಲಿ: ಅಧ್ಯಕ್ಷರಾಗಿ ಅಶೋಕಯ್ಯ ಮುಳಗುಂದಮಠ, ಉಪಾಧ್ಯಕ್ಷರಾಗಿ ಯಲ್ಲಪ್ಪ ತಳವಾರ ಆಯ್ಕೆಯಾದರು.
ಇದನ್ನೂ ಓದಿ :ಕೋರೆಯಂತಹ ರಾಜಕಾರಣಿಗಳು ಇರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ?
ಸೋಮವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಘೋಷಣೆಯಾಗುತ್ತಿದ್ದಂತೆಯೇ ಆಯಾ ಗ್ರಾಪಂ ಮುಂದೆ ಬೆಂಬಲಿಗರು,ಅಭಿಮಾನಿಗಳು ಪಟಾಕಿ ಸಿಡಿಸಿ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು