ಈಗ ಸೋಲು ಗೆಲುವಿನದ್ದೇ ಚರ್ಚೆ

ಗ್ರಾಮದಲ್ಲಿನ ಟೀ ಅಂಗಡಿ, ಅರಳಿಕಟ್ಟೆಗೆ ಶಿಫ್ಟ್ ಆದ ರಾಜಕೀಯ ಚರ್ಚೆ

Team Udayavani, Dec 27, 2020, 8:12 PM IST

ಈಗ ಸೋಲು ಗೆಲುವಿನದ್ದೇ ಚರ್ಚೆ

ಚನ್ನರಾಯಪಟ್ಟಣ: ತಾಲೂಕು ಗ್ರಾಮ ಪಂಚಾಯಿತಿ ಚುನಾವಣೆ ಡಿ.22ಕ್ಕೆ ಶಾಂತಿಯುತವಾಗಿ ಮುಗಿದಿದೆ. ಬಿರುಸಿನ ಪ್ರಚಾರ ನಡೆಸಿ, ಸುಸ್ತಾಗಿದ್ದ ಸ್ಪರ್ಧಾಳುಗಳು, ಧಣಿವಾರಿಸಿಕೊಂಡು ಈಗ ಕೃಷಿ ಚಟುವಟಿಕೆ, ಇತರೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯವಾಗಿ ಗುರುತಿಸಿಕೊಂಡವರು ಸೋಲು ಗೆಲುವಿನ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ.

ಮದುವೆ, ಜಾತ್ರೆ, ಉತ್ಸವ, ಹೊಲಗದ್ದೆಗಳಲ್ಲಿ ಕೂಲಿ ಮಾಡುವವರು, ಟೀ ಅಂಗಡಿ, ಹೋಟೆಲ್‌, ಅರಳಿಕಟ್ಟೆ, ಎಲ್ಲಿ ನೋಡಿದರೂ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಸ್ಥಳೀಯವಾಗಿ ರಾಜಕೀಯ ವಿಶ್ಲೇಷಕರು ಎನಿಸಿಕೊಂಡರಿಗೆ ಈ ಬಾರಿ ಬೇಡಿಕೆ. ಅವರ ಮಾತು ಕೇಳಲು ಎಲೆ ಅಡಿಕೆ, ಟೀ, ಕಾಫಿ ಯಾರಿಗೆ ಎಷ್ಟು ಮತ ಬಂದಿವೆ, ಯಾರೂ ಗೆಲ್ಲಬಹುದು, ಚುನಾವಣೆ ಯಲ್ಲಿ ಎಷ್ಟು ಖರ್ಚು ಮಾಡಿದ್ದಾರೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಗ್ರಾಮ ಪಂಚಾಯಿತಿ ಚುನಾವಣೆ ರಾಜಕೀಯಪಕ್ಷಗಳಿಂದ ಹೊರತಾದದ್ದು. ಆದರೂ, ಪಕ್ಷಗಳ ಬೆಂಬಲ  ದೊಂದಿಗೆ ಕೆಲವರು ಚುನಾವಣೆಯಲ್ಲಿ ಸ್ಪರ್ಧಿಸುವು ದರಿಂದ ಹಳ್ಳಿ ಕದನ ಜಿದ್ದಾಜಿದ್ದಿನಿಂದ ಕೂಡಿದೆ.

ಸಮೀಕ್ಷೆ ಮೊದಲು ಪ್ರಾರಂಭ: ಪ್ರಸ್ತುತ ರಾಜಕಾರಣದ ಬಗ್ಗೆ ಬಹಿರಂಗವಾಗಿ ಮಾತನಾಡಲು ಇಷ್ಟ ಪಡದವರು ತಮ್ಮ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ತಿಳಿಸುತ್ತಿದ್ದಾರೆ, ಇನ್ನು ಕೆಲವರು ಗ್ರಾಮ ದೇವತೆ ಮೇಲೆ ಆಣೆಪ್ರಮಾಣ ಮಾಡಿ ತಮಗೇಮತಹಾಕಿದ್ದೇನೆ ಎಂದು ಹೇಳುತ್ತಿದ್ದಾರೆ.  ಗ್ರಾಮೀಣ ಭಾಗದಲ್ಲಿ ಸೋಲು ಗೆಲುವಿನ ಬಗ್ಗೆ ಸಮೀಕ್ಷೆಗಳು ಪ್ರಾರಂಭವಾಗಿವೆ.

ಸಾಮಾಜಿಕ ಮಾಧ್ಯಮಗಳ ಬಳಕೆ: ಗ್ರಾಪಂ ಚುನಾವಣೆ ಪ್ರಚಾರಕ್ಕೆ ಈ ಬಾರಿ ಸಾಮಾಜಿಕ ಜಾಲತಾಣ ಅತಿಹೆಚ್ಚಾಗಿ ಬಳಸಿ ಕೊಳ್ಳಲಾಗಿದೆ.ಕೆಲವರು ಮೊಬೈಲ್‌ ನಂಬರ್‌ಗೆ ಕರೆ ಮಾಡಿ, ಮತಯಾಚಿಸಿದರೆ, ಕೆಲವರು ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿ, ಫೇಸ್‌ಬುಕ್‌, ಇನ್ಸ್ಟಾಗ್ರಾಂ ಸೇರಿಇತರೆ ಜಾಲ ತಾಣಗಳನ್ನು ಬಳಸಿಕೊಂಡರು. ರಾಜಕೀಯ ಪಕ್ಷದವರು ತಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು, ಇನ್ನು ಕೆಲವರು ಮತಯಾಚನೆಗೆ ತಮ್ಮ ಪಕ್ಷದ ಹೆಸರಲ್ಲಿ ತೆರೆದಿರುವ ಫೇಸ್‌ಬುಕ್‌ ಖಾತೆಗಳನ್ನು ಬಳಕೆ ಮಾಡಿದರು.

ಟೀ ಅಂಗಡಿ ರಾಜಕೀಯ ಚರ್ಚಾ ಕೇಂದ್ರ: ಸಾಮಾಜಿಕ ಜಾಲತಾಣಗಳಲ್ಲಿನ ಚುನಾವಣೆ ಕುರಿತ ಚರ್ಚೆ ತಣ್ಣಗಾಗಿದೆ. ಆದರೆ, ನಗರ ಹಾಗೂಗ್ರಾಮೀಣ ಭಾಗದ ಟೀ ಅಂಗಡಿ, ಹೋಟೆಲ್‌ಗ‌ಳಲ್ಲಿಬೆಳಗ್ಗೆ 6 ಗಂಟೆಗೆ ಪ್ರಾರಂಭ ಆಗುವ ಚರ್ಚೆಗಳುರಾತ್ರಿ ಬಾಗಿಲು ಹಾಕುವ ತನಕ ನಡೆಯುತ್ತವೆ. 10 ರೂ. ಕೊಟ್ಟು ಟೀ, ಕಾಫಿ ಕುಡಿಯುವ ಮಂದಿ ಕನಿಷ್ಠ ಎರಡ್ಮೂರು ತಾಸು ಚರ್ಚೆಯಲ್ಲಿ ತೊಡಗುವ ಮೂಲಕ ಫ‌ಲಿತಾಂಶದ ದಿನ ಬೇಗ ಬರಲೆಂದು ಚರ್ಚಿಸುತ್ತಿದ್ದಾರೆ. ಯಾರು ಏನೇ ಲೆಕ್ಕಾಚಾರ ಮಾಡಿ ದರೂ ಡಿ.30ರಂದು ಪ್ರಕಟವಾಗುವ ಫ‌ಲಿತಾಂಶದವರೆಗೂ ಕಾಯಲೇಬೇಕು. ಆಗ ಯಾರು ಗೆದ್ದಿದ್ದಾರೆ, ಸೋತಿದ್ದಾರೆ ಎಂಬುದು ತಿಳಿಯುತ್ತದೆ.

