ಎಟಿಎಂಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನದಿಂದ 43 ಲಕ್ಷ ರೂ. ದೋಚಿದ್ದವರು ಸೆರೆ
Team Udayavani, May 21, 2022, 4:08 PM IST
ಹಾಸನ: ಎಟಿಎಂಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನದಿಂದ 47 ಲಕ್ಷ ರೂ.ಗಳನ್ನು ದೋಚಿದ್ದ ಅಂತಾರಾಜ್ಯ ಕಳ್ಳರನ್ನು ಅರಸೀಕೆರೆ ಗ್ರಾಮಾಂತರ ವೃತ್ತದ ಪೊಲೀಸರ ತಂಡ ಬಂಧಿಸಿ ಆರೋಪಿಗಳಿಂದ 27 ಲಕ್ಷ ರೂ. ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಎಸ್‌ಪಿ ಶ್ರೀನಿವಾಸಗೌಡ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 6 ತಿಂಗಳ ಹಿಂದೆ 43 ಲಕ್ಷ ರೂ.ದೋಚಿದ್ದ ತಮಿಳು ನಾಡು ಮೂಲದ ಮೂವರು ಹಾಗೂ ಕೋಲಾರಜಿಲ್ಲೆಯ ಒಬ್ಬನ್ನು ವಿಶೇಷ ಪೊಲೀಸ್ ತಂಡ ಮೂರು ದಿನಗಳ ಹಿಂದೆ ಬಂಧಿಸಿ ಆರೋಪಿಗಳಿಂದ 27 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವಾಹನದಲ್ಲಿತ್ತು 1.87 ಕೋಟಿ ರೂ.: ಕಳೆದ ವರ್ಷ ಅ.27ರಂದು ಎಟಿಎಂಗಳಿಗೆ ಹಾಸನ ಜಿಲ್ಲೆ ಯಲ್ಲಿ ಹಣ ತುಂಬುರ ಸಿಎಂಎಸ್ ಇನ್ಫೋ ಸಿಸ್ಟಂ,ಲಿಮಿಟೆಡ್‌ನ ಸಂಸ್ಥೆಯ ವ್ಯವಸ್ಥಾಪಕ ಹರೀಶ್‌ಕುಮಾರ್ ಅವರು, ತಮ್ಮ ಸಂಸ್ಥೆ ವಾಹನಕ್ಕೆ ನಟೇಶ್‌ಚಾಲಕನಾಗಿ, ರುದ್ರೇಶ್ ಮತ್ತು ಭರತ್ ಎಂಬುವರನ್ನು ಕ್ಯಾಷ್ ಆಫೀಸರ್ ಆಗಿ ಹಾಗೂ ಪಾಂಡುರಂಗ ಎಂಬವರನ್ನು ಗನ್‌ಮ್ಯಾನ್ ಆಗಿ ನೇಮಿಸಿ ಅರಸೀಕೆರೆ ತಾಲೂಕು ಬಾಣಾವರದ ಎಸ್‌ಬಿಐ ಬ್ಯಾಂಕ್ ಎಟಿಎಂ, ಅರಸೀಕೆರೆಯ ಕೆನರಾ ಬ್ಯಾಂಕ್‌ಎಟಿಎಂ ಸೇರಿ ಅರಸೀಕೆರೆ ತಾಲೂಕಿನ ಎಟಿಎಂ ಗಳಿಗೆ ಹಣ ತುಂಬಲು 1.87 ಕೋಟಿ ರೂ.ಗಳನ್ನು ಬ್ಯಾಗ್‌ಗಳನ್ನು ವಾಹನದಲ್ಲಿಟ್ಟು ಹಾಸನ ನಗರದಿಂದ ಕಳುಹಿಸಿಕೊಟ್ಟಿದ್ದರು.
43 ಲಕ್ಷವಿದ್ದ ಬ್ಯಾಗ್ ಕಳವು: ಬಾಣಾವರದ ಬಿ. ಎಚ್.ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕಿನ ಎಟಿ ಎಂಗೆ ಹಣ ತುಂಬಲು ತಂಡ ಮುಂದಾಗಿತ್ತು. ಚಾಲಕನೂ ವಾಹನದಿಂದ ಕೆಳಗೆ ಇಳಿದು ನಿಂತಿದ್ದನ್ನು ಗಮನಿಸಿದ ದರೋಡೆ ಕೋರರ ತಂಡವುಸಿಎಂಎಸ್ ವಾಹನದಲ್ಲಿದ್ದ 43 ಲಕ್ಷ ರೂ. ಹಣತುಂಬಿದ್ದ ಬ್ಯಾಗನ್ನು ಕಳವು ಮಾಡಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದರು.
27 ಲಕ್ಷ ವಶಕ್ಕೆ: ಬಾಣಾವರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖ ಲಿಸಿಕೊಂಡು ಆರೋಪಿಗಳ ಪತ್ತೆಗೆ 2 ವಿಶೇಷ ತಂಡ ರಚನೆ ಮಾಡಲಾಗಿತ್ತು.ತಂಡವು ಆರೋಪಿಗಳ ಮಾಹಿತಿ ಸಂಗ್ರಹಿಸಿ ಮೇ16ರಂದು ತಿಪಟೂರು ಎಸ್‌ಬಿಐ ಬ್ಯಾಂಕ್ ಮುಂದೆ ನಿಂತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು, ಅರಸೀಕೆರೆ ಗ್ರಾಮಾಂತರ ವೃತ್ತ ಕಚೇರಿಗೆ ಕರೆದುಕೊಂಡುವಿಚಾರಣೆಗೆ ಒಳಪಡಿಸಿದಾಗ 43 ಲಕ್ಷ ರೂ.ಕಳವುಮಾಡಿದನ್ನು ಬಾಯಿಬಿಟ್ಟಿದ್ದಾರೆ. ಆರೋಪಿಗಳು ಖರ್ಚು ಮಾಡಿಕೊಂಡ ನಂತರ ಉಳಿದ 27 ಲಕ್ಷ ರೂ.ಗಳನ್ನು ವಶ ಪಡಯಲಾಗಿದೆ ಎಂದರು.
ನಗರದ ಹೊಸ ಬಸ್ ನಿಲ್ದಾಣ ಬಳಿ ನಡೆದಆಟೋ ಚಾಲಕನ ಕೊಲೆ ಪ್ರಕರಣದಲ್ಲಿ ಒಟ್ಟು ಆರುಮಂದಿ ಆರೋಪಿಗಳು ಭಾಗಿಯಾಗಿ ರುವ ಮಾಹಿತಿಲಭ್ಯವಾಗಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಲೂರು: ಪೊಲೀಸರ ದಾಳಿ; ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ
ತಾಲೂಕು ಆಡಳಿತದ ವಿರುದ್ಧ ಧರಣಿ
ರಸ್ತೆಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ
ಸಕಲೇಶಪುರ: ಅಪರಿಚಿತ ವಾಹನ ಢಿಕ್ಕಿ; ಶಾಲೆಗೆ ತೆರಳುತ್ತಿದ್ದ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು
ಜನಪ್ರತಿನಿಧಿಗಳು ಜನತೆಯ ಸಂಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸಿ
MUST WATCH
ಹೊಸ ಸೇರ್ಪಡೆ
ಕುಂಬಳೆ : ಅಪರಿಚಿತರಿಂದ ವಿದ್ಯಾರ್ಥಿನಿಯ ಅಪಹರಣ: ವ್ಯಾನ್ನಿಂದ ಜಿಗಿದು ತಪ್ಪಿಸಿಕೊಂಡ ಬಾಲಕಿ
ಕುಣಿಗಲ್: ಕೆಂಪೇಗೌಡ ಜಯಂತೋತ್ಸವ ಮೆರವಣಿಗೆ ವೇಳೆ ಲೋಪ: ತಹಶೀಲ್ದಾರ್ ಮಹಬಲೇಶ್ವರ್ ಕ್ಷಮೆ
ತೆಲಂಗಾಣದಲ್ಲೂ ಬಿಜೆಪಿ ಅಧಿಕಾರ ಖಚಿತ : ಸಚಿವ ಅನುರಾಗ್ ಠಾಕೂರ್
ಗೋವಾದಲ್ಲಿ ಶಿವಸೇನೆ ಬಂಡಾಯ ಶಾಸಕರು : ಗಡಿ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ
ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