
ಪ್ರತಿ ಮನೆಗೆ ಪ್ರಧಾನಿ ಮೋದಿ ಅಭಿವೃದ್ದಿ ಕಾರ್ಯ ತಿಳಿಸುತ್ತೇವೆ
Team Udayavani, Mar 21, 2023, 2:34 PM IST

ಹೊಳೆನರಸೀಪುರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 500 ಕಾರ್ಯಕರ್ತರು ಪ್ರತಿ ಗ್ರಾಮಗೂ ತೆರಳಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕೆಲಸ ಮತದಾರರಿಗೆ ತಿಳಿಸಲಿದ್ದಾರೆ ಎಂದು ಬಿಜೆಪಿ ಮುಖಂಡ, ವಕೀಲ, ಬಿಜೆಪಿ ಟಿಕೆಟ್ ಆಕಾಂಕ್ಷಿ ದೇವರಾಜೇಗೌಡ ನುಡಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ಬಿಜೆಪಿ ಕಚೇರಿ ಆವರಣದಲ್ಲಿ ಚುನಾವಣಾ ಪ್ರಚಾರದ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿ ಹೊಳೆನರಸೀಪುರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸು ವಲ್ಲಿ ಯಶ ಸಾಧಿ ಸಲಿದೆ ಎಂದು ಹೇಳಿದರು.
ತ್ರಿಕೋನ ಸ್ಪರ್ಧೆ ಗ್ಯಾರಂಟಿ: ಅದಕ್ಕಾಗಿ ಬೇಕಾಗಿರುವ ಸಕಲ ತಂತ್ರಗಳನ್ನು ಪಕ್ಷ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಿ, ಪ್ರಥಮ ಬಾರಿಗೆ ಬಿಜೆಪಿ ಬಾವುಟ ಹಾರಿಸಲಾಗುವುದು ಎಂದು ಹೇಳಿದರು.
ಮತದಾರನ ಬೆಂಬಲ ಗ್ಯಾರಂಟಿ ಸಿಗುತ್ತೆ: ಈ ಬಾರಿಯ ಚುನಾವಣೆಯಲ್ಲಿ ಮತದಾರ ಬಿಜೆಪಿ ಬೆಂಬಲಿಸುವುದು ಗ್ಯಾರಂಟಿ ಆಗಿದೆ. ಏಕೆಂದರೆ, ಕೇಂದ್ರ ಸರ್ಕಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಹಾಗೂ ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರು ನೀಡಿರುವ ಜನೋಪಕಾರಿ ಯೋಜನೆಗಳು ಈ ಚುನಾವಣೆಯಲ್ಲಿ ಮುನ್ನಡೆಗೆ ಬರಲಿದೆ. ಪ್ರಸ್ತುತ ನಮ್ಮ ಪಕ್ಷ ಯಾರನ್ನೇ ಕಣಕ್ಕಿಳಿಸಿದರೂ, ಗೆಲುವಿಗೆ ಅಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಶ್ರಮಿಸಲು ಸಿದ್ಧರಾಗಿರುವುದಾಗಿ ತಿಳಿಸಿದರು.
ಪ್ರಚಾರಕ್ಕೆ 25 ವಾಹನ: ಇದೀಗ ನಮ್ಮ ಸ್ವಂತ ಖರ್ಚಿನಲ್ಲಿ ಎರಡು ವಾಹನ ಕ್ಷೇತ್ರಕ್ಕೆ ತರಲಾಗಿದೆ. ಉಳಿದ 23 ವಾಹನ ಸದಸ್ಯದಲ್ಲೆ ಬರಲಿವೆ. ಪಕ್ಷದ ಅಭ್ಯರ್ಥಿಯ ಗೆಲುವಿಗೆ ಬೇಕಾದ ಎಲ್ಲಾ ತಂತ್ರಗಳನ್ನು ನಾವು ಈ ಬಾರಿಯ ಚುನಾವಣೆಯಲ್ಲಿ ಪ್ರಯೋಗಿಸುವುದು ಗ್ಯಾರಂಟಿ ಎಂದು ಹೇಳಿದರು.
ನಮ್ಮ ಕ್ಷೇತ್ರದ ಶಾಸಕರು ಬಿಇಒ ಆಗಿ ಬಂದಿದ್ದ ಸೋಮಲಿಂಗೇಗೌಡ ಅವರನ್ನು ಬಲವಂತವಾಗಿ ವರ್ಗಾಯಿಸಿ, ಆ ಸ್ಥಾನಕ್ಕೆ ತಮ್ಮ ಕಡೆಯ ಅಧಿ ಕಾರಿಯನ್ನು ವರ್ಗಾವಣೆ ಮಾಡಿಸಿಕೊಂಡು ಬಂದಿದ್ದರು. ಆದರೆ, ಹಾಲಿ ಇದ್ದ ಬಿಇಒ ಸೋಮಲಿಂಗೇಗೌಡ ಕೆಎಟಿ ಮೂಲಕ ತಡೆ ತಂದು ಯಶಸ್ಸು ಸಾಧಿಸಿದ್ದಾರೆ. ಅದಕ್ಕೆ ತಾವೂ ಸಹಕಾರ ನೀಡಿದ್ದಾಗಿ ಹೇಳಿದರು.
ತಹಶೀಲ್ದಾರ ವಿಶ್ವನಾಥ್ ಶಾಸಕ ರೇವಣ್ಣರ ನೆಂಟರು: ತಹಶೀಲ್ದಾರ್ ವಿಶ್ವನಾಥ್ ಅವರು ಶಾಸಕ ರೇವಣ್ಣ ಅವರು ಸಮೀಪದ ನೆಂಟರಾಗಿದ್ದು, ಅವರನ್ನು ಶಾಸಕರು ತಮ್ಮ ಪ್ರಭಾವ ಬಳಿಸಿ ಕರೆ ತಂದಿದ್ದಾರೆ. ತಹಶೀಲ್ದಾರ್ ವಿಶ್ವನಾಥ್ ಅವರದ್ದು ನಮ್ಮ ತಾಲೂಕಿನ ಬಸವನಾಯಕನಹಳ್ಳಿ ಗ್ರಾಮ. ಇಂತಹ ಅಧಿಕಾರಿಯಿಂದ ಪಾರದರ್ಶಕ, ಮುಕ್ತ ಚುನಾವಣೆ ಬಯಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ದೇವರಾಜೇಗೌಡ, ಈ ಬಗ್ಗೆ ತಾವು ಚುನಾವಣಾ ಆಯೋಗದ ಮೊರೆ ಹೋಗಿದ್ದೇನೆ ಎಂದು ತಿಳಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