ಚುನಾವಣೆ ನಡೆದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ಮಾಡುವುದು ಮಾಮೂಲು, ಲೋಕಸಭೆ,ವಿಧಾನಸಭೆಗೆ ಹೋಲಿಸಿದರೆ ಗ್ರಾಮ ಪಂಚಾಯಿತಿ ಸ್ವಲ್ಪ ವಿಭಿನ್ನವಾಗಿರುತ್ತದೆ. ಅಭ್ಯರ್ಥಿಗಳು ನಮ್ಮ ಕೈಗೆ ಸಿಗುತ್ತಾರೆ. ಹಾಗಾಗಿ ಯಾರು ಗೆದ್ದರೆ ಒಳೆಯದು, ಯಾರಿಗೆ ಎಷ್ಟು ಮತ ಬಂದಿರಬಹುದು ಎಂದು ಚರ್ಚೆಗಳು ನಡೆಯುತ್ತಿವೆ. -ರಾಜಕುಮಾರ್‌, ಹರಳಹಳ್ಳಿ ಗ್ರಾಮದ ಮುಖಂಡ.

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

TDY-2

CSK Forever: ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ ಪ್ರಿಂಟ್‌ ಮಾಡಿಸಿದ  ಅಭಿಮಾನಿ

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

ಹೊಸ ಇನ್ನಿಂಗ್ಸ್‌ ಆರಂಭಿಸಿದ ರುತುರಾಜ್: ಕ್ರಿಕೆಟ್ ಆಟಗಾರ್ತಿಯನ್ನೇ ವರಿಸಿದ CSK ಪ್ಲೇಯರ್

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

Chikkamagaluru: ಕಾಂಗ್ರೆಸ್ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಗಲಾಟೆ, ಯುವಕನ ಕೊಲೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಂಗಳೂರು: ಹಳೆಯ “ನೈತಿಕ ಪೊಲೀಸ್‌ಗಿರಿ’ ಆರೋಪಿಗಳಿಂದ ಮುಚ್ಚಳಿಕೆ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

ಮಣಿಪಾಲ: ರ್‍ಯಾಂಕಿಂಗ್‌ನಲ್ಲಿ ಮಾಹೆಗೆ ವಿಶ್ವದಲ್ಲಿ 4ನೇ ಸ್ಥಾನ

M B PATILL

BJPಯ ಎಲ್ಲ ಹಗರಣಗಳ ತನಿಖೆ: M.B. ಪಾಟೀಲ್‌

ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಜಾರಿ: ಜನಾರ್ದನ ಪೂಜಾರಿ ಶ್ಲಾಘನೆ

ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಜಾರಿ: ಜನಾರ್ದನ ಪೂಜಾರಿ ಶ್ಲಾಘನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-17

ಯಶವಂತಪುರ- ಹಾಸನಕ್ಕೆ ರೈಲು ಸೇವೆ ವಿಸ್ತರಿಸಿ

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

ಅಧಿಕಾರಿಗಳಿಂದ ಮತ ಎಣಿಕೆಯಲ್ಲಿ ಪಕ್ಷಪಾತ ಆರೋಪ

ಶಾಸಕರ ಎದುರಿಗಿದೆ ಸಮಸ್ಯೆಗಳ ಸರಮಾಲೆ!

ಶಾಸಕರ ಎದುರಿಗಿದೆ ಸಮಸ್ಯೆಗಳ ಸರಮಾಲೆ!

ಅರಸೀಕೆರೆ: ದಶಕ ಕಳೆದರೂ ಯಾತ್ರಿ ನಿವಾಸಕ್ಕಿಲ್ಲಉದ್ಘಾಟನೆ ಭಾಗ್ಯ!

ಅರಸೀಕೆರೆ: ದಶಕ ಕಳೆದರೂ ಯಾತ್ರಿ ನಿವಾಸಕ್ಕಿಲ್ಲಉದ್ಘಾಟನೆ ಭಾಗ್ಯ!

ಶಾಸಕ ಸ್ವರೂಪ್‌ ಎದುರು ಸಾಲು-ಸಾಲು ಸವಾಲು

ಶಾಸಕ ಸ್ವರೂಪ್‌ ಎದುರು ಸಾಲು-ಸಾಲು ಸವಾಲು

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