ಆರೋಗ್ಯಾಧಿಕಾರಿಗೇ ಇಂಜೆಕ್ಷನ್‌


Team Udayavani, Feb 13, 2021, 8:07 PM IST

ಆರೋಗ್ಯಾಧಿಕಾರಿಗೇ ಇಂಜೆಕ್ಷನ್‌

ಗದಗ: ಆ್ಯಂಬುಲೆನ್ಸ್‌ಗಳ ಅಸಮರ್ಪಕನಿರ್ವಹಣೆ, ಪಿಎಚ್‌ಸಿ ಸಿಬ್ಬಂದಿ ವಸತಿ ಗೃಹಗಳದುರಸ್ತಿ ಹಾಗೂ ಹೈಟೆಕ್‌ ಆ್ಯಂಬುಲೆನ್ಸ್ ಗಳ ಪೂರೈಕೆ ಕುರಿತು ಜಿಪಂಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಜಿಪಂ ಸದಸ್ಯರು ಪಕ್ಷಾತೀತವಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಸತೀಶ್‌ ಬಸರಿಗಿಡದ ಅವರನ್ನು ತರಾಟೆಗೆ ತೆಗೆದುಕೊಂಡರು. ಒಂದು ಹಂತದಲ್ಲಿ ಜಿಪಂ ಸದಸ್ಯರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಸ್ವತಃ ಜಿಪಂ ಅಧ್ಯಕ್ಷ ಈರಪ್ಪ ಈಶ್ವರಪ್ಪ ನಾಡಗೌಡ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಡಳಿತಭವನದ ಜಿಪಂ ಸಭಾಂಗಣದಲ್ಲಿ ನಡೆದಜಿಪಂ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವೈಫಲ್ಯವನ್ನು ಸದಸ್ಯರು ಎಳೆಎಳೆಯಾಗಿ ಬಿಚ್ಚಿಟ್ಟರು. ಹೀಗಾಗಿ, ಸುಮಾರು ಒಂದು ಗಂಟೆ ಕಾಲ ಆರೋಗ್ಯಇಲಾಖೆ ಕುರಿತು ಸುದೀರ್ಘ‌ ಚರ್ಚೆನಡೆಯಿತು. ಈ ವೇಳೆ ಸದಸ್ಯರ ಪ್ರಶ್ನೆಗಳಿಗೆಉತ್ತರಿಸಲಾಗದೇ ತಡಬಡಾಯಿಸಿದ ಡಿಎಚ್‌ಒಗೆ ಕ್ಲಾಸ್‌ ತೆಗೆದುಕೊಂಡರು.

ಸದಸ್ಯೆ ಶೋಭಾ ಮೇಟಿ ಮಾತನಾಡಿ, ಹಮ್ಮಿಗಿಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ನೀಡಿದ್ದರೂ ಅದು ಮುಂಡರಗಿಯಲ್ಲೇ ಇರುತ್ತದೆ. ಎರಡು ವರ್ಷಗಳಿಂದ ವಿಷಯ ಪ್ರಸ್ತಾಪಿಸಿದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. 108 ಚಾಲಕನಿಗೆ ಹಮ್ಮಿಗಿಯಲ್ಲಿಕೆಲಸ ಮಾಡುವುದು ಇಷ್ಟವಿಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ಗಮನ ಸೆಳೆದರು.

ಅದಕ್ಕೆ ಧ್ವನಿಗೂಡಿಸಿ ಎಸ್‌.ಪಿ.ಬಳಿಗಾರ, ಸಿದ್ದು ಪಾಟೀಲ, ಅಂತಹ ಚಾಲಕನನ್ನುಹೊರಗುತ್ತಿಗೆ ಸೇವೆಯಿಂದ ವಜಾಗೊಳಿಸಿ,ಸೇವೆಗೆ ಹಾಜರಾಗಿದ್ದರೂ, ವೇತನ ಬಿಡುಗಡೆ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಇದೇ ವೇಳೆ ಕೋವಿಡ್‌ ಸಂದರ್ಭದಲ್ಲಿ ಎಲ್ಲಆ್ಯಂಬುಲೆನ್ಸ್‌ಗಳನ್ನು ವಿವಿಧೆಡೆ ನಿಯೋಜಿಸಿತ್ತು.ಈಗ ಸೋಂಕು ಕಡಿಮೆಯಾಗಿ ದ್ದರಿಂದ ಅವುಗಳನ್ನು ಮೂಲ ಸ್ಥಾನಕ್ಕೆ ಕಳುಹಿಸುವಂತೆಸೂಚಿಸಿದರು.

