ರೈತರ ಖಾತೆಗೆ ಫಸಲ್ ಬಿಮಾ ವಿಮೆ ಹಣ?
ಈಗಾಗಲೇ ಸಾವಿರಾರು ರೈತರ ಖಾತೆಗೆ ಪರಿಹಾರ ಜಮೆ ಡಿಸೆಂಬರ್ ಅಂತ್ಯದಲ್ಲೂ ಮತ್ತಷ್ಟು ರೈತರಿಗೆ ಹಣ ಸಂದಾಯ
Team Udayavani, Dec 29, 2020, 4:19 PM IST
ಚನ್ನರಾಯಪಟ್ಟಣ: 2018- 19ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ವಿಮಾ ಯೋಜನೆಯಲ್ಲಿತಾಲೂಕಿಗೆ 6 ಲಕ್ಷ ರೂ.ಗಳನ್ನು 1036 ಮಂದಿ ರೈತರಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ಜಮೆ ಮಾಡಿದೆ.
ತಾಲೂಕಿನ ಬಹುತೇಕ ರೈತರಿಗೆ ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿಮೆ ಪರಿಹಾರವನ್ನುಸಕಾಲಕ್ಕೆ ನೀಡುತ್ತಿದ್ದು ಮಧ್ಯವರ್ತಿಗಳ ಕಾಟವಿಲ್ಲದೆರೈತರು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಿಂದ ವಿಮೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. ಮುಸುಕಿನ ಜೋಳ, ರಾಗಿ, ಆಲೂಗಡ್ಡೆ, ಹುರಳಿ, ಹೆಸರು, ಅಲ ಸಂದೆ, ಭತ್ತ ಸೇರಿದಂತೆ ವಿವಿಧ ಬೆಳೆಗಳಿಗೆ ಸಾವಿರಾರು ರೈತರು ವಿಮೆ ಮಾಡಿಸಿದ್ದರು. ರೈತರು ಖಾತೆ ಹೊಂದಿರುವ ರಾಷ್ಟ್ರೀಕೃತಬ್ಯಾಂಕಿನಲ್ಲಿ ಬ್ಯಾಲೆನ್ಸ್ ಮಾಹಿತಿ ಪಡೆದಾಗ ಹಣ ತಮ್ಮ ಖಾತೆಗೆ ಸಂದಾಯ ಆಗಿರುವುದು ತಿಳಿದು ಬಂದಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಹಣ ಜಮೆ ಆಗಿರಬಹುದೆಂದು ತಿಳಿದ ರೈತರು, ಕೃಷಿ ಇಲಾಖೆಯನ್ನುಸಂಪರ್ಕಿಸಿದಾಗ ಬೆಳೆವಿಮೆ ಪರಿಹಾರ ಹಣ ಬಂದಿರುವುದಾಗಿ ತಿಳಿಸಿದ್ದಾರೆ.
2018-19ರಲ್ಲಿ 5.65 ಲಕ್ಷ ರೂ.: ತಾಲೂಕಿನ ಕಸಬಾ ಹೋಬಳಿ 130 ರೈತರ 120 ಹೆಕ್ಟೇರ್‌ಗೆ 30ಸಾವಿರ ರೂ. ದಂಡಿಗನಹಳ್ಳಿ ಹೋಬಳಿ 330ರೈತರಿಂದ 341 ಹೆಕ್ಟೇರ್‌ಗೆ 2.10 ಲಕ್ಷ ರೂ.ಬಾಗೂರು ಹೋಬಳಿ 216 ರೈತರ 196 ಹೆಕ್ಟೇರ್1.27 ಲಕ್ಷ ರೂ. ನುಗ್ಗೇಹಳ್ಳಿ ಹೋಬಳಿ 151 ರೈತರ135 ಹೆಕ್ಟೇರ್‌ಗೆ 1.20 ಲಕ್ಷ ರೂ. ಶ್ರವಣಬೆಳಗೊಳಹೋಬಳಿ 87 ರೈತರ 71 ಹೆಕ್ಟೇರ್‌ಗೆ 78 ಸಾವಿರ ರೂ.ಪ್ರಧಾನ ಮಂತ್ರಿ ಫಸಲ್ ಬಿಮಾ ವಿಮಾ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಿದೆ.
ಪ್ರಸಕ್ತ ವರ್ಷವೂ ವಿಮೆ ಮಾಡಿಸಿದ್ದಾರೆ: ತಾಲೂಕಿನ6 ಹೋಬಳಿಯಿಂದ 4964 ರೈತರು 3504 ಹೆಕ್ಟೇರ್‌ಗಪ್ರಧಾನ ಮಂತ್ರಿ ಫಸಲ್ ಬಿಮಾ ವಿಮೆ ಹಣ ಜಮೆಮಾಡಿಸಿದ್ದು 2021 ಡಿಸೆಂಬರ್‌ನಲ್ಲಿ ರೈತರ ಖಾತೆಗೆ ವಿಮೆ ಹಣ ಜಮೆ ಆಗಲಿದೆ.
ಸಮೀಕ್ಷೆ ನಡೆಯುತ್ತಿದೆ: ಪ್ರಸಕ್ತ ವರ್ಷ ಪ್ರಧಾನಮಂತ್ರಿ ಫಸಲ್ ಬಿಮಾ ವಿಮೆ ಯೋಜನೆ ಸಮೀಕ್ಷೆನಡೆಯುತ್ತಿದ್ದು ಎಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆಎಂಬ ವರದಿಯನ್ನು ಹೋಬಳಿಯ ರೈತ ಸಂಪರ್ಕಕೇಂದ್ರಗಳು ತಾಲೂಕಿನ ಕೃಷಿ ಇಲಾಖೆ ಮೂಲಕ ಕೃಷಿಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಗೆ ವರದಿನೀಡಿದ ಮೇಲೆ ಡಿಸೆಂಬರ್ ಅಂತ್ಯಕ್ಕೆ ವಿಮೆ ಪರಿಹಾರಹಣ ನೇರವಾಗಿ ವಿಮೆ ಮಾಡಿಸಿರುವ ರೈತರ ಖಾತೆಗೆ ಜಮೆಯಾಗಲಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾಯೋಜನೆ ರೈತರ ಸಂಕಷ್ಟಕ್ಕೆವರವಾಗುತ್ತಿದೆ. ಆದರೆ ಈ ಬಗ್ಗೆ ಸ್ಥಳಿಯಜನಪ್ರತಿನಿಧಿಗಳು ಅಪಪ್ರಚಾರ ಮಾಡಿಹೆಚ್ಚು ರೈತರು ವಿಮೆ ಮಾಡಿಸಲುಮುಂದಾಗುತ್ತಿಲ್ಲ, ಕಳೆದ ಮೂರುವರ್ಷದಿಂದ ಮೋದಿ ಸರ್ಕಾರ ಸಕಾಲಕ್ಕೆವಿಮೆ ಹಣವನ್ನು ನೇರವಾಗಿ ಬ್ಯಾಂಕ್‌ಖಾತೆಗೆ ಜಮೆ ಮಾಡುತ್ತಿದೆ.
– ಲಕ್ಷ್ಮಮ್ಮ, ಗುಳಸಿಂದ ಗ್ರಾಮದ ರೈತ ಮಹಿಳೆ
ಪ್ರಸ ಕ್ತ ವರ್ಷ ಉತ್ತಮ ಮಳೆಯಾಗುತ್ತಿದ್ದು ವಿಮೆ ಅಗತ್ಯವಿಲ್ಲ ಎಂದು ಹಲವು ರೈತರು ಆಲೋಚನೆಯಲ್ಲಿದ್ದರು. ಆದರೆ, ಮುಸುಕಿನ ಜೋಳ, ರಾಗಿ ಬೆಳೆಗೆ ಸೈನಿಕ ಹುಳು ಹಾವಳಿ ಹೆಚ್ಚಿದ್ದು ಬೆಳೆ ನಾಶವಾಗುತ್ತಿದೆ.ಹಾಗಾಗಿ ರೈತರು ತಮ್ಮ ಬೆಳೆಗೆ ವಿಮೆ ಮಾಡಿಸುವಮೂಲಕ ಕೃಷಿಯಲ್ಲಿ ಮುಂದಾಗುವ ನಷ್ಟದ ಹಣ ತುಂಬಿಕೊಳ್ಳಲು ಆಸಕ್ತಿ ವಹಿಸಿದ್ದಾರೆ. – ಎಫ್.ಕೆ.ಗುರುಸಿದ್ದಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ
– ಶಾಮಸುಂದರ್ ಕೆ.ಅಣ್ಣೇನಹಳ್ಳಿ