ರಾಷ್ಟ್ರೀಯ ರೈತ ದಿನಾಚರಣೆಗೆ ಅನ್ನದಾತರಿಗೇ ಆಹ್ವಾನವಿಲ್ಲ
Team Udayavani, Dec 24, 2020, 2:46 PM IST
ಚನ್ನರಾಯಪಟ್ಟಣ: ಕೃಷಿ ಇಲಾಖೆ ರೈತರನ್ನುಕಡೆಗಣಿಸುತ್ತಿದ್ದು, ಅಧಿಕಾರಿಗಳ ಬೇಜವಾಬ್ದಾರಿ ಯಿಂದ ಬೆರಳೆಣಿಕೆಯಷ್ಟು ಮಂದಿ ಸೇರಿ ರೈತ ದಿನಾಚರಣೆ ಮಾಡುವಂತಾಗಿದೆ ಎಂದು ಸಂಘದ ಜಿಲ್ಲಾ ಸಂಚಾಲಕ ಡೊಡ್ಡೇರಿ ಶ್ರೀಕಂಠಕಳವಳ ವ್ಯಕ್ತ ಪಡಿಸಿದರು.
ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೃಷಿ ಇಲಾಖೆಯಿಂದ ನಡೆದರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿ, ಮಿನಿವಿಧಾನ ಸೌಧ ಮುಂದೆ ಇರುವ ಕೃಷಿ ಇಲಾಖೆ ಕಚೇರಿ ಬಳಿ ಕಾರ್ಯಕ್ರಮ ಮಾಡಿದ್ದರೆ ಸಾವಿರಾರು ರೈತರು ಪಾಲ್ಗೊಳ್ಳುತ್ತಿದ್ದರು. ಎಪಿಎಂಸಿಆವರಣದಲ್ಲಿ ಮಾಡಿದ್ದು ಸರಿಯಲ್ಲ ಎಂದರು.
ಸರಿಯಾಗಿ ಮಾಹಿತಿ ನೀಡಿಲ್ಲ: ರೈತ ದಿನಾಚರಣೆ ಮಾಡುವ ಮೊದಲು ತಾಲೂಕಿನ ರೈತ ಸಂಘಟನೆಗಳ ಸಭೆ ಮಾಡಬೇಕಿತ್ತು. ಸಂಘದ ಪದಾಧಿಕಾರಿಗಳು ರೈತರನ್ನು ಕರೆ ತರುತ್ತಿದ್ದೆವು. ಎತ್ತಿನ ಗಾಡಿ ಮೆರವಣಿಗೆಮೂಲಕ ಅದ್ಧೂರಿಯಾಗಿ ಕಾರ್ಯಕ್ರಮಮಾಡಬಹುದಿತ್ತು. ಅಧಿಕಾರಿಗಳು ಸರಿಯಾಗಿಮಾಹಿತಿ ನೀಡದ ಹಿನ್ನೆಲೆಯಲ್ಲಿ ರೈತರು ಆಗಮಿಸಿಲ್ಲ ಎಂದು ಆರೋಪಿಸಿದರು.
ವರ್ಷಕ್ಕೆ ಒಮ್ಮೆ ನಡೆಯುವ ರೈತ ದಿನಾಚರಣೆಯನ್ನೇ ಸರಿಯಾಗಿ ಮಾಡದಅಧಿಕಾರಿಗಳು, ಇನ್ನು ರೈತರಿಗೆ ಸರ್ಕಾರದ ಯೋಜನೆಯಾವ ರೀತಿ ತಲುಪಿಸುತ್ತಾರೆ ಎಂದು ಪ್ರಶ್ನಿಸಿದಅವರು, ಮುಂದಿನ ದಿನಗಳಲ್ಲಿ ಹೀಗೆ ಬೇಕಾಬಿಟ್ಟಿರೈತ ದಿನಾಚರಣೆ ಮಾಡಿದ್ರೆ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಸಾಲ ಮನ್ನಾ ಬೇಡ: ಪ್ರಗತಿಪರ ರೈತ ತುಳಸಿರಾಜ್ ಮಾತನಾಡಿ, ರೈತರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಬೇಕು, ಸರ್ಕಾರದ ಸಾಲಮನ್ನಾ, ಸಹಾಯಧನ ನೀಡುವುದಷ್ಟೇ ಅಲ್ಲ, ಬೆಳೆದ ಬೆಳೆಗೆಮಾರುಕಟ್ಟೆ ಒದಗಿಸಬೇಕು, ಸರ್ಕಾರ ತಮ್ಮ ಮತಗಳಿಕೆಗಾಗಿ ಯೋಜನೆ ರೂಪಿಸುತ್ತದೆ ಹೊರತು, ಅನ್ನದಾತರಿಗಾಗಿ ಅಲ್ಲ ಎನ್ನುವುದು ಮನಗಂಡುಆಸಕ್ತಿಯಿಂದ ಕೃಷಿ ಮಾಡುವುದು ಒಳಿತು ಎಂದು ಸಲಹೆ ನೀಡಿದರು.
ಸರ್ಕಾರದಿಂದ ರೈತರ ಏಳಿಗೆ ಇಲ್ಲ: ಸಾವಯವ ಕೃಷಿಕ ಓಂಕಾರಮೂರ್ತಿ ಮಾತನಾಡಿ, ಸಮಗ್ರಕೃಷಿಗೆ ರೈತರುಮುಂದಾಗಬೇಕು, ಶ್ರಮ ಮತ್ತು ಶ್ರದ್ಧೆಯಿಂದ ಕೃಷಿ ಕಾರ್ಯಮಾಡಿದರೆ ಯಶಸ್ಸುಗಳಿಸುವುದರೊಂದಿಗೆ ಹಣ ಸಂಪಾದನೆ ಮಾಡಬಹುದಾಗಿದೆ. ಸರ್ಕಾರ ಹಾಗೂ ಸಂಘಗಳು ರೈತರ ಏಳಿಗೆ ಬಯಸುತ್ತಾರೆಹೊರತು, ಏಳಿಗೆಗೆ ಬೇಕಾದ ಸೌಲಭ್ಯ ನೀಡಲು ಮುಂದಾಗುವುದಿಲ್ಲ ಎಂದು ಹೇಳಿದರು.
ರೈತರ ಶೋಷಣೆ ಆಗುತ್ತಿದೆ: ರೈತರು ದೇಶೀಯ ರಾಸು ಸಾಕುವ ಮೂಲಕ ರಾಸುಗಳ ಮೂಲಕ ಕೃಷಿಮಾಡುವುದರಿಂದ ಶೂನ್ಯ ವೆಚ್ಚದಲ್ಲಿ ಕೃಷಿ ಮಾಡಬಹುದು, ಆಧುನಿಕ ಕೃಷಿ ಹೆಸರಿನಲ್ಲಿಯಂತ್ರಗಳ ಬಳಕೆ ಮಾಡುತ್ತಿದ್ದು, ಕೃಷಿಗೆ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಇನ್ನು ಹಾಲಿನ ವ್ಯಾಮೋಹಕ್ಕೆ ಬಲಿಯಾಗಿ ವಿದೇಶಿ ತಳಿ ರಾಸುಗಳನ್ನು ಸಾಕಿ,ಅವುಗಳ ಪೋಷಣೆಗೆ ನೀಡುವ ಸಮಯವನ್ನು ಕೃಷಿಗೆ ನೀಡುತ್ತಿಲ್ಲ, ದೇಶೀಯ ರಾಸುಗಳಿಂದ ಕೃಷಿ ಜೊತೆಗೆ ಆರೋಗ್ಯಕರ ಹಾಲು ದೊರೆಯುತ್ತದೆ, ಇನ್ನು ಗೊಬ್ಬರ ಉತ್ಪತ್ತಿಯಾಗುತ್ತದೆ ಎಂದು ಹೇಳಿದರು.
ರೈತ ಸಂಘದ ಮುಖಂಡರಾದ ಎಚ್.ಜಿ.ರವಿ,ಮಂಜಣ್ಣ, ಶಿವೇಗೌಡ, ರಾಮಚಂದ್ರ, ಎಚ್.ಎನ್. ಲವಣ್ಣ, ಕೃಷಿ ಇಲಾಖೆ ಸಹಾಯ ನಿರ್ದೇಶಕ ಗುರುಸಿದ್ದಪ್ಪ ಮೊದಲದವರು ಉಪಸ್ಥಿತರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
37ನೇ ರಾಷ್ಟ್ರೀಯ ನೃತ್ಯೋತವ್ಸ ಮಡಿಕೇರಿಯಲ್ಲಿ ಆಯೋಜನೆ
ದೊಡ್ಡಬೆಟ್ಟದಲ್ಲಿ ಪುಂಡಾನೆಗೆ ಹುಡುಕಾಟ : ನಾಲ್ಕನೇ ದಿನದ ಕಾಡಾನೆ ಕಾರ್ಯಾಚರಣೆ ವಿಫಲ
ಹೊಳೆನರಸೀಪುರ ಪಟ್ಟಣದಲ್ಲಿ ಅಕ್ರಮ ಮದ್ಯ ಮಾರಾಟಕ್ಕಿಲ್ಲ ಕಡಿವಾಣ
ಮೂರಲ್ಲಿ ಒಂದು ಚಿರತೆ ಬೋನಿಗೆ ಬಿತ್ತು! ಬಿಸಲೆ ಅರಣ್ಯದಲ್ಲಿ ಜೀವ ಭಯ ಹುಟ್ಟಿಸಿದ್ದ ಚಿರತೆ
ಆಲೂರು : ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ ಬೈಕ್ ಸವಾರ ಪಾರು