ಏತ ನೀರಾವರಿ ಕಾಮಗಾರಿಗಳಿಗೆ ಚುರುಕು
Team Udayavani, Dec 1, 2020, 8:22 PM IST
ಚನ್ನರಾಯಪಟ್ಟಣ: ಜಿಲ್ಲೆಯಲ್ಲಿ ಯಾವುದಾದರೂ ಏತ ನೀರಾವರಿ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದ್ದರೆ ಅಥವಾ ಮಂದಗತಿಯಲ್ಲಿ ಸಾಗುತ್ತಿದ್ದರೆ ಚುರುಕುಗೊಳ್ಳಲು ಕ್ರಮ ಕೈಗೊಳ್ಳುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭರವಸೆ ನೀಡಿದರು.
ಹಿರೀಸಾವೆ-ಜುಟ್ಟನಹಳ್ಳಿ ಏತನೀರಾವರಿ ಯೋಜನೆಯಡಿ ತುಂಬಿದ ತಾಲೂಕಿನ ಹಿರೀಸಾವೆ ಹೋಬಳಿ ಮತಿಘಟ್ಟ ಗ್ರಾಮದ ಕೆರೆಗೆ ಸೋಮವಾರ ಗಂಗಾ ಪೂಜೆ,ಬಾಗಿನ ಸಮರ್ಪಿಸಿ ಮಾತನಾಡಿದರು. ನನ್ನ ಸ್ವಕ್ಷೇತ್ರಮಹಾಲಕ್ಷ್ಮೀ ಲೇಔಟ್‌ಒಂದುಕಣ್ಣಾದರೆ, ಹಾಸನ ಜಿಲ್ಲೆ ಮತ್ತೂಂದು ಕಣ್ಣು. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ತರುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದು ವಿವರಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡ ವೇಳೆ “ಚುನಾವಣೆಯ ಗಿಮಿಕ್’ ಎಂದು ಕೆಲವರು ಹೇಳಿದ್ದರು. ಈ ಬಗ್ಗೆ ಜನರಲ್ಲಿ ಮೂಡಿಸಿದ್ದ ಗೊಂದಲಗಳಿಗೆ ಈಗ ತೆರೆ ಎಳೆಯಲಾಗಿದೆ. ಚುನಾವಣೆಗಾಗಿ ಗಿಮಿಕ್‌ಮಡುವ ಜಾಯಮಾನ ನಮ್ಮದಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಜಿಲ್ಲೆಯಲ್ಲಿ ಬಹುತೇಕ ಏತನೀರಾವರಿ ಯೋಜನೆ ಗಳನ್ನು ಪೂರ್ಣಗೊಳಿಸಿ ನೂರಾರು ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಪಪ್ರಚಾರ ಮಾಡವವರ ಬಾಯಿ ಮುಚ್ಚಿಸಲಾಗಿದೆ. ರೈತರ ಶ್ರೇಯೋಭಿ ವೃದ್ಧಿಯೇ ನಮ್ಮ ಮಂತ್ರವಾಗಿದೆ ವಿನಃ, ಬೇರೆ ಇನ್ಯಾವುದೂ ನಮಗೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎರಡು ವರ್ಷದಲ್ಲಿ ಕನಸು ನನಸು: ತಾಲೂಕಿನ ದಿಡಗ ಹಾಗೂ ಕಬ್ಬಳಿ ವ್ಯಾಪ್ತಿಯಲ್ಲಿನ ನೀರಿನ ಬವಣೆಯ ಬಗ್ಗೆ ಆ ಭಾಗದ ಯುವಕರು ಸಾಮಾಜಿಕಜಾಲತಾಣಗಳಲ್ಲಿ ನೋವು ಹಂಚಿಕೊಂಡಿರುವುದನ್ನು ಗಮನಿಸಿದ್ದೇನೆ. ದಿಡಗ-ಕಬ್ಬಳಿ ವ್ಯಾಪ್ತಿಯ 26
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಈಗಾಗಲೇ ಸರ್ವೆ ಕಾರ್ಯ ಮುಗಿದಿದ್ದು ಪ್ರಸ್ತಾವನೆ ಸಿದ್ಧವಾಗುತ್ತಿದೆ. ಅಂದು ಕೊಂಡಂತೆಯೇ ನಡೆದರೆ, ಇನ್ನೆರೆಡು ವರ್ಷಗಳಲ್ಲಿ ಆ ಭಾಗದ ರೈತರ ಕನಸು ನನಸಾಗಲಿದೆ ಎಂದು ಭರವಸೆ ನೀಡಿದರು. ಸಿದ್ದು ಹಣಬಿಡುಗಡೆ ಮಾಡಿದ್ರು: ವಿಧಾನ ಪರಿಷತ್‌ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಮಾಜಿಸಚಿವ ಎಚ್.ಸಿ.ಶ್ರೀಕಂಠಯ್ಯ ಸೇರಿದಂತೆ ಈ ಭಾಗದ ರಾಜಕೀಯ, ರೈತ ಮುಖಂಡರ ಹೋರಾಟದ ಫಲ ವಾಗಿ ಈಗ ಕೆರೆಗಳಿಗೆ ನೀರು ತುಂಬುತ್ತಿದೆ. ಕಾಂಗ್ರೆಸ್ ನಾಯಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂ ಡರು ಪಾದಯಾತ್ರೆ ಮಾಡಿ ಏತನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ತಂದಿದ್ದರಿಂದಹಿರೀಸಾವೆ-ಜುಟ್ಟನಹಳ್ಳಿಏತನೀರಾವರಿಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯ ಹಣಬಿಡುಗಡೆ ಮಾಡಿದ್ದರು ಎಂದು ವಿವರಿಸಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಅಧ್ಯಕ್ಷ ದೇವರಾಜೇಗೌಡ, ಜಿಪಂ ಸದಸ್ಯರಾದ ಸಿ.ಮಂಜೇಗೌಡ, ಮಮತಾ ರಮೇಶ್,ತಾಪಂ ಅಧ್ಯಕ್ಷೆ ಶ್ಯಾಮಲಾ ಉದಯಕುಮಾರ್,ಬಿಜೆಪಿ ತಾಲೂಕು ಅಧ್ಯಕ್ಷ ಚೆನ್ನಕೇಶವ, ತಹಶೀಲ್ದಾರ್ ಜೆ.ಬಿ.ಮಾರುತಿ, ಜಿಪಂ ಉಪ ಕಾರ್ಯದರ್ಶಿ ಮಹೇಶ್, ಪ್ರಮುಖರಾದ ಪಟೇಲ್ ಮಂಜುನಾಥ್, ಮಹೇಶ್, ಕಾರ್ಯಪಾಲಕ ಎಂಜಿನಿಯರ್ ಗುಂಡಪ್ಪ. ಎಇಇ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ
ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,
ಹೊಸ ಸೇರ್ಪಡೆ
ಎಂಬುಲ್ದೇನಿಯ-ರೂಟ್ ಗ್ರೇಟ್ ಫೈಟ್
ಮಂಗಳೂರು ಪ್ಲಾಸ್ಟಿಕ್ ಪಾರ್ಕ್ಗೆ ಕೇಂದ್ರದಿಂದ 40 ಕೋ.ರೂ. : ಡಿವಿಎಸ್
ನಮ್ಮ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್ ಓದಬೇಕು : ಬಿ.ಸಿ.ಪಾಟೀಲ್
ಸಕಾಲಕ್ಕೆ ಬಾರದ ತುರ್ತುವಾಹನ : ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ ಗ್ರಾಮಸ್ಥರು
ಭಾರೀ ಚರ್ಚೆಗೆ ಗ್ರಾಸವಾದ ಬಿಜೆಪಿ-ಜೆಡಿಎಸ್ ಬೆಂಬಲಿತ ಸದಸ್ಯರ ಮೈತ್ರಿ ಧರ್ಮಪಾಲನೆ ಆಣೆ ಪ್ರಮಾಣ