ಅಫ್ಘಾನಿಸ್ತಾನದಿಂದ ತವರಿಗೆ ಮರಳಿದ ಗದಗ ಮೂಲದ ಯೋಧ

ಕಾಬೂಲ್‌ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಪಡೆ ಕಮಾಂಡೆಂಟ್‌ ಆಗಿದ್ದ ಯೋಧ ರವಿ 

Team Udayavani, Aug 22, 2021, 3:26 PM IST

fdsfewew

ಗದಗ: ಅಫ್ಘಾನಿಸ್ತಾನದ ನರರಾಕ್ಷರ ಮಧ್ಯೆ ಸಿಲುಕಿದ್ದ ಜಿಲ್ಲೆಯ ವೀರಯೋಧರೊಬ್ಬರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಯೋಧನ ಮರಳುವಿಕೆಯಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ತಾಲೂಕಿನ ಬಳಗಾನೂರು ಗ್ರಾಮದ ವೀರಯೋಧ ರವಿ ನೀಲಗಾರ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಐಟಿಬಿಪಿ(ಇಂಡೋ-ತಿಬೆಟ್‌ ಗಡಿ ಭದ್ರತಾ ಪಡೆ)ಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಪಡೆಯ ಕಮಾಂಡೆಂಟ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಟ್ಟು 24 ತಿಂಗಳ ಅವಧಿಗೆ ಕಾಬೂಲ್‌ಗೆ ನಿಯೋಜನೆಗೊಂಡಿದ್ದರು. ಈ ನಡುವೆ ಅಫ್ಘಾನಿಸ್ತಾನವನ್ನು ತಾಲಿಬಾನ್‌ ಉಗ್ರರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಕಳೆದ ಆ.16 ರಂದು ಭಾರತೀಯ ಸೇನೆ ಮತ್ತು ಭಾರತ ಸರಕಾರ ನಡೆಸಿದ ರಕ್ಷಣಾ ಕಾರ್ಯದಿಂದಾಗಿ ಕಮಾಂಡರ್‌ ರವಿ ನೀಲಗಾರ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ವೀರಯೋಧ ರವಿ ನೀಲಗಾರ, ಒಟ್ಟು 24 ತಿಂಗಳ ಅವಧಿಗೆ ಕಾಬೂನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಮ್ಮನ್ನು ನಿಯೋಜಿಸಲಾಗಿತ್ತು. ಆಗಸ್ಟ್‌ ಎರಡನೇ ವಾರದವರೆಗೂ ಎಲ್ಲವೂ ಸುಸ್ಥಿತಿಯಲ್ಲೇ ನಡೆಯುತ್ತಿತ್ತು. ಕಾಬೂನ್‌ನಲ್ಲಿ ನನ್ನ ಸೇವೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿಯಿತ್ತು. ಅಷ್ಟರಲ್ಲಾಗಲೇ ತಾಲಿಬಾನಿಗಳು ದಾಳಿ ನಡೆಸಿದರು. ಹೀಗಾಗಿ, ಆ. 16ರಂದು ಭಾರತ ಸರಕಾರ ಕಾಬೂಲ್‌ ರಾಯಭಾರ ಕಚೇರಿಯಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ. ಅದರಲ್ಲಿ ನಾನೂ ಒಬ್ಬ. ಸದ್ಯ ದೆಹಲಿಯಲ್ಲಿ 15 ದಿನಗಳ ಕಾಲ ಕೋವಿಡ್‌ ಕ್ವಾರಂಟೈನ್‌ ನಲ್ಲಿ ಇರಿಸಲಾಗಿದೆ. ಆರೋಗ್ಯದಲ್ಲೂ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಉಪಟಳ, ಹಿಂಸೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಮೂವರು ಕನ್ನಡಿಗರು ಇದ್ದೆವು. ಬಾಗಲಕೋಟೆಯ ಮಂಜುನಾಥ ಮಾಲಿ ಮತ್ತು ಬೆಳಗಾವಿಯ ನಸೀಮುಲ್ಲಾ ಎಂಬುವವರಿದ್ದೆವು. ಆ.15 ರಂದು ಅಲ್ಲಿನ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿತು. ಆನಂತರ ಆ.16 ರಂದು ಭಾರತ ಸರಕಾರ ಮತ್ತು ಸೇನೆ ನಡೆಸಿದ ಏರ್‌ಲಿಫ್ಟ್‌ನಿಂದಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ ಎಂದರು.

ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ ಅವರು, ತಾಲಿಬಾನಿಗಳು ಅಲ್ಲಿ ನಡೆಸುತ್ತಿರುವ ಹಿಂಸಾಚಾರ, ಕ್ರೌರ್ಯದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ನಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿರಲಿಲ್ಲ ಎನ್ನುವ ಮೂಲಕ ಸೂಕ್ಷ್ಮವಾಗಿ ತಮ್ಮ ನೋವು ಹೊರಹಾಕಿದರು.

ಟಾಪ್ ನ್ಯೂಸ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

1-ffsdfsdf

ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ

ಕೊರಟಗೆರೆ : ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

Missing tara airline flight found in Nepal’s Mustang district

ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20water

ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ

Untitled-1

ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್‌ಪಿಗೆ ಮನವಿ

27

ಮುಂಗಾರು ಹಂಗಾಮಿಗೆ ರೈತರ ತಯಾರಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಬಾಲಚಂದ್ರ ಸಾಯಿಮನೆಗೆ ಪಾವನಾ ಪರಿಸರ ಪ್ರಶಸ್ತಿ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

MUST WATCH

udayavani youtube

ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ಹೊಸ ಸೇರ್ಪಡೆ

20water

ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

Untitled-1

ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್‌ಪಿಗೆ ಮನವಿ

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

27

ಮುಂಗಾರು ಹಂಗಾಮಿಗೆ ರೈತರ ತಯಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.