
ರಾಮನವಮಿ ಮೆರವಣಿಗೆ ವೇಳೆ ಗುಂಪು ಘರ್ಷಣೆ
Team Udayavani, Apr 1, 2023, 3:24 PM IST

ಚನ್ನರಾಯಪಟ್ಟಣ: ಪಟ್ಟನದ ಮೇಗಲಕೇರಿ ಕಾಡಾಂಜನೇಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಅಂಗವಾಗಿ ದೇವರ ವಿಗ್ರಹ ಮೆರಣಿಗೆ ಮಾಡುವಾಗ ಬಾಗೂರು ರಸ್ತೆಯಲ್ಲಿ ಮುಸ್ಲಿಂ ಯುಕವರು ಹಿಂದೂ ಯುವಕರನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇಗಲಕೇರಿ ದೇವಾಲಯದಿಂದ ಹೊರಟ ಮೆರವಣಿಗೆ ಬಾಗೂರು ರಸ್ತೆಯ ಜಾಮಿಯಾ ಮಸೀದಿ ಬಳಿ ಬಂದಾಗ ಮುಸ್ಲಿಂ ಯುವಕರ ಗುಂಪು ಮೆರವಣಿಗೆ ಉತ್ಸವಕ್ಕೆ ಅಡ್ಡಿ ಮಾಡಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮುಸ್ಲಿಂ ಯುವಕರ ಗುಂಪು ಹರ್ಷ, ಮುರಳಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಚೇತನ್, ರಾಕೇಶ್ ಮೇಲೆ ನಡೆದಿದೆ.
ದೂರು ದಾಖಲು: ರಾಮನವಮಿ ಆಚರಣೆ ವೇಳೆ ಭಾವೈಕ್ಯತೆಗೆ ಧಕ್ಕೆ ತಂದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿ ಸಬೇಕೆಂದು ಮೇಘಲಕೇರಿ ಹರ್ಷ ಪಟ್ಟಣ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.
ದೂರಿಗೆ ಪ್ರತಿ ದೂರು: ರಾಮನ ಮೆರವಣಿಗೆ ವೇಳೆ ಹಿಂದೂ ಯುವಕರ ಗುಂಪು ಕಲ್ಲು ತೂರಿ ಹಲ್ಲೆ ಮಾಡಿ, ವಾಹನಗಳನ್ನು ಜಖಂಗೊಳಿಸುದ್ದಾರೆ ಎಂದು ಅವೇಜ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು
