45 ವರ್ಷದ ಬಳಿಕ ಹಿರೇಕೆರೆ ಭರ್ತಿ

ನಿತ್ಯ ಪ್ರವಾಸಿಗರ ದಂಡು , ಹೊಯ್ಸಳರ ಕಾಲದ ಕೆರೆಯಲ್ಲಿ ಸೆಲ್ಫಿಕ್ಲಿಕ್ಕಿಸಿ ಸಂತಸ

Team Udayavani, Oct 28, 2020, 2:07 PM IST

45 ವರ್ಷದ ಬಳಿಕ ಹಿರೇಕೆರೆ ಭರ್ತಿ

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿನ ಹಿರೇಕೆರೆ ನಾಲ್ಕೂವರೆ ದಶಕದ (45 ವರ್ಷ)ಬಳಿಕ ಸಂಪೂರ್ಣ ಭರ್ತಿ ಯಾಗಿದ್ದು ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದ್ದು ಈ ಭಾಗದ ಯುವಸಮುದಾಯ ನಿತ್ಯವೂ ಕೆರೆ ಕೋಡಿಯಲ್ಲಿ ಹರಿಯುವ ನೀರಿನ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಜನತೆ ಹರ್ಷ:45 ವರ್ಷದಿಂದ ಕೆರೆ ಒಮ್ಮೆಯೂ ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿಯ ಲಿಲ್ಲ. ನಿರಂತರ ಬರಗಾಲದಿಂದ ಈ ಭಾಗದಲ್ಲಿ ಕೊಳವೆ ಬಾವಿಯಲ್ಲಿ ಅಂತರ್ಜಲ ಕುಸಿತವಾಗಿದ್ದು ರೈತರ ಸ್ಥಿತಿ ಹೇಳತೀರದಾಗಿತ್ತು. ತೆಂಗಿನ ಮರಗಳ ಸುಳಿ ಹಾರಿಹೋಗಿದ್ದಲ್ಲದೆ ಕೃಷಿ ಮಾಡುವ ಗದ್ದೆಗಳು ಪಾಳು ಭೂಮಿಯಾಗಿ ಮಾರ್ಪಟ್ಟಿದ್ದವು. ಆದರೆ, ನುಗ್ಗೇಹಳ್ಳಿ ಏತ ನೀರಾವರಿಯಿಂದ ಜೀವಜಲ ಕೆರೆಗೆ ಹರಿದು ಭರ್ತಿಯಾಗಿರುವುದು ಹಲವು ಗ್ರಾಮಸ್ಥರಿಗೆ ಹರ್ಷ ಮೂಡಿಸಿದೆ.

ಮಹಿಳೆ ಯುವಕರಲ್ಲಿ ಸಂತಸ: ಕೆರೆ ಕಟ್ಟೆಯಲ್ಲಿ ಬಟ್ಟೆ ತೊಳೆದು ಹತ್ತಾರು ವರ್ಷಗಳು ಕಳೆದಿದ್ದವು. ಆದರೆ, ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಮನೆ ಬಟ್ಟೆಯನ್ನು ಕೆರೆಯಲ್ಲಿ ತೊಳೆಯುವ ಮೂಲಕ ಮಹಿಳೆಯರು ಸಂತಸ ಪಡುತ್ತಿದ್ದಾರೆ. ಇನ್ನು ನುಗ್ಗೇಹಳ್ಳಿ ಹೋಬಳಿ ಹತ್ತಾರು ಗ್ರಾಮದ ಯುವ ಸಮುದಾಯ ನಿತ್ಯವೂ ಬೈಕ್‌ ಏರಿ ಹೀರೆಕೆರೆ ಕೋಡಿಗೆ ಆಗಮಿಸಿ ನೀರಿನಲ್ಲಿ ನಿಂತು ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನು ಹಲವು ಮಂದಿ ತಮ್ಮ ಮಡದಿಯೊಂದಿಗೆ ಆಗಮಿಸಿ ಕೆರೆಯ ಇತಿಹಾಸ ತಿಳಿಸುತ್ತಿದ್ದಾರೆ.

