ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ


Team Udayavani, May 13, 2019, 2:53 PM IST

gad-1

ರೋಣ: ಗ್ರಾಮೀಣ ಪ್ರದೇಶದ ಬಹು ಗ್ರಾಮ ಕುಡಿವ ನೀರಿನ ಯೋಜನೆ ರೋಣ ಪಟ್ಟಣಕ್ಕೂ ವಿಸ್ತರಿಸಬೇಕೆಂದು ಪುರಸಭೆ ಸದಸ್ಯರು ಮೇ 14ರಿಂದ ಪಟ್ಟಣದಲ್ಲಿ ಹಮ್ಮಿಕೊಳ್ಳಲಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಪಟ್ಟಣದ ವಿವಿಧ ಬಡಾವಣೆ ರೈತರು, ಹಾಲು ಉತ್ಪಾದಕರ ಸಂಘ, ಶಿರಡಿ ಸಾಯಿಬಾಬಾ ಚಾಲಕರ ಮತ್ತು ಮಾಲಕ ಸಂಘ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಅದರಂತೆಯೇ ಪಟ್ಟಣದ ಹೊನ್ನೆತ್ತವ್ವ ದೇಗುಲದ ಆವರಣದಲ್ಲಿ ರೈತ ಸಮೂಹ ಸಭೆ ನಡೆಸಿ ಬೆಂಬಲ ಸೂಚಿಸಿದೆ.

ಹೋರಾಟಕ್ಕೆ ಪಕ್ಷಾತೀತ ಬೆಂಬಲ: ಈ ವೇಳೆ ರೈತ ಮುಖಂಡ ಬಸನಗೌಡ ಪಾಟೀಲ ಮಾತನಾಡಿ, ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಪುರಸಭೆ ಸರ್ವ ಸದಸ್ಯರು ಪಕ್ಷಾತೀತವಾಗಿ ತೆಗೆದುಕೊಂಡ ಹೋರಾಟದ ನಿರ್ಧಾರಕ್ಕೆ ರೋಣ ಪಟ್ಟಣದ ರೈತ ಸಮೂಹ ಒಗ್ಗಟ್ಟಾಗಿ ಅಭೂತಪೂರ್ವ ಬೆಂಬಲ ನೀಡಲಿದೆ. ಈ ಹೋರಾಟ ಯಾವುದೇ ಒಂದು ವ್ಯಕ್ತಿ, ಕುಟುಂಬ, ಪಕ್ಷಕ್ಕೆ ಸಿಮೀತವಾಗಿಲ್ಲ. ಪ್ರತಿಯೊಬ್ಬರೂ ಅವಶ್ಯವಿರುವ ನೀರಿಗಾಗಿ ಮಾಡುವ ಹೋರಾಟ ಇದಾಗಿದೆ ಎಂದು ತಿಳಿಸಿದರು.

ಪುರಸಭೆ ನಿರ್ಣಯಕ್ಕೆ ಬದ್ಧ: ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಮೀಣ ಭಾಗದಲ್ಲಿನ ಬಹು ಗ್ರಾಮ ನೀರಿನ ಯೋಜನೆ ರೋಣ ಪಟ್ಟಣಕ್ಕೂ ವಿಸ್ತರಿಸಬೇಕು. ಈ ದಿಶೆಯಲ್ಲಿ ಪುರಸಭೆ ಸದಸ್ಯರು ತೆಗೆದುಕೊಂಡ ನಿರ್ಧಾರಕ್ಕೆ ರೋಣ ಸಮಸ್ತ ರೈತ ಸಮೂಹದ ಬೆಂಬಲವಿದ್ದು, ಅಂದು ನಡೆಯುವ ಧರಣಿಯಲ್ಲಿ ಭಾಗವಹಿಸುತ್ತೇವೆ ಎಂದರು.

