ಗಜೇಂದ್ರಗಡದಲ್ಲಿ ಎಳ್ಳ ಅಮಾವಾಸ್ಯೆ ಸಂಭ್ರಮ


Team Udayavani, Dec 28, 2019, 12:51 PM IST

gadaga-tdy-2

ಗಜೇಂದ್ರಗಡ: ಅನ್ನದಾತರ ಅಚ್ಚುಮೆಚ್ಚಿನ ಹಬ್ಬವಾದ ಎಳ್ಳು ಅಮಾವಾಸ್ಯೆ ಚರಗ ಪ್ರಯುಕ್ತ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತ ಸಮೂಹ ಹೊಲದಲ್ಲಿ ಬೆಳೆದ ಬೆಳೆಗಳ ಮಧ್ಯೆ ಬನ್ನಿ ವೃಕ್ಷಕ್ಕೆ ಮತ್ತು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಶುಕ್ರವಾರ ಸಂಭ್ರಮದಿಂದ ಚರಗದ ಹಬ್ಬ ಆಚರಿಸಲಾಯಿತು.

ಈ ಬಾರಿ ಎಳ್ಳ ಅಮಾವಾಸ್ಯೆ ದಿನವೇ ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಕೆಲ ರೈತರು ಅಮಾವಾಸ್ಯೆ ಮುನ್ನಾ ದಿನವೇ ಹಬ್ಬ ಆಚರಿಸಿದರೆ ಇನ್ನು ಕೆಲ ರೈತರು ಗ್ರಹಣ ಕಳೆದ ಮರುದಿನ ಶುಕ್ರವಾರ ಸಂಪ್ರದಾಯ ಬದ್ಧವಾಗಿ ಒಕ್ಕಲುತನದ ಹಬ್ಬ ಆಚರಿಸಿದರು. ಬೆಳಗ್ಗೆ ರೈತರು ನಿತ್ಯದ ಒಡನಾಡಿ ಎತ್ತುಗಳನ್ನು ಮೈ ತೊಳೆದು ಸಿಂಗರಿಸಿ ಹೂಡಿದ ಬಂಡಿ, ಟ್ರಾಕ್ಟರ್‌, ಟಂಟಂ ವಾಹನಗಳಲ್ಲಿ ಕುಟುಂಬ ಮಹಿಳೆಯರು, ಮಕ್ಕಳು, ಗೆಳೆಯರು ಹಾಗೂ ವಿಶೇಷ ಆಮಂತ್ರಿತರ ಜೊತೆಗೂಡಿ ಬುತ್ತಿ ಸಮೇತ ಹೊಲಗಳಿಗೆ ತೆರಳಿ ಹರ್ಷದಿಂದ ಬನ್ನಿಗಿಡಕ್ಕೆ ಸಾಮೂಹಿಕ ಪೂಜೆ ಸಲ್ಲಿಸಿದರು.

ಹಿಂಗಾರಿ ಹಂಗಾಮಿನಲ್ಲಿ ಹುಲುಸಾಗಿ ಮೈ ಕೊಡವಿ ನಿಂತಿರುವ ಜೋಳ, ಕಡಲೆ, ಗೋಧಿಯ ಬೆಳೆಯಲ್ಲಿ ಹುಲಿಗ್ಯೋಸುರಂಬಳಗ್ಯೊ ಎನ್ನುವ ಉದ್ಘೋಷ ಹಾಕುತ್ತಾ, ಗಂಗಾ ಸ್ವರೂಪ ನೀರಿನ ಜೊತೆ ಸಿದ್ಧಪಡಿಸಿದ ಯಳ್ಳು ಹೊಳಿಗೆ ಭೂತಾಯಿ ಮಡಲಿಗೆ ಸಮರ್ಪಿಸಿ ನಮಿಸಿದರು.

ಮಹಿಳೆಯರು ಕಳೆದ ಮೂರ್‍ನಾಲ್ಕು ದಿನಗಳಿಂದ ಶ್ರಮಪಟ್ಟು ಸಿದ್ಧಪಡಿಸಿದ ವಿಶೇಷ ಖಾದ್ಯಗಳಾದ ಕಡಬು, ಎಳ್ಳು ಹೋಳಿಗೆ, ಜೋಳದ ರೊಟ್ಟಿ, ಸಜ್ಜಿರೊಟ್ಟಿ, ಚಪಾತಿ, ಯಣ್ಣಿಗಾಯಿ, ಹೆಸರು ಕಾಳು ಪಲ್ಲೆ, ಶೇಂಗಾ, ಗುರೆಳ್ಳು, ಚಟ್ನಿ, ಕೆನಿ ಮೊಸರಿನ ಊಟವನ್ನು ಕುಟುಂಬ ಹಿತೈಸಿಗಳ ಜತೆ ಸವಿದರು. ವರ್ಷಪೂರ್ತಿ ಹೊಲದ ಮುಖ ನೋಡದ ಸರಕಾರಿ ನೌಕರರು, ಬ್ಯಾಂಕ್‌ ಅಧಿಕಾರಿಗಳು, ವರ್ತಕರು, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮಾಡುವ ಜನರು ಹೊಲದ ಊಟದಲ್ಲಿ ಪಾಲ್ಗೊಂಡು ಒತ್ತಡದ ಬದುಕಿಗೆ ಕೆಲ ಸಮಯ ವಿದಾಯ ಹೇಳಿದರು.

ಊಟ ಮಾಡಿದ ಬಳಿಕ ಮಹಿಳೆಯರು ಮಕ್ಕಳು ಹೊಲದ ತುಂಬೆಲ್ಲ ಸುತ್ತಾಡಿ ಕಡಲೆ, ಬದುವಿನಲ್ಲಿ ಬೆಳೆದಿರುವ ತರಕಾರಿ ಪಡೆದರು. ವಿಶ್ರಾಂತಿ ನಂತರ ಗೋಧೂಳಿಯ ಸಮಯದಲ್ಲಿ ಬರಿದಾದ ಬುತ್ತಿ ಗಂಟಿನ ಸಾಮಾನುಗಳ ಸಮೇತ ಒಲ್ಲದ ಮನಸ್ಸಿನಿಂದ ಬಂಡಿ ಹತ್ತಿ ಮನೆಗಳಿಗೆ ತೆರಳಿದರು.

ಟಾಪ್ ನ್ಯೂಸ್

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.