

Team Udayavani, Feb 4, 2024, 4:05 PM IST
ಗದಗ : ಗಜೇಂದ್ರಗಡ ತಾಲೂಕಿನ ನರೇಗಲ್ ಪೊಲೀಸ್ ಠಾಣೆಯ ಇಬ್ಬರು ಸಿಬಂದಿಗಳ ಮೇಲೆ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಪಿಎಸ್ಐ ನಿಖಿಲ್ ಕಾಂಬ್ಳೆ ಮತ್ತು ಹೆಡ್ ಕಾನ್ಸ್ ಟೇಬಲ್ ಶಂಕರ್ ನಾಲಕರ್ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.
ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ಆರೋಪ ಮಾಡಲಾಗಿದ್ದು, ನರೇಗಲ್ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆ ಬಳಿ ಚುಡಾಯಿಸಿರುವ ಆರೋಪ ಮಾಡಲಾಗಿದೆ. ಬೇರೆ ಯುವತಿಯರನ್ನು ಸಂಪರ್ಕಿಸಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದು ವಾಟ್ಸಾಪ್ ಅಶ್ಲೀಲವಾಗಿ ಮೆಸೇಜ್ ಮಾಡಿ, ಹಣ ಕೊಡುತ್ತೇವೆ ಬಾ ಎಂದು ಕರೆದಿದ್ದಾರೆ.
ಎಸ್ ಪಿ ಅವರ ಗಮನಕ್ಕೆ ತರುತ್ತೇನೆ ಎಂದರೂ ನಿರಂತರವಾಗಿ ವಿದ್ಯಾರ್ಥಿನಿಗೆ ಕಿರುಕುಳ ನೀಡಲಾಗಿದ್ದು, ನರೇಗಲ್ ಪೊಲೀಸರಿಂದ ಜೀವ ಭಯ ಇದೆ ಎಂದು ವಿದ್ಯಾರ್ಥಿನಿ ಅಳಲು ತೊಡಿಕೊಡಿದ್ದಾಳೆ.
ನಿರ್ದಾಕ್ಷಿಣ್ಯ ಕ್ರಮ
ಎಸ್ ಪಿ ಬಿ.ಎಸ್. ನೇಮಗೌಡ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದು, ”ಹೆಡ್ ಕಾನ್ಸ್ ಟೇಬಲ್ ಶಂಕರ್ ನಾಲಕರ್ ಈಗಾಗಲೇ ಸಸ್ಪೆಂಡ್ ನಲ್ಲಿದ್ದು, ಇದೀಗ ಮತ್ತೊಂದು ಬಾರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನ ಸಸ್ಪೆಂಡ್ ಮಾಡಲಾಗುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸುತ್ತೇನೆ. ಪಿಎಸ್ ಐ ನಿಖಿಲ್ ಬಗ್ಗೆಯೂ ದೂರು ಕೇಳಿ ಬಂದಿದ್ದು ಅವರ ವಿರುದ್ದವೂ ತನಿಖೆ ಮಾಡುತ್ತೇವೆ.ತತ್ ಕ್ಷಣ ತನಿಖೆಯ ವರದಿ ಪಡೆದು ಪಿಎಸ್ ಐ ತಪ್ಪಿದ್ದಲ್ಲಿ ಕ್ರಮ ತೆಗೆದುಕೊಳ್ತೇವೆ. ನಿರ್ದಾಕ್ಷಿಣ್ಯ ಕ್ರಮ ತಗೆದುಕೊಳ್ಳುತ್ತೇವೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಅದೇಶಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
Ad
BJP ಆಡಳಿತವಿರುವ ರಾಜ್ಯಗಳಲ್ಲಿ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ: ಸಂತೋಷ ಲಾಡ್ ಸವಾಲು
ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ 254 ಸಾವು!
Shakti scheme: ಇಂದು ಶಕ್ತಿ ಯೋಜನೆಯ 500ನೇ ಕೋಟಿಯ ಟಿಕೆಟ್ ವಿತರಣೆ
“ಶಾಸಕರ ಬಲ ಪ್ರದರ್ಶನ’ಕ್ಕೆ ಕುದುರೆ ವ್ಯಾಪಾರ: ಕೇಂದ್ರ ಸಚಿವ ಜೋಶಿ ಆರೋಪ
ಬಾಹ್ಯಾಕಾಶಕ್ಕೆ ಕಳುಹಿಸಿದ್ದ ಹೆಸರು, ಮೆಂತೆ ಶೀಘ್ರ ಧಾರವಾಡಕ್ಕೆ?
ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ
Padubidri: ಸಮಸ್ಯೆಗಳ ಸುಳಿಯಲ್ಲಿ ಹೆಜಮಾಡಿ ಪಿಯು ಕಾಲೇಜು!
Kerala Nurse ನರ್ಸ್ ಪ್ರಿಯಾ ಗಲ್ಲುಶಿಕ್ಷೆ ಕೇಸ್- ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ
BJP ಆಡಳಿತವಿರುವ ರಾಜ್ಯಗಳಲ್ಲಿ ಏನೆಲ್ಲ ನಡೆಯುತ್ತಿದೆ ಚರ್ಚೆ ಗೆ ಬರಲಿ: ಸಂತೋಷ ಲಾಡ್ ಸವಾಲು
Karkala ಪೇಟೆ ರಸ್ತೆ: ಗುಂಡಿಗಳದ್ದೇ ಕಾರುಬಾರು
You seem to have an Ad Blocker on.
To continue reading, please turn it off or whitelist Udayavani.