ತಲ್ಲಣ ಸೃಷ್ಟಿಸಿದ ಭವಾನಿ ಬಯಕೆಯ ಬಿರುಗಾಳಿ

ನಾನೇ ಅಭ್ಯರ್ಥಿ ಎಂದಿರುವ ಭವಾನಿ ರೇವಣ್ಣ

Team Udayavani, Jan 25, 2023, 9:32 AM IST

ತಲ್ಲಣ ಸೃಷ್ಟಿಸಿದ ಭವಾನಿ ಬಯಕೆಯ ಬಿರುಗಾಳಿ

ಎಚ್‌.ಡಿ. ಕುಮಾರಸ್ವಾಮಿಯವರು ಮತ್ತು ಸಂಸದ ಪ್ರಜ್ವಲ್‌ ರೇವಣ್ಣ ಅವರೂ ಹಾಸನ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಆಗಿಲ್ಲ ಎಂದೇ ಸ್ಪಷ್ಟಪಡಿಸುವ ಮೂಲಕ ಭವಾನಿಯವರ ಬಯಕೆಯ ಬಿರುಗಾಳಿ ಯನ್ನು ಸದ್ಯಕ್ಕೆ ದೇವೇಗೌಡರತ್ತ ತಿರುಗಿಸಿದ್ದಾರೆ. ದೇವೇಗೌಡರು ಭವಾನಿಯವರ ಬಯಕೆಯನ್ನು ಹೇಗೆ ನಿಭಾಯಿಸುವರೋ, ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಯಾರನ್ನು ಸ್ಪರ್ಧೆಗಿಳಿ ಸುವರೋ ಎಂಬ ಕುತೂಹಲ ಇನ್ನೂ ಕೆಲವು ದಿನ ಮುಂದುವರಿಯುವುದಂತೂ ಖಚಿತ.

ಹಾಸನ: ಎಚ್‌.ಡಿ.ರೇವಣ್ಣನವರ ಪತ್ನಿ ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಕ್ಷೇತ್ರದ ಅಭ್ಯರ್ಥಿಯಾಗಲು ಬಯಸಿ ರುವುದು ಎಚ್‌.ಡಿ.ದೇವೇಗೌಡರ ಕುಟುಂಬದಲ್ಲಿ ಇಕ್ಕಟ್ಟು ಸೃಷ್ಟಿಸಿದೆ. ಪಕ್ಷದಿಂದ ಅಧಿಕೃತವಾಗಿ ಅಭ್ಯರ್ಥಿಯನ್ನು ಪ್ರಕಟಿಸುವ ಮುನ್ನವೇ ಭವಾನಿ ರೇವಣ್ಣ ಅವರು ನಾನೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವುದು ಗೌಡರ ಕುಟುಂಬದೊಳಗೆ ಅಸಮಾಧಾನದ ಬಿರುಗಾಳಿ ಯನ್ನೇ ಸೃಷ್ಟಿಸಬಹುದು.

ಈ ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಎಚ್‌.ಎಸ್‌.ಪ್ರಕಾಶ್‌ ಅವರ ಪುತ್ರ ಎಚ್‌.ಪಿ.ಸ್ವರೂಪ್‌ ಅವರೂ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌. ಡಿ.ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಸ್ವರೂಪ್‌ ಅವರು ಕ್ಷೇತ್ರದಲ್ಲಿ ಸುತ್ತಾಡುತ್ತಾ ಚುನಾವಣ ಸಿದ್ಧತೆಯಲ್ಲಿದ್ದಾರೆ. ಆದರೆ ರೇವಣ್ಣ ಅವರ ಕುಟುಂಬದ ಕೆಂಗಣ್ಣಿಗೆ ಗುರಿಯಾಗಿರುವ ಸ್ವರೂಪ್‌ ಅವರಲ್ಲಿ ಭವಾನಿ ರೇವಣ್ಣ ಅವರ ಬಯಕೆಯ ಬಿರುಗಾಳಿಯು ತಲ್ಲಣ ಸೃಷ್ಟಿಸಿದೆ.

ಜೆಡಿಎಸ್‌ ಟಿಕೆಟ್‌ಗಾಗಿ ಭವಾನಿ ಹಾಗೂ ಸ್ವರೂಪ್‌ ಅವರ ನಡುವಿನ ಟಿಕೆಟ್‌ ಪೈಪೋಟಿ ಕಳೆದ 6 ತಿಂಗಳಿನಿಂದಲೂ ಇತ್ತು. ಈಗ ಆ ಪೈಪೋಟಿ ಕ್ಲೈಮಾಕ್ಸ್‌ ಹಂತಕ್ಕೆ ಬಂದು ತಲುಪಿದೆ. ಹಾಸನ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಪ್ರೀತಂ ಗೌಡ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂಬುದು ಗೌಡರ ಕುಟುಂಬದ ಹಾಗೂ ಜೆಡಿಎಸ್‌ ಕಾರ್ಯಕರ್ತರ ಪರಮೋತ್ಛ ಗುರಿ. ಆದರೆ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಸ್ವರೂಪ್‌ ನಡುವಿನ ಪೈಪೋಟಿ ಫ‌ಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಸೃಷ್ಟಿಯಾಗಿದೆ.

ಎಚ್‌.ಎಸ್‌.ಪ್ರಕಾಶ್‌ 4 ಬಾರಿ ಹಾಸನ ಕ್ಷೇತ್ರದ ಶಾಸಕರಾಗಿದ್ದ ವರು. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಹಾಸನ ಜಿಲ್ಲೆಯ ರಾಜಕಾರಣದ ಅಂಬೆಗಾಲಿನ ಶಿಶು ಎಂದೇ ಗುರುತಿಸಿದ್ದ ಪ್ರೀತಂ ಗೌಡರೆದುರು ಸೋತಿದ್ದು ಪ್ರಕಾಶ್‌ ಮತ್ತು ದೇವೇಗೌಡರ ಕುಟುಂಬಕ್ಕೆ ಸಹಿಸಿಕೊಳ್ಳಲಾಗದ ರಾಜಕೀಯ ಅಘಾತವನ್ನಂಟು ಮಾಡಿತು. ಚುನಾವಣೆ ಮುಗಿದ ಅನಂತರ ಅನಾರೋಗ್ಯಕ್ಕೀಡಾದ ಪ್ರಕಾಶ್‌ ಅವರು ಚೇತರಿಸಿಕೊಳ್ಳಲಾಗದೆ ಇಹಲೋಕ ತ್ಯಜಿಸಿದರು. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯ ಸೇಡು ತೀರಿಸಿಕೊಳ್ಳುವ ತವಕ ದೇವೇಗೌಡರು ಹಾಗೂ ಪ್ರಕಾಶ್‌ ಕುಟುಂಬಗಳಲ್ಲೂ ಇದೆ. ಆದರೆ ಅದಕ್ಕಾಗಿ ಒಗ್ಗಟ್ಟಿನ ಕಾರ್ಯತಂತ್ರ ರೂಪಿಸಬೇಕಾದ ಹೊತ್ತಿನಲ್ಲಿ ಟಿಕೆಟ್‌ಗಾಗಿ ಎರಡೂ ಕುಟುಂಬಗಳ ನಡುವೆ ಟಿಕೆಟ್‌ಗಾಗಿ ಪೈಪೋಟಿ ಎದುರಾಗಿರುವುದು ಜೆಡಿಎಸ್‌ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಕೆ.ಆರ್‌.ನಗರ ಅಥವಾ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದ ಭವಾನಿ ರೇವಣ್ಣ ಅವರು ಈ ಬಾರಿ ಶತಾಯಗ ತಾಯ ಸ್ಪರ್ಧೆಗಿಳಿಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಸ್ವಯಂ ಘೋಷಣೆಯನ್ನೂ ಮಾಡಿಕೊಂಡಿದ್ದಾರೆ. ಆದರೆ ಹಾಸನ ವಿಧಾನಸಭಾ ಕ್ಷೇತ್ರದ ಒಳ ರಾಜಕೀ ಯದ ಸುಳಿಗಳನ್ನು ಅರಿತಿರುವ ದೇವೇ ಗೌಡರು, ಎಚ್‌.ಡಿ.ಕುಮಾರಸ್ವಾಮಿ ಹಾಗೂ ಎಚ್‌.ಡಿ. ರೇವಣ್ಣ ಅವರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.
ಈಗಾಗಲೇ ರೇವಣ್ಣ ಅವರ ಮನೆಯಲ್ಲಿ ಈಗಾಗಲೇ ರೇವಣ್ಣನವರು ಸೇರಿ ಇಬ್ಬರು ಶಾಸಕರು, ಒಬ್ಬ ಸಂಸದರಿರುವಾಗಲೇ ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಕೊಟ್ಟರೆ ಕುಟುಂಬ ರಾಜಕಾರಣದ ಟೀಕೆಗೆ ತುತ್ತಾಗಬೇಕಾಗುತ್ತದೆ. ಜತೆಗೆ ನಾಲ್ಕು ದಶಕಗಳ ಕಾಲದಿಂದ ದೇವೇಗೌಡರ ಕುಟುಂಬಕ್ಕೆ ವಿಧೇಯರಾಗಿರುವ ಪ್ರಕಾಶ್‌ ಕುಟುಂಬಕ್ಕೆ ನ್ಯಾಯ ಕೊಡಲಿಲ್ಲವೆಂಬ ಅಪವಾದವನ್ನೂ ಹೊರಬೇಕಾದೀತೆಂಬ ಆತಂಕವೂ ದೇವೇಗೌಡ ಮತ್ತು ಕುಟುಂಬದವರದ್ದು.