ಶಿಗ್ಲಿ ಜಿಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿಯ ಗೃಹಗಳನ್ನುತಮ್ಮ ಅನುದಾನದಲ್ಲಿ ದುರಸ್ತಿಗೊಳಿಸಲಾಗಿದೆ.ಆದರೆ, ಅದಕ್ಕೆ ಜಿಲ್ಲಾ ಆರೋಗ್ಯ ಇಲಾಖೆಎಂದು ಬೋರ್ಡ್‌ ಮಾತ್ರ ಬರೆದಿರುವುದುಭ್ರಷ್ಟಾಚಾರದ ವಾಸನೆ ಕಂಡು ಬರುತ್ತದೆ ಎಂದು ಆರೋಪಿಸಿದರು.

ಅದಕ್ಕೆ ಆರೋಗ್ಯಾಧಿಕಾರಿಗಳು ಸಮರ್ಪಕ ಉತ್ತರ ನೀಡದೇ, ಪ್ರತ್ಯೇಕ ಎರಡುಯೋಜನೆಯಡಿ 1 ಲಕ್ಷ ರೂ. ಹಾಗೂ 6 ಲಕ್ಷರೂ. ಮೊತ್ತದಲ್ಲಿ ಕಾಮಗಾರಿಯನ್ನು ನಿರ್ಮಿತಿಕೇಂದ್ರಕ್ಕೆ ವಹಿಸಲಾಗಿದೆ. ಹೆಚ್ಚಿನ ಮಾಹಿತಿಇನ್ನಷ್ಟೆ ಪಡೆಯುವುದಾಗಿ ಉತ್ತರಿಸಿದರು.ಇದರಿಂದ ಕೆರಳಿದ ಸದಸ್ಯರು, ಆರೋಗ್ಯಇಲಾಖೆ ಅನುದಾನ ನೀಡುವುದಾದರೆ,ಅದರ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ1 ಕೋಟಿ ರೂ. ಮೊತ್ತದಲ್ಲಿ ಅತ್ಯಾಧುನಿಕ ಆ್ಯಂಬುಲೆನ್ಸ್‌ಗಳ ಪೂರೈಕೆ ಬಗ್ಗೆಯೂ ಸದಸ್ಯರಗಮನಕ್ಕೂ ತರುವುದಿಲ್ಲ. ನಾವು ಅಮೆರಿಕದಿಂದ ಬರೋದಿಲ್ಲ. ಜಿಪಂನಲ್ಲೇ ಇರುತ್ತೇವೆ. ಬಂದು ಮಾಹಿತಿ ನೀಡಲು ಸಮಸ್ಯೆ ಏನು ಎಂದು ಜಿಪಂ ಅಧ್ಯಕ್ಷ ನಾಡಗೌಡ್ರ ಛಾಟಿ ಬೀಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ನಿರ್ಮಿತಿ ಕೇಂದ್ರದ ಶಿರೋಳ, ಕೆಲ ಪಿಎಚ್‌ಸಿಗಳಿಗೆ 6 ಲಕ್ಷ ರೂ. ಹಾಗೂ ಇನ್ನೂ ಕೆಲ ಆರೋಗ್ಯಕೇಂದ್ರಗಳಿಗೆ 1 ಲಕ್ಷ ರೂ. ಮಂಜೂರಾಗಿದೆಎಂದು ಕಾಮಗಾರಿಯನ್ನು ವಿವರಿಸಿ, ಚರ್ಚೆಗೆ ತೆರೆ ಎಳೆದರು.

ಡಿಡಿಪಿಐ ಬಸವಲಿಂಗಪ್ಪ ಮಾತನಾಡಿ,

ಜನೆವರಿಯಿಂದ 6, 7, 8 ನೇ ತರಗತಿವಿದ್ಯಾರ್ಥಿಗಳಿಗೆ ವಿದ್ಯಾಗಮ, 9 ಮತ್ತು 10ನೇ ತರಗತಿಗಳು ಆರಂಭವಾಗಿವೆ. ಜೂನ್‌16 ರಿಂದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಗಳನ್ನುನಡೆಸಲು ಪೂರ್ವಸಿದ್ಧತೆ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಫಲಿತಾಂಶ ಸುಧಾರಣೆಗಾಗಿ ತೆಗೆದುಕೊಂಡಿರುವ ಕ್ರಮಗಳ ಕುರಿತು ಹಾಗೂಶಾಲೆಯ ಅಂಗನವಾಡಿಗಳಲ್ಲಿ ರಾತ್ರಿ ಅನೈತಿಕಚಟುವಟಿಕೆಗಳನ್ನು ತಪ್ಪಿಸಲು ಅದಕ್ಕೆ ಪೊಲೀಸ್‌ಗಸ್ತು ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ಗಮನ ಸೆಳೆದರು.

ಬಿಂಕದಕಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 1.45 ಕೋಟಿ ರೂ. ವೆಚ್ಚದಲ್ಲಿ ಸೋಲಾರಅಳವಡಿಸಲಾಗಿದ್ದು, ಅವುಗಳು ಸರಿಯಾಗಿಕಾರ್ಯನಿರ್ವಹಿಸುತ್ತಿಲ್ಲ ಎಂದು ಜಿಪಂ ಸದಸ್ಯೆ ಶಕುಂತಲಾ ಮೂಲಿಮನಿ ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಸಭೆಯ ಸದಸ್ಯರೆಲ್ಲರೂ ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸುವುದರೊಂದಿಗೆಮುಂಗಡ ಠೇವಣಿಯನ್ನು ಮುಟ್ಟುಗೋಲುಹಾಕಿಕೊಳ್ಳುವ ಮೂಲಕ ಅಳವಡಿಸಿದಸೋಲಾರ ದೀಪಗಳ ನಿರ್ವಹಣೆಗೆ ಪ್ರತ್ಯೇಕಟೆಂಡರ್‌ ಕೈಗೊಳ್ಳುವಂತೆ ತಿಳಿಸಿದರು.ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌.ಮಾತನಾಡಿ, ರೈತರಿಗೆಪರಿಹಾರ ವಿತರಣೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದೆ. ಹಿಂಗಾರು ಕಡಲೆ ಖರೀದಿಗಾಗಿ ಖರೀದಿ ಕೇಂದ್ರದ ನೋಂದಣಿಕಾರ್ಯ ಫೆ. 15 ರಿಂದ ಆರಂಭವಾಗಲಿದ್ದು,ಪ್ರತಿ ಕ್ವಿಂಟಲ್‌ ಕಡಲೆಗೆ 5,110 ರೂ. ಅನ್ನು ಸರ್ಕಾರ ಬೆಂಬಲ ಬೆಲೆಯಾಗಿ ನೀಡಿಖರೀದಿಸಲಿದೆ. ಪ್ರತಿ ರೈತರಿಂದ 15 ಕ್ವಿಂಟಲ್‌ ಕಡಲೆ ಖರೀದಿಸಲಾಗುವುದು ಎಂದರು. ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿಗದಗ ಜಿಲ್ಲೆಗೆ ಮೆಣಸಿನಕಾಯಿ ಬೆಳೆಯನ್ನು ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ 20 ಸಂಸ್ಕರಣಾ ಘಟಕಗಳನ್ನು ತೆರೆಯಲು ಅವಕಾಶವಿದೆ. ಪ್ರತಿ ಯುನಿಟ್‌ಗೆ 10 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸಲಿದೆ ಎಂದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಜಿಪಂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಪಂ ಸದಸ್ಯರು, ತಾಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

1-gadaga

Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.