ಸಿದ್ದಣ್ಣ ನವಲಗುಂದ, ಬಸಪ್ಪ ಕರಿಲಿಂಗಣ್ಣವರ, ಈರಪ್ಪ ಕೋಳಿವಾಡ, ಬಸನಗೌಡ ಮಂಗಳೂರ, ಮೈಲಾರಪ್ಪ ಕಿರೇಸೂರ, ರಾಮಣ್ಣ ದೇಶಣ್ಣವರ, ಚಂದ್ರಪ್ಪ ಆದಿ, ಮಹ್ಮದ್‌ ಮುರಿಗಿಕಟ್ಟಿ, ಶರಣಪ್ಪ ಪಲ್ಲೇದ, ಮಲ್ಲಪ್ಪ ಹವಳಪ್ಪನವರ, ಶಾಂತಪ್ಪ ಶೆಟ್ಟರ ಇತರರಿದ್ದರು.

ರೋಣ ಪಟ್ಟಣ ಅನೇಕ ವರ್ಷಗಳಿಂದ ನಿರಂತರ ನೀರಿನ ಸಮಸ್ಯೆ ಎದುರಿಸುತ್ತ ಬಂದಿದೆ. ನೀರಿನ ಸಮಸ್ಯೆಯಿಂದ ಯಾವಾಗ ಮುಕ್ತಿ ಸಿಕ್ಕಿತು ಎಂಬ ಚಿಂತೆ ರೈತ ಸಮೂಹವನ್ನು ಕಾಡುತ್ತಿತ್ತು. ಸದ್ಯ ದಿನೇ ದಿನೇ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದ್ದರಿಂದ ನಿತ್ಯ ನೀರು ಪೂರೈಸುವಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. •ಬಸನಗೌಡ ಪಾಟೀಲ, ರೈತ ಮುಖಂಡ

Ad

ಟಾಪ್ ನ್ಯೂಸ್

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ, 2 ಡಿಫೆನ್ಸ್‌ ಕಾರಿಡಾರ್‌ಗೆ ಮನವಿ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Aranthodu: ಆಕಸ್ಮಿಕ ಬೆಂಕಿ… ಹೊತ್ತಿ ಉರಿದ ಗ್ರಾಮ ಪಂಚಾಯತ್‌ನ ಘನತ್ಯಾಜ್ಯ ಘಟಕ

Shivasene–MLA–Assult

ಹಳಸಿದ ಆಹಾರ ಕೊಟ್ಟಿದ್ದಕ್ಕೆ ಕ್ಯಾಂಟೀನ್‌ ಸಿಬ್ಬಂದಿ ಮುಖಕ್ಕೆ ಗುದ್ದಿದ ಶಿವಸೇನೆ ಶಾಸಕ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

Gadag: ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಜೋಡಿ… ಬಾಲಕಿ ಸಾ*ವು, ಯುವಕನ ಸ್ಥಿತಿ ಗಂಭೀರ

16-gadag

Gadag: ಕಳ್ಳತನ; ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ದೋಚಿ ಪರಾರಿ

16

Naregal: ನಿರ್ವಹಣೆ ಇಲ್ಲದೇ ಪಾಳು ಬಿದ್ದ ಬಸ್‌ ಶೆಲ್ಟರ್‌

15

Gadag:‌ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚಳ

Madhu-Bangarappa

ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವುದು ಒಳ್ಳೆಯದು: ಸಚಿವ ಮಧು ಬಂಗಾರಪ್ಪ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

Davanagere: RTO ಹೆಸರಲ್ಲಿ ನಾಗರಿಕರ ಹಣ ದೋಚಲು ತಂತ್ರ ರೂಪಿಸಿ ಸೈಬರ್ ವಂಚಕರು

3

Kundapura: ಹೊಟೇಲ್‌ನಲ್ಲಿ ಹ*ಲ್ಲೆ; ಪ್ರಕರಣ ದಾಖಲು

24

Udyavara: ಕಂಟೈನರ್‌ಗೆ ಪಿಕಪ್‌ ಢಿಕ್ಕಿ; ಓರ್ವ ಸಾವು

4

Sullia: ವಿದ್ಯುತ್‌ ಶಾಕ್‌; ವ್ಯಕ್ತಿ ಸಾವು

dw

Sullia: ಜಾರಿ ಬಿದ್ದು ವೃದ್ಧೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.