ಈ ಆತಂಕಗಳನ್ನೆಲ್ಲ ಬದಿಗೊತ್ತಿ ಭವಾನಿ ಅವರು ಸ್ಪರ್ಧೆಗೆ ಮುಂದಾಗಿದ್ದಾರೆ. ಎಚ್‌.ಡಿ.ರೇವಣ್ಣ ಅವರು ಹಾಸನ ನಗರಕ್ಕೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಫ‌ಲ ನೀಡಲಿವೆ ಎಂಬುದು ಭವಾನಿ ಅವರ ನಿರೀಕ್ಷೆ. ಅಭಿವೃದ್ಧಿಯ ಕೊಡುಗೆಗಳ ಜತೆಗೆ ಜಾತಿ ಸಮೀಕರಣವೂ ಮುಖ್ಯ. ಆಡಳಿತಾರೂಢ ಪಕ್ಷದ, ಅರ್ಥಿಕ ಬಲಾಡ್ಯ ಅಭ್ಯರ್ಥಿಯನ್ನು ಮಣಿಸಲು ಸಕಲ ಕಾರ್ಯತಂತ್ರ ಗಳನ್ನು ರೂಪಿಸಬೇಕಾಗಿದೆ ಎಂಬುದು ಜೆಡಿಎಸ್‌ ಕಾರ್ಯಕರ್ತರ ಲೆಕ್ಕಾಚಾರ.