ಕೆರೆ ಇತಿಹಾಸ ವಿಸ್ತೀರ್ಣ: ಹೊಯ್ಸಳರ ಆಳ್ವಿಕೆ ಅವಧಿಯಲ್ಲಿ ಹೀರೆಕೆರೆಯನ್ನು ಬೊಮ್ಮಣ್ಣ ದಂಡ ನಾಯಕ ಅಕ್ಕ ಅಕ್ಕವ್ವೆ 1438ರ ಆಸು ಪಾಸಿನಲ್ಲಿ ನಿರ್ಮಾಣ ಮಾಡಲಾಗಿದೆ. 140 ಎಕರೆ ಇದಕ್ಕೆ ಹೊಂದಿಕೊಂಡಿರುವ ಅಮ್ಮನ ಕಟ್ಟೆ 30 ಎಕರೆ ಪ್ರದೇಶವಿದೆ. ಹಲವು ವರ್ಷದಿಂದಕೆರೆಗೆ ಭರ್ತಿಯಾದ ಹಿನ್ನೆಲೆಯಲ್ಲಿ ಹತ್ತಾರುಎಕರೆ ಪ್ರದೇಶ ಒತ್ತುವರಿಯಾಗಿದೆ. ಈಗ ಭರ್ತಿ ಆಗಿರುವುದರಿಂದ 15 ಕಿ.ಮೀ. ವ್ಯಾಪ್ತಿಯ ಸುಮಾರು 30 ಗ್ರಾಮದ ರೈತರಿಗೆ ಅನುಕೂಲ ವಾಗುತ್ತಿದ್ದು, ಅಂತರ್ಜಲ ಕುಸಿತದಿಂದ ಸ್ಥಗಿತ ವಾಗಿದ್ದ ಕೃಷಿ ಹಾಗೂ ಕುಡಿಯುವ ನೀರಿನ ನೂರಾರು ಕೊಳವೆ ಬಾವಿ ಮರುಜೀವ ಪಡೆದುಕೊಂಡಿವೆ.

ಕೆರೆ ಭರ್ತಿಗೆ ಹಲವರ ಶ್ರಮ: ಕೆರೆ 45 ವರ್ಷದ ನಂತರ ಭರ್ತಿಯಾಗಲು ಹಲವು ಮಹನೀಯರ ಶ್ರಮವಿದೆ. ಮಾಜಿ ಮಂತ್ರಿ ಎಚ್‌.ಸಿ.ಶ್ರೀಕಂಠಯ್ಯ, ಮಾಜಿ ಶಾಸಕ ಸಿ.ಎಸ್‌ .ಪುಟ್ಟೇಗೌಡ, ಶಾಸಕ ಸಿ.ಎನ್‌.ಬಾಲಕೃಷ್ಣ, ಎಂ ಎಲ್ಸಿ ಎಂ.ಎ.ಗೋಪಾಲಸ್ವಾಮಿ, ಬಿಜೆಪಿ ಶಂ ಕರ್‌, ಎಚ್‌.ಎನ್‌.ಮಲ್ಲೇಗೌಡ, ಎಚ್‌.ಪಿ.ಗಂಗ ರಾಜು, ಎನ್‌.ಎನ್‌.ಪುಟ್ಟಸ್ವಾಮಿಗೌಡ, ರಾಮೇ ಗೌಡ, ಲಕ್ಷ್ಮಣ್‌, ರೇಣುಕಾಪ್ರಸಾದ್‌, ಬಾಬು, ರಮೇಶ್‌ ಮೊದಲಾದವರು ಶ್ರಮ ಹಾಗೂ ನೀರಾವರಿ ಹೋರಾಟ ಸಮಿತಿಯ ಹೋರಾ ಟದ ಪ್ರತಿಫ‌ಲದಿಂದ ಕೆರೆಗೆ ಜಲ ಹರಿದಿದೆ.

ಬಿಜೆಪಿ ಸರ್ಕಾರದ ಕೊಡುಗೆ: 2012ರಲ್ಲಿ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ನೀರಾವರಿ ಮಂತ್ರಿ ಬಸವರಾಜು ಬೊಮ್ಮಾಯಿ, ಅಂದಿನ ಶಾಸಕ ಪುಟ್ಟೇಗೌಡ, ಜಿಪಂ ಸದಸ್ಯ ಎಂ.ಎ.ರಂಗಸ್ವಾಮಿ ಶಂಕುಸ್ಥಾಪನೆ ನೆರವೇರಿಸಿದ್ದರ ಪ್ರತಿಫ‌ಲವೂ ಇದೆ ಎಂದು ಸ್ಥಳಿಯ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಮುಖಂಡರು ಬಹಿರಂಗವಾಗಿ ಹೇಳುತ್ತಿದ್ದಾರೆ.

ಹೊಯ್ಸಳರ ಲಾಂಛನ :  ಹೊಯ್ಸಳ ಕಾಲದಲ್ಲಿ ನಿರ್ಮಾಣ ಆಗಿರುವುದಕ್ಕೆ ಸಾಕ್ಷಿಯಾಗಿ ಕೆರೆ ಮಧ್ಯದಲ್ಲಿ ಲಾಂಛನ ಇದೆ. ಕೆರೆ ನಿರ್ಮಾಣ ಸಮಯ ದಲ್ಲಿ ಲಕ್ಷ್ಮೀ ಕಲ್ಲು ಪ್ರತಿಷ್ಠಾಪಿಸಿ ಅದರ ಮೇಲೆ ಹೊಯ್ಸಳ ಲಾಂಛನ ಇಡಲಾಗಿದೆ. ಇದೇ ಕಲ್ಲಿನ ಮೇಲೆ ಲಕ್ಷ್ಮೀ ಮೂರ್ತಿ ಯನ್ನು ಹೊಯ್ಸಳರು ಪ್ರತಿಷ್ಠಾಪನೆ ಮಾಡಿ ರುವುದು ಇಂದಿಗೂ ಕಾಣಬಹುದಾಗಿದ್ದು ಕೆರೆಯನ್ನು ದೇವರಂತೆ ಭಕ್ತಿಯಿಂದ ನೋಡಬೇಕು ಎಂಬ ಸಂದೇಶ ಸಾರುತ್ತಿದೆ

ಮೈಸೂರು ಅರಸರ ಕೊಡುಗೆ :  ನುಗ್ಗೇಹಳ್ಳಿ ಹಿರೇಕೆರೆ ಮೈಸೂರು ಅರಸರ ಕೊಡುಗೆ ಸಾಕಷ್ಟಿದೆ ಹೊಯ್ಸಳರ ಆಳ್ವಿಕೆ ನಂತರ ಕೆರೆ ಅವಸಾನದ ಸ್ಥಿತಿ ತಲುಪಿತ್ತು. ಆದರೆ, 1893ರಲ್ಲಿ  ಮೈಸೂರಿನ ದಿವಾನರು ಭೇಟಿ ನೀಡಿ ಪುನಶ್ಚೇತನ ಮಾಡಿದ್ದರು. ನಂತರ ದಿನದಲ್ಲಿ ಈ ಭಾಗದಲ್ಲಿನ ಅಮೃತ್‌ ಮಹಲ್‌ ತಳಿ ಅಭಿವೃದ್ಧಿ ಕೇಂದ್ರಕ್ಕೆ ಭೇಟಿ ನೀಡಿದಾಗಲೆಲ್ಲಾ ಅರಸು ಹಾಗೂ ಮೈಸುರು ಮಹಾರಾಜ ವಂಶಸ್ಥರು ಹೀರೆಕೆರೆಗೆ ಭೇಟಿ ನೀಡಿ ಕೆರೆ ಒತ್ತುವರಿ ಆಗದಂತೆ ನಿಗಾ ವಹಿಸಿದ್ದರು.

ಇತಿಹಾಸ ಪ್ರಸಿದ್ಧ ಹಿರೇಕೆರೆ ನಾಲ್ಕೂವರೆ ದಶಕದ ನಂತರ ಭರ್ತಿಯಾಗಿರುವುದು ದೊಡ್ಡ ವರವಾಗಿದೆ. ಜನತೆ ಜೀವ ಜಲದ ಮಹತ್ವ ಅರಿತು ನೀರನ್ನು ಮಿತವಾಗಿ ಬಳಕೆ ಮಾಡಬೇಕು. ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಪೀಠಾಧ್ಯಕ್ಷ

 

 

ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

ಟಾಪ್ ನ್ಯೂಸ್

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಅಪ್ಪ ಅರ್ಥವಾದರೂ ಮಗನ ನಡೆ ಅರ್ಥವಾಗುತ್ತಿಲ್ಲ: ಶಂಕರ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌

ಭ್ರಷ್ಟಾಚಾರ ಪ್ರಕರಣ: ವಿಚಾರಣೆಗೆ ಹಾಜರಾದ ಅನಿಲ್‌ ದೇಶ್‌ಮುಖ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪ್ಪು ನೆನಪು

ಗುಡ್ಡೇನಹಳ್ಳಿಯಲ್ಲಿ ಅಪ್ಪು ನೆನಪಿನಲ್ಲಿ ಆರೋಗ್ಯ ಶಿಬಿರ

ಕಾಡಾನೆ

ಕಾಡಾನೆಗಳಿಂದ ಸೋಲಾರ್‌ ಬೇಲಿ ಹಾಳು

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

ತಲ್ವಾರ್‌ ಹಿಡಿದು ಬೈಕ್‌ ವ್ಹೀಲಿಂಗ್‌

ತಲ್ವಾರ್‌ ಹಿಡಿದು ಬೈಕ್‌ ವ್ಹೀಲಿಂಗ್‌

ಶೀಘ್ರವಾಗಿ ಬೆಳೆ ಹಾನಿ ಪರಿಹಾರ ವಿತರಿಸಿ

ಶೀಘ್ರವಾಗಿ ಬೆಳೆ ಹಾನಿ ಪರಿಹಾರ ವಿತರಿಸಿ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಮಲ್ಯ ನ್ಯಾಯಾಂಗ ನಿಂದನೆ: ಜ.18ಕ್ಕೆ ಸುಪ್ರೀಂಕೋರ್ಟ್‌ ತೀರ್ಪು

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಸಲಿಂಗಕಾಮಿ ವಿವಾಹ: ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಬಿಹಾರ ವಿಧಾನಸಭೆಯಲ್ಲಿ ಮದ್ಯದ ಬಾಟಲಿ!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

ಅಯೋಧ್ಯೆ ತೀರ್ಪು ಧರ್ಮಾಧಾರಿತವಲ್ಲ: ಮಾಜಿ ಸಿಜೆಐ ಗೊಗೋಯ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.