Udayavni Special

ಫಾಸ್ಟ್ಯಾಗ್‌ ಕಡ್ಡಾಯ: ವಾಹನ ಚಾಲಕರ ಆಕ್ರೋಶ

ಫಾಸ್ಟಾಗ್‌ ಇಲ್ಲದ ವಾಹನಗಳು ದುಪ್ಪಟ್ಟು ಶುಲ್ಕ ನೀಡಿ ಸಂಚಾರ› ಕೇಂದ್ರ ಸರ್ಕಾರದ ಕ್ರಮಕ್ಕೆ ಅಸಮಾಧಾನ

Team Udayavani, Feb 17, 2021, 4:45 PM IST

Untitled-4

ಹಾಸನ: ಇಂಧನ ಬೆಲೆ ಏರಿಕೆ ನಡುವೆಯೇ ಹೆದ್ದಾರಿಗಳಲ್ಲಿ ಫಾಸ್ಟ್ಯಾಗ್‌ ಕಡ್ಡಾಯ ಮಾಡಿರುವ ಕೇಂದ್ರ ಸರ್ಕಾರದ ನಡೆಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು – ಮಂಗಳೂರು ರಾಷ್ಟೀಯ ಹೆದ್ದಾರಿ-75 ರಲ್ಲಿ ಹಾಸನ ತಾಲೂಕು ಶಾಂತಿಗ್ರಾಮದ ಬಳಿ ಇರುವ ಟೋಲ್‌ಗೇಟ್‌ನಲ್ಲಿ ಫಾಸ್ಟ್ಯಾಗ್‌ ಕಡ್ಡಾಯ ವಾದ ಮೊದಲ ದಿನ ಫಾಸ್ಟ್ಯಾಗ್‌ಇಲ್ಲದ ಪಾತ್‌ನಲ್ಲಿ ದುಪ್ಟಟ್ಟು ಶುಲ್ಕ ನೀಡಿ ವಾಹನಗಳು ಸಂಚರಿಸಿದವು. ವಾಹನ ಚಾಲಕರು ಕೇಂದ್ರ ಸರ್ಕಾರ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಗಳ ಟೋಲ್‌ಗೇಟ್‌ನಲ್ಲಿ ಶುಲ್ಕ ಪಾವತಿಗೆ ಡಿಜಿಟಲ್‌ ಫಾಸ್ಟ್ಯಾಗ್‌ ಬಳಕೆ ಕಡ್ಡಾಯ ಮಾಡಿದ್ದು, ಫಾಸ್ಟ್ಯಾಗ್‌ ಬಳಸದಿದ್ದರೆ ದುಪ್ಟಟ್ಟು ಶುಲ್ಕ ಪಾವತಿಸಬೇಕು ಎಂಬುದು ವಾಹನ ಚಾಲಕರಿಗೆ ಅನಗತ್ಯ ಹೊರೆ.ಪೆಟ್ರೋಲ್‌, ಡೀಸೆಲ್‌ ದರ ದಿನೇ ದಿನೆ ಏರುತ್ತಿದೆ. ಪೆಟ್ರೋಲ್‌ ದರ 100 ರೂ. ಸನಿಹದಲ್ಲಿದೆ. ಡೀಸೆಲ್‌ ದರ ಏರಿಕೆಯಿಂದ ದಿನಬಳಕೆ ವಸ್ತುಗಳ ದರ ಏರುತ್ತಿದೆ. ಗಾಯದ ಮೇಲೆ ಬರೆ ಎಂಬಂತೆ ಅಡುಗೆ ಅನಿಲದ ದರ ಒಂದೇ ಬಾರಿ 50 ರೂ. ಏರಿದೆ. ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಚಾಲಕರ ತಮ್ಮ ಅಳಲು ತೋಡಿಕೊಂಡರು.

ಪ್ರಧಾನಿ ಹೇಳಿಕೆಗೆ ವ್ಯಂಗ್ಯ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜಿಡಿಪಿಯನ್ನು ಮೇಲೆತುತ್ತೇವೆ ಎಂದು ಹೇಳುತ್ತಿದ್ದರು. ಜಿಡಿಪಿ ಎಂದರೆ ಗ್ಯಾಸ್‌, ಡೀಸೆಲ್‌, ಪೆಟ್ರೋಲ್‌ ಏರಿಸುತ್ತೇವೆ ಎಂಬರ್ಥದಲ್ಲಿ ಮೋದಿ ಹೇಳಿದ್ದರು. ನಮಗೆ ಆಗ ಅರ್ಥವಾಗಿರಲಿಲ್ಲ. ಈಗ ಅರ್ಥವಾಗುತ್ತಿದೆ ಎಂದು ಕೆಲವು ವಾಹನಗಳ ಚಾಲಕರು ವ್ಯಂಗ್ಯವಾಡಿದರು.

ವಾಹನಗಳನ್ನು ಖರೀದಿಸುವಾಗ ಮಾಲಿಕರು ರೋಡ್‌ ಟ್ಯಾಕ್ಸ್‌ ಕಟ್ಟಿರುತ್ತಾರೆ. ಆದರೂ, ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ ಶುಲ್ಕ ವಸೂಲಿ ಏಕೆ ಎಂದು ಪ್ರಶ್ನಿಸುತ್ತಿರುವ ವಾಹನ ಚಾಲಕರು, ರೋಡ್‌ ಟ್ಯಾಕ್ಸ್‌ ಅಥವಾ ಟೋಲ್‌ ಶುಲ್ಕದಲ್ಲಿ ಯಾವುದಾದರೊಂದನ್ನು ಸರ್ಕಾರ ರದ್ದು ಮಾಡಬೇಕು ಎಂದು ಆಗ್ರಹಪಡಿಸಿದರು.

ಶಾಂತಿಗ್ರಾಮದ ಎಲ್ಲ ಎಂಟು ದ್ವಾರಗಳಿಗೂ ಈಗ ಫಾಸ್ಟ್ಯಾಗ್‌ಅವಳಡಿಸಲಾಗಿದೆ. ಫಾಸ್‌ ಟ್ಯಾಂಗ್‌ ಅಳವಡಿಸಿಕೊಳ್ಳದ ಕೆಲವು ವಾಹನ ಚಾಲಕರು ದುಪ್ಟಟ್ಟು ಶುಲ್ಕ ಪಾವತಿಸಿ ಮುಂದೆ ಸಾಗಿದರೆ, ಕೆಲವು ವಾಹನಗಳ ಚಾಲಕರು ಟೋಲ್‌ಗೇಟ್‌ ಸಮೀಪವೇ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳಲು ಪರದಾಡುತ್ತಿದ್ದರು

ಟಾಪ್ ನ್ಯೂಸ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

v

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

Congress MLA Santosh Mishra’s nephew

ಕಾಂಗ್ರೆಸ್ ಶಾಸಕ ಸಂತೋಷ್ ಸೋದರಳಿಯನ ಗುಂಡಿಕ್ಕಿ ಕೊಲೆ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ವೀಕೆಂಡ್‌ನ‌ಲ್ಲಿ ಮತ್ತೆ ಕಿಚ್ಚನ ಎಂಟ್ರಿ

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!

ಅಕ್ರಮ ಮರಳು ಸಾಗಾಟ ತಡೆಗೆ ಸ್ಕೂಟರ್‌ನಲ್ಲಿ ತೆರಳಿ ದಾಳಿ ಮಾಡಿದ ಮಂಗಳೂರು ಕಮಿಷನರ್‌, ಡಿಸಿಪಿ!

ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್‌ ನಂಬರ್‌ಗೆ ಮೆಚ್ಚುಗೆ

ಯುವರತ್ನನ “ಊರಿಗೊಬ್ಬ ರಾಜ..” ಡ್ಯಾನ್ಸ್‌ ನಂಬರ್‌ಗೆ ಮೆಚ್ಚುಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಲ್ಲು ಗಣಿಗಾರಿಕೆ ತಾತ್ಕಾಲಿಕ ನಿಷೇಧಕ್ಕೆ ಆಗ್ರಹ

ಕಲ್ಲು ಗಣಿಗಾರಿಕೆ ತಾತ್ಕಾಲಿಕ ನಿಷೇಧಕ್ಕೆ ಆಗ್ರಹ

ಜಿಲ್ಲೆಯಲ್ಲಿ ನಿರಂತರ ಸರಗಳ್ಳತನ: ಆತಂಕ

ಜಿಲ್ಲೆಯಲ್ಲಿ ನಿರಂತರ ಸರಗಳ್ಳತನ: ಆತಂಕ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

MLA Shivalinge gouda

ಚಿರತೆ ಕೊಂದವರಿಗೆ ಶೌರ್ಯ ಪ್ರಶಸ್ತಿ ಕೊಡಿ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ

MUST WATCH

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

ಹೊಸ ಸೇರ್ಪಡೆ

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ನಗರದ 29 ಆಸ್ಪತ್ರೆಗಳಲ್ಲಿ ಲಸಿಕೆ ಸೌಲಭ್ಯ

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

ಮೈಸೂರು ಪಾಲಿಕೆ ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ: ಸಾ.ರಾ. ಮಹೇಶ್

v

ಉಪಚುನಾವಣೆ ನಡೆಯುವ ಕ್ಷೇತ್ರಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಇಲ್ಲ: ಸಿಎಂ ಯಡಿಯೂರಪ್ಪ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

ಪ್ರೀತಿಸಿದ ಹುಡುಗಿಗೆ‌ ಬೇರೆ ಮದುವೆಗೆ ಸಿದ್ಧತೆ: ನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನ

Congress MLA Santosh Mishra’s nephew

ಕಾಂಗ್ರೆಸ್ ಶಾಸಕ ಸಂತೋಷ್ ಸೋದರಳಿಯನ ಗುಂಡಿಕ್ಕಿ ಕೊಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.