ಈ ಎಲ್ಲ ಬೆಳವಣಿಗೆ ಹಾಸನ ಜಿಲ್ಲೆಯಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಎಚ್‌.ಡಿ.ರೇವಣ್ಣ ಅವರಿಗೂ ಬಿಸಿತುಪ್ಪವಾಗಿದೆ. ಪತ್ನಿಗೆ ಟಿಕೆಟ್‌ ಕೊಡಲ್ಲ ಎಂದು ಹೇಳಲಾಗದ, ಅತ್ತ ನನ್ನ ನಿರ್ದೇಶನವಿಲ್ಲದೆ ಚುನಾವಣೆ ಸಿದ್ಧತೆಯಲ್ಲಿರುವ ಎಚ್‌.ಪಿ.ಸ್ವರೂಪ್‌ಗೆ ಟಿಕೆಟ್‌ ಕೊಟ್ಟರೆ ಮುಂದೆ ನನ್ನ ಹಿಡಿತಕ್ಕೆ ಸಿಗದಿದ್ದರೆ ಎಂಬ ಭಯವೂ ರೇವಣ್ಣ ಅವರನ್ನು ಕಾಡುತ್ತಿರುವಂತಿದೆ. ಪಕ್ಷದೊಳಗಿನ ಕಿಚ್ಚಿನ ಜತೆಗೆ ದೇವೇಗೌಡರ ಕುಟುಂಬದವರು ಹಾಸನ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದರೆ 50 ಸಾವಿರ ಮತಗಳ ಅಂತರದಲ್ಲಿ ಸೋಲಿಸುವೆ ಎಂಬ ಪ್ರೀತಂ ಗೌಡರ ಅಟ್ಟಹಾಸದ ಮಾತು, ಪದೇ ಪದೆ ಪಂಥಾಹ್ವಾನದಿಂದ ಕೆರಳಿರುವ ರೇವಣ್ಣನವರ ಕುಟುಂಬ ಪಂಥಾಹ್ವಾನ ಸ್ವೀಕರಿಸುವುದಾಗಿ ಘೋಷಿಸಿದೆ. ದೇವೇಗೌಡರು ನಿರ್ಧಾರ ಪ್ರಕಟಿಸದೆ ಆದರೆ ಭವಾನಿಯವರನ್ನು ಸ್ಪರ್ಧೆಗಿಳಿಸುವುದಾಗಿ ಹೇಳುವ ಪರಿಸ್ಥಿತಿಯಲ್ಲಿ ರೇವಣ್ಣ ಅವರೂ ಇಲ್ಲ.

-ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋ. ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ಆಸ್ಟ್ರೇಲಿಯ ಟೆಸ್ಟ್‌ ಸರಣಿ: ಭಾರತ ತಂಡದಲ್ಲಿ ನಾಲ್ವರು ನೆಟ್‌ ಬೌಲರ್

ಆಸ್ಟ್ರೇಲಿಯ ಟೆಸ್ಟ್‌ ಸರಣಿ: ಭಾರತ ತಂಡದಲ್ಲಿ ನಾಲ್ವರು ನೆಟ್‌ ಬೌಲರ್

ಫೆ. 20ರಿಂದ 26: ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿ

ಫೆ. 20ರಿಂದ 26: ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-as-asa

ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ

ನೂತನ ಅನುಭವ ಮಂಟಪ ನಾನೇ ಉದ್ಘಾಟನೆ ಮಾಡುತ್ತೇನೆ: ಸಿದ್ದರಾಮಯ್ಯ

ನೂತನ ಅನುಭವ ಮಂಟಪ ನಾನೇ ಉದ್ಘಾಟನೆ ಮಾಡುತ್ತೇನೆ: ಸಿದ್ದರಾಮಯ್ಯ

Kichha Sudeep met dk shivakumar

ಸುದೀಪ್ ಭೇಟಿಯಾದ ಡಿಕೆ ಶಿವಕುಮಾರ್: ಕಾಂಗ್ರೆಸ್ ಪಕ್ಷ ಸೇರುತ್ತಾರಾ ಕಿಚ್ಚ?

thumb-2

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪರಂ ರಾಜೀನಾಮೆ ವದಂತಿ

tdy-21

ಹಾಲಿ ಶಾಸಕರಿಗೆ ಕಾಂಗ್ರೆಸ್‌ ಟಿಕೆಟ್‌ ಪಕ್ಕಾ

MUST WATCH

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಹೊಸ ಸೇರ್ಪಡೆ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ನಿವೃತ್ತ ಬಿಷಪ್‌ ಆ್ಯಂಟನಿ ಫೆರ್ನಾಂಡಿಸ್‌ ನಿಧನ

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಶಾರದಾ ಚಿಟ್‌ ಫಂಡ್‌ ಹಗರಣ: 6 ಕೋ. ರೂ ಮೌಲ್ಯದ ಆಸ್ತಿ ಮುಟ್ಟುಗೋಲು

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಎರಡನೇ ಹಂತದ “ಪ್ರಜಾಧ್ವನಿ’ ಯಾತ್ರೆಗೆ ಕಾಂಗ್ರೆಸ್‌ ಚಾಲನೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ಮುತಾಲಿಕ್‌ಗೆ ಸಹಕರಿಸದಿದ್ದರೆ ಚಿಕ್ಕಮಗಳೂರಿನಲ್ಲೂ ಸ್ಪರ್ಧೆ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.