Udayavni Special

ನಫೆಡ್‌ಗೆ ಕೊಬ್ಬರಿ ಕೊಟ್ಟ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ

ಕೊಬ್ಬರಿ ಮಾರಾಟ ಮಾಡಿದ ಬಳಿಕ ಕೈ ಹಿಸುಕಿಕೊಳ್ಳುತ್ತಿರುವ ರೈತರು

Team Udayavani, Dec 4, 2020, 12:33 PM IST

ನಫೆಡ್‌ಗೆ ಕೊಬ್ಬರಿ ಕೊಟ್ಟ ಬಳಿಕ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ

ಅರಸೀಕೆರೆ: ತಾಲೂಕಿನ ತೆಂಗು ಬೆಳೆಗಾರರ ಬದುಕು ಹಾವು ಏಣಿ ಆಟದಂತಾಗಿದ್ದು ಮಳೆ-ಬೆಳೆ ಇದ್ದಾಗಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಬೆಲೆ ಇದ್ದಾಗ ರೈತರ ಕೈಯಲ್ಲಿ ಬೆಳೆ ಇಲ್ಲ.

ಕಡಿಮೆ ಬೆಲೆಗೆ ಕೊಬ್ಬರಿ ಮಾರಾಟ: ಮಳೆ ಕೊರತೆ, ನುಸಿ ಪೀಡೆ ಸೇರಿದಂತೆ ವಿವಿಧ ಕೀಟ ದಾಳಿಯ ಜತೆಗೆ ಮಾರುಕಟ್ಟೆ ಯಲ್ಲಿ ಕೊಬ್ಬರಿ ಧಾರಣೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು, ಬೆಳೆದ ಬೆಳೆಯನ್ನು ಈಗಾಗಲೇ ನಫೆಡ್‌ ಮೂಲಕ ಕಡಿಮೆ ಬೆಲೆಗೆ ಕೊಟ್ಟಿರುವುದಕ್ಕೆ ತಮ್ಮ ಕೈಯನ್ನು ತಾವೇ ಹಿಸುಕಿ ಕೊಳ್ಳುವಂತೆ ಮಾಡಿದೆ.

ಮತ್ಯಾರಿಗೋ ಲಾಭ ತರುತ್ತಿದೆ: ಕಳೆದ ಕೆಲವು ತಿಂಗಳಿಂದ 8 ಸಾವಿರದ ಆಸುಪಾಸಿನಲ್ಲಿ ಇದ್ದ ಕೊಬ್ಬರಿ ಬೆಲೆ, ಕಳೆದ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಏರು ಮುಖದಲ್ಲಿ ಸಾಗುತ್ತಿದೆ. ಮಂಗಳವಾರದ ಟೆಂಡರ್‌ನಲ್ಲಿ 14 ಸಾವಿರಗಡಿದಾಟುವ ಮೂಲಕ ತೆಂಗು ಬೆಳೆಗಾರರ ಖುಷಿಗೆ ಮಣ್ಣೆರಚಿದಂತಾಗಿದೆ. ಕಾರಣ ಈಗಾಗಲೇ ಬಹುತೇಕ ರೈತರು, ನಫೆಡ್‌ ಮೂಲಕಕೊಬ್ಬರಿಯನ್ನುಮಾರಾಟ ಮಾಡಿದ್ದು ಬೆಲೆ ಏರಿಕೆ ಲಾಭ ರೈತನ ಹೆಸರಿನಲ್ಲಿ ಮತ್ಯಾರಿಗೋ ಆಗುತ್ತಿದೆ.

ಕಾಯಿ ಕೊಬ್ಬರಿ ಸೇರಿದಂತೆ ರೈತ ಬೆಳೆಯುವ ಯಾವುದೇ ಬೆಳೆಯಾಗಲಿ, ಸರ್ಕಾರ ಮಾರುಕಟ್ಟೆಯಲ್ಲಿ ಸ್ಥಿರ ಬೆಲೆ ಕಾಯ್ದುಕೊಳ್ಳದೆ ಹೋದರೆರೈತನ ಬೆವರು ಮತ್ತು ಶ್ರಮ ಮತ್ಯಾರಿಗೋ ಲಾಭ ತಂದು ಕೊಡುತ್ತದೆ ಎಂದು ಜಿಲ್ಲಾ ರೈತ ಸಂಘದರಾಜ್ಯ ಸಂಚಾಲಕ ಕನಕಂಚೇನಳ್ಳಿ ಪ್ರಸನ್ನಕುಮಾರ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕೊಬ್ಬರಿ ಬೇಡಿಕೆ ಹೆಚ್ಚಾಗುತ್ತಿದೆ :  ತಾಲೂಕಿನ ತೆಂಗು ಬೆಳೆಗಾರರು ತಾವು ಕಷ್ಟಪಟ್ಟು ಬೆಳೆದಿದ್ದ ಕೊಬ್ಬರಿಯನ್ನು ಈಗಾಗಲೇ ನಫೆಡ್‌ ಮೂಲಕ ಮಾರಾಟ ಮಾಡಿರುವುದರಿಂದ ಮಾರುಕಟ್ಟೆಗೆಕೊಬ್ಬರಿ ಬರುತ್ತಿಲ್ಲ. ಮಹಾರಾಷ್ಟ್ರ,ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಚಳಿಗಾಲ ಆರಂಭವಾಗಿರುವುದರಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಧಾರಣೆ ಏರಿಕೆಕಾಣಲು ಕಾರಣವಾಗಿದೆ ಎನ್ನುತ್ತಾರೆ ಇಲ್ಲಿನ ವರ್ತಕರು.

ಪ್ರೋತ್ಸಾಹಧನ ನೀಡದಿದ್ದರೆ ಹೋರಾಟ : ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ನೆಲ ಕಚ್ಚಿದ್ದರಿಂದ ಕೇಂದ್ರ ಸರ್ಕಾರ ‌10,300 ರೂ. ಬೆಂಬಲ ನೀಡಿ ರೈತರಿಂದ  ‌ಕೊಬ್ಬರಿ ಖರೀದಿ ಮಾಡಿತು. ಈ ವೇಳೆ ರಾಜ್ಯ ಸರ್ಕಾರ ಸಾವಿರ ‌ ಪ್ರೋತ್ಸಾಹಧನ ‌ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಇದುವರೆಗೂ ರೈತರಿಗೆ ನೀಡಿಲ್ಲ. ಸರ್ಕಾರ ತಾನುಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಹೋದರೆ ತೆಂಗು ಬೆಳೆಗಾರರ ಹಿತಕಾಯುವ ‌ ದೃಷ್ಟಿಯಿಂದ ಪ್ರತಿಭಟನೆ ನಡೆಸಬೇಕಾಗುತ್ತದೆಂದು ಶಾಸಕ ‌ಕೆ.ಎಂ. ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

horoscope

ನಿಮ್ಮ ಗ್ರಹಬಲ: ಈ ರಾಶಿಯವರ ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು!

ಜೋ ಬೈಡೆನ್‌ ಮೊದಲ ಹೆಜ್ಜೆಗಳೇನು?

ಜೋ ಬೈಡೆನ್‌ ಮೊದಲ ಹೆಜ್ಜೆಗಳೇನು?

ಚನ್ನಪಟ್ಟಣ ಬೊಂಬೆ, ಕಿನ್ನಾಳ ಆಟಿಕೆ ವಿದೇಶಕ್ಕೆ ರಫ್ತು

ಚನ್ನಪಟ್ಟಣ ಬೊಂಬೆ, ಕಿನ್ನಾಳ ಆಟಿಕೆ ವಿದೇಶಕ್ಕೆ ರಫ್ತು

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಜಿಯೋ ಟಿವಿಯಲ್ಲೂ  ವಿದ್ಯಾರ್ಥಿಗಳಿಗೆ ಪಾಠ

ಜಿಯೋ ಟಿವಿಯಲ್ಲೂ ವಿದ್ಯಾರ್ಥಿಗಳಿಗೆ ಪಾಠ

ಜಾಗತಿಕ ವಿದ್ಯಮಾನದ ಪ್ರಮುಖ ಸೂತ್ರಧಾರಿ ಅಮೆರಿಕ ಅಧ್ಯಕ್ಷ

ಜಾಗತಿಕ ವಿದ್ಯಮಾನದ ಪ್ರಮುಖ ಸೂತ್ರಧಾರಿ ಅಮೆರಿಕ ಅಧ್ಯಕ್ಷ

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Death of children who went to swim

ಈಜಲು ಹೋದ ಮಕ್ಕಳಿಬರು ಸಾವು

Fix the road to the villages that connect to the highway

ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮಗಳ ರಸ್ತೆ ಸರಿಪಡಿಸಿ

ಚತುಷ್ಪಥ ರಸ್ತೆ 2022ರೊಳಗೆ ಪೂರ್ಣವಾಗಲಿ: ತಾಕೀತು

ಚತುಷ್ಪಥ ರಸ್ತೆ 2022ರೊಳಗೆ ಪೂರ್ಣವಾಗಲಿ: ತಾಕೀತು

ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ; ಎಳ್ಳು ಬೆಲ್ಲ ಕೊಂಚ ದುಬಾರಿ

ಸಂಕ್ರಾಂತಿ ಹಬ್ಬಕ್ಕೆ ಸಿದ್ಧತೆ; ಎಳ್ಳು ಬೆಲ್ಲ ಕೊಂಚ ದುಬಾರಿ

ಆಯುರ್ವೇದ ಆಸ್ಪತ್ರೆಗಳು ಆಯುಷ್ಮಾನ್‌ ವ್ಯಾಪ್ತಿಗೆ: ಶ್ರೀಪಾದ

ಆಯುರ್ವೇದ ಆಸ್ಪತ್ರೆಗಳು ಆಯುಷ್ಮಾನ್‌ ವ್ಯಾಪ್ತಿಗೆ: ಶ್ರೀಪಾದ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

horoscope

ನಿಮ್ಮ ಗ್ರಹಬಲ: ಈ ರಾಶಿಯವರ ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು!

ಪ್ರಾಚೀನ ಕಾಲದ 50 ಶವ ಪೆಟ್ಟಿಗೆಗಳು ಪತ್ತೆ

ಪ್ರಾಚೀನ ಕಾಲದ 50 ಶವ ಪೆಟ್ಟಿಗೆಗಳು ಪತ್ತೆ

ಜೋ ಬೈಡೆನ್‌ ಮೊದಲ ಹೆಜ್ಜೆಗಳೇನು?

ಜೋ ಬೈಡೆನ್‌ ಮೊದಲ ಹೆಜ್ಜೆಗಳೇನು?

ಚನ್ನಪಟ್ಟಣ ಬೊಂಬೆ, ಕಿನ್ನಾಳ ಆಟಿಕೆ ವಿದೇಶಕ್ಕೆ ರಫ್ತು

ಚನ್ನಪಟ್ಟಣ ಬೊಂಬೆ, ಕಿನ್ನಾಳ ಆಟಿಕೆ ವಿದೇಶಕ್ಕೆ ರಫ್ತು

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

ಸಿರಾಜ್ ಶಿಸ್ತುಬದ್ಧ ದಾಳಿ: ಮೊದಲ ಸೆಶನ್ ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಆಸೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.