ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ

Team Udayavani, Oct 4, 2019, 5:25 PM IST

ಹಗರಿಬೊಮ್ಮನಹಳ್ಳಿ.: ದೇಶದಲ್ಲಿ ಜನಸಂಖ್ಯಾ ಸ್ಫೋಟದಿಂದ ಆಹಾರ ಭದ್ರತೆ ಕೂಡ ಅಭದ್ರತೆಯಲ್ಲಿದೆ ಎಂದು ಬಳ್ಳಾರಿ ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಹಗರಿ ಐ.ಸಿ.ಆರ್‌.ಕೃಷಿ ವಿಜ್ಞಾನ ಕೇಂದ್ರ, ಬಳ್ಳಾರಿ ಮತ್ತು ಹಗರಿಬೊಮ್ಮನಹಳ್ಳಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ಜಲಶಕ್ತಿ ಅಭಿಯಾನ ಮತ್ತು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಜಲಶಕ್ತಿ ಪ್ರತಿಯೊಂದು ಜೀವರಾಶಿಗೂ ಮಹಾಶಕ್ತಿಯಾಗಿದೆ. ಇಂದು ಪ್ರತಿಯೊಂದು ಹನಿ ನೀರು ಕೂಡ ಅಮೂಲ್ಯವಾಗಿದೆ. ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು.

ಕೃಷಿ ಇಲಾಖೆ ಕೃಷಿ ಸಹಾಯಕ ನಿರ್ದೇಶಕ ಜೀವನ್‌ಸಾಬ್‌ ಮಾತನಾಡಿ, ಹೆಚ್ಚು ಕೊಳವೆ ಬಾವಿ ಕೊರೆಸುವುದರಿಂದ ಅಂತರ್ಜಲ ಕುಸಿತ ಹೆಚ್ಚಾಗಿದೆ. ಕೆರೆ ಕಟ್ಟೆಗಳನ್ನು ಸಂರಕ್ಷಿಸಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಎಂದರು. ತಾ.ಪಂ ಕಾರ್ಯನಿರ್ವಾಹಕ ಅಧಿ ಕಾರಿ ವಿಶ್ವನಾಥ, ಹಗರಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ರವಿಶಂಕರ, ರಫೀ ಅಹಮ್ಮದ ರೈತರನ್ನು ಉದ್ದೇಶಿಸಿ ಮಾತನಾಡಿದರು. ಸಸಿಗೆ ನೀರು ಹಾಕುವುದರ ಮೂಲಕ ತಾ.ಪಂ ಅಧ್ಯಕ್ಷೆ ಕೆ.ನಾಗಮ್ಮ ಚಾಲನೆ ನೀಡಿದರು. ತಾ.ಪಂ ಉಪಾಧ್ಯಕ್ಷೆ ಕೊಚಾಲಿ ಸುಶೀಲಮ್ಮ ಮಂಜುನಾಥ, ಜಿ.ಪಂ ಸದಸ್ಯೆ ಶಾರದಮ್ಮ ಶೇಖರಪ್ಪ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಾನಂದಪ್ಪ, ಮಂಜುನಾಥ ಗೌಡ, ಬಿಜೆಪಿ ಮುಖಂಡ ಕಲ್ಲಹಳ್ಳಿ ನಿಂಗಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಪಶು ಸಹಾಯಕ ನಿರ್ದೇಶಕ ಡಾ.ದೇವಗಿರಿ, ತಾಪಂ ಉಮೇಶ ಗೌಡ, ಕೃಷಿ ತಾಂತ್ರಿಕ ಅಧಿಕಾರಿ ನಾಗರಾಜ್‌, ಕೃಷಿ ಅಧಿಕಾರಿ ಹನುಮಂತಪ್ಪ, ತಾಲೂಕು ಆತ್ಮ ಯೋಜನೆಯ ಅನುಷ್ಠಾನಾಧಿಕಾರಿ ಭೋಜಾನಾಯ್ಕ ಇತರರಿದ್ದರು. ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ತಾಲೂಕಿನ ರೈತರು ಭಾಗವಹಿಸಿ ಕೃಷಿ ಮಾಹಿತಿಯನ್ನು ಪಡೆದುಕೊಂಡರು. ಹೊಸಪೇಟೆ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ, ಶಿಕ್ಷಕ ಪರಮೇಶ್ವರಯ್ಯ ಸೊಪ್ಪಿನಮಠ ನಿರೂಪಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